ವಾಟ್ಸಾಪ್‌ ಮೆಸೆಜ್‌ ಸ್ಕ್ರೀನ್‌ಶಾರ್ಟ್‌ ತೆಗೆದುಕೊಳ್ಳುವುದು ಹೇಗೆ ಗೊತ್ತಾ?

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಅಪ್ಲಿಕೇಶನ್ ವಾಟ್ಸಾಪ್ ಹಲವು ಯಪಯುಕ್ತ ಫೀಚರ್ಸ್‌ಗಳಿಂದ ಬಳಕೆದಾರರಿಗೆ ಹತ್ತಿರವಾಗಿದೆ. ವಾಟ್ಸಾಪ್‌ ತನ್ನ ನೂತನ ಅಪ್‌ಡೇಟ್‌ಗಳಲ್ಲಿ ಏನಾದರೂ ಒಂದು ಹೊಸ ಫೀಚರ್ ಅಳವಡಿಸುತ್ತ ಸಾಗಿ ಬಂದಿದೆ. ಬಳಕೆದಾರರಿಗೆ ಮೆಸೆಜ್‌ಗಳನ್ನು ಬ್ಯಾಕ್‌ಅಪ್‌ ಪಡೆಯುವ ಅವಕಾಶ ಮಾಡಿಕೊಟ್ಟಿದೆ. ಅದರೊಂದಿಗೆ ಉಖ್ಯ ಮೆಸೆಜ್‌ಗಳನ್ನು ಮಾರ್ಕ್ ಮಾಡಲು ಸೌಲಭ್ಯ ಕಲ್ಪಿಸಿದೆ. ಇನ್ನು ಬಳಕೆದಾರರು ವಾಟ್ಸಾಪ್‌ ಚಾಟ್‌ನ ಸ್ಕ್ರೀನ್‌ಶಾರ್ಟ್‌ ಸಹ ಪಡೆಯಬಹುದಾಗಿದೆ.

ಅಪ್ಲಿಕೇಶನ್‌ಗಳಲ್ಲಿ

ಹೌದು, ವಾಟ್ಸಾಪ್‌ ಆಪ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಲ್ಲಿ ಈ ವಾಟ್ಸಾಪ್ ಮೆಸೆಂಜರ್ ಅತ್ಯುತ್ತಮ ಮತ್ತು ಹೆಚ್ಚು ಡೌನ್‌ಲೋಡ್ ಕಂಡ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಬಹುತೇಕ ಬಳಕೆದಾರರು ವಾಟ್ಸಾಪ್‌ ಚಾಟ್‌ನ ಸ್ಕ್ರೀನ್‌ಶಾರ್ಟ್‌ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಐಫೋನ್ ಅಥವಾ ಆಂಡ್ರಾಯ್ಡ್‌ ಬಳಕೆದಾರರು ವಾಟ್ಸಾಪ್ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು ಕೆಲವೊಮ್ಮೆ ಬಹಳ ಮುಖ್ಯವಾಗಬಹುದು.

ಸ್ಕ್ರೀನ್‌ಶಾರ್ಟ್‌

ಏಕೆಂದರೆ ಕೆಲವೊಮ್ಮೆ ಬಳಕೆದಾರರಿಗೆ ಚಾಟ್‌ ಹಿಸ್ಟರಿಯನ್ನು ಸೇವ್ ಮಾಡಲು ಬಯಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಬಹುತೇಕ ಬಳಕೆದಾರರು ವಾಟ್ಸಾಪ್‌ನಲ್ಲಿ ಚಾಟ್‌ ಸ್ಕ್ರೀನ್ ಅನ್ನು ತ್ವರಿತವಾಗಿ ಸ್ಕ್ರೀನ್‌ಶಾರ್ಟ್‌ ತೆಗೆದುಕೊಳ್ಳುತ್ತಾರೆ. ಹಾಗೆಯೇ ತೆಗೆದುಕೊಂಡ ಸ್ಕ್ರೀನ್‌ಶಾರ್ಟ್‌ ಅನ್ನು ಇತರರೊಂದಿಗೆ ಶೇರ್ ಸಹ ಮಾಡಬಹುದಾಗಿದೆ. ಹಾಗಾದರೇ ವಾಟ್ಸಾಪ್‌ ಚಾಟ್‌ನ ಸ್ಕ್ರೀನ್‌ಶಾರ್ಟ್‌ ತೆಗೆದುಕೊಳ್ಳುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಆಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು ಹೇಗೆ

ವಾಟ್ಸಾಪ್‌ ಆಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು ಹೇಗೆ

ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ವಾಟ್ಸಾಪ್‌ನಲ್ಲಿ ಸ್ಕ್ರೀನ್‌ಶಾರ್ಟ್‌ ತೆಗೆದುಕೊಳ್ಳಬಹುದು. ಆದರೆ ವಾಟ್ಸಾಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಈ ಎರಡು ಬಳಕೆದಾರರಿಗೆ ವಿಭಿನ್ನ ವಿಧಾನಗಳಿವೆ.

ಐಫೋನ್‌ನಲ್ಲಿ ವಾಟ್ಸಾಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಈ ಕ್ರಮ ಫಾಲೋ ಮಾಡಿರಿ:

ಐಫೋನ್‌ನಲ್ಲಿ ವಾಟ್ಸಾಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಈ ಕ್ರಮ ಫಾಲೋ ಮಾಡಿರಿ:

ಹಂತ 1: ವಾಟ್ಸಾಪ್ ಆಪ್‌ಗೆ ಹೋಗಿ ಮತ್ತು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಬಯಸುವ ಚಾಟ್ ಸ್ಕ್ರೀನ್ ತೆರೆಯಿರಿ.
ಹಂತ 2: ನಂತರ, ಹೋಮ್ ಬಟನ್‌ನೊಂದಿಗೆ ನಿಮ್ಮ ಐಫೋನ್‌ನಲ್ಲಿ ಪವರ್ ಬಟನ್ ಮತ್ತು ಹೋಮ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
ಹಂತ 3: ಬಳಿಕ, ನೀವು ಕ್ಯಾಮೆರಾ ಶಟರ್ ಶಬ್ದವನ್ನು ಕೇಳುತ್ತೀರಿ, ಇದು ಸ್ಕ್ರೀನ್‌ಶಾಟ್ ಅನ್ನು ಯಶಸ್ವಿಯಾಗಿ ತೆಗೆದುಕೊಳ್ಳಲಾಗಿದೆ ಎಂದು ಸೂಚಿಸುತ್ತದೆ.
ಹಂತ 4: ಸ್ಕ್ರೀನ್‌ಶಾಟ್‌ಗಳ ಫೋಲ್ಡರ್‌ನಲ್ಲಿರುವ ಫೋನ್‌ನ ಫೋಟೋಗಳ ಅಪ್ಲಿಕೇಶನ್‌ನಿಂದ ಪ್ರವೇಶಿಸುವ ಮೂಲಕ ನೀವು ಸೆರೆಹಿಡಿದ ಸ್ಕ್ರೀನ್‌ಶಾಟ್ ಅನ್ನು ಇಮೇಲ್‌ಗಳು ಅಥವಾ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಗಳಲ್ಲಿ ಪೋಸ್ಟ್‌ ಮಾಡಬಹುದು ಅಥವಾ ಶೇರ್‌ ಮಾಡಬಹುದು.

ಆಂಡ್ರಾಯ್ಡ್‌ ಬಳಕೆದಾರರು ವಾಟ್ಸಾಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಈ ಕ್ರಮ ಅನುಸರಿಸಿ:

ಆಂಡ್ರಾಯ್ಡ್‌ ಬಳಕೆದಾರರು ವಾಟ್ಸಾಪ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಈ ಕ್ರಮ ಅನುಸರಿಸಿ:

ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಸ್ಕ್ರೀನ್‌ಶಾರ್ಟ್‌ ತೆಗೆದುಕೊಳ್ಳುವ ಆಯ್ಕೆಗಳು ಭಿನ್ನವಾಗಿರುತ್ತವೆ. ಆಂಡ್ರಾಯ್ಡ್ 9 ಅಥವಾ ಆಂಡ್ರಾಯ್ಡ್ 10 ನಂತಹ ಇತ್ತೀಚಿನ ಆಂಡ್ರಾಯ್ಡ್ ಓಎಸ್‌ನಲ್ಲಿ ನೋಟಿಫಿಕೇಶನ್‌ ಪ್ಯಾನಲ್ ಡ್ರಾಪ್-ಡೌನ್ ಮೆನುವಿನಲ್ಲಿ ಸ್ಕ್ರೀನ್‌ಶಾಟ್ ಆಯ್ಕೆಯನ್ನು ಬಳಸಬಹುದು. ವಾಲ್ಯೂಮ್ ಡೌನ್ ಬಟನ್ ಮತ್ತು ಪವರ್‌ ಬಟನ್‌ ಒತ್ತುವ ಮೂಲಕ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು. ಬಹುತೇಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಈ ವ್ಯವಸ್ಥೆಯನ್ನು ಹೊಂದಿರುತ್ತವೆ.

ಹೋಮ್

ಹಂತ 1: ನೀವು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಬಯಸುವ ವಾಟ್ಸಾಪ್ ಚಾಟ್‌ ಸ್ಕ್ರೀನ್‌ ತೆರೆಯಿರಿ.
ಹಂತ 2: ನಂತರ ಪವರ್ ಬಟನ್ ಮತ್ತು ಹೋಮ್ ಬಟನ್ ಒತ್ತಿ ಹಿಡಿದುಕೊಳ್ಳಿ, ನೀವು ಭೌತಿಕ ಹೋಮ್ ಬಟನ್ ಹೊಂದಿದ್ದರೆ ಅಥವಾ ಪವರ್ ಮತ್ತು ವಾಲ್ಯೂಮ್ ಡೌನ್ ಬಟನ್ ಆಯ್ಕೆಯನ್ನು ಪ್ರಯತ್ನಿಸಿ.
ಹಂತ 3: ಸ್ಕ್ರೀನ್‌ಶಾಟ್ ಯಶಸ್ವಿಯಾಗಿ ತೆಗೆದುಕೊಳ್ಳಲಾಗಿದೆ ಎಂದು ಸೂಚಿಸುವ ಇತ್ತೀಚಿನ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ನೀವು ಕ್ಯಾಮೆರಾ ಶಟರ್ ಧ್ವನಿ ಕೇಳುತ್ತೀರಿ ಮತ್ತು ನೋಟಿಫಿಕೇಶನ್‌ ಪಡೆಯುತ್ತಿರಿ.
ಹಂತ 4: ನೀವು ತೆಗೆದುಕೊಂಡ ಸ್ಕ್ರೀನ್‌ಶಾಟ್ ಚಿತ್ರಗಳನ್ನು ಫೇಸ್‌ಬುಕ್, ಟ್ವಿಟರ್ ಇತ್ಯಾದಿ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಗೆ ಎಡಿಟ್ ಮಾಡಿ ಶೇರ್ ಮಾಡ ಬಹುದು.

ಆಂಡ್ರಾಯ್ಡ್ 11 ಓಎಸ್‌ ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಹೀಗೆ ಮಾಡಿರಿ:

ಆಂಡ್ರಾಯ್ಡ್ 11 ಓಎಸ್‌ ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಹೀಗೆ ಮಾಡಿರಿ:

* ನೀವು ಸ್ಕ್ರೀನ್‌ಶಾಟ್ ಮಾಡಲು ಬಯಸುವ ವಾಟ್ಸಾಪ್‌ ಚಾಟ್ ತೆರೆಯಿರಿ.
* ನಂತರ, ನೋಟಿಫಿಕೇಶನ್‌ ಸೆಂಟರ್‌ಗೆ ಹೋಗಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಸ್ಕ್ರೀನ್ ಶಾಟ್ ಟಾಗಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.
* ಈಗ ವಾಟ್ಸಾಪ್‌ ಆಪ್‌ ಸ್ಕ್ರೀನ್‌ಶಾಟ್ ಫೋಟೊಸ್ ಆಪ್‌ನಲ್ಲಿರುವ ಸ್ಕ್ರೀನ್‌ಶಾಟ್ ಫೋಲ್ಡರ್‌ನಲ್ಲಿ ಸೇವ್ ಆಗುತ್ತದೆ.

Most Read Articles
Best Mobiles in India

English summary
How To Take WhatsApp Chat Screenshot On Androind And iOS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X