ಸಿಗ್ನಲ್ ಅಪ್ಲಿಕೇಶನ್‌ ಅನ್ನು ಲ್ಯಾಪ್‌ಟಾಪ್ ನಲ್ಲಿ ಬಳಸುವುದು ಹೇಗೆ?

|

ವಾಟ್ಸಾಪ್‌ ಹೊಸ ಸೇವಾ ನಿಯಮದ ನಂತರ ಸಿಗ್ನಲ್‌ ಆಪ್‌ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಈಗಾಗಲೇ ಈ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ದೇಶದ ಲಕ್ಷಾಂತರ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ. ಇದು ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಟಾಪ್ ಉಚಿತ ಅಪ್ಲಿಕೇಶನ್ ಆಗಿದೆ. ಇನ್ನು ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್, ವಾಟ್ಸಾಪ್, ಅದರ ಗೌಪ್ಯತೆ ನೀತಿಯನ್ನು ನವೀಕರಿಸಿದ ನಂತರ ಬಳಕೆದಾರರು ಸಿಗ್ನಲ್ ಅಥವಾ ಟೆಲಿಗ್ರಾಮ್‌ ಅಪ್ಲಿಕೇಶನ್‌ ಕಡೆಎ ಮುಖ ಮಾಡುತ್ತಿದ್ದಾರೆ.

ಸಿಗ್ನಲ್‌

ಹೌದು, ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಯ ವಿವಾದ ಸಿಗ್ನಲ್‌ ಅಪ್ಲಿಕೇಶನ್‌ ಅನ್ನು ಜನಪ್ರಿಯತೆ ಹೆಚ್ಚಿಸಲು ಕಾರಣವಾಗಿದೆ. ಇನ್ನು ವಾಟ್ಸಾಪ್‌ ಮೊಬೈಲ್ ಮತ್ತು ಡೆಸ್ಕ್ಟಾಪ್ ಎರಡರಲ್ಲೂ ಬಳಸಬಹುದು. ಇದು ಪ್ರತ್ಯೇಕ ವೆಬ್ ಆವೃತ್ತಿಯನ್ನು ಹೊಂದಿವೆ. ಆದರೆ, ಸಿಗ್ನಲ್‌ ಅಪ್ಲಿಕೇಶನ್‌ ವಿಷಯದಲ್ಲಿ ಹಾಗಲ್ಲ. ಸಿಗ್ನಲ್‌ಗಾಗಿ ನಿರ್ದಿಷ್ಟ ವೆಬ್ ಆವೃತ್ತಿ ಇಲ್ಲ. ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸಿಗ್ನಲ್ ಅನ್ನು ಬಳಸಲು ನೀವು ಮೊದಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ, ಅದನ್ನು ಇನ್‌ಸ್ಟಾಲ್‌ ಮಾಡಿದ ನಂತರ ಬಳಸಬಹುದಾಗಿದೆ. ಹಾಗಾದ್ರೆ ಸಿಗ್ನಲ್‌ ಅಪ್ಲಿಕೇಶನ್‌ ಅನ್ನು ಲ್ಯಾಪ್‌ಟಾಪ್‌ನಲ್ಲಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸಿಗ್ನಲ್ ಅಪ್ಲಿಕೇಶನ್‌ ಅನ್ನು ಬಳಸುವುದು ಹೇಗೆ ?

ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸಿಗ್ನಲ್ ಅಪ್ಲಿಕೇಶನ್‌ ಅನ್ನು ಬಳಸುವುದು ಹೇಗೆ ?

ಹಂತ 1: ಮೊದಲು ನೀವು ಬಳಸುವ ಬ್ರೌಸರ್‌ನಲ್ಲಿ ಸಿಗ್ನಲ್ ಡೌನ್‌ಲೋಡ್ ಪುಟಕ್ಕೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ https://signal.org/download/.ಕ್ಲಿಕ್ ಮಾಡಿ:

ಹಂತ 2: ಈಗ, ಸಿಗ್ನಲ್‌ನ ಡೆಸ್ಕ್‌ಟಾಪ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ನೀವು "ವಿಂಡೋಸ್‌ಗಾಗಿ ಡೌನ್‌ಲೋಡ್ ಮಾಡಿ" ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3: ಅಪ್ಲಿಕೇಶನ್‌ನ ಡೌನ್‌ಲೋಡ್ ಕೇವಲ ಕ್ಲಿಕ್‌ನಲ್ಲಿ ಪ್ರಾರಂಭವಾಗುತ್ತದೆ. ನಿಮ್ಮ ಸಾಧನವು ಸ್ಥಿರ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದೆ ಎಂದು ಖಚಿತಪಡಿಸಿಕೊಳ್ಳಿ. ಪ್ರಕ್ರಿಯೆಯು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಹಂತ 4: ನಂತರ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿ ಮತ್ತು ಅದನ್ನು ನಿಮ್ಮ ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಪಡೆಯಿರಿ.

ಹಂತ 5: ನಂತರ ನೀವು ನಿಮ್ಮ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಿಗ್ನಲ್ ಅಪ್ಲಿಕೇಶನ್ ಅನ್ನು ತೆರೆಯಬೇಕು ಮತ್ತು ಖಾತೆಯನ್ನು ಡೆಸ್ಕ್‌ಟಾಪ್‌ಗೆ ಲಿಂಕ್ ಮಾಡಲು ಸೆಟ್ಟಿಂಗ್‌ಗಳ ಮೆನುಗೆ ಹೋಗಿ.

ಹಂತ 6: ಲಿಂಕ್ ಮಾಡಿದ ಡಿವೈಸ್‌ ಆಯ್ಕೆಯನ್ನು ಆರಿಸಿ ಮತ್ತು ಲಾಗಿನ್ ಮಾಡಲು ವೆಬ್ ಆವೃತ್ತಿಯಲ್ಲಿ ತೋರಿಸಿರುವ ಕೋಡ್ ಅನ್ನು ಸ್ಕ್ಯಾನ್ ಮಾಡಿ.

ಹಂತ 7: ಡಿವೈಸ್‌ನಲ್ಲಿನ ನಿಮ್ಮ ಸಿಗ್ನಲ್ ಖಾತೆಗೆ ನೀವು ಈಗ ಯಶಸ್ವಿಯಾಗಿ ಲಾಗ್ ಇನ್ ಆಗುತ್ತೀರಿ.

ಐಪ್ಯಾಡ್‌ನಲ್ಲಿ ಸಿಗ್ನಲ್ ಅನ್ನು ಬಳಸುವುದು ಹೇಗೆ ?

ಐಪ್ಯಾಡ್‌ನಲ್ಲಿ ಸಿಗ್ನಲ್ ಅನ್ನು ಬಳಸುವುದು ಹೇಗೆ ?

ಹಂತ 1: ಮೊದಲು ನೀವು ಬಳಸುವ ಬ್ರೌಸರ್‌ನಲ್ಲಿ ಸಿಗ್ನಲ್ ಡೌನ್‌ಲೋಡ್ ಪುಟಕ್ಕೆ ಭೇಟಿ ನೀಡಬೇಕಾಗುತ್ತದೆ.

ಹಂತ 2: ಮುಂದೆ, ಪ್ಲಾಟ್‌ಫಾರ್ಮ್‌ನ ಐಪ್ಯಾಡ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ನೀವು "ಐಪ್ಯಾಡ್ ಅಥವಾ ಐಫೋನ್‌ಗಾಗಿ ಡೌನ್‌ಲೋಡ್ ಮಾಡಿ" ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3: ಡೌನ್‌ಲೋಡ್ ಪ್ರಾರಂಭವಾಗುತ್ತದೆ ಮತ್ತು ಪೂರ್ಣಗೊಳ್ಳಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಐಪ್ಯಾಡ್ ಸ್ಥಿರ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದೆ ಎಂದು ಖಚಿತಪಡಿಸಿಕೊಳ್ಳಿ.

ಹಂತ 4: ನಂತರ ನೀವು ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿ ಮತ್ತು ಅದನ್ನು ನಿಮ್ಮ ಐಪ್ಯಾಡ್‌ನಲ್ಲಿ ಪಡೆಯಬೇಕಾಗುತ್ತದೆ.

ಹಂತ 5: ಖಾತೆಯನ್ನು ಐಪ್ಯಾಡ್‌ಗೆ ಲಿಂಕ್ ಮಾಡಲು ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ತೆರೆಯಿರಿ ಮತ್ತು ಸೆಟ್ಟಿಂಗ್‌ಗಳ ಮೆನುಗೆ ಹೋಗಿ.

ಹಂತ 6: ಲಿಂಕ್ ಮಾಡಿದ ಡಿವೈಸ್‌ ಆಯ್ಕೆಯನ್ನು ಆರಿಸಿ ಮತ್ತು ಲಾಗಿನ್ ಮಾಡಲು ವೆಬ್ ಆವೃತ್ತಿಯಲ್ಲಿ ತೋರಿಸಿರುವ ಕೋಡ್ ಅನ್ನು ಸ್ಕ್ಯಾನ್ ಮಾಡಿ.

ಹಂತ 7: ನೀವು ಈಗ ಐಪ್ಯಾಡ್‌ನಲ್ಲಿ ಯಶಸ್ವಿಯಾಗಿ ಲಾಗ್ ಇನ್ ಆಗಿದ್ದೀರಿ.

Most Read Articles
Best Mobiles in India

English summary
Signal is gaining wide popularity in India especially among WhatsApp users amid the privacy policy controversy.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X