ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಪಾಸ್ ವರ್ಡ್ ಪ್ರೊಟೆಕ್ಷನ್ ನ್ನು ಬಳಸುವುದು ಹೇಗೆ?

By Gizbot Bureau
|

ಗೂಗಲ್ ಈ ವಾರಪೂರ್ತಿ ತನ್ನ ಇಂಟರ್ನೆಟ್ ಬ್ರೌಸರ್ ಕ್ರೋಮ್ ನಲ್ಲಿ ಹೊಸ ಹೊಸ ಫೀಚರ್ ಗಳನ್ನು ಬಿಡುಗಡೆಗೊಳಿಸಿದೆ. ಸ್ಮಾರ್ಟ್ ಫೋನ್ ಬಳಕೆದಾರರಿಗೆ ತಾವು ಬಳಸುತ್ತಿರುವ ಪಾಸ್ ವರ್ಡ್ ಆನ್ ಲೈನ್ ನಲ್ಲಿ ಯಾವತ್ತಾದರೂ ಲೀಕ್ ಆಗಿದೆಯೇ ಎಂಬ ಬಗ್ಗೆಯೂ ಕೂಡ ತಿಳಿಸಲಾಗುತ್ತದೆ.

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಪಾಸ್ ವರ್ಡ್ ಪ್ರೊಟೆಕ್ಷನ್ ನ್ನು ಬಳಸುವುದು ಹೇಗೆ?

ಈ ಫೀಚರ್ ಕ್ರೋಮ್ 86 ನ ಅಪ್ ಡೇಟ್ ನ ಭಾಗವಾಗಿ ಬಿಡುಗಡೆಯಾಗಿದ್ದು ಆಂಡ್ರಾಯ್ಡ್ ಮತ್ತು ಐಫೋನ್ ಸ್ಮಾರ್ಟ್ ಫೋನ್ ಗಳಲ್ಲಿ ಸೇಫ್ಟಿ ಚೆಕ್ ಹೆಸರಿನಲ್ಲಿ ಬಿಡುಗಡೆಗೊಂಡಿದೆ.

ನಿಮ್ಮ ಕಾಂಪ್ರಮೈಸ್ಡ್ ಪಾಸ್ ವರ್ಡ್ ನ್ನು ಡಿಟೆಕ್ಟ್ ಮಾಡಲು ಕ್ರೋಮ್ ನಿಮಗೆ ನಿಮ್ಮ ಯ್ಯೂಸರ್ ನೇಮ್ ಮತ್ತು ಪಾಸ್ ವರ್ಡ್ ನ್ನು ವಿಶೇಷವಾದ ಎನ್ಕ್ರಿಪ್ಶನ್ ಮಾದರಿಯಲ್ಲಿ ಕಳುಹಿಸುತ್ತದೆ. ಇದು ನಂತರ ಗೂಗಲ್ ಗೆ ಕ್ರಾಂಪ್ರಮೈಸ್ಡ್ ಕ್ರಿಡೆನ್ಶಿಯಲ್ ನಲ್ಲಿ ಚೆಕ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.

ಗೂಗಲ್ ನಿಮ್ಮ ಯ್ಯೂಸರ್ ನೇಮ್ ಮತ್ತು ಪಾಸ್ ವರ್ಡ್ ನ್ನು ಎನ್ಕ್ರಿಪ್ಟ್ ಆಗಿರುವ ಕಾಪಿಯಿಂದ ಡಿರೈವ್ ಮಾಡುವುದಿಲ್ಲ. ಈ ಫೀಚರ್ ನಿರ್ಧಿಷ್ಟ ಪಾಸ್ ವರ್ಡ್ ಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.

ಒಂದು ವೇಳೆ ಇದನ್ನು ಹೇಗೆ ಮಾಡುವುದು ಎಂದು ನೀವು ಯೋಚಿಸುತ್ತಿದ್ದರೆ ಈ ಹಂತಗಳನ್ನು ಅನುಸರಿಸಿ:

1.ಗೂಗಲ್ ಕ್ರೋಮ್ ನ್ನು ತೆರೆಯಿರಿ

2.ಸೆಟ್ಟಿಂಗ್ಸ್ ಗೆ ತೆರಳಿ

3.ಪಾಸ್ ವರ್ಡ್ಸ್ ನ್ನು ಟ್ಯಾಪ್ ಮಾಡಿ

4.ಚೆಕ್ ಪಾಸ್ ವರ್ಡ್ಸ್ ನ್ನು ಟ್ಯಾಪ್ ಮಾಡಿ

Most Read Articles
Best Mobiles in India

English summary
Smartphone Password Protection Features: How To Use, Enable On Your Device

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X