Just In
Don't Miss
- News
ನೂಪುರ್ ವಿರುದ್ಧದ ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಆಕ್ಷೇಪ
- Sports
ಈತನ ಹುಚ್ಚುತನದಿಂದ ನಾಲ್ಕನೇ ದಿನ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮಂಕಾಯಿತು ಎಂದ ಪೀಟರ್ಸನ್!
- Education
SSC CGL Tier 1 2022 Result : ಎಸ್ಎಸ್ಸಿ ಸಿಜಿಎಲ್ ಟಯರ್ 1 ಫಲಿತಾಂಶ ವೀಕ್ಷಿಸುವುದು ಹೇಗೆ ?
- Lifestyle
ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ ಅದೇ ಹೇಳುತ್ತೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತಾ!
- Automobiles
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಫೇಸ್ಬುಕ್ನಲ್ಲಿ ಆಟೋ-ಪ್ಲೇ ವೀಡಿಯೊ ಆಫ್ ಮಾಡುವುದಕ್ಕೆ ಈ ಕ್ರಮ ಅನುಸರಿಸಿ!
ಮೆಟಾ ಒಡೆತನದ ಫೇಸ್ಬುಕ್ ಸಾಮಾಜಿಕ ಜಾಲತಾಣ ದೈತ್ಯ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಇದರಲ್ಲಿ ಆಟೋ ಪ್ಲೇ ವೀಡಿಯೋ ಫೀಚರ್ಸ್ ಕೂಡ ಸೇರಿದೆ. ಸಾಮಾನ್ಯವಾಗಿ ಫೇಸ್ಬುಕ್ನಲ್ಲಿ ನ್ಯೂಸ್ ಫೀಡ್ ಅನ್ನು ಸ್ಕ್ರಾಲ್ ಮಾಡಿದಾಗ, ನಡುವೆ ಬರುವ ವೀಡಿಯೊಗಳು ಆಗಾಗ ಆಟೋ ಪ್ಲೇ ಆಗುವುದನ್ನು ಕಾಣಬಹುದು. ಇನ್ನು ಈ ಆಟೋ-ಪ್ಲೇ ವೀಡಿಯೊ ಫೀಚರ್ಸ್ ಬಳಕೆಯಿಂದ ಬಳಕೆದಾರರಿಗೆ ಅನುಕೂಲವೇನು ಇಲ್ಲ. ಏಕೆಂದರೆ ಈ ಫೀಚರ್ಸ್ ನಿಮ್ಮ ಮೊಬೈಲ್ ಡೇಟಾವನ್ನು ಹೆಚ್ಚು ಬಳಸುತ್ತದೆ.

ಹೌದು, ಫೇಸ್ಬುಕ್ನಲ್ಲಿ ಆಟೋ ಪ್ಲೇ ವೀಡಿಯೋ ಫೀಚರ್ಸ್ ಹೆಚ್ಚಿನ ಡೇಟಾವನ್ನು ಬಳಸುತ್ತದೆ. ಅಲ್ಲದೆ ಹೆಚ್ಚು ಬ್ಯಾಟರಿಯನ್ನು ಬಳಸುತ್ತದೆ. ಅಲ್ಲದೆ ಅನಗತ್ಯ ವೀಡಿಯೊಗಳನ್ನು ಆಟೋ-ಪ್ಲೇ ಮಾಡುತ್ತದೆ. ಇದರಿಂದ ಕೆಲವೊಮ್ಮೆ ನೀವು ಮುಜುಗರ ಅನುಭವಿಸಿದರೂ ಅಚ್ಚರಿಯಿಲ್ಲ. ಆದರಿಂದ ನೀವು ಫೇಸ್ಬುಕ್ನಲ್ಲಿ ಆಟೋ ಪ್ಲೇ ವೀಡಿಯೋ ಫೀಚರ್ಸ್ ಅನ್ನು ಬಳಸುವುದಕ್ಕೆ ಇಷ್ಟವಿಲ್ಲದೆ ಹೋದರೆ ಅದನ್ನು ಆಫ್ ಮಾಡಬಹುದಾಗಿದೆ. ಹಾಗಾದ್ರೆ ಫೇಸ್ಬುಕ್ನಲ್ಲಿ ಆಟೋ ಪ್ಲೇ ವೀಡಿಯೋ ಫೀಚರ್ಸ್ ಅನ್ನು ಆಫ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೇಸ್ಬುಕ್ನಲ್ಲಿ ಆಟೋ-ಪ್ಲೇ ವೀಡಿಯೊವನ್ನು ಆಫ್ ಮಾಡುವುದು ಹೇಗೆ?
ನೀವು ವೆಬ್ ಬ್ರೌಸರ್ನಲ್ಲಿ ಫೇಸ್ಬುಕ್ ಅನ್ನು ಬಳಸುತ್ತಿದ್ದರೆ ಆಟೋ ಪ್ಲೇ ವೀಡಿಯೊ ಫೀಚರ್ಸ್ ಆಫ್ ಮಾಡಲು ಬಯಸಿದರೆ, ಈ ಹಂತಗಳನ್ನು ಅನುಸರಿಸಿ,
ಹಂತ:1 ಮೊದಲನೆಯದಾಗಿ, ಫೇಸ್ಬುಕ್ ಪೇಜ್ ಮೇಲಿನ ಬಲಭಾಗದಲ್ಲಿರುವ ಡ್ರಾಪ್-ಡೌನ್ ಮೆನುಗೆ ಹೋಗಿ.
ಹಂತ:2 ನಂತರ, ಸೆಟ್ಟಿಂಗ್ಗಳು ಮತ್ತು ಪ್ರೈವೆಸಿಯ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್ಸ್ ಆಯ್ಕೆಮಾಡಿ.
ಹಂತ:3 ಇದೀಗ, ಲೆಫ್ಟ್ ಹ್ಯಾಂಡ್ ಮೆನುವಿನಿಂದ 'ವೀಡಿಯೊಗಳು' ಕ್ಲಿಕ್ ಮಾಡಿ ಮತ್ತು ಇದರಲ್ಲಿ ಲಭ್ಯವಿರುವ ಆಯ್ಕೆಗಳ ಟಾಗಲ್ನಲ್ಲಿ ಆಟೋ ಪ್ಲೇ ವೀಡಿಯೊ ಅನ್ನು ಆಫ್ ಮಾಡಲು ಸಾಧ್ಯವಾಗುತ್ತದೆ.

ಐಒಎಸ್ನಲ್ಲಿ ಫೇಸ್ಬುಕ್ ಆಟೋ-ಪ್ಲೇ ವೀಡಿಯೊವನ್ನು ಆಫ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಫೇಸ್ಬುಕ್ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಸ್ಕ್ರೀನ್ ಕೆಳಭಾಗದಲ್ಲಿ ತೋರಿಸಿರುವ ಮೆನು ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್ಸ್ ಮತ್ತು ಪ್ರೈವೆಸಿಯ ಮೇಲೆ ಟ್ಯಾಪ್ ಮಾಡಿ.
ಹಂತ:4 ಈಗ ಸೆಟ್ಟಿಂಗ್ಗಳನ್ನು ಆಯ್ಕೆಮಾಡಿ.
ಹಂತ:5 ಇದೀಗ ನೀವು ಸ್ಕ್ರೋಲಿಂಗ್ನಲ್ಲಿ ಮೀಡಿಯಾ ಮತ್ತು ಸಂಪರ್ಕಗಳ ಆಯ್ಕೆಯನ್ನು ಕಾಣಬಹುದು.
ಹಂತ:6 'ವೀಡಿಯೋಸ್ ಮತ್ತು ಫೋಟೋಸ್' ಮೇಲೆ ಟ್ಯಾಪ್ ಮಾಡಿ.
ಹಂತ:7 ನಂತರ ಕಾಣುವ ಆಟೋಪ್ಲೇ ಆಯ್ಕೆಯನ್ನು ನೀವು ಆಫ್ ಮಾಡಬಹುದು.

ಆಂಡ್ರಾಯ್ಡ್ ಅಪ್ಲಿಕೇಶನ್ನಲ್ಲಿ ಫೇಸ್ಬುಕ್ ಆಟೋ-ಪ್ಲೇ ವೀಡಿಯೊವನ್ನು ಆಫ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಫೇಸ್ಬುಕ್ ಅಪ್ಲಿಕೇಶನ್ ಮೇಲೆ ಟ್ಯಾಪ್ ಮಾಡಿ ಮತ್ತು ಸ್ಕ್ರೀನ್ ಮೇಲಿನ ಬಲಭಾಗದಲ್ಲಿ ತೋರಿಸಿರುವ ಮೆನು ಬಟನ್ ಮೇಲೆ ಟ್ಯಾಪ್ ಮಾಡಿ.
ಹಂತ:2 ನಂತರ ಸೆಟ್ಟಿಂಗ್ಸ್ ಮತ್ತು ಪ್ರೈವೆಸಿಯ ಮೇಲೆ ಕ್ಲಿಕ್ ಮಾಡಿ
ಹಂತ:3 ಇದೀಗ ಸೆಟ್ಟಿಂಗ್ಸ್ಗೆ ಹೋಗಿ.
ಹಂತ:4 ಇದರಲ್ಲಿ ಕೆಳಗೆ ಸ್ಕ್ರೋಲ್ ಮಾಡಿದ ನಂತರ, ನೀವು ‘ಮೀಡಿಯಾ ಮತ್ತು ಕಂಟ್ಯಾಕ್ಟ್ಗಳು' ಮೇಲೆ ಟ್ಯಾಪ್ ಮಾಡಬೇಕು.
ಹಂತ:5 ಇದೀಗ ಆಟೋ ಪ್ಲೇ ಮೇಲೆ ಟ್ಯಾಪ್ ಮಾಡಿದ ನಂತರ, ನೀವು ಎಂದಿಗೂ ಆಟೋ-ಪ್ಲೇ ವೀಡಿಯೊಗಳನ್ನು ಆಯ್ಕೆ ಮಾಡಬೇಡಿ.

ಇದಲ್ಲದೆ ಫೇಸ್ಬುಕ್ ತನ್ನ ಖಾತೆಗಳಲ್ಲಿ ಫೇಸ್ಬುಕ್ ಪ್ರೊಟೆಕ್ಟ್ ಬಳಸದ ಖಾತೆಗಳು ಲಾಕ್ಔಟ್ ಆಗಲಿದೆ ಎಂದು ಹೇಳಿದೆ. ಈ ತಿಂಗಳ ಆರಂಭದಿಂದಲೂ ಕೂಡ ಫೇಸ್ಬುಕ್ ತನ್ನ ಬಳಕೆದಾರರಿಗೆ ಮೇಲ್ ಕಳುಹಿಸುತ್ತಿದೆ. ನಿರ್ದಿಷ್ಟ ದಿನಾಂಕದೊಳಗೆ ತಮ್ಮ ಖಾತೆಗಳಲ್ಲಿ ಫೇಸ್ಬುಕ್ ಪ್ರೊಟೆಕ್ಟ್ ಅನ್ನು ಸಕ್ರಿಯಗೊಳಿಸುವಂತೆ ಹೇಳಿದೆ. ಅಲ್ಲದೆ 'ನಿಮ್ಮ ಖಾತೆಗೆ ಫೇಸ್ಬುಕ್ ರಕ್ಷಣೆಯಿಂದ ಸುಧಾರಿತ ಭದ್ರತೆಯ ಅಗತ್ಯವಿದೆ' ಎಂಬ ಶೀರ್ಷಿಕೆಯ ಇಮೇಲ್ ಕಳುಹಿಸಿದೆ. ಒಂದು ವೇಳೆ ನೀವು ಫೇಸ್ಬುಕ್ ಪ್ರೊಟೆಕ್ಟ್ ಸಕ್ರಿಯಗೊಳಿಸದಿದ್ದರೆ ನಿಮ್ಮ ಖಾತೆಗಳಿಂದ ಲಾಕ್ಔಟ್ ಆಗಬೇಕಾಗುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086