ರೇವ್‌ ಆಪ್‌ ಬಳಸಿ ಸ್ನೇಹಿತರೊಂದಿಗೆ ಯೂಟ್ಯೂಬ್ ವೀಡಿಯೊಗಳನ್ನು ನೋಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಸ್ನೇಹಿತರ ಜೊತೆಗೆ ಸ್ಮಾರ್ಟ್‌ಫೋನ್‌ನಲ್ಲಿ ಚಾಟ್‌ ಮಾಡುವುದು, ಗೇಮ್‌ ಆಡುವುದು, ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಲ್ಲದೆ ಬೇರೆ ಎಲ್ಲೋ ಇರುವ ನಿಮ್ಮ ಸ್ನೇಹಿತನ ಜೊತೆಗೆ ನೀವು ಇರುವಲ್ಲಿಯೇ ಗೇಮ್‌ ಆಡುವ, ಒಂದೇ ಮಾದರಿಯ ವೀಡಿಯೋ ಅಪ್ಲಿಕೇಶನ್‌ಗಳಿಗೆ ಎಂಟ್ರಿ ನೀಡುವ ಅವಕಾಶವನ್ನು ನಾವಿಂದು ಕಾಣಬಹುದಾಗಿದೆ. ಅಲ್ಲದೆ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಬಿಂಗ್ ಮಾಡಬಹುದಾಗಿದೆ. ಇನ್ನು ನೀವು ನಿಮ್ಮ ಫ್ರಿ ಟೈಂ ಕಳೆಯಲು ನಿಮ್ಮ ಸ್ನೇಹಿತರ ಜೊತೆ ಮೋಜಿನ ಸಮಯ ಕಳೆಯುವುದಕ್ಕಾಗಿ ಅವರನ್ನು ಸಹ ನೀವು ನಿಮ್ಮ ಅಪ್ಲಿಕೇಶನ್‌ ಮೂಲಕ ಅಹ್ವಾನಿಸಬಹುದಾಗಿದೆ.

ರೇವ್

ಹೌದು, ನೀವು ನಿಮ್ಮ ಸ್ನೇಹಿತರನ್ನು ನೆಟ್‌ಪ್ಲಿಕ್ಸ್‌, ಯುಟ್ಯೂಬ್‌, ಅಮೆಜಾನ್‌ ಮುಂತಾದ ಸೇವೆಗಳಿಗೆ ಆಹ್ವಾನಿಸಬಹುದಾಗಿದೆ. ಇದಕ್ಕಾಗಿ ನೀವು ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ರೇವ್ ಮೀಡಿಯಾ ಸ್ಟ್ರೀಮಿಂಗ್ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಇದು ಬಳಕೆದಾರರಿಗೆ ಅವರು ಇಷ್ಟಪಡುವ ಮಾಧ್ಯಮದೊಂದಿಗೆ ಸಮಯ ಕಳೆಯಲು ಅನುವು ಮಾಡಿಕೊಡುತ್ತದೆ. ಇದು ಯೂಟ್ಯೂಬ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಗೂಗಲ್ ಡ್ರೈವ್ ಮತ್ತು ಇತರ ಕೆಲವು ಸೇವೆಗಳಿಗೆ ಬೆಂಬಲದೊಂದಿಗೆ ಬರುತ್ತದೆ ಮತ್ತು ಬಳಕೆದಾರರು ತಮ್ಮ ನೆಚ್ಚಿನ ವೀಡಿಯೊಗಳನ್ನು ಒಟ್ಟಿಗೆ ಸ್ಟ್ರೀಮ್ ಮಾಡಲು ಅನುಮತಿಸುತ್ತದೆ.

ರೇವ್

ರೇವ್‌ನಲ್ಲಿ ನೀವು ವೀಡಿಯೊ ಸ್ಟ್ರೀಮಿಂಗ್ ಸೇವೆಯನ್ನು ಆರಿಸಿದಾಗಲೆಲ್ಲಾ, ಅದಕ್ಕಾಗಿ ಒಂದು ರೂಮ್‌ ಅನ್ನು ರಚಿಸುತ್ತದೆ. ಪ್ರತಿಯೊಂದು ರೂಮ್ ತನ್ನದೇ ಆದ ಗೌಪ್ಯತೆ ಸೆಟ್ಟಿಂಗ್‌ಗಳೊಂದಿಗೆ ಬರುತ್ತದೆ. ಅಂದರೆ ನಿಮ್ಮ ರೂಮ್‌ ಅನ್ನು ನೀವು ಪಬ್ಲಿಕ್‌ ಆಗಿ ಇಟ್ಟುಕೊಂಡರೆ ಇತರ ರೇವ್ ಬಳಕೆದಾರರು ಸಹ ಸೇರಬಹುದು. ಒಮ್ಮೆ ನೀವು ರೂಮ್‌ಅನ್ನು ಕ್ರಿಯೆಟ್‌ ಮಾಡಿದ ನಂತರ ನೀವು ನಿಮ್ಮ ಸ್ನೇಹಿತರನ್ನು ಇನ್ವೈಟ್‌ ಮಾಡಬಹುದು. ಅಲ್ಲದೆ ನೀವು ಅವರಿಗೆ ರೂಮ್‌ ಲಿಂಕ್ ಅನ್ನು ಕಳುಹಿಸಬಹುದು, ಇಲ್ಲದಿದ್ದರೆ ನೀವು ಅವರನ್ನು ನಿಮ್ಮ ರೇವ್ ಫ್ರೆಂಡ್ಸ್‌ ಲಿಸ್ಟ್‌ಗೆ ಸೇರಿಸಬಹುದಾಗಿದೆ.

ರೇವ್‌

ಇನ್ನು ರೇವ್‌ ಅಪ್ಲಿಕೇಶನ್‌ ಬಳಸುವ ಮೂಲಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮೀಡಿಯಾ ಸ್ಟ್ರೀಮಿಂಗ್‌ ಅನ್ನು ಅನುಭವಿಸಬಹುದಾಗಿದೆ. ಅಷ್ಟೇ ಅಲ್ಲ ಈ ಸಮಯದಲ್ಲಿ ನಿಮ್ಮ ಸ್ನೇಹಿತರನ್ನು ಸಹ ಆಹ್ವಾನಿಸಬಹುದಾಗಿದೆ. ಅಂದರೆ ನಿವು ಯುಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಣೆ ಮಾಡುತ್ತಿದ್ದರೆ, ನಿಮ್ಮ ಸ್ನೇಹಿತರನ್ನು ಸಹ ವೀಡಿಯೋ ವೀಕ್ಷಣೆಗೆ ಇನ್ವೈಟ್‌ ಮಾಡಬಹುದಾಗಿದೆ. ಹಾಗಾದ್ರೆ ಯುಟ್ಯೂಬ್‌ ವೀಡಿಯೋಗಳನ್ನ ಸ್ನೇಹಿತರೊಂದಿಗೆ ವೀಕ್ಷಿಸಲು ಇನ್ವೈಟ್‌ ಮಾಡುವುದು ಹೇಗೆ ಅನ್ನೊದನ್ನ ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿರಿ.

YouTube ವೀಡಿಯೊಗಳನ್ನು ಸ್ನೇಹಿತರೊಂದಿಗೆ ವೀಕ್ಷಿಸಲು ರೇವ್ ಆಪ್ಲಿಕೇಶನ್‌ ಬಳಸುವುದು ಹೇಗೆ?

YouTube ವೀಡಿಯೊಗಳನ್ನು ಸ್ನೇಹಿತರೊಂದಿಗೆ ವೀಕ್ಷಿಸಲು ರೇವ್ ಆಪ್ಲಿಕೇಶನ್‌ ಬಳಸುವುದು ಹೇಗೆ?

ಹಂತ 1: ನಿಮ್ಮ Android ಅಥವಾ iOS ಸಾಧನದಲ್ಲಿ ರೇವ್ ಡೌನ್‌ಲೋಡ್ ಮಾಡಿ.

ಹಂತ 2: ಫೇಸ್‌ಬುಕ್, ಟ್ವಿಟರ್ ಅಥವಾ ಗೂಗಲ್ ಬಳಸಿ ರೇವ್‌ನಲ್ಲಿ ಸೈನ್ ಅಪ್ ಮಾಡಿ.

ಹಂತ 3: ಕೆಳಗಿನ ಬಲ ಮೂಲೆಯಿಂದ "+" ಬಟನ್ ಟ್ಯಾಪ್ ಮಾಡಿ ಮತ್ತು ಸ್ಟ್ರೀಮಿಂಗ್ ಸೇವೆಗಳ ಪಟ್ಟಿಯಿಂದ ಯೂಟ್ಯೂಬ್ ಆಯ್ಕೆಮಾಡಿ.

ಹಂತ 4: ನೀವು ರೂಮ್‌ ಪ್ರಾರಂಭಿಸಲು ಬಯಸುವ YouTube ವೀಡಿಯೊಗಾಗಿ ಹುಡುಕಿ. ವೀಡಿಯೊ ಪ್ಲೇ ಮಾಡಲು ಪ್ರಾರಂಭಿಸಿದ ನಂತರ ನಿಮ್ಮ ರೂಮ್‌ ಗೌಪ್ಯತೆಯನ್ನು ಆರಿಸಿ.

ಹಂತ 5: ನಿಮ್ಮ ರೂಮ್‌ ಗೆ ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ ಮತ್ತು ನೀವು ಹೋಗಲು ಸಿದ್ಧರಿದ್ದೀರಿ. ರೂಮ್‌ನಲ್ಲಿರುವ ಪ್ರತಿಯೊಬ್ಬರೂ ತಮ್ಮದೇ ಆದ ವೀಡಿಯೊಗಳನ್ನು, ಪಠ್ಯವನ್ನು ಅಥವಾ ಮೈಕ್ ಬಳಸಿ ನೇರವಾಗಿ ಚಾಟ್ ಮಾಡಬಹುದು.

ಕೆಲವು ಕಾರಣಗಳಿಗಾಗಿ ನೀವು ರೇವ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಪ್ಲೇ ಮಾಡುವಾಗ ಅದು ನಿಮಗೆ ಯಾವುದೇ ಜಾಹೀರಾತುಗಳನ್ನು ತೋರಿಸುವುದಿಲ್ಲ ಮತ್ತು ನೀವು ಸಂಪೂರ್ಣವಾಗಿ ಜಾಹೀರಾತು-ಮುಕ್ತ ಅನುಭವವನ್ನು ಪಡೆಯಬಹುದಾಗಿದೆ.

Most Read Articles
Best Mobiles in India

Read more about:
English summary
Whenever you choose a video streaming service on Rave, it creates a room for that. Every room comes with its own privacy settings which means that if you keep your room public other Rave users can also join that. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X