Just In
Don't Miss
- News
ಮದರಸಾ ಕೆಲಸದಾಕೆ ಮೇಲೆ ಅತ್ಯಾಚಾರವೆಸಗಿ ಐರನ್ ಬಾಕ್ಸ್ನಿಂದ ಸುಟ್ಟ ಮೌಲ್ವಿ
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Automobiles
ವಾಹನ ಡೀಲರ್ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ
- Lifestyle
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Movies
ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
'ಮೊಬೈಲ್' ವಿಕಿರಣದ ಅಪಾಯದಿಂದ ನಾವೇ ಪಾರಾಗುವುದು ಹೇಗೆ?..ಇಲ್ಲಿವೆ ಬೆಸ್ಟ್ ಟಿಪ್ಸ್!
ಮೊಬೈಲ್ಗಳಿಂದ ಹೊರಹೊಮ್ಮುವ ರೇಡಿಯೇಷನ್ ಪ್ರಮಾಣ ಅಧಿಕವಾಗಿದ್ದರೆ ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತಿದೆ. ಅಲ್ಲದೆ ಮೊಬೈಲ್ ಫೋನ್ಗಳ ದೀರ್ಘ ಬಳಕೆಯಿಂದ, ಮೆದುಳು ಕ್ಯಾನ್ಸರ್, ಶೇ.20ರಷ್ಟು ಕಿವುಡುತನ ಹಾಗೂ ಶೇ. 30ರಷ್ಟು ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡಾ ಇದೆ. ಈ ಹಿಂದೆ ವಿಶ್ವಸಂಸ್ಥೆಯು ಕೂಡಾ ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಮುಂದೊಂದು ದಿನ ಕ್ಯಾನ್ಸರ್ ರೋಗಕ್ಕೆ ಎಡೆಮಾಡಿಕೊಡಲಿದೆ ಎಂಬ ಎಚ್ಚರಿಕೆಯನ್ನು ನೀಡಿದೆ.
ಆದರೆ, ಈ ಸ್ಮಾರ್ಟ್ಫೋನ್ ಅಲೆಯಲ್ಲಿ ಇಂತಹ ವಿಷಯ ಕೂಡ ಈಗಿನ ಮೊಬೈಲ್ ಬಳಕೆದಾರರಿಗೆ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇತ್ತೀಚಿಗೆ ಅತಿಹೆಚ್ಚು ವಿಕಿರಣಗಳನ್ನು ಹೊರಸೂಸುವ ಟಾಪ್ 10 ಅಪಾಯಕಾರಿ ಫೋನ್ಗಳ ಪಟ್ಟಿ ಬಿಡುಗಡೆಯಾದ ನಂತರ ಭಾರತೀಯರು ಒಮ್ಮೆ ಹೌರಾರಿದ್ದಾರೆ. ದೇಶದಲ್ಲಿ ಹೆಚ್ಚು ಬಳಕೆ ಮಾಡುತ್ತಿರುವ ಶಿಯೋಮಿ, ಒನ್ಪ್ಲಸ್ ಸ್ಮಾರ್ಟ್ಫೋನ್ಗಳು ಪಟ್ಟಿಯಲ್ಲಿರುವುದು ಆತಂಕಕಾರಿ ಸುದ್ದಿ ಎಂದು ಹೇಳಬಹುದು.
ಇನ್ನು ಇತ್ತೀಚಿಗಷ್ಟೇ ಬಿಡುಗಡೆಯಾದ ಪಟ್ಟಿ ಇದಾಗಿರುವುದರಿಂದ, ಈಗಾಗಲೇ ಅಂತಹ ಸ್ಮಾರ್ಟ್ಫೋನ್ಗಳನ್ನು ಖರೀದಿಸಿದವರು ಹೆಚ್ಚು ಜನರಿದ್ದಾರೆ. ಹಾಗಾಗಿ, ನಾವೇ ಮೊಬೈಲ್ ಬಳಕೆಯನ್ನು ಸ್ವ ನಿಯಂತ್ರಣ ಮಾಡಿಕೊಂಡು ಭವಿಷ್ಯದಲ್ಲಿ ವಿಕಿರಣಗಳಿಂದ ಕಾಡಲಿರುವ ತೊಂದರೆಗಳಿಂದ ಪಾರಾಗಬಹುದು. ಹಾಗಾದರೆ, ವಿಕಿರಣದಿಂದ ಆಗುವ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಯಾವ ರೀತಿ ಮೊಬೈಲ್ ಬಳಕೆಗೆ ಸ್ವ ನಿಯಂತ್ರಣ ಹಾಕಿಕೊಳ್ಳಬೇಕು ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ಓದಿರಿ.

ನಿದ್ದೆ ಮಾಡುವಾಗ ಮೊಬೈಲ್ ದೂರವಿರಲಿ!
ನಿದ್ದೆ ಮಾಡುವಾಗ ಮೊಬೈಲ್ ಸಮೀಪ ಇಟ್ಟು ಮಲಗುವುದರಿಂದ ನಿಮ್ಮ ಸವಿನಿದ್ದೆಗೆ ಭಂಗ ಉಂಟು ಮಾಡಿ ನಿದ್ರಾಹೀನತೆ ಸಮಸ್ಯೆ, ದೃಷ್ಟಿ ಕಳೆದುಕೊಳ್ಳುವ ಸಮಸ್ಯೆಗಳು ಉಂಟಾಗುತ್ತವೆ. ಮೊಬೈಲ್ ಅನ್ನು ಅತೀ ಸಮೀಪ ಇಟ್ಟುಕೊಳ್ಳುವುದು ಮತ್ತು ಅತಿ ಬಳಕೆಯು ಸಾವಿಗೂ ಕಾರಣವಾಗಬಹುದು ಎಂದು ಮೊಬೈಲ್ ತಜ್ಞರು ಎಚ್ಚರಿಸಿರುವುದನ್ನು ಕ್ಷುಲ್ಲಕವಾಗಿ ತೆಗೆದುಕೊಳ್ಳಬೇಡಿ.

ಇಯರ್ಫೋನ್ ಬಳಸಿ
ಆದಷ್ಟು ಸಾಧ್ಯವಿರುವ ಕಡೆಯಲ್ಲೆಲ್ಲ ದೇಹದಿಂದ ಮೊಬೈಲ್ ದೂರವಿರುವಂತೆ ನೋಡಿಕೊಳ್ಳಿ. ಮೊಬೈಲ್ನಲ್ಲಿ ಹೆಚ್ಚು ಮಾತನಾಡುವಾಗ ಅದಷ್ಟು ಉತ್ತಮ ಗುಣಮಟ್ಟದ ಇಯರ್ಫೋನ್ ಬಳಸಿ ಮಾತನಾಡಿ. ಇದರಿಂದ ವಿಕಿರಣದ ಎಫೆಕ್ಟ್ ನಿಮ್ಮ ತಲೆಯಿಂದ ದೂರವಿರುತ್ತದೆ. ಮೊಬೈಲ್ ಚಾರ್ಜ್ ಹಾಕಿರುವಾಗ ಅದು ನಿಮ್ಮಿಂದ ಸಾಧ್ಯವಾದಷ್ಟು ದೂರ ಇದ್ದರೆ ಒಳಿತು ಎನ್ನಬಹುದು.

ವಿಕಿರಣ ಹೆಚ್ಚಾಗುವ ಸ್ಥಳಗಳು
ಮನೆಯ ಒಳಗೆ ಸರಿಯಾಗಿ ನೆಟ್ವರ್ಕ್ ಸಿಗದೇ ಇದ್ದಾಗ ಅಥವಾ ಲಿಫ್ಟ್, ವಿಮಾನ, ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚು ಮೊಬೈಲ್ನಲ್ಲಿ ಮಾತನಾಡದಿರಿ. ಕಾರು ಮುಂತಾದವುಗಳಲ್ಲಿ ಪ್ರಯಾಣಿಸುತ್ತಿರಬೇಕಾದರೆ ಕಿಟಕಿ ಗಾಜುಗಳನ್ನು ತೆರೆದು ಮಾತನಾಡುವುದು ಉತ್ತಮ.ಇಂತಹ ಸಮಸಯದಲ್ಲಿ ನೆಟ್ವರ್ಕ್ ಸೆಳೆಯಲು ಮೊಬೈಲ್ ವಿಕಿರಣವನ್ನು ಹೆಚ್ಚು ಹೊರಸೂಸುತ್ತದೆ.

ಮೊಬೈಲ್
ಜೇಬಿನಲ್ಲಿ ಮೊಬೈಲ್ ಇದ್ದಾಗ ಅದರ ರೇಡಿಯೇಷನ್ ದೇಹದಲ್ಲಿ ಮೇಲೆ 7 ಪಟ್ಟು ಅಧಿಕ ಬಿದ್ದು, ಡಿಎನ್ಎ ಸಂರಚನೆಯಲ್ಲಿ ವ್ಯತ್ಯಾಸ ಉಂಟಾಗಿ ಗಡ್ಡೆ ಬೆಳೆಯುವುದು, ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಹಾಗಾಗಿ, ಮೊಬೈಲ್ ಅನ್ನು ಜೇಬಿನಲ್ಲಿ ಇಡುವ ಬದಲು ಬ್ಯಾಗ್ನಲ್ಲಿ ಹೆಚ್ಚು ಇಡುವುದನ್ನು ರೂಢಿಸಿಕೊಳ್ಳಿ.

ವೈರ್ ಕನೆಕ್ಷನ್ ಇರುವ ಗ್ಯಾಜೆಟ್ಸ್!
ನೀವು ಯಾವುದೇ ಎಲೆಕ್ಟ್ರಾನಿಕ್ಸ್ ಗ್ಯಾಡ್ಜೆಟ್ಗಳನ್ನು ಖರೀದಿಸುವಾಗ ವೈರ್ ಕನೆಕ್ಷನ್ ಇರುವಂತಹ ಗ್ಯಾಡ್ಜೆಟ್ಗಳನ್ನು ಖರೀದಿಸಿ. ಬ್ಲೂಟೂತ್ ಅಗತ್ಯವಿದ್ದಾಗ ಮಾತ್ರ ಬಳಸಿ. ವೈರ್ಲೆಸ್ ರೂಟರ್ ಅನ್ನು ಮನೆಗೆ ಹಾಕಿದ್ದರೆ, ನೀವು ಅತೀ ಕಡಿಮೆ ಬಳಕೆ ಮಾಡುವ ರೂಮ್ನಲ್ಲಿ ರೂಟರ್ ಅನ್ನು ಹಾಕಿ. ಯಾವುದೇ ಕಾರಣಕ್ಕೂ ಮಲಗುವ ಕೋಣೆಗೆ ರೂಟರ್ನ್ನು ಹಾಕದಿರಿ.

ಹೆಚ್ಚಾಗಿ ಮಸೇಜ್ನಲ್ಲೇ ಸಂವಹನ
ಅಗತ್ಯ ಬಂದಾಗ ಮಾತ್ರ ಮೊಬೈಲ್ ಬಳಸಿ. ಸ್ನೇಹಿತರೊಂದಿಗೆ ಹೆಚ್ಚಾಗಿ ಮಸೇಜ್ನಲ್ಲೇ ಸಂವಹನ ಮಾಡಿ. ಮೆಸೇಜ್ಗಳಿಂದ ಹೆಚ್ಚು ವಿಕಿರಣ ಸೂಸುವುದಿಲ್ಲ. ಇನ್ನು 14 ವರ್ಷದ ಕೆಳಗಿನ ವಯಸ್ಸಿನ ಮಕ್ಕಳಿ ಮತ್ತು ಗರ್ಭಿಣಿ ಮಹಿಳೆಯರು ಮೊಬೈಲ್ ಅನ್ನು ಹೆಚ್ಚು ಉಪಯೋಗಿಸದಂತೆ ನೋಡಿಕೊಳ್ಳಿ. ಇವರ ಮೇಲೆ ವಿಕಿರಣಗಳ ಪರಿಣಾಮ ಹೆಚ್ಚಿರುತ್ತದೆ ಎಂಬುದು ತಿಳಿದಿರಲಿ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790