ಭಾರತದಲ್ಲಿ IPL 2020 ಪಂದ್ಯವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ!

|

ಕೊರೊನಾ ವೈರಸ್‌ ಕಾರಣದಿಂದ ಮುಂದೂಡಲ್ಟಟ್ಟಿದ್ದ ಇಂಡಿಯನ್‌ ಪ್ರಿಮಿಯರ್‌ ಲೀಗ್‌ನ ಹದಿಮೂರನೇ ಆವೃತ್ತಿ IPL 2020 ಇಂದಿನಿಂದ ಪ್ರಾರಂಭವಾಗಲಿದೆ. ಈ ಮೂಲಕ ಕ್ರಿಕೆಟ್‌ ಪ್ರೇಮಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದ ಐಪಿಎಲ್‌ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಸದ್ಯ ವಿಶ್ವದೆಲ್ಲಡೆ ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾದಂತಾಗಿದೆ. ಇನ್ನು ಈ ಭಾರಿಯ ಐಪಿಎಲ್‌ನಲ್ಲಿಯೂ ಒಟ್ಟು 60 ಕ್ರಿಕೆಟ್ ಪಂದ್ಯಗಳಿರಲಿದ್ದು, ಐಪಿಎಲ್‌ 2020 ಕಪ್‌ಗಾಗಿ ಎಂಟು ತಂಡಗಳು ಸೆಣಸಾಡಲಿವೆ.

ಐಪಿಎಲ್‌

ಹೌದು, ಐಪಿಎಲ್‌ನ ಹದಿಮೂರನೇ ಆವೃತ್ತಿ IPL 2020 ಮರಳುಗಾಡಿನ ಪ್ರದೇಶ UAE( ಯುನೈಟೆಡ್‌ ಅರಬ್‌ ಎಮಿರೈಟ್ಸ್‌)ಯಲ್ಲಿ ನಡೆಯುತ್ತಿದೆ. ಸದ್ಯ ಕ್ರಿಕೆಟ್‌ ಹಬ್ಬವನ್ನು ಕಣ್ತುಂಬಿ ಕೊಳ್ಳಲು ಎಲ್ಲರೂ ಕಾತುರದಿಂದ ಇದ್ದಾರೆ. ಇಂದು ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಕಳೆದ ವರ್ಷಗಳಂತೆಯೇ, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಐಪಿಎಲ್ ಪಂದ್ಯಗಳು ಅಧಿಕೃತವಾಗಿ ಪ್ರಸಾರವಾಗಲಿದೆ. ಅಲ್ಲದೆ ಡಿಸ್ನಿ + ಹಾಟ್‌ಸ್ಟಾರ್‌ ನಲ್ಲಿಯೂ ಪಂದ್ಯಗಳನ್ನ ವೀಕ್ಷಿಸಬಹುದಾಗಿದೆ. ಆದರೂ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಟಿವಿಯಲ್ಲಿ ಐಪಿಎಲ್‌ ನೋಡಲು ಸಾಧ್ಯವಾಗದಿದ್ದರೆ, ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ರಿಕೆಟ್‌

ಸಾಮಾನ್ಯವಾಗಿ ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿ ಭಾರತದಲ್ಲಿ ಐಪಿಎಲ್‌ ಕ್ರಿಕೆಟ್‌ ಹಬ್ಬವೇ ನಡೆಯುತ್ತಿತ್ತು. ಪ್ರೇಕ್ಷಕರು ಐಪಿಎಲ್‌ ಪಂದ್ಯಗಳನ್ನ ಮೈದಾನದಲ್ಲಿಯೇ ವೀಕ್ಷಿಸುತ್ತಾ ತಮ್ಮ ನೆಚ್ಚಿನ ತಂಡಗಳಿಗೆ ಚಿಯರ್‌ ಆಪ್ ಮಾಡುತ್ತಿದ್ದರು. ಆದರೆ ಈ ಭಾರಿ ಕೊರೊನಾ ಕಾರಣದಿಂದಾಗಿ ಭಾರತದಲ್ಲಿ ಐಪಿಎಲ್‌ ಪಂದ್ಯಗಳನ್ನ ನಡೆಸಲು ಸಾಧ್ಯವಾಗದೆ ಯುಎಇ ಯಲ್ಲಿ ನಡೆಸಲಾಗ್ತಿದೆ. ಅಲ್ಲದೆ ಪ್ರೇಕ್ಷಕರೇ ಇಲ್ಲದ ಮೈದಾನದಲ್ಲಿ ಐಪಿಎಲ್‌ ನಡೆಯುತ್ತಿರುವುದರಿಂದ ಐಪಿಎಲ್‌ ಪಂದ್ಯಗಳನ್ನ ಟಿವಿ ಮತ್ತು ಆನ್‌ಲೈನ್‌ ಮೂಲಕವೇ ನೊಡಬೇಕಾದ ಅನಿವಾರ್ಯತೆ ಇದೆ.

ಭಾರತದಲ್ಲಿ ಐಪಿಎಲ್ ಪಂದ್ಯವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ

ಭಾರತದಲ್ಲಿ ಐಪಿಎಲ್ ಪಂದ್ಯವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ

ಭಾರತದಲ್ಲಿ ಐಪಿಎಲ್‌ ಪಂದ್ಯಗಳನ್ನ ಆನ್‌ಲೈನ್‌ನಲ್ಲಿ ವೀಕ್ಷಿಸಲು ನಿವು ಡಿಸ್ನಿ + ಹಾಟ್‌ಸ್ಟಾರ್‌ ಅನ್ನು ಬಳಸಬಹುದಾಗಿದೆ. ಇದರಲ್ಲಿ ಮೀಡಿಯಾ ಸ್ಟ್ರೀಮಿಂಗ್ ಸೇವೆ ಎರಡು ವಿಭಿನ್ನ ಚಂದಾದಾರಿಕೆ ಮಾದರಿಗಳ ಮೂಲಕ ಲಭ್ಯವಿದೆ. ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಮತ್ತು ಡಿಸ್ನಿ + ಹಾಟ್‌ಸ್ಟಾರ್ ವಿಐಪಿ. ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ತಿಂಗಳಿಗೆ ರೂ. 299 ಅಥವಾ ವರ್ಷಕ್ಕೆ 1,499 ರೂ. ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ವರ್ಷಕ್ಕೆ 399 ರೂ. ಚಂದಾದರಿಕೆಯನ್ನ ಹೊಂದಿದೆ. ಇದರ ಮೂಲಕ ಆನ್‌ಲೈನ್‌ನಲ್ಲಿ ಐಪಿಎಲ್‌ ಅನ್ನು ವೀಕ್ಷಿಸಬಹುದಾಗಿದೆ.

ಐಪಿಎಲ್

ಇನ್ನುಳಿದಂತೆ ಆಸ್ಟ್ರೇಲಿಯಾದಲ್ಲಿ ಇರುವ ಪ್ರೇಕ್ಷಕರು, ಫಾಕ್ಸ್ಟೆಲ್ ಚಂದಾದಾರಿಕೆಯನ್ನು ಖರೀದಿಸುವ ಮೂಲಕ ಅಥವಾ ಯುಪ್ಟಿವಿಗೆ ಚಂದಾದಾರರಾಗುವ ಮೂಲಕ ಐಪಿಎಲ್ ಲೈವ್ ಟೆಲಿಕಾಸ್ಟ್ 2020 ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಫಾಕ್ಸ್ಟೆಲ್ ಸ್ಪೋರ್ಟ್ಸ್ ಎಚ್ಡಿ ಮತ್ತು ಕಿಡ್ಸ್ ಪ್ಯಾಕ್ ಅನ್ನು ಮಾಸಿಕ AUD79 (ಸರಿಸುಮಾರು 4,200 ರೂ.) ದರದಲ್ಲಿ ನೀಡುತ್ತದೆ. ಇನ್ನು ಯುಎಸ್ಎದಲ್ಲಿ ಐಪಿಎಲ್ 2020 ಲೈವ್ ವೀಕ್ಷಿಸಲು, ನೀವು ಹಾಟ್ಸ್ಟಾರ್ ಯುಎಸ್‌ಗೆ ವರ್ಷಕ್ಕೆ. $49.99 (ಸರಿಸುಮಾರು 3,700 ರೂ.) ಗೆ ಚಂದಾದಾರರಾಗಬಹುದು.

Most Read Articles
Best Mobiles in India

Read more about:
English summary
IPL 2020, which is the thirteenth season of the Indian Premier League, is beginning from today, September 19.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X