ಫೋನ್ ನೀರಿಗೆ ಬಿದ್ದಿದೆಯೇ? ಇಲ್ಲಿದೆ ಟಿಪ್ಸ್

By Shwetha
|

ನಿಮ್ಮ ಫೋನ್ ಅಕಸ್ಮಾತ್ ಆಗಿ ನೀರಿಗೆ ಬಿದ್ದಿದೆಯೇ? ಅಥವಾ ತಿಳಿಯದೆಯೇ ಟಾಯ್ಲೆಟ್‌ಗೆ ಬಿತ್ತೇ? ಬರಿಯ ಮಳೆಗೆ ಮಾತ್ರವೇ ನಿಮ್ಮ ಫೋನ್ ಒದ್ದೆಯಾಗದೇ ಕೆಲವೊಂದು ಕಾರಣಗಳಿಗೂ ಫೋನ್ ಒದ್ದೆಯಾಗುವ ಸಾಧ್ಯತೆ ಇರುತ್ತದೆ. ಅಕಸ್ಮಾತ್ ಆಗಿ ಸಂಭವಿಸುವ ಈ ಅವಘಡಗಳಿಗೆ ನಿಮ್ಮನ್ನು ನೀವು ದೂಷಿಸದೇ ಕೆಲವೊಂದು ಪರಿಹಾರ ವಿಧಾನಗಳನ್ನು ಕಂಡುಕೊಂಡು ಇದರಿಂದ ತಪ್ಪಿಸಿಕೊಳ್ಳಬಹುದು. ಹೌದು ಫೋನ್ ಒದ್ದೆಯಾಯಿತು ಇಲ್ಲವೇ ಹಾಳಾಯಿತು ಎಂಬುದಾಗಿ ಚಿಂತಿಸದೇ ಕೂರದೇ ಕೆಲವೊಂದು ವಿಧಾನಗಳನ್ನು ಅನುಸರಿಸಿ ನಿಮ್ಮ ಚಿಂತೆಯನ್ನು ದೂರಮಾಡಿಕೊಳ್ಳಿ. ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು. ಬನ್ನಿ ಆ ಸರಳ ವಿಧಾನಗಳನ್ನು ತಿಳಿದುಕೊಳ್ಳೋಣ.

#1

#1

ಮೈಕ್ರೋಫೋನ್‌ನ ಸಣ್ಣ ತೂತು, ಚಾರ್ಜಿಂಗ್, ಯುಎಸ್‌ಬಿ ಕೇಬಲ್ ಕನೆಕ್ಟಿವಿಟಿ ಮತ್ತು ಸೆಲ್ ಫೋನ್‌ಗಳಲ್ಲಿರುವ ಪ್ಲಾಸ್ಟಿಕ್ ಕವರ್ ನೀರನ್ನು ಫೋನ್‌ನ ಒಳಕ್ಕೆ ಬಿಡಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆದಷ್ಟು ಬೇಗ ನೀರಿನಿಂದ ಹೊರತೆಗೆಯಿರಿ

#2

#2

ನಿಮ್ಮ ಫೋನ್ ವಾಲ್ ಚಾರ್ಜರ್‌ಗೆ ಸಂಪರ್ಕವನ್ನು ಹೊಂದಿದ್ದಲ್ಲಿ ನೀರಿನಿಂದ ಹೊರತೆಗೆಯಲು ಪ್ರಯತ್ನಿಸಬೇಡಿ. ಇದಕ್ಕೆ ಬೇಕಾದ ಮಾರ್ಗದರ್ಶನಗಳನ್ನು ಬಳಸಿ ನಂತರವೇ ಫೋನ್ ಅನ್ನು ನೀರಿನಿಂದ ಹೊರಕ್ಕೆ ತೆಗೆಯಿರಿ.

#3

#3

ನೀರಿನಿಂದ ಫೋನ್ ಅನ್ನು ಹೊರಕ್ಕೆ ತೆಗೆದ ನಂತರ ಅದನ್ನು ಪೇಪರ್ ಟವಲ್ಸ್ ಅಥವಾ ಮೃದುವಾದ ಬಟ್ಟೆಯನ್ನು ಬಳಸಿ ನೀರನ್ನು ಹೊರತೆಗೆಯಿರಿ. ಬ್ಯಾಟರಿಯನ್ನು ಹೊರಕ್ಕೆ ತೆಗೆಯಿರಿ.

#4

#4

ಅತ್ಯಮೂಲ್ಯ ಸಂಪರ್ಕಗಳನ್ನು ಸಿಮ್‌ನಲ್ಲಿ ನೀವು ಸಂಗ್ರಹಿಸಿಟ್ಟಿರುತ್ತೀರಿ. ಸಿಮ್ ಕಾರ್ಡ್ ಕೂಡ ನೀರಿನಿಂದ ಹಾನಿಗೆ ಒಳಗಾಗುವ ಸಾಧ್ಯತೆ ಇದ್ದು ಇದನ್ನು ಆದಷ್ಟು ಬೇಗ ಹೊರಕ್ಕೆ ತೆಗೆಯಿರಿ. ಒಣಗಿಸಿ ಮತ್ತು ಸೆಲ್ ನೆಟ್‌ವರ್ಕ್‌ಗೆ ಪುನಃ ಸಂಪರ್ಕವನ್ನು ಪಡೆದುಕೊಳ್ಳುವವರೆಗೆ ಅದನ್ನು ಒಣಗಿಸಿ.

#5

#5

ಮೆಮೊರಿ ಕಾರ್ಡ್ಸ್, ಮುಂತಾದ ಫೋನ್ ಸಾಮಾಗ್ರಿಗಳನ್ನು ಹೊರಕ್ಕೆ ತೆಗೆಯಿರಿ. ಇದು ಚೆನ್ನಾಗಿ ಒಣಗಲಿ. ಫೋನ್ ಅನ್ನು ಕೆಳಕ್ಕೆ ಬೀಳಿಸದೇ ನೀರನ್ನು ಒರೆಸಿ ತೆಗೆಯಿರಿ.

#6

#6

ಫೋನ್‌ನ ಒಳಭಾಗದಲ್ಲಿರುವ ನೀರನ್ನು ತೆಗೆಯಬೇಕು ಎಂದಾದಲ್ಲಿ ವಾಕ್ಯೂಮ್ ಕ್ಲೀನರ್ ಅನ್ನು ಬಳಸಬಹುದಾಗಿದೆ. ವಾಕ್ಯೂಮ್ ಕ್ಲೀನರ್ ಬಳಸಿ ನೀರನ್ನು ಹೊರತೆಗೆಯಿರಿ 20 ನಿಮಿಷಗಳ ಕಾಲ ವಾಕ್ಯೂಮ್ ಕ್ಲೀನರ್ ಬಳಸಿ. ಆದಷ್ಟು ಫೋನ್‌ನ ಸಮೀಪಕ್ಕೆ ಇದನ್ನು ಬಳಸಬೇಡಿ

#7

#7

ಹೇರ್ ಡ್ರೈಯರ್ ಅನ್ನು ಬಳಸುವುದರಿಂದ ಅಧಿಕ ಮಾಯಿಸ್ಚರೈಸರ್ ಅನ್ನು ಫೋನ್ ಒಳಕ್ಕೆ ಹೋಗುವಂತೆ ಮಾಡಬಹುದು. ಫೋನ್‌ನ ಒಳಕ್ಕೆ ಗಾಳಿಯಾಡಿಸುವುದು, ಹೀಟರ್ ಬಳಸುವುದು ಮೊದಲಾದ ಕೆಲಸಗಳನ್ನು ಮಾಡದಿರಿ.

#8

#8

ಬೇಯಿಸದೇ ಇರುವ ಅಕ್ಕಿಯಲ್ಲಿ ಸ್ಪಲ್ಪ ಸಮಯ ಫೋನ್ ಅನ್ನು ಇರಿಸಿ. ಹೆಚ್ಚುವರಿ ತೇವಾಂಶವನ್ನು ಅಕ್ಕಿ ಹೀರಿಕೊಳ್ಳಬಹುದು.

#9

#9

ಬಿಸಿಲಿನಲ್ಲಿ ಸ್ವಲ್ಪ ಕಾಲ ಫೋನ್ ಅನ್ನು ಇರಿಸಿ ಇದರಿಂದ ಕೂಡ ನೀರು ಆರಿಹೋಗಬಹುದು.

#10

#10

ಅಕ್ಕಿಯಿಂದ ಫೋನ್ ಅನ್ನು ತೆಗೆದ ನಂತರ ನೀರು ಹೀರಿಕೊಳ್ಳುವ ಸಾಮಾಗ್ರಿಗಳ ಮೇಲೆ ಡಿವೈಸ್ ಅನ್ನು ಇರಿಸಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಾಟ್ಸಾಪ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮರೆಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್"‌ ಪಡೆಯುವುದು ಹೇಗೆ?

ಫೋನ್‌ನಲ್ಲಿ ಡಿಲೀಟ್ ಆದ ಫೋಟೋ ಮರುಪಡೆದುಕೊಳ್ಳುವುದು ಹೇಗೆ?

Most Read Articles
Best Mobiles in India

English summary
In this article we are giving you simple step on how to save your phone when it will fallen to water. These steps are very helpful to save your wet phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more