Just In
Don't Miss
- News
ತಮಟೆ ಸದ್ದಿಗೆ ಮಾಜಿ ಶಾಸಕ ವೈಎಸ್ ವಿ ದತ್ತ ಸಖತ್ ಸ್ಟೆಪ್ಸ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ವಾಟ್ಸ್ ಆಪ್ ನಲ್ಲಿ ಟಾಟಾ ಸ್ಕೈ ರೀಚಾರ್ಜ್ ಮಾಡಿ!
ಡಿಟಿಹೆಚ್ ಆಪರೇಟರ್ ಟಾಟಾ ಸ್ಕೈ ತನ್ನ ಬಳಕೆದಾರರಿಗೆ ಸಾಕಷ್ಟು ಸೇವೆಗಳನ್ನು ಆಫರ್ ಮಾಡುತ್ತದೆ. ಇದೀಗ ಬಳಕೆದಾರರ ಅನುಕೂಲಕ್ಕಾಗಿ ಟಾಟಾ ಸ್ಕೈ ವಾಟ್ಸ್ ಆಪ್ ಬ್ಯುಸಿನೆಸ್ ಪ್ರೋಗ್ರಾಂ ಜೊತೆಗೆ ಸೇರಿದ್ದು ಇನ್ಸೆಂಟ್ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ಮೂಲಕ ಚಂದಾದಾರರಿಗೆ ವೇಗದ ಸೇವೆಯನ್ನು ನೀಡುವುದಕ್ಕೆ ಮುಂದಾಗುತ್ತಿದೆ.

ಇತ್ತೀಚೆಗೆ ಟಾಟಾ ಸ್ಕೈ ಹೊಸದಾಗಿ ಕೆಲವು ಸೇವಾ ಆಯ್ಕೆಯನ್ನು ಸೇರಿಸಿದ್ದು ಅದರಲ್ಲಿ ನೀವು ಬ್ಯಾಲೆನ್ಸ್ ಚೆಕ್ ಮಾಡುವುದು, ಪ್ಯಾಕ್ ಗಳನ್ನು ರಿಫ್ರೆಶ್ ಮಾಡುವುದು ಮತ್ತು ಚಾನಲ್ ಗಳನ್ನು ಸೇರಿಸುವುದು ಮತ್ತು ತೆಗೆದು ಹಾಕುವುದು ಇತ್ಯಾದಿಗಳನ್ನು ಮಾಡುವುದಕ್ಕೆ ಅವಕಾಶವಿರುತ್ತದೆ. ಹಾಗಾದ್ರೆ ಇದನ್ನು ವಾಟ್ಸ್ ಆಪ್ ನಲ್ಲಿ ಮಾಡುವುದು ಹೇಗೆ ಎಂಬ ಬಗೆಗಿನ ವಿವರಣೆ ಇಲ್ಲಿದೆ ನೋಡಿ.

ವಾಟ್ಸ್ ಆಪ್ ನಲ್ಲಿ ಟಾಟಾ ಸ್ಕೈ ಆಕ್ಟಿವೇಟ್ ಮಾಡುವುದು ಹೇಗೆ?
ವಾಟ್ಸ್ ಆಪ್ ಮೂಲಕ ಡಿಟಿಹೆಚ್ ಆಪರೇಟರ್ ನ್ನು ಸಂಪರ್ಕಿಸುವುದಕ್ಕಾಗಿ ನೀವು ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ನಿಂದ 9229692296 ಸಂಖ್ಯೆಗೆ ಮಿಸ್ ಕಾಲ್ ನೀಡಬೇಕು.ಇದು ನಿಮಗೆ ವಾಟ್ಸ್ ಆಪ್ ಸೇವೆಯನ್ನು ಆಕ್ಟಿವೇಟ್ ಮಾಡುತ್ತದೆ. +91 18002086633 ಈ ಸಂಖ್ಯೆಯಿಂದ ನಿಮಗೆ ಸ್ವಾಗತ ಕೋರಿರುವ ಮೆಸೇಜ್ ಕೂಡ ಬರುತ್ತದೆ. ಈ ಸಂಖ್ಯೆಯನ್ನು ನಿಮ್ಮ ಫೋನ್ ಕಾಂಟ್ಯಾಕ್ಟ್ ನಲ್ಲಿ ಸೇವ್ ಮಾಡಿಕೊಳ್ಳಿ.

ಬ್ಯಾಲೆನ್ಸ್ ಚೆಕ್ ಮಾಡುವುದು, ಪ್ಯಾಕ್ ಗಳ ವಿವರ, ತುರ್ತು ಟಾಪ್-ಅಪ್ ಮನವಿ ಮಾಡುವುದು ಹೇಗೆ?
ಅಕೌಂಟ್ ಬ್ಯಾಲೆನ್ಸ್ ನ್ನು ಚೆಕ್ ಮಾಡುವುದಕ್ಕಾಗಿ ಸರಳವಾಗಿ "balance" ಎಂದು ಟೈಪ್ ಮಾಡಿ ಮತ್ತು ಮೆಸೇಜ್ ನ್ನು ಕಳುಹಿಸಿ. ಕೆಲವೇ ಸೆಕೆಂಡ್ ನಲ್ಲಿ ನಿಮ್ಮ ಚಂದಾದಾರಿಕೆಯ ಐಡಿಯೊಂದಿಗೆ ಸದ್ಯದ ಬ್ಯಾಲೆನ್ಸ್, ಮುಂದಿನ ರೀಚಾರ್ಜ್ ದಿನಾಂಕ ಮತ್ತು ಮಾಸಿಕ ರೀಚಾರ್ಜ್ ಮೊತ್ತ ಎಲ್ಲಾ ವಿವರಣೆಯೂ ಲಭ್ಯವಾಗುತ್ತದೆ.
ನಿಮ್ಮ ಪ್ಯಾಕ್ ವಿವರವನ್ನು ಚೆಕ್ ಮಾಡಬೇಕಿದ್ದರೆ "PACK" ಎಂದು ಟೈಪ್ ಮಾಡಿ ವಾಟ್ಸ್ ಆಪ್ ಮೆಸೇಜ್ ಸೆಂಡ್ ಮಾಡಿ. ನಿಮಗೆ ಒಂದು ಸಣ್ಣ ಯುಆರ್ ಎಲ್ ರಿಪ್ಲೈ ಬರುತ್ತದೆ. ಇದು ನೀವು ಚಂದಾದಾರರಾಗಿರುವ ಎಲ್ಲಾ ಚಾನಲ್ ಗಳ ವಿವರ ಮತ್ತು ಅದರ ಬೆಲೆಯ ವಿವರಣೆಯನ್ನು ನೀಡುತ್ತದೆ.

ಕೆಲವರು ಸರಿಯಾದ ಸಮಯಕ್ಕೆ ರೀಚಾರ್ಜ್ ಮಾಡುವುದನ್ನು ಮರೆತು ಬಿಡುತ್ತಾರೆ ಮತ್ತು ಅದರಿಂದಾಗಿ ಸೇವೆಯು ಕಡಿತಗೊಳ್ಳುತ್ತದೆ. ನೀವು ಕೂಡ ಅಂತಹದ್ದೇ ಸನ್ನಿವೇಶದಲ್ಲಿದ್ದರೆ ತುರ್ತು ಟಾಪ್-ಅಪ್ ಗಾಗಿ ಮನವಿ ಸಲ್ಲಿಸಬಹುದು. ಇದರಲ್ಲಿ ನಿಮಗೆ ಕೆಲವು ಮೊತ್ತವನ್ನು ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.ಒಮ್ಮೆ ನೀವು ಖಾತೆಯನ್ನು ರೀಫಿಲ್ ಮಾಡಿದಾಗ ಅಥವಾ ಭರ್ತಿ ಮಾಡಿದಾಗ ಸಾಲವಾಗಿ ಪಡೆದ ತುರ್ತು ಟಾಪ್ ಅಪ್ ನ ಮೊತ್ತವನ್ನು ಡೆಬಿಟ್ ಮಾಡಿಕೊಳ್ಳಲಾಗುತ್ತದೆ.ಇದನ್ನು ಮಾಡುವುದಕ್ಕಾಗಿ ನೀವು "topup" ಎಂದು ಟೈಪ್ ಮಾಡಿ ಮೆಸೇಜ್ ಸೆಂಡ್ ಮಾಡಬೇಕು.

ಚಾನಲ್ ಗಳನ್ನು ಸೇರಿಸುವುದು/ತೆಗೆಯುವುದು,ಚಾನಲ್ ಪ್ಯಾಕ್ ಗಳನ್ನು ರಿಫ್ರೆಶ್ ಮಾಡುವುದು ಹೇಗೆ?
ನೀವು ಚಾನಲ್ ಪ್ಯಾಕ್ ಆಯ್ಕೆ ಮಾಡಿಕೊಂಡಾಗ ಚಂದಾದಾರಿಕೆಯ ಭಾಗವಾಗಿರದ ಕೆಲವು ಪ್ರತ್ಯೇಕ ಚಾನಲ್ ಗಳು ಕೂಡ ಇರಬಹುದು. ಇಂತಹ ಸಂದರ್ಬದಲ್ಲಿ ನೀವು ಈ ಚಾನಲ್ ಗಳನ್ನು ಕೇವಲ ಟೆಕ್ಸ್ಟ್ ಮೆಸೇಜ್ ಕಳುಹಿಸುವ ಮೂಲಕ ಸೇರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಿಮಗೆ ಚಾನಲ್ ನಂಬರ್ ಟಿವಿ ಸ್ಕ್ರೀನಿನಲ್ಲಿ ಲಭ್ಯವಾಗುತ್ತದೆ.(ಸ್ಕ್ರೀನ್ ಶಾಟ್ ಚೆಕ್ ಮಾಡಿ)
ಮೇಲೆ ತಿಳಿಸಿದ ಸ್ಕ್ರೀನ್ ಶಾಟ್ ನಲ್ಲಿ ಜೀಪ್ ಪ್ರೈಮ್ ಚಾನಲ್ ಇದ್ದು ಇದರ ಸಂಖ್ಯೆ 155 ಮತ್ತು ಇದರ ಬೆಲೆ ಮಾಸಿಕ 1 ರುಪಾಯಿ.ಈ ಚಾನಲ್ ನ್ನು ಸೇರಿಸುವುದಕ್ಕಾಗಿ ಜಸ್ಟ್ "Add 155" ಎಂದು ಟೈಪ್ ಮಾಡಿ ಮತ್ತು ಮೆಸೇಜ್ ಸೆಂಡ್ ಮಾಡಿ.ಕೆಲವೇ ನಿಮಿಷದಲ್ಲಿ ನಿಮ್ಮ ಕನೆಕ್ಷನ್ ನಲ್ಲಿ ಈ ಚಾನಲ್ ಆಕ್ಟಿವೇಟ್ ಆಗಿರುತ್ತದೆ. ಒಂದು ವೇಳೆ ಚಾನಲ್ ಕಾಣಿಸದೇ ಇದ್ದಲ್ಲಿ "refresh" ಎಂದು ಟೈಪ್ ಮಾಡಿ ಮೆಸೇಜ್ ಕಳುಹಿಸಿ. ಇದು ನಿಮ್ಮ ಎಲ್ಲಾ ಚಾನಲ್ ಪ್ಯಾಕ್ ನ್ನು ರಿಫ್ರೆಶ್ ಮಾಡುತ್ತದೆ.

ಒಂದು ವೇಳೆ ಇದೇ ಚಾನಲ್ ನ್ನು ನೀವು ಡ್ರಾಪ್ ಮಾಡಬೇಕು ಅಥವಾ ನಿಮ್ಮ ಪ್ಯಾಕ್ ನಿಂದ ತೆಗೆದುಹಾಕಬೇಕು ಎಂದು ಬಯಸಿದ್ದೇ ಆದಲ್ಲಿ "Drop 155" ಎಂದು ಟೈಪ್ ಮಾಡಿ ಮೆಸೇಜ್ ಕಳುಹಿಸಿ. ಕೆಲವೇ ನಿಮಿಷದಲ್ಲಿ ಚಾನಲ್ ನಿಮ್ಮ ಪ್ಯಾಕ್ ನಿಂದ ರಿಮೂವ್ ಆಗಿರುತ್ತದೆ.
ಒಟ್ಟಿನಲ್ಲಿ ಟಾಟಾ ಸ್ಕೈ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ವಾಟ್ಸ್ ಆಪ್ ಸೇವೆಯನ್ನೂ ಕೂಡ ಆರಂಭಿಸಿರುವುದು ಸ್ವಾಗತಾರ್ಹ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090