ನಿಮ್ಮ ಲೊಕೇಷನ್ ಹಂಚಿಕೊಳ್ಳುವುದಕ್ಕೆ ಇರುವ ನಾಲ್ಕು ಮಾರ್ಗಗಳು

By Gizbot Bureau
|

ಲೊಕೇಷನ್ ಟ್ರ್ಯಾಕ್ ಮಾಡುವ ಫೀಚರ್ ಯಾವಾಗಲೂ ಕೂಡ ಚರ್ಚೆಯಲ್ಲಿರುತ್ತದೆ. ನಿಮ್ಮ ಹೆಂಡತಿಯೊ ಇಲ್ಲವೋ ತಾಯಿಯೋ ಇಲ್ಲ ಮಕ್ಕಳೊ ಹೊರಗಡೆ ಹೊರಟಾಗ ಅವ್ರನ್ನ ಟ್ರ್ಯಾಕ್ ಮಾಡುವುದಕ್ಕೆ, ಅವರ ಸೇಫ್ಟಿಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಈ ಲೊಕೇಷನ್ ಹಂಚಿಕೊಳ್ಳುವಿಕೆ ನೆರವಿಗೆ ಬರುತ್ತದೆ ಅಥವಾ ನಿಮ್ಮವರು ಯಾರನ್ನೊ ಅವರಿರುವ ಲೊಕೇಷನ್ ನಲ್ಲಿ ಭೇಟಿ ಮಾಡುವಾಗ ಸುಲಭವಾಗಿ ಅವರಿರುವ ಸ್ಥಳವನ್ನು ತಲುಪಲು ಲೊಕೇಷನ್ ಶೇರಿಂಗ್ ಫೀಚರ್ ಸಹಾಯಕ್ಕೆ ಬರುತ್ತದೆ.

ನಿಮ್ಮ ಲೊಕೇಷನ್ ಹಂಚಿಕೊಳ್ಳುವುದಕ್ಕೆ ಇರುವ ನಾಲ್ಕು ಮಾರ್ಗಗಳು

ಜಾಗೃತೆ ಇಲ್ಲದೆ ಲೊಕೇಷನ್ ಟ್ರ್ಯಾಕಿಂಗ್ ತಂತ್ರಗಾರಿಕೆಯನ್ನು ಬಳಸುವುದರಿಂದಾಗಿ ಸಮಸ್ಯೆಗಳೂ ಆಗಬಹುದು ಎಂಬುದು ನೆನಪಿನಲ್ಲಿ ಇರಬೇಕಾದ ಸಂಗತಿ. ಶಕ್ತಿಶಾಲಿಯಾಗಿರುವ ಮತ್ತು ಅಧ್ಬುತವಾಗಿರುವ ಸಂವಹನ ಟೂಲ್ ಆಗಿದ್ದರೂ ಕೂಡ ಕೆಲವು ವಯಕ್ತಿಕ ವಿಚಾರಗಳಿಗೆ ಇದು ಧಕ್ಕೆಯೊಡ್ಡುವ ಸಾಧ್ಯತೆ ಇರುತ್ತದೆ. ಪ್ರಮುಖವಾಗಿ ನಾಲ್ಕು ವಿಧದಲ್ಲಿ ನೀವು ನಿಮ್ಮ ಲೊಕೇಷನ್ ನ್ನು ಹಂಚಿಕೊಳ್ಳುವುದಕ್ಕೆ ಮೊಬೈಲ್ ನಲ್ಲಿ ಅವಕಾಶವಿರುತ್ತದೆ. ಅವುಗಳ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡುತ್ತಿದ್ದೇವೆ.

ವಾಟ್ಸ್ ಆಪ್ ನಲ್ಲಿ ಲೊಕೇಷನ್ ಶೇರಿಂಗ್

ವಾಟ್ಸ್ ಆಪ್ ನಲ್ಲಿ ಲೊಕೇಷನ್ ಶೇರಿಂಗ್

ನೀವು ಯಾರೊಂದಿಗೆ ಲೊಕೇಷನ್ ಹಂಚಿಕೊಳ್ಳಬೇಕು ಎಂದುಕೊಂಡಿದ್ದೀರೋ ಅವರ ವಾಟ್ಸ್ ಆಪ್ ಕಾನ್ವರ್ಸೇಷನ್ ಗೆ ತೆರಳಿ.ಅಟ್ಯಾಚ್ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ‘ಲೊಕೇಷನ್' ಆಯ್ಕೆಗೆ ತೆರಳಿ.ವಾಟ್ಸ್ ಆಪ್ ನಿಮ್ಮ ಲೊಕೇಷನ್ ನ್ನು ಗುರುತಿಸುತ್ತದೆ. ನಂತರ ‘ಸೆಂಡ್ ಯುವರ್ ಕರೆಂಟ್ ಲೊಕೇಷನ್' ನ್ನು ಟ್ಯಾಪ್ ಮಾಡಿ ಮತ್ತು ಕಾನ್ವರ್ಸೇಷನ್ ನಲ್ಲಿ ನಿಮ್ಮ ವಿಳಾಸ ಎಂಟರ್ ಆಗಿ ಸೆಂಡ್ ಆಗುತ್ತದೆ.

ಫೇಸ್ ಬುಕ್ ಮೆಸೇಂಜರ್ ನಲ್ಲಿ ಲೊಕೇಷನ್ ಶೇರಿಂಗ್

ಫೇಸ್ ಬುಕ್ ಮೆಸೇಂಜರ್ ನಲ್ಲಿ ಲೊಕೇಷನ್ ಶೇರಿಂಗ್

ಮೆಸೇಜ್ ಬಾಕ್ಸಿನ ಬಲಭಾಗದಲ್ಲಿ ನೀವು ಜಿಪಿಎಸ್ ಲೊಕೇಷನ್ ಸಿಂಬಲ್ ನ್ನು ಕಾಣುತ್ತೀರಿ. ಯಾವಾಗ ಫೇಸ್ ಬುಕ್ ನಿಮಗೆ ಮೆಸೇಂಜರ್ ಆಪ್ ನಲ್ಲಿ ಲೊಕೇಷನ್ ಆನ್ ಮಾಡುವುದಕ್ಕೆ ಕೇಳುತ್ತದೆಯೇ ಆಗ ಟರ್ನ್ ಆನ್ ನ್ನ ಟ್ಯಾಪ್ ಮಾಡಿ.ಇದರೊಂದಿಗೆ ನೀವು ಯಾವಾಗ ಮೆಸೇಜ್ ಕಳುಹಿಸುತ್ತೀರೋ ಆಗ ನಿಮ್ಮ ಲೊಕೇಷನ್ ಟ್ಯಾಗ್ ಆಗಿ ಇರುತ್ತದೆ.

ಎಸ್ಎಂಎಸ್ ಮೂಲಕ ಲೊಕೇಷನ್ ಶೇರಿಂಗ್

ಎಸ್ಎಂಎಸ್ ಮೂಲಕ ಲೊಕೇಷನ್ ಶೇರಿಂಗ್

ಮೆಸೇಜ್ ಮೂಲಕವೂ ಕೂಡ ನೀವು ಲೊಕೇಷನ್ ಡಾಟಾವನ್ನು ಹಂಚಿಕೊಳ್ಳಬಹುದು. ನೀವು ಲೊಕೇಷನ್ ಹಂಚಿಕೊಳ್ಳಬೇಕೆಂದಿರುವವರ ಕಾನ್ವರ್ಸೇಷನ್ ಗೆ ತೆರಳಿ,ಪೇಪರ್ ಕ್ಲಿಪ್ ಐಕಾನ್ ನ್ನು ಹಿಟ್ ಮಾಡಿ ಮತ್ತು ಲೊಕೇಷನ್ ನ್ನು ಟ್ಯಾಪ್ ಮಾಡಿ. ನೀವು ಲೊಕೇಷನ್ ಹುಡುಕಾಡಬಹುದು ಅಥವಾ ಜಿಪಿಎಸ್ ಬಟನ್ ಮೂಲಕ ನೀವು ಎಲ್ಲಿದ್ದೀರೋ ಆ ಜಾಗವನ್ನ ಸ್ವಯಂಚಾಲಿತವಾಗಿ ಆಯ್ಕೆಯಾಗುವಂತೆಯೂ ಮಾಡಬಹುದು. ಯಾವಾಗ ನೀವು ‘ಸೆಂಡ್' ಬಟನ್ ನ್ನು ಹಿಟ್ ಮಾಡುತ್ತೀರೋ ನಿಮ್ಮ ಲೊಕೇಷನ್ನಿನ ಗೂಗಲ್ ಮ್ಯಾಪ್ ಐಡಿಯನ್ನು ರಿಸೀವ್ ಮಾಡುವವರು ಪಡೆಯುತ್ತಾರೆ.

ಗೂಗಲ್ ಮ್ಯಾಪ್ ಮೂಲಕ ಲೊಕೇಷನ್ ಶೇರಿಂಗ್

ಗೂಗಲ್ ಮ್ಯಾಪ್ ಮೂಲಕ ಲೊಕೇಷನ್ ಶೇರಿಂಗ್

ಗೂಗಲ್ ಮ್ಯಾಪ್ ಗೆ ತೆರಳಿ ಮತ್ತು ನೀವು ಇಚ್ಛಿಸುವ ಲೊಕೇಷನ್ ನ್ನ ಹುಡುಕಾಡಿ, ನೀವು ಕಳಿಸಬೇಕು ಎಂದುಕೊಂಡಿರುವ ಆ ಲೊಕೇಷನ್ ನ್ನು ಪ್ರೆಸ್ ಮಾಡಿ ಮತ್ತು ಹೋಲ್ಡ್ ಮಾಡಿ.ಗೂಗಲ್ ಮ್ಯಾಪಿನ ಕೆಂಪು ಪಿನ್ನಿನ ಐಕಾನ್ ಮ್ಯಾಪ್ ನಲ್ಲಿ ಡ್ರಾಪ್ ಆಗುತ್ತದೆ ಜೊತೆಗೆ ವಿಳಾಸ ಕೆಳಭಾಗದಲ್ಲಿರುತ್ತದೆ.ವಿಳಾಸವನ್ನು ಟ್ಯಾಪ್ ಮಾಡಿ ಮತ್ತು ಸೇವ್ ಅಥವಾ ಶೇರ್ ಆಯ್ಕೆಯು ಲಭ್ಯವಾಗುತ್ತದೆ. ಬೇರೆಯವರಿಗೆ ಕಳುಹಿಸುವುದಕ್ಕಾಗಿ ಸೆಂಡ್ ನ್ನು ಟ್ಯಾಪ್ ಮಾಡಿ.

ಮೊಬೈಲ್ ನಲ್ಲಿ ಲೊಕೇಷನ್ ಟ್ರ್ಯಾಕಿಂಗ್ ಗಾಗಿ ಹಲವಾರು ಆಪ್ ಗಳು ಲಭ್ಯವಿದ್ದು ಫೈಂಡ್ ಮೈ ಫ್ರೆಂಡ್ಸ್, ಲೈಫ್ 360 ಫ್ಯಾಮಿಲಿ ಲೊಕೇಟರ್ ಮತ್ತು ಗ್ಲಿಂಪ್ಸೆ ಇತ್ಯಾದಿಗಳು ಸಹಾಯ ಮಾಡುತ್ತವೆ.

Most Read Articles
Best Mobiles in India

English summary
How To Share Your Location Using WhatsApp And Google Maps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more