Just In
Don't Miss
- News
ನೌಕಾಪಡೆಗಳ ಶಕ್ತಿ ಸಾಮರ್ಥ್ಯ ಹೆಚ್ಚಳ ಕಾರಣ ಬಿಚ್ಚಿಟ್ಟ ರಾಜನಾಥ್ ಸಿಂಗ್
- Sports
ಆರ್ಸಿಬಿ vs ಆರ್ಆರ್: ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ಆರ್ಸಿಬಿ ವೇಗಿ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Movies
'ಪಾರು' ಸೀರಿಯಲ್ ನಟಿ ಸುಶ್ಮಿತಾ ರಾಮಕಲಾ ಸಿಕ್ಕಾಪಟ್ಟೆ ಸ್ಟೈಲಿಶ್!
- Lifestyle
ಈ 16 ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿಸಬಹುದು: ಸದ್ಯದಲ್ಲಿಯೇ ಬರಲಿದೆ ಈ ನಿಯಮ
- Automobiles
ಹೊಸ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ವಿಶೇಷತೆಗಳು
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡ್ರೈವಿಂಗ್ ಲೈಸೆನ್ಸ್ ಕಳೆದುಹೋದ್ರೆ, ಡುಬ್ಲಿಕೇಟ್ ಲೈಸೆನ್ಸ್ ಪಡೆಯುವುದು ಹೇಗೆ?
ಬೈಕ್ ಚಾಲನೆ, ಕಾರ ಚಾಲನೆ ಅಥವಾ ಯಾವುದೇ ವಾಹನ ಚಾಲನೆ ಮಾಡಲು ಸೂಕ್ತ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಅಗತ್ಯ ಆಗಿದೆ. ಡ್ರೈವಿಂಗ್ ಲೈಸೆನ್ಸ್ ಪ್ರಮುಖ ಪುರಾವೆಯ ದಾಖಲೆಯು ಆಗಿದೆ. ಹೀಗಾಗಿ ಈ ಡ್ರೈವಿಂಗ್ ಲೈಸೆನ್ಸ್ ಅನ್ನು ಕಾಯ್ದುಕೊಳ್ಳುವುದು ಅಷ್ಟೇ ಅಗತ್ಯ ಆಗಿದೆ. ಅದಾಗ್ಯೂ, ಕೆಲವೊಮ್ಮೆ ನೀವು ಅಚಾನಕ್ ಆಗಿ ಡ್ರೈವಿಂಗ್ ಲೈಸೆನ್ಸ್ ದಾಖಲೆಯನ್ನು ಕಳೆದುಕೊಂಡಿದ್ದರೇ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೇ ನಕಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಲು ಅವಕಾಶ ಇದೆ.

ಹೌದು, ಓರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದರೆ ಬಳಕೆದಾರರು ಸಾರಿಗೆ ಇಲಾಖೆಯಿಂದ ನಕಲಿ ಡ್ರೈವಿಂಗ್ ಲೈಸೆನ್ಸ್ (Duplicate Driving Licence) ಪಡೆಯಬಹುದು. ಆದರೆ ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕೆಲವು ಸುಕ್ತ ಕ್ರಮಗಳನ್ನು ನೀವು ಅನುಸರಿಸಬೇಕಿದೆ. ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಬೇಕಿರುತ್ತದೆ. ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಎಫ್ಐಆರ್ ಪ್ರತಿ ಅಗತ್ಯ ಇರುತ್ತದೆ. ಹಾಗಾದರೆ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದಾಗ ಆನ್ಲೈನ್ ಮೂಲಕ ನಕಲಿ ಡ್ರೈವಿಂಗ್ ಲೈಸೆಸ್ಸ್ ದಾಖಲೆಯನ್ನು ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿ.

ಡುಬ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ:
* ಮೊದಲು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ (https://parivahan.gov.in/parivahan/) ಭೇಟಿ ನೀಡಿ.
* ನಂತರ ಅಲ್ಲಿ ನೀವು ಡ್ರಾಪ್ ಡೌನ್ ಮೆನುವಿನಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆಮಾಡಿ.
* ಮುಂದಿನ ವಿಂಡೋದಲ್ಲಿ, 'ಸರ್ವಿಸ್ ಆನ್ ಡ್ರೈವಿಂಗ್ ಲೈಸೆನ್ಸ್' ಆಯ್ಕೆಯನ್ನು ಆಯ್ಕೆ.
* ನಂತರ ದಯವಿಟ್ಟು 'ಆನ್ಲೈನ್ನಲ್ಲಿ ಅನ್ವಯಿಸು' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
* ಕೆಳಗಿನ ಪರದೆಯಲ್ಲಿ ದಯವಿಟ್ಟು ವಿವರಗಳನ್ನು ಓದಿ ಮತ್ತು ಮುಂದಿನ ಸ್ಕ್ರೀನ್ ಅನ್ನು ಪಡೆಯಲು "ಮುಂದುವರಿಸಿ" ಆಯ್ಕೆ ಕ್ಲಿಕ್ ಮಾಡಿರಿ.
* ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, LLD ಫಾರ್ಮ್ ಅನ್ನು ಭರ್ತಿ ಮಾಡಿ.
* ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಇರಿಸಿಕೊಳ್ಳಿ.

* ಇದರೊಂದಿಗೆ, ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿದ ಬಳಿಕ ಈ ಫಾರ್ಮ್ ಅನ್ನು ಹತ್ತಿರದ RTO ಕಚೇರಿಗೆ ಹೋಗಿ ಸಲ್ಲಿಸಬೇಕು.
* ಸ್ವೀಕೃತಿ ಸೇರಿದಂತೆ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಂಡು ಹತ್ತಿರದ RTO ಕಚೇರಿಗೆ ಹೋಗಿ ಮತ್ತು RTO ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಿ.
* ಅವರು ಪಾವತಿಸಬೇಕಾದ ಶುಲ್ಕದ ಮೊತ್ತವನ್ನು ತಿಳಿಸುತ್ತಾರೆ.
* ಬಳಿಕ ಅಧಿಕೃತ ಕೌಂಟರ್ನಲ್ಲಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಿ.
* ಈ ಪ್ರಕ್ರಿಯೆ ಮುಗಿದ 30 ದಿನಗಳ ನಂತರ ನೀವು ನಕಲು DL ಅನ್ನು ಪಡೆಯುತ್ತೀರಿ.

ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ
ನಕಲಿ ಡಿಎಲ್ ಪಡೆಯಲು ಆಫ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದಕ್ಕಾಗಿ, ಮೊದಲು RTO ಆಫೀಸ್ಗೆ ಭೇಟಿ ನೀಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ನೀವು RTO ಕಚೇರಿಗೆ ಹೋಗಿ ಶುಲ್ಕವನ್ನು ಪಾವತಿಸುವ ಮೂಲಕ ಎಲ್ಎಲ್ಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀವು 30 ದಿನಗಳ ನಂತರ ನಿಮ್ಮ ನಕಲಿ ಚಾಲನಾ ಪರವಾನಗಿಯನ್ನು ಪಡೆಯುತ್ತೀರಿ. ಈ ವೇಳೆ, ನೀವು ರಶೀದಿಯನ್ನು ಸಹ ಪಡೆಯುತ್ತೀರಿ, ಅದನ್ನು ಕಾಯ್ದಿಟ್ಟುಕೊಳ್ಳುವುದು ಅಗತ್ಯ. ನಕಲು DL ಅನ್ನು ಸ್ವೀಕರಿಸಿದಾಗ, ಈ ರಶೀದಿಯ ಅಗತ್ಯವಿರುತ್ತದೆ. ಈ ರಸೀದಿಯ ಮೂಲಕ ನಿಮ್ಮ ನಕಲಿ DL ಅನ್ನು ಸಹ ನೀವು ಟ್ರ್ಯಾಕ್ ಮಾಡಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999