ವಾಟ್ಸಾಪ್‌ನಲ್ಲಿ ಕರೆಂಟ್‌ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ನಲ್ಲಿ ಲೊಕೇಶನ್‌ ಶೇರ್‌ ಮತ್ತು ಲೈವ್‌ ಲೊಕೇಶನ್‌ ಶೇರ್‌ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಿದೆ. ಆದರೂ ಕೆಲವರಿಗೆ ವಾಟ್ಸಾಪ್‌ ಲೊಕೇಶನ್‌ ಶೇರ್‌ ಮಾಡುವುದರಲ್ಲಿ ಗೊಂದಲವಿದೆ. ಆದರೆ ಇದು ಸಾಕಷ್ಟು ಉಪಯುಕ್ತ ಫೀಚರ್ಸ್‌ ಅಗಿದ್ದು, ನಿಮ್ಮ ಸ್ನೇಹಿತರು, ಇಲ್ಲವೇ ಅನವಶ್ಯಕತೆ ಇರುವವರಿಗೆ ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿಸುವುದಕ್ಕೆ ಸಾಧ್ಯವಾಗಲಿದೆ.

ಫೀಚರ್ಸ್‌

ಹೌದು, ವಾಟ್ಸಾಪ್‌ನಲ್ಲಿರುವ ಹಲವು ಅನುಕೂಲಕರ ಫೀಚರ್ಸ್‌ಗಳಲ್ಲಿ ಲೊಕೇಶನ್‌ ಶೇರ್‌ ಮತ್ತು ಲೈವ್‌ ಲೊಕೇಶನ್‌ ಶೇರ್‌ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು, ಸೇರಿದಂತೆ ಯಾರೇ ಆದರೂ ತಮ್ಮ ವಿಶ್ವಾಸಾರ್ಹ ಸಂಪರ್ಕಗಳೊಂದಿಗೆ ತಮ್ಮ ಲೊಕೇಶನ್‌ ಅನ್ನು ಹಂಚಿಕೊಳ್ಳಲು ಸಹಾಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಲೊಕೇಶನ್‌ ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಲೊಕೇಶನ್‌ ಶೇರ್‌ ಅನ್ನು ಎರಡು ರೂಪಗಳಲ್ಲಿ ಮಾಡಬಹುದು. ಮೊದಲನೇಯದು ಕರೆಂಟ್‌ ಲೊಕೇಶನ್‌ ಶೇರ್‌ ಆಯ್ಕೆ ಇದರಲ್ಲಿ ಬಳಕೆದಾರರು ತಮ್ಮ ಪ್ರಸ್ತುತ ಸ್ಥಳವನ್ನು ವೈಯಕ್ತಿಕ ಸಂಪರ್ಕದೊಂದಿಗೆ ಅಥವಾ ಗುಂಪಿನಲ್ಲಿ ಒಂದು ಬಾರಿ ಹಂಚಿಕೊಳ್ಳಬಹುದು. ಆದರೆ ಇನ್ನೊಂದು ಲೈವ್ ಸ್ಥಳ ಹಂಚಿಕೆ ಆಯ್ಕೆಯಾಗಿದ್ದು, ಬಳಕೆದಾರರು ತಮ್ಮ ಸ್ಥಳವನ್ನು ಪೂರ್ವಭಾವಿಯಾಗಿ ನಿರಂತರವಾಗಿ ಹಂಚಿಕೊಳ್ಳಬಹುದಾಗಿದೆ. ಇನ್ನು ವಾಟ್ಸಾಪ್‌ನಲ್ಲಿ ಲೊಕೇಶನ್‌ ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಕೆಳಗಿನ ಹಳತಗಳಲ್ಲಿ ತಿಳಿಯಿರಿ.

WhatsApp ನಲ್ಲಿ ನಿಮ್ಮ ಕರೆಂಟ್‌ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

WhatsApp ನಲ್ಲಿ ನಿಮ್ಮ ಕರೆಂಟ್‌ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ಹಂತ 1: ಪರ್ಸನಲ್‌ ಚಾಟ್ ತೆರೆಯಿರಿ ಮತ್ತು ‘+' ಐಕಾನ್ ಟ್ಯಾಪ್ ಮಾಡಿ.

ಹಂತ 2: ಮೋರ್‌ ಆಯ್ಕೆಯನ್ನು ಟ್ಯಾಪ್ ಮಾಡಿ ನಂತರ ಲೊಕೇಶನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ಈಗ, ನಿಮ್ಮ ಕರೆಂಟ್‌ ಲೊಕೇಶನ್‌ ಸೆಂಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ವಾಟ್ಸಾಪ್‌ನಲ್ಲಿ ನಿಮ್ಮ ಲೈವ್ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ನಿಮ್ಮ ಲೈವ್ ಲೊಕೇಶನ್‌ ಅನ್ನು ಶೇರ್‌ ಮಾಡುವುದು ಹೇಗೆ?

ಹಂತ 1: ಪರ್ಸನಲ್‌ ಚಾಟ್ ತೆರೆಯಿರಿ ಮತ್ತು ‘+' ಐಕಾನ್ ಟ್ಯಾಪ್ ಮಾಡಿ.

ಹಂತ 2: ಮೋರ್‌ ಆಯ್ಕೆಯನ್ನು ಟ್ಯಾಪ್ ಮಾಡಿ ನಂತರ ಸ್ಥಳ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ಈಗ, ಶೇರ್‌ ಲೈವ್ ಲೊಕೇಶನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಸಮಯದ ಚೌಕಟ್ಟನ್ನು ಆರಿಸಿ: 15 ನಿಮಿಷಗಳು, 1 ಗಂಟೆ ಅಥವಾ 8 ಗಂಟೆಗಳು.

ಹಂತ 5: ಶೀರ್ಷಿಕೆ ಸೇರಿಸಿ ಮತ್ತು ಸೆಂಡ್‌ ಬಟನ್ ಟ್ಯಾಪ್ ಮಾಡಿ.

ಹಂತ 6: ನಂತರ ಶೇರ್‌ ಸ್ಟಾಪ್‌ ಬಟನ್‌ನಲ್ಲಿ ಲೈವ್‌ ಲೊಕೇಶನ್‌ ಶೇರ್‌ ಅನ್ನು ಹಂಚಿಕೆಯನ್ನು ನಿಲ್ಲಿಸಬಹುದು.

Most Read Articles
Best Mobiles in India

English summary
Location sharing in WhatsApp happens in two forms.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X