ಯೂರೋಪ್‌ನಲ್ಲಿ ಪವಾಡವನ್ನೇ ಮಾಡಿದ ಒಂದು ಚೆಡ್ಡಿಯ ಕಥೆ ಓದಿ!

|

ಇದು ಡಿಜಿಟಲ್ ಯುಗ. ಜೀವನದ ಪ್ರತಿ ಆಗುಹೋಗುಗಳು, ಬ್ಯಾಂಕಿಂಗ್, ಕೆಲಸ, ಸಿನಿಮಾ, ಸೋಷಿಯಲ್ ಮೀಡಿಯಾಗಳು, ಗೆಳೆಯರೊಂದಿಗಿನ ಸಂಬಂಧ ಪ್ರತಿಯೊಂದೂ ಕೂಡ ಮೊಬೈಲ್ ಫೋನಿನೊಳಗೆ ಅಡಗಿ ಕುಳಿತಿವೆ. ಹೀಗಾಗಿ, ಎಷ್ಟೇ ಕ್ಲೋಸ್ ಇದ್ದರೂ ಒಬ್ಬರ ಪಾಸ್‌ವರ್ಡ್ ಅನ್ನು ಮತ್ತೊಬ್ಬರ ಬಳಿ ಹೇಳುವುದು ಅಥವಾ ಹಂಚಿಕೊಳ್ಳುವುದು ಖಂಡಿತಾ ಒಳ್ಳೆಯದಲ್ಲ. ಏಕೆಂದರೆ, ಒಂದು ಪಾಸ್‌ವರ್ಡ್ ನಿಮ್ಮ ಜೀವನವನ್ನೇ ಹಾಳುಮಾಡಿಬಿಡಬಹುದು.!

ಆನ್‌ಲೈನ್ ಪಾಸ್‌ವರ್ಡ್‌ಗಳ ಸುರಕ್ಷತೆಯಲ್ಲಿ ನಾವಿನ್ನೂ ಎಷ್ಟು ಹಿಂದುಳಿದಿದ್ದೇವೆ ಎಂಬುದಕ್ಕೆ ಬೆಂಗಳೂರು ನಗರ ಒಂದರಲ್ಲೇ ಪ್ರತಿದಿನ ನೂರಕ್ಕೂ ಹೆಚ್ಚು ಆನ್‌ಲೈನ್ ವಂಚನೆ ಪ್ರಕರಣಗಳು ದಾಖಲಾಗುತ್ತಿರುವುದು ಸ್ಪಷ್ಟ ಉದಾಹರಣೆ ಎಂದು ಹೇಳಬಹುದು. ಪೊಲೀಸರು ಸರ್ಕಾರ, ಟೆಕ್ ಕಂಪೆನಿಗಳು ಮಾಧ್ಯಮಗಳು ಮತ್ತು ಪೊಲೀಸರು ಈ ಬಗ್ಗೆ ಎಷ್ಟೇ ಮಾಹಿತಿ ನೀಡಿದರೂ ಸಹ ಜನರಿಗೆ ಪಾಸ್‌ವರ್ಡ್‌ಗಳ ಸುರಕ್ಷತೆ ಬಗ್ಗೆ ಸರಿಯಾದ ಅರಿವು ಮೂಡಿಸಲು ಆಗುತ್ತಿಲ್ಲ.

ಯೂರೋಪ್‌ನಲ್ಲಿ ಪವಾಡವನ್ನೇ ಮಾಡಿದ ಒಂದು ಚೆಡ್ಡಿಯ ಕಥೆ ಓದಿ!

ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಅಂಕಣದಿಂದ 'ಪಾಸ್‌ವರ್ಡ್ ಅಂದ್ರೆ' ಎಂಬ ಚಿಕ್ಕ ಅಂಕಣದ ತುಣುಕನ್ನು ನಾವು ನಿಮಗೆ ಲಭ್ಯವಾಗುವಂತೆ ಪ್ರಕಟಿಸುತ್ತಿದ್ದೇವೆ. ವಿಶ್ವೇಶ್ವರ ಭಟ್ಟರು ಹೇಳಿದ ಒಂದು 'ಜಾಹಿರಾತು' ಘಟನೆ ಯುರೋಪಿನಲ್ಲಿ ಶೇ.90ರಷ್ಟು ಡಾಟಾ ಕಳವು ಪ್ರಕರಣಗಳನ್ನು ಕಡಿಮೆ ಮಾಡಿತ್ತು ಎಂಬುದು ಇಲ್ಲಿ ಮುಖ್ಯ ಕಾರಣ. ಏಕೆಂದರೆ, ಇದು ಪಾಸ್‌ವರ್ಡ್ ಸುರಕ್ಷತೆ ಬಗ್ಗೆ ಸುಲಭವಾಗಿ ಅರ್ಥವಾಗುವಂತದ್ದು.

ಒಂದು ಜಾಹೀರಾತು ಪವಾಡವನ್ನೇ ಮಾಡಿತು!

ಒಂದು ಜಾಹೀರಾತು ಪವಾಡವನ್ನೇ ಮಾಡಿತು!

ವಿಶ್ವೇಶ್ವರ ಭಟ್ ಅವರು ಪ್ರಕಟಿಸಿದ ಅಂಕಣದಲ್ಲಿ ಇರವಂತೆಯೇ ಹೇಳಬೇಕೆಂದರೆ, ಯುರೋಪಿನ ಕೆಲವು ದೇಶಗಳಲ್ಲಿ ಇಂಟರ್‌ನೆಟ್ ಡಾಟಾ ಕಳವು ಪ್ರಕರಣಗಳು ಜಾಸ್ತಿಯಾಗಿದ್ದವು. ಕಾಲ್‌ಸೆಂಟರ್‌ಗಳಿಂದ ಕರೆ ಮಾಡಿ, ಸಹಾಯದ ಸೋಗಿನಲ್ಲಿ ಪಾಸ್‌ವರ್ಡ್‌ಗಳನ್ನು ಪಡೆದು ಹಣ ಲಪಟಾಯಿಸುವ ಪ್ರಕರಣಗಳು ಹೆಚ್ಚಾದಾಗ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲು ಮಾಸ್ಟ್ರಿಚ್ ಯುನಿವರ್ಸಿಟಿ ಒಂದು ಜಾಹೀರಾತನ್ನು ಬಿಡುಗಡೆ ಮಾಡಿ ಪವಾಡವನ್ನೇ ಮಾಡಿತು.

ಚಡ್ಡಿಯನ್ನು ಬಿಸಿಲಿನಲ್ಲಿ ಒಣಗಿಸಿದ ಚಿತ್ರ

ಚಡ್ಡಿಯನ್ನು ಬಿಸಿಲಿನಲ್ಲಿ ಒಣಗಿಸಿದ ಚಿತ್ರ

ಆ ಜಾಹಿರಾತುವಿನಲ್ಲಿ ಎರಡು ಚಡ್ಡಿ(ನಿಕ್ಕರ್, ಕಾಚ)ಗಳನ್ನು ಬಿಸಿಲಿನಲ್ಲಿ ಒಣಗಿಸಿದ ಚಿತ್ರವನ್ನು ಬಳಸಲಾಗಿತ್ತು. ಆ ಚಡ್ಡಿಗಳಿಗೆ ಗಾಳಿಗೆ ಹಾರಿಹೋಗದಂತೆ ಕ್ಲಿಪ್ ಹಾಕಲಾಗಿತ್ತು. ಆ ಚಿತ್ರದ ಮೇಲೆ ದೊಡ್ಡ ಅಕ್ಷರಗಳಲ್ಲಿ ''Treat Your Passwords like your underwear'' ಎಂದು ಬರೆಯಲಾಗಿತ್ತು. ಅದರ ಕೆಳಗಡೆ ಮೂರು ಅಂಶಗಳನ್ನು ಬರೆಯಲಾಗಿತ್ತು. ಇದನ್ನು ಎಂದಿಗೂ ಬೇರೆಯವರ ಜತೆ ಷೇರ್ ಮಾಡಬೇಡಿ. 2. ಸದಾ ಕಾಲಕಾಲಕ್ಕೆ ಬದಲಾಯಿಸುತ್ತಿರಿ. 3. ಎಂದೂ ಅದನ್ನು ನಿಮ್ಮ ಡೆಸ್ಕ್ ಮೇಲೆ ಇಡಬೇಡಿ ಎಂಬುದು.

ಶೇ.90ರಷ್ಟು ವಂಚನೆ ಇಳಿಕೆ!

ಶೇ.90ರಷ್ಟು ವಂಚನೆ ಇಳಿಕೆ!

ಈ ಜಾಹಿರಾತು ಪ್ರಕಟವಾದ ನಂತರ ಯುರೋಪಿನಲ್ಲಿ ಶೇ.90ರಷ್ಟು ಡಾಟಾ ಕಳವು ಪ್ರಕರಣಗಳನ್ನು ಕಡಿಮೆಯಾದವು. ಅಂದರೆ ಚಿಕ್ಕದಾದ ಮತ್ತೊ ಚೊಕ್ಕದಾದ ಒಂದು ಮಾಹಿತಿ ಸುರಕ್ಷತೆಯನ್ನು ತಿಳಿಸಿಕೊಟ್ಟಿತ್ತು. ಹೀಗೆಯೇ ಆನ್‌ಲೈನಿನಲ್ಲಿ ನಡೆಯುವ ವಂಚನೆಗೆ ಬ್ರೇಕ್ ಹಾಕುವ ಸಲುವಾಗಿ ನಾವೂ ಕೂಡ ಇಂದು ಹಲವು ಸಲಹೆಗಳನ್ನು ಹೊತ್ತು ಬಂದಿದ್ದೇವೆ. ಮುಂದಿನ ಸ್ಲೈಡರ್‌ಗಳಲ್ಲಿ ಅವುಗಳ ಬಗ್ಗೆ ತಿಳಿದು ನೀವು ಕೂಡ ಜಾಗೃತವಾಗಿರಿ.

ಪರಿಚಿತ/ಅಪರಿಚಿತರಿಗೆ ಪಾಸ್ವರ್ಡ್ ಹೇಳಬೇಡಿ

ಪರಿಚಿತ/ಅಪರಿಚಿತರಿಗೆ ಪಾಸ್ವರ್ಡ್ ಹೇಳಬೇಡಿ

ಪ್ರಾಥಮಿಕ ಹಂತದಲ್ಲಿ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಪಾಸ್ವರ್ಡ್ ಮಾಹಿತಿಯನ್ನು ಕೊಡಬಾರದು. ನಾವು ವ್ಯಕ್ತಿಗಳ ದುರುದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಇರುವುದಿಲ್ಲ. ಕುಟುಂಬದ ವ್ಯಕ್ತಿಗಳು ಮತ್ತು ಕೆಲ ವಿಶ್ವಾಸಾರ್ಹ ಸ್ನೇಹಿತರನ್ನು ಹೊರತು ಪಡಿಸಿ ಹಣಕಾಸು ಸಂಗತಿಗಳನ್ನು ಇನ್ಯಾರೊಂದಿಗೂ ಹಂಚಿಕೊಳ್ಳಬಾರದು. ನಮಗೆ ಗೊತ್ತಿರುವಂತೆ ಹೆಚ್ಚಿನ ಹಣಕಾಸು ವಂಚನೆ/ಕಳ್ಳತನ ಪರಿಚಯದವರಿಂದಲೇ ಆಗುತ್ತದೆ.

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬೆಡಿ. ಸೇವೆ ಒದಗಿಸುವವರಿಗೆ ಅನವಶ್ಯಕ ವಿಷಯಗಳಿಗಾಗಿ ತೊಂದರೆ ಕೊಡಬೇಡಿ("Do not disturb") ಎಂದು ನೋಂದಣಿ ಮಾಡಿಸಿಕೊಳ್ಳಿ. ಇದರಿಂದಾಗಿ ಅನವಶ್ಯಕ ಮತ್ತು ಫೇಕ್ ಕರೆಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ವಂಚಕರಿಂದಲೂ ಮುಕ್ತಿ ಪಡೆಯಬಹುದು.

ಇ-ಮೇಲ್ ಭದ್ರತೆ

ಇ-ಮೇಲ್ ಭದ್ರತೆ

ಬ್ಯಾಂಕಿನವರು ನೀಡುವ ಇ-ಮೇಲ್ ಐಡಿಗಳನ್ನು ಸಹ ಹೆಚ್ಚು ಬಳಸಬಾರದು. ಅದರಿಂದಾಗಿ ಹೆಚ್ಚೆಚ್ಚು ಮೋಸ ಹೋಗಬೇಕಾಗುತ್ತದೆ. ಇ-ಮೇಲೆ ಮುಖಾಂತರ ಯಾವುದೇ ಸ್ಟೇಟ್ಮೆಂಟ್ ಗಳನ್ನು ತೆರೆಯಬಾರದು ಇದರಿಂದ ಅಪಾಯವೇ ಹೆಚ್ಚು. ಇ-ಮೇಲ್ ಗಳ ಮೇಲೆ ಕ್ಲಿಕ್ ಮಾಡುವುದರಿಂದ ಅವು ಬೇರೆ ವೆಬ್ಸೈಟ್ ಗೆ ಲಿಂಕ್ ಆಗುತ್ತವೆ. ಇದರಿಂದಾಗಿ ನಮ್ಮ ಅಂಕಿಅಂಶ ಹಾಗೂ ಮಾಹಿತಿಯ ಸೋರಿಕೆ ಆಗುತ್ತದೆ. ಇದರ ಜತೆ ಪ್ರಚಾರದ ಇ-ಮೇಲ್ ಗಳು ಸಹ ಬರುತ್ತವೆ. ಆದರಿಂದಾಗಿ ತುಂಬಾ ಜಾಗೂರತೆಯಿಂದ ಇರಬೇಕಾಗುತ್ತದೆ.

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಬೇಕು

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಬೇಕು

ನಾವು ಹಣಕಾಸು ವ್ಯವಹಾರದ ಸಂದರ್ಭಗಳಲ್ಲಿ ಬಳಸುವ ಪಾಸ್ವರ್ಡ್ ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಅದರಲ್ಲೂ ಹಿರಿಯ ನಾಗರಿಕರು ಇದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು. ಇದರಿಂದಾಗಿ ಇನ್ನೊಬ್ಬರೂ ನಿಮ್ಮ ಪಾಸ್ವರ್ಡ್ ಊಹಿಸಲು ಸಾಧ್ಯ ಇರುವುದಿಲ್ಲ. ಇದು ಬ್ಯಾಂಕ್ ಸಂಬಂಧಿ ವ್ಯವಹಾರಗಳಲ್ಲೂ ಪಾಲಿಸಬೇಕು.

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

ಶಾಪಿಂಗ್ ವೆಬ್ಸೈಟ್ ಗಳನ್ನು ಬಳಸುವಾಗ ತುಂಬಾ ಜಾಗರೂಕತೆಯಿಂದ ವ್ಯವಹರಿಸಬೇಕಾಗುತ್ತದೆ. ಏಕೆಂದರೆ ವಂಚಕರು ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಕೆಲ ನಕಲಿ ವೆಬ್ಸೈಟ್ ಗಳಿದ್ದು ಅವುಗಳಲ್ಲಿ ಶಾಪಿಂಗ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಎಲ್ಲವು ಅವರಿಗೆ ಲಭ್ಯವಾಗುತ್ತದೆ. ಇವೆಲ್ಲವೂ ವಂಚನೆಯ ಅನೆಕ ಮುಖಗಳಾಗಿದ್ದು ಇವುಗಳಿಂದ ತಪ್ಪಿಸಿಕೊಳ್ಳುವುದು ನಿಮ್ಮ ಕರ್ತವ್ಯ.

ಆಯಂಟಿ ವೈರಸ್(Anti Virus Software ) ಬಳಸಿ

ಆಯಂಟಿ ವೈರಸ್(Anti Virus Software ) ಬಳಸಿ

ಉತ್ತಮವಾದ ವೈರಸ್(Anti Virus Software ) ಸಾಪ್ಟವೇರ್ ಖರೀದಿಸಿ. ಇದೊಂದು ಸಮಗ್ರವಾದ ಉತ್ತಮ ತಂತ್ರಾಂಶವಾಗಿದ್ದು ಕೇವಲ ಅಂತರ್ಜಾಲ ವಿರೋಧಿ ತಂತ್ರಾಂಶ ಮಾತ್ರ ಅಲ್ಲ. ಬದಲಾಗಿ ಸಂಪೂರ್ಣವಾದ ಫೈರ್ ವಾಲ್ ರಕ್ಷಣೆಯನ್ನು ಹೊಂದಿರಬೆಕು.ಇದು ಎಲ್ಲ ಅಂಕಿಅಂಶಗಳನ್ನು ಸುರಕ್ಷಿತವಾಗಿಡಬೇಕು. ಜತೆಗೆ ವಂಚಕರು/ಕಳ್ಳರು ದುರುಪಯೋಗ ಮಾಡದಂತೆ ರಕ್ಷಿಸುವಂತಿರಬೇಕು.

Most Read Articles
Best Mobiles in India

English summary
Treat your passwords like your underwear. Never share them with anyone, Change them regularly and Keep them off your desk. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more