ಫೋನ್‌ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಡಿಜಿಟಲ್ ವ್ಯವಹಾರ ಅಧಿಕವಾಗಿದೆ. ಹೆಚ್ಚಿನ ಪಾವತಿಗಳಿಗಾಗಿ ಜನರು ಇದೀಗ ಡಿಜಿಟಲ್ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಅದರಲ್ಲು ಕೊರೋನಾ ವೈರಸ್‌ ಹಾವಳಿಯ ನಂತರ ಡಿಜಿಟಲ್‌ ಪೇಮೆಂಟ್‌ ಸೇವೆ ಹೆಚ್ಚಿನ ಜನಪ್ರಿಯತೆಯನ್ನ ಪಡದುಕೊಂಡಿದೆ. ಇನ್ನು ಭಾರತದಲ್ಲಿ ಡಿಜಿಟಲ್ ಪಾವತಿ ಮಾಡುವುದಕ್ಕೆ ಹಲವು ಯುಪಿಐ ಆಧಾರಿತ ಅಪ್ಲಿಕೇಶನ್‌ಗಳು ಲಭ್ಯವಿವೆ. ಇವುಗಳಲ್ಲಿ ಫೋನ್‌ಪೇ ಕೂಡ ಒಂದಾಗಿದೆ. ಫೋನ್ ಪೇ ನಿಮಗೆ ನಿಮ್ಮ ಮೊಬೈಲ್ ಫೋನ್ ರೀಚಾರ್ಜ್ ಮಾಡುವುದಕ್ಕೆ, ಬಿಲ್ ಪಾವತಿ ಮಾಡುವುದಕ್ಕೆ, ಡಿಟಿಹೆಚ್ ಕನೆಕ್ಷನ್ ಮತ್ತು ಇತ್ಯಾದಿ ಹಲವು ವ್ಯವಹಾರಗಳನ್ನು ನಡೆಸುವುದಕ್ಕೆ ಅವಕಾಶ ನೀಡುತ್ತದೆ.

ಫೋನ್‌ ಪೇ

ಹೌದು, ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಫೋನ್‌ ಪೇ ಕೂಡ ಒಂದಾಗಿದೆ. ಫೋನ್‌ ಪೇ ತನ್ನ ಬಳಕಎದಾರರಿಗೆ ಕ್ಯಾಶ್‌ಬ್ಯಾಕ್‌, ರಿವಾರ್ಡ್ಸ್‌,ಅನ್ನು ಸಹ ನೀಡುತ್ತಿದೆ. ಇನ್ನು ಫೋನ್‌ಪೇ ಅಪ್ಲಿಕೇಶನ್‌ ಕೇವಲ ಆನ್‌ಲೈನ್ ಪಾವತಿಗಳನ್ನು ಮಾಡಲು ಮತ್ತು ಬಿಲ್‌ಗಳನ್ನು ಪಾವತಿಸಲು ವಿನ್ಯಾಸಗೊಳಿಸಲಾಗಿಲ್ಲ, ಹಲವಾರು ಬ್ಯಾಂಕ್ ಸಂಬಂಧಿತ ಸೌಲಭ್ಯಗಳನ್ನು ಸಹ ನೀಡುತ್ತವೆ. ಫೋನ್‌ಪೇ ಅಪ್ಲಿಕೇಶನ್‌ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದಾಗಿದೆ. ಹಾಗಾದ್ರೆ ಫೋನ್‌ ಪೇ ಅಪ್ಲಿಕೇಶನ್‌ ಬಳಸಿಕೊಂಡು ಖಾತೆಗೆ ಹಣವನ್ನು ವರ್ಗಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ ಪೇ ಅಪ್ಲಿಕೇಶನ್‌

ಫೋನ್‌ ಪೇ ಅಪ್ಲಿಕೇಶನ್‌ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಈ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಲು ನೀವು ಆಯಾ ಅಪ್ಲಿಕೇಶನ್ ಸ್ಟೋರ್‌ಗಳಿಗೆ ಹೋಗಬಹುದು. ಸದ್ಯ ಫೋನ್‌ಪೇ ಅಪ್ಲಿಕೇಶನ್‌ ಮೂಲಕ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾಯಿಸುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಫೋನ್‌ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವುದು ಹೇಗೆ?

ಫೋನ್‌ಪೇ ಮೂಲಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನ ಅಪ್ಲಿಕೇಶನ್ ಡ್ರಾಯರ್‌ಗೆ ಹೋಗಿ ಮತ್ತು ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಮುಖಪುಟದಲ್ಲಿ ನೀವು multiple money ವರ್ಗಾವಣೆ ಮತ್ತು ಇತರ ಆಯ್ಕೆಯನ್ನು ನೋಡಬಹುದಾಗಿದ್ದು, ' ಟು ಅಕೌಂಟ್‌' ಆಯ್ಕೆಯನ್ನು ಆರಿಸಿ.

ಹಂತ 3: ಮುಂದಿನ ಹಂತದಲ್ಲಿ ನೀವು ಹಣವನ್ನು ವರ್ಗಾಯಿಸಬೇಕಾದ ಖಾತೆಯನ್ನು ಲಿಂಕ್ ಮಾಡಲು ನೀವು ಸೇರಿಸಬೇಕಾಗಿದೆ. ಇದಕ್ಕಾಗಿ, 'Add Beneficiary' ಆಯ್ಕೆಯನ್ನು ಆರಿಸಿ.

ಹಂತ 4: ನಂತರ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ ಮತ್ತು ಖಾತೆಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.

ಹಂತ 5: ಬ್ಯಾಂಕ್ ಮಾಹಿತಿಯನ್ನು ಯಶಸ್ವಿಯಾಗಿ ಲಾಗ್ ಮಾಡಿದ ನಂತರ, ಖಾತೆಯನ್ನು ಆರಿಸಿ ಮತ್ತು ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ.

ಹಂತ 6: ಉಳಿದ ಪಾವತಿ ವಿಧಾನವು ಇತರ ಪಾವತಿಗಳಂತೆ ಮಾಡಬಹುದಾಗಿದೆ.

ಫೋನ್ ಪೇ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಫೋನ್ ಪೇ ಯುಪಿಐ ಪಿನ್ ಅನ್ನು ಬದಲಾಯಿಸುವುದು ಹೇಗೆ?

ಹಂತ 1: ಸ್ಕ್ರೀನಿನ ಬಲ ಮೂಲೆಯಲ್ಲಿರುವ ಮೆನುವನ್ನು ಮೊದಲು ತೆರೆಯಿರಿ.

ಹಂತ 2: ನೀವು ಬ್ಯಾಂಕ್ ಅಕೌಂಟ್ ಸೆಗ್ಮೆಂಟ್ ನ್ನು ಕ್ಲಿಕ್ ಮಾಡಬೇಕು. ನಂತರ ವ್ಯಾಲೆಟ್ ಗೆ ಲಿಂಕ್ ಆಗಿರುವ ಎಲ್ಲಾ ಬ್ಯಾಂಕ್ ಖಾತೆಗಳ ವಿವರವನ್ನು ನೀವಲ್ಲಿ ಗಮನಿಸಬಹುದು.

ಹಂತ 3: ಆದಾದ ನಂತರ ಯಾವ ಬ್ಯಾಂಕ್ ಖಾತೆಯ ಪಿನ್ ನಂಬರ್ ನ್ನು ನೀವು ಬದಲಾಯಿಸುವುದಕ್ಕೆ ಬಯಸುತ್ತೀರಿ ಎಂಬುದನ್ನು ಸೆಲೆಕ್ಟ್ ಮಾಡಿ.

ಹಂತ 4: ನಂತರ ಆಪ್ ನಿಮಗೆ ಪಾಸ್ ವರ್ಡ್ ಬದಲಾಯಿಸುವುದಕ್ಕೆ ಅವಕಾಶ ನೀಡುತ್ತದೆ ಮತ್ತು ರೀಸೆಟ್ ಬಟನ್ ನ್ನು ನೀವು ಗಮನಿಸಬಹುದು.

ಹಂತ 5:ನಂತರ ಬಟನ್ ನ್ನು ಕ್ಲಿಕ್ಕಿಸಿ ಮತ್ತು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನ ಕೊನೆಯ ಡಿಜಿಟ್ ಗಳನ್ನು ಎಂಟರ್ ಮಾಡಬೇಕು ಜೊತೆಗೆ ಕಾರ್ಡ್ ನಲ್ಲಿ ಬರೆಯಲಾಗಿರುವ ಎಕ್ಸ್ ಪೈರಿ ಡೇಟ್ ನ್ನು ನಮೂದಿಸಬೇಕು.

ಹಂತ 6: ಇದೀಗ ಬ್ಯಾಂಕ್ ನಿಂದ ನಿಮ್ಮ ಫೋನ್‌ ನಂಬರ್‌ಗೆ ಓಟಿಪಿ ಬರಲಿದೆ, ನಂತರ ಆ ಓಟಿಪಿಯನ್ನು ಇಲ್ಲಿ ನಮೂದಿಸಿದರೆ ಹೊಸ ಪಿನ್ ನಂಬರ್ ಸೆಟ್ ಮಾಡಿ ಪಡೆಯಬಹುದಾಗಿದೆ.

Most Read Articles
Best Mobiles in India

English summary
PhonePe UPI app is available for download on both Android and iOS platforms. You can head to the respective app stores to install this application. The steps to transfer money to a bank account are listed below.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X