ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇದನ್ನೆಲ್ಲಾ ಅಪ್ಪಿತಪ್ಪಿಯೂ ಮಾಡಲೇಬೇಡಿ!

|

ಇಂದು ಸ್ಮಾರ್ಟ್‌ಫೋನ್ ಮುನ್ನೆಚ್ಚರಿಕೆಯ ಸಲಹೆಯ ಸ್ವರೂಪ ಹೇಗಿದೆ ಎಂದರೆ, ತಪ್ಪು ಮಾಡುತ್ತಿದ್ದೇವೆ ಎಂದು ಎಲ್ಲರಿಗೂ ಗೊತ್ತಿದ್ದರೂ ಈ ಮಾಡಬಾರದ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಉದಾಹರಣೆಗೆ ರಾತ್ರಿ ಮಲಗುವಾಗ ಸ್ಮಾರ್ಟ್‌ಫೋನ್‌ ಅನ್ನು ತಲೆಯ ಹತ್ತಿರ ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದ್ದರೆ, ಕಾರಿನ ಡ್ಯಾಶ್‌ಬೋರ್ಡಿನಲ್ಲಿ ಸ್ಮಾರ್ಟ್‌ಫೋನನ್ನು ದೀರ್ಘಕಾಲ ಇಡುವುದು ಸಾಮಾನ್ಯ ಕೆಟ್ಟ ಸಂಗತಿಯಾಗಿದೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇದನ್ನೆಲ್ಲಾ ಅಪ್ಪಿತಪ್ಪಿಯೂ ಮಾಡಲೇಬೇಡಿ!

ಯುವಕರಿರಲಿ, ಮಹಿಳೆಯರಿರಲಿ, ಮಕ್ಕಳಿರಲಿ, ಮುದುಕರಿರಲಿ ಎಲ್ಲರಿಗೂ ಸ್ಮಾರ್ಟ್‌ಫೋನ್ ಬಳಕೆ ಎಲ್ಲರಿಗೂ ಸಲೀಸು. ಹಾಗಂತ ಸ್ಮಾರ್ಟ್‌ಫೋನ್‌ಗಳ ಉಪಯೋಗ ಸಾರ್ವತ್ರಿಕವಾಗಿರುವ ಇಂದಿನ ಕೆಲವು ದಿನಗಳಲ್ಲಿ ಮುನ್ನೆಚ್ಚರಿಕೆಗಳನ್ನು ವಹಿಸದೇ ಇರುವುದು ತಪ್ಪಾಗಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನಿನಲ್ಲಿ ನೀವು ಮಾಡಲೇ ಬಾರದ ಪ್ರಮುಖ ಕೆಲಸಗಳು ಯಾವುವು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ಮಲಗುವಾಗ ಸ್ಮಾರ್ಟ್‌ಫೋನ್‌ ಬೇಡ!

ರಾತ್ರಿ ಮಲಗುವಾಗ ಸ್ಮಾರ್ಟ್‌ಫೋನ್‌ ಅನ್ನು ತಲೆಯ ಹತ್ತಿರ ಇಟ್ಟುಕೊಳ್ಳುವ ಅಭ್ಯಾಸ ಇದೆಯೆ? ಖಂಡಿತವಾಗಿ, ಆ ಅಭ್ಯಾಸವನ್ನು ತಕ್ಷಣ ಬಿಟ್ಟುಬಿಡಿ. ಸ್ಮಾರ್ಟ್‌ಫೋನ್‌ ಅನ್ನು ತಲೆಯ ಹತ್ತಿರ ಇಟ್ಟುಕೊಳ್ಳುವುದರಿಂದ ಮೆದುಳು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇನ್ನು ಸ್ಮಾರ್ಟ್‌ಪೋನ್ ಒಂದು ವಿಕಿರಣ ಸೂಸುವ ವಸ್ತುವಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ, ಅದನ್ನು ತಲೆಯ ಹತ್ತಿರ ಇಟ್ಟುಕೊಂಡು ನಿದ್ದೆಹೋಗಬೇಡಿ.

ರಕ್ಷಣಾ ಕವಚ ಒಳ್ಳೆಯದಲ್ಲ.!

ಸ್ಮಾರ್ಟ್‌ಫೋನ್ ಬಾಳಿಕೆ ಹೆಚ್ಚಿಸಲು ಅದಕ್ಕೊಂದು ರಕ್ಷಣಾ ಕವಚವನ್ನು ಹಾಕಿಕೊಳ್ಳುವ ಅಭ್ಯಾಸ ಎಲ್ಲರಿಗೂ ಇದೆ. ಆದರೆ, ಚಾರ್ಜ್ ಮಾಡುವಾಗ ಆ ಬ್ಯಾಕ್ ಕವರ್ ಅನ್ನು ತೆಗೆದಿಟ್ಟು ಚಾರ್ಜ್ ಮಾಡಿದರೆ ಒಳ್ಳೆಯದು. ಚಾರ್ಜ್ ಮಾಡುವಾಗ ಮೊಬೈಲ್ ಫೋನ್ ಸ್ವಲ್ಪ ಬಿಸಿಯಾಗುತ್ತದೆ. ಒಂದೊಮ್ಮೆ ದಪ್ಪದಾದ ಬ್ಯಾಕ್ ಕವರ್ ಇದ್ದರೆ ಸ್ಮಾರ್ಟ್‌ಫೋನ್ ತಣ್ಣಗಾಗುವ ಕ್ರಿಯೆಗೆ ತೊಡಕು ಉಂಟಾಗುತ್ತದೆ. ಇದು ಮೊಬೈಲ್ ಸ್ಪೋಟಕ್ಕೂ ಕಾರಣ.

ಡ್ಯಾಶ್‌ಬೋರ್ಡಿನಲ್ಲಿ ಫೋನ್ ಇಡಬೇಡಿ!

ಕಾರಿನ ಡ್ಯಾಶ್‌ಬೋರ್ಡಿನಲ್ಲಿ ಸ್ಮಾರ್ಟ್‌ಫೋನನ್ನು ದೀರ್ಘಕಾಲ ಇಡುವುದು ಒಳ್ಳೆಯದಲ್ಲ. ಇದರಿಂದಾಗಿ ಅದು ಬಿಸಿಯಾಗುತ್ತಾ ಹೋಗುತ್ತದೆ ಮತ್ತು ಕ್ರಮೇಣ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ.ಇದೇ ರೀತಿಯಲ್ಲಿ ಬಿಸಿಲಿನಲ್ಲಿ ಅಥವಾ ಸೂರ್ಯನ ಕಿರಣಗಳಿಗೆ ಎದುರಾಗಿ ಸ್ಮಾರ್ಟ್‌ಫೋನ್ ಅನ್ನು ಇಡಬೇಡಿ. ಇದು ಕೂಡ ಸ್ಮಾರ್ಟ್‌ಪೋನ್ ಬಿಸಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಮರೆಯಬೇಡಿ.

ಕಂಪೆನಿ ಚಾರ್ಜರ್ ಅನ್ನೇ ಉಪಯೋಗಿಸಿ

ಕೆಲವರಿಗೆ ತಮ್ಮ ಸ್ಮಾರ್ಟ್‌ಫೋನನ್ನು ರಾತ್ರಿ ಚಾರ್ಜಿಗೆ ಹಾಕುವ ಅಭ್ಯಾಸ ಇದೆ. ಆದರೆ ಮೊಬೈಲ್‌ಫೋನನ್ನು ಯಾವುದೇ ಕಾರಣಕ್ಕೂ ಗಂಟೆಗಟ್ಟಲೆ ಚಾರ್ಜ್ ಮಾಡಬಾರದು. ಓವರ್‌ಚಾರ್ಜ್ ಮಾಡಿದರೆ ಬ್ಯಾಟರಿ ಬಾಳಿಕೆ ಕಡಿಮೆಯಾಗುವುದಲ್ಲದೆ, ಸ್ಮಾರ್ಟ್‌ಫೋನ್ ಅನವಶ್ಯಕವಾಗಿ ಬಿಸಿಯಾಗುತ್ತದೆ. ಎಕಲ್ಲದಕ್ಕಿಂತ ಮುಖ್ಯವಾಗಿ ಸ್ಮಾರ್ಟ್‌ಫೋನ್ ಜೊತೆಗೆ ನೀಡಿರುವ ಕಂಪೆನಿ ಚಾರ್ಜರ್ ಅನ್ನೇ ಉಪಯೋಗಿಸುವುದು ಬಹಳ ಮುಖ್ಯ.

ಆನ್‌ಲೈನ್‌ನಲ್ಲಿ ಸಂಗ್ರಹಿಸದಿರಿ

ನಿಮಗೆ ತಿಳಿಯದ ಕ್ಲೌಡ್ ಪ್ರೊವೈಡರ್‌ಗೆ ಏನಾದರೂ ಸಂಭವಿಸಿದಲ್ಲಿ ನಿಮ್ಮ ಡೇಟಾದ ಗತಿ ಏನಾಗಬಹುದು ಎಂಬುದನ್ನು ಯೋಚಿಸಿದ್ದೀರಾ? ಆದ್ದರಿಂದ ಆನ್‌ಲೈನ್‌ನಲ್ಲಿ ಸಂಗ್ರಹಿಸುವಾಗ ಹೆಚ್ಚಿನ ಮುತುವರ್ಜಿಯನ್ನು ಕಾಪಾಡಿಕೊಳ್ಳಿ. ಆಫ್‌ಲೈನಿನಲ್ಲಿ ಬ್ಯಾಕಪ್ ಮಾಡಲು ಮರೆಯದಿರಿ ನಿಮ್ಮ ಜೀವನ ನಿಮ್ಮ ಫೋನ್‌ನಲ್ಲಿದೆ. ನಿಮ್ಮ ಅತ್ಯಮೂಲ್ಯ ಫೋಟೋಗಳು, ರಹಸ್ಯವಾದ ದಾಖಲೆಗಳುಳ್ಳ ಫೋನ್ ಅನ್ನು ನೀವು ಕಳೆದುಕೊಂಡಿರಿ ಎಂದಲ್ಲಿ ಅದು ನಿಮ್ಮ ಜೀವನದ ಪ್ರಮುಖ ಸೋಲಾಗುತ್ತದೆ.

ವಿಪರೀತ ಅಪ್ಲಿಕೇಶನ್ ಇನ್‌ಸ್ಟಾಲ್

ನಿಮ್ಮ ಫೋನ್‌ಗೆ ಪರವಾನಗಿ ಇಲ್ಲದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿರಿ. ಇಂತಹ ಕಾರ್ಯಗಳನ್ನು ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಅಪ್ಲಿಕೇಶನ್‌ಗಳ ಸುರಿಮಳೆ ನಿಮ್ಮ ಫೋನ್‌ನ ಜೀವಿತವನ್ನು ಹಾಳುಗೆಡವಬಹುದು. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನಿಗೆ ಹೊಸ ಹೊಸ ನವೀಕರಣಗಳು ದೊರೆಯುತ್ತಿರುತ್ತವೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ. ಇದನ್ನು ಮರೆಯಲೇಬೇಡಿ.

ಬ್ಯಾಟರಿ ಬಗ್ಗೆ ಎಚ್ಚರವಿರಲಿ.!

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಹೆಚ್ಚು ಕಾಲ ಚಾರ್ಜ್ ಮಾಡುವುದು ಫೋನ್‌ನ ಬಿಸಿಯನ್ನು ಏರಿಸಬಹುದು. ಸೊನ್ನೆಯ ತನಕ ಫೋನ್ ಬ್ಯಾಟರಿಯನ್ನು ಖಾಲಿಯಾಗಿಸುವುದು ಇಲ್ಲವೇ ಪೂರ್ಣ ಚಾರ್ಜ್ ಆದ ನಂತರ ಕೂಡ ಸಾಕೆಟ್‌ನಿಂದ ಫೋನ್ ಅನ್ನು ಬೇರ್ಪಡಿಸದೇ ಇರುವುದು ನಿಮ್ಮ ಸ್ಮಾರ್ಟ್‌ಫೋನಿನ ಜೀವನವನ್ನು ನಾಶಪಡಿಸಬಹುದು. ಹಾಗಾಗಿ, ಯಾವಾಗಲೂ ಸಂಪೂರ್ಣ ಚಾರ್ಜ್ ಮಾಡುವುದು ಅಥವಾ ಶಟ್‌ಡೌನ್ ಆಗುವಷ್ಟು ಸ್ಮಾರ್ಟ್‌ಪೋನ್ ಬಳಕೆ ಬೇಡ.

ಒದ್ದೆಯಾಗುವುದರಿಂದ ರಕ್ಷಿಸಿ

ನಿಮ್ಮ ಫೋನ್ ಜಲಪ್ರತಿರೋಧಕ ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಫೋನ್ ಹಾಳಾಗುವುದ ಖಚಿತ.ಇನ್ನು ಒದ್ದೆಯಾಗಿರುವ ಸ್ಥಳಗಳಲ್ಲಿಯೂ ಸಹ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇಡಬೇಡಿ. ಇದರಿಂದ ನಿಮ್ಮ ಸ್ಮಾರ್ಟ್‌ಪೋನ್ ಹಾಳಾಗಬಹುದು. ಇನ್ನು ಗೋರಿಲ್ಲಾ ಗ್ಲಾಸ್ ಸ್ಮಾರ್ಟ್‌ಫೋನಿಗೆ ಅತ್ಯುತ್ತಮ ಆಯ್ಕೆ. ಆದರೆ, ಇದಕ್ಕೆ ಸರಿಯಾದ ರಕ್ಷಣೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ ನಿಮ್ಮ ಫೋನ್‌ನ ಪರದೆಯನ್ನು ಆಗಾಗ್ಗೆ ರಿಪೇರಿ ಮಾಡಿಸುವುದೇ ಕೆಲಸವಾಗಿಬಿಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
really stupid things you do with your smartphone ... You are not a professional dangerous thing-doer (unless you are, in which ... but maybe next time you should try looking at the concert through, I don't know, your eyes.to know more visit to kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more