ವಾಟ್ಸಾಪ್‌ ಡೆಸ್ಕ್‌ಟಾಪ್‌ನಲ್ಲಿ ವಾಯಿಸ್‌ ಮತ್ತು ವಿಡಿಯೊ ಕರೆ ಮಾಡುವುದು ಹೇಗೆ?

|

ಫೇಸ್‌ಬುಕ್ ಒಡೆತನದ ವಾಟ್ಸಾಪ್ ಮೆಸೆಜಿಂಗ್ ಅಪ್ಲಿಕೇಶನ್ ಈಗಾಗಲೇ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳು ಮತ್ತು ಸೇವೆಗಳನ್ನು ಪರಿಚಯಿಸಿದೆ. ಸಾಮಾಜಿಕ ಮಾಧ್ಯಮದ ದೈತ್ಯ ಎನಿಸಿಕೊಂಡಿರುವ ವಾಟ್ಸಾಪ್‌ ಮತ್ತಷ್ಟು ಅನುಕೂಲಕರ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತ ಸಾಗಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್‌ ಇತ್ತೀಚಿಗಷ್ಟೆ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ವಾಯಿಸ್‌ ಮತ್ತು ವಿಡಿಯೋ ಕರೆ ಮಾಡುವ ಫೀಚರ್‌ ಅನ್ನು ಬಿಡುಗಡೆ ಮಾಡಿದೆ.

ಡೆಸ್ಕ್‌ಟಾಪ್

ಹೌದು, ವಾಟ್ಸಾಪ್ ಇತ್ತೀಚೆಗೆ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ವಾಯಿಸ್‌ ಮತ್ತು ವಿಡಿಯೋ ಕರೆ ಮಾಡುವ ಫೀಚರ್‌ ಅನ್ನು ಬಿಡುಗಡೆ ಮಾಡಿದೆ. ಮೊಬೈಲ್ ಆವೃತ್ತಿಯಲ್ಲಿ ಈಗಾಗಲೇ ಇದ್ದ ಫೀಚರ್‌ ಈಗ ವಿಂಡೋಸ್ ಮತ್ತು ಮ್ಯಾಕ್ ಬಳಕೆದಾರರಿಗೆ ಲಭ್ಯವಿರುತ್ತದೆ. ಆದರೆ ವಾಟ್ಸಾಪ್ನ ಡೆಸ್ಕ್ಟಾಪ್ ಆವೃತ್ತಿಯಲ್ಲಿ ವಾಯಿಸ್‌ ಮತ್ತು ವೀಡಿಯೊ ಕರೆಗಳನ್ನು ಹೇಗೆ ಮಾಡಬೇಕೆಂದು ತಿಳಿದಿರುವುದಿಲ್ಲ. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ವಿಂಡೋಸ್

ವಾಟ್ಸಾಪ್ ವಿಂಡೋಸ್ ಮತ್ತು ಮ್ಯಾಕ್ ಬಳಕೆದಾರರಿಗಾಗಿ ವಾಯಿಸ್‌ ಮತ್ತು ವಿಡಿಯೋ ಕರೆ ಮಾಡುವ ಫೀಚರ್‌ ಅನ್ನು ಹೊರತಂದಿದೆ. ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಫೀಚರ್‌ ಅನ್ನು ಸಕ್ರಿಯಗೊಳಿಸಲು, ವಾಟ್ಸಾಪ್‌ನ ಡೆಸ್ಕ್‌ಟಾಪ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿರಿ. ಇನ್‌ಸ್ಟಾಲ್‌ ಆದ ನಂತರ, ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲಿಕೇಶನ್ ತೆರೆಯಿರಿ ಮತ್ತು ಅದನ್ನು ಕಾನ್ಫಿಗರ್ ಮಾಡಿ.

ವಾಯಿಸ್‌

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ, ಬಳಕೆದಾರರು ತಮ್ಮ ವಾಟ್ಸಾಪ್ ಕಾಂಟ್ಯಾಕ್ಟ್‌ಗಳನ್ನು ಆಕ್ಸಸ್ ಮಾಡಲು ಸಾಧ್ಯವಾಗುತ್ತದೆ. ವಾಯಿಸ್‌ ಅಥವಾ ವೀಡಿಯೊ ಕರೆ ಮಾಡಲು, ಕಾಂಟ್ಯಾಕ್ಟ್‌ನ ಹೆಸರಿನ ಬಲಭಾಗದಲ್ಲಿ ಪಟ್ಟಿ ಮಾಡಲಾದ ಐಕಾನ್‌ಗಳ ಮೇಲೆ ಕ್ಲಿಕ್ ಮಾಡಿ. ವೀಡಿಯೊ ಅಥವಾ ವಾಯಿಸ್‌ ಕರೆ ಮಾಡಲು ಕರೆ ಐಕಾನ್ ಕ್ಲಿಕ್ ಮಾಡಿ.

ವಿಂಡೋ

ವಾಯಿಸ್‌ ಅಥವಾ ವೀಡಿಯೊ ಕರೆ ಸಂಪರ್ಕಗೊಂಡ ನಂತರ, ಬಳಕೆದಾರರು ಸ್ವತಂತ್ರ ಮೆಸೆಜ್‌ ಅನ್ನು ಪಡೆಯುತ್ತಾರೆ ಮತ್ತು ಅದನ್ನು ಮರುಗಾತ್ರಗೊಳಿಸಬಹುದು. ಸ್ಕ್ರೀನ್‌ನ ಮೇಲ್ಭಾಗದಲ್ಲಿ ಕರೆ ವಿಂಡೋ ಇರುವುದರಿಂದ ಬಳಕೆದಾರರು ಟೆಕ್ಸ್ಟ್‌ ಮೆಸೆಜ್‌ಗಳನ್ನು ಇತರ ಸಂಪರ್ಕಗಳಿಗೆ ಸುಲಭವಾಗಿ ಕಳುಹಿಸಬಹುದು.

ವೀಡಿಯೊ

ಈ ಫೀಚರ್‌ಗೆ ವಾಟ್ಸಾಪ್ ಡೆಸ್ಕ್‌ಟಾಪ್‌ನ ಇತ್ತೀಚಿನ ಅಪ್‌ಡೇಟ್‌ ಆವೃತ್ತಿಯ ಅಗತ್ಯವಿದೆ. ಅಲ್ಲದೆ, ನಿಮ್ಮ ಡೆಸ್ಕ್‌ಟಾಪ್‌ನ ಕ್ಯಾಮೆರಾ ಮತ್ತು ಮೈಕ್ರೊಫೋನ್ ಪ್ರವೇಶಿಸಲು ಅನುಮತಿ ನೀಡಲು ವಾಟ್ಸಾಪ್ ನಿಮ್ಮನ್ನು ಕೇಳುತ್ತದೆ. ಬಳಕೆದಾರರು ಸ್ಥಿರವಾದ ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲದಿದ್ದರೆ, ವಾಟ್ಸಾಪ್ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಧ್ವನಿ ಮತ್ತು ವೀಡಿಯೊ ಕರೆ ಫೀಚರ್‌ ಅನ್ನು ಬಳಸುವಾಗ ಅವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Most Read Articles
Best Mobiles in India

English summary
The voice and video calling feature requires the latest version of the WhatsApp desktop.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X