Just In
Don't Miss
- News
ಹೈದರಾಬಾದ್ ಅತ್ಯಾಚಾರಿಗಳ ಎನ್ ಕೌಂಟರ್; ಯದುವೀರ್ ಒಡೆಯರ್ ಹೇಳೋದೇನು?
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Automobiles
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ನಿಮ್ಮ ಫೋನ್ ವೇಗ ಕಡಿಮೆಯಾಗಿದ್ದರೆ ಹೀಗೆ ಮಾಡಿ!..ಖಂಡಿತ ಸ್ಪೀಡ್ ಆಗುತ್ತೆ!!
ನಿಮ್ಮ ಸ್ಮಾರ್ಟ್ಫೋನ್ ವೇಗ ಬಹಳ ಕಡಿಮೆಯಾಗಿದೆಯೇ? ಅಂತರ್ಜಾಲ ಸಂಪರ್ಕ ನಿಧಾನವಾಗಿದೆಯೇ? ಹಾಗಾದರೆ, ಇದಕ್ಕೆ ನೀವೆ ಕಾರಣರಾಗಿರುತ್ತೀರಾ. ಹೌದು, ಸ್ಮಾರ್ಟ್ಫೋನ್ ಖರೀದಿಸಿದ ಹೊಸದರಲ್ಲಿ ಇದ್ದ ವೇಗ ಇಂದು ಇಲ್ಲವಾಗಿದ್ದರೆ ನಮ್ಮ ಹಲವು ಸಣ್ಣಪುಟ್ಟ ತಪ್ಪುಗಳೇ ಕಾರಣವಾಗಿರುತ್ತವೆ.
ಖರೀದಿಸುವ ಮುನ್ನವೇ RAM ಮತ್ತು ಆಂತರಿಕ ಮೆಮೊರಿ ಹೆಚ್ಚಿರುವ ಸ್ಮಾರ್ಟ್ಫೋನ್ ಖರೀದಿಸಿದರೆ ಇಂತಹ ಸಮಸ್ಯೆಯಿಂದ ಪಾರಾಗಬಹುದಾದರೂ, ಅವುಗಳು ಸಹ ಇಂತಹ ತೊಂದರೆಗೆ ಸಿಲುಕುವುದು ಸಾಮಾನ್ಯ. ಹಾಗಾದರೆ, ಸ್ಮಾರ್ಟ್ಫೋನ್ ವೇಗ ಬಹಳ ಕಡಿಮೆಯಾಗಲುನಾವು ಮಾಡುತ್ತಿರುವ ತಪ್ಪುಗಳು ಯಾವುವು? ಅದಕ್ಕೆ ಪರಿಹಾರಗಳೇನು ಎಂಬುದನ್ನು ಕೆಳಗಿನ ಸ್ಲೈಡರ್ಗಳಲ್ಲಿ ತಿಳಿಯಿರಿ.

ಫೇಸ್ಬುಕ್ ಲೈಟ್ ಬಳಸಿ.!!
ಫೇಸ್ಬುಕ್ ತಂತ್ರಾಂಶ ಇರುವ ಮೊಬೈಲ್ ಫೋನ್ಗಳ ವೇಗ ಶೇ 15ರಷ್ಟು ಕಡಿಮೆಯಾಗುತ್ತದೆ ಎಂಬುದು ಸೈಬರ್ ತಂತ್ರಜ್ಞರ ಅಭಿಪ್ರಾಯ. ಸ್ನ್ಯಾಪ್ ಚಾಟ್ ತಂತ್ರಾಂಶದಲ್ಲೂ ಇದೇ ಸಮಸ್ಯೆ ಇದ್ದು, ಫೇಸ್ಬುಕ್ ಲೈಟ್ನಂತಹ ಸೌಲಭ್ಯಗಳನ್ನು ಬಳಸಿಕೊಳ್ಳಿ. ಇದರಿಂದ RAM ಬಳಕೆ ಪ್ರಮಾಣ ಕಡಿಮೆಯಾಗುತ್ತದೆ.!

ಉತ್ತಮ ಮೆನು ಲಾಂಚರ್ ಬಳಸಿ
ನೀವು ಖರೀದಿಸುವ ಪ್ರತಿ ಸ್ಮಾರ್ಟ್ಫೋನ್ನಲ್ಲೂ ಒಂದು ಲಾಂಚರ್ ಅಳವಡಿಸಲಾಗಿರುತ್ತದೆ. ಮೊಬೈಲ್ ಪರದೆ ಮೇಲೆ ಕಾಣುವ ಮೆನು ವಿಧಾನ, ಐಕಾನ್ಗಳು, ಸೂಚನೆಗಳು...ಇವೆಲ್ಲವೂ ಇದರಲ್ಲೇ ಇರುತ್ತವೆ. ಇದಕ್ಕಗಿ ಹೆಚ್ಚು RAM ಬಳಕೆಯಾಗುವುದರಿಂದ ಕಡಿಮೆ RAM ಬಳಸುವ ಲಾಂಚರ್ ಅಳವಡಿಸಿಕೊಳ್ಳಿ. ನಿಮ್ಮ ಫೋನ್ ವೇಗ ಹೆಚ್ಚುತ್ತದೆ.!

ಆನಿಮೇಶನ್ ಲೈವ್ ವಾಲ್ಪೇಪರ್ ಬಳಸದಿರಿ.!!
ಕಡಿಮೆ ಸಾಮರ್ಥ್ಯದ RAM ಮತ್ತು ಹಳೆಯ ಪ್ರೊಸೆಸರ್ಗಳಿರುವ ಸ್ಮಾರ್ಟ್ಫೋನ್ಗಳಲ್ಲಿ ಆನಿಮೇಶನ್ ಲೈವ್ ವಾಲ್ಪೇಪರ್ ಬಳಸಬೇಡಿ. ಇಂತಹ ಲೈವ್ ವಾಲ್ಪೇಪರ್ಗಳು ಮೊಬೈಲ್ ಬ್ಯಾಕ್ಗ್ರೌಂಡ್ನಲ್ಲಿ ಕ್ರಿಯಾಶೀಲವಾಗಿರುತ್ತವೆ. ಇದರಿಂದ ಮೊಬೈಲ್ ವೇಗ ಭಾರಿ ಕಡಿಮೆಯಾಗುತ್ತದೆ.!

ಒಪೆರಾ, ಫೈರ್ಫಾಕ್ಸ್ ಒಳ್ಳೆಯದು.!!
ನಿಮ್ಮದು ಸ್ವಲ್ಪ ಹಳೆಯ ಸ್ಮಾರ್ಟ್ಫೋನ್ ಆದರೂ ಒಪೆರಾ, ಫೈರ್ಫಾಕ್ಸ್ನಂತಹ ಬ್ರೌಸರ್ಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.ಕಡಿಮೆ RAM ಬಳಸುವ ಈ ಬ್ರೌಸರ್ಗಳು ನಿಮ್ಮ ಅಂತರ್ಜಾಲ ಸಂಪರ್ಕವನ್ನು ಹೆಚ್ಚಿಸುತ್ತವೆ.ಒಪೆರಾದಲ್ಲಿ ಪಾಪ್ಅಪ್ ಬ್ಲಾಕರ್ ಮತ್ತು ಡೇಟಾ ಸೇವರ್ ಆಯ್ಕೆಗಳು ಬ್ರೌಸರ್ ವೇಗವನ್ನು ಹೆಚ್ಚಿಸಲು ನೆರವಾಗುತ್ತವೆ.

ಹೆಚ್ಚು RAM ಇದ್ದರೆ ಕ್ರೋಮ್ ಬಳಸಿ.!!
ಇಂದು ಬಹುತೇಕ ಎಲ್ಲಾ ಸ್ಮಾರ್ಟ್ಫೋನ್ಗಳಲ್ಲಿ ಕ್ರೋಮ್ ಬಳಕೆ ಸಾಮಾನ್ಯ. ಇನ್ನು ಕ್ರೋಮ್ನಂತಹ ಸರ್ಚ್ ಎಂಜಿನ್ ಹೆಚ್ಚು RAM ಬಳಸಿಕೊಳ್ಳುತ್ತವೆ. ಇದನ್ನು ಹೆಚ್ಚು ಹೊತ್ತು ಬಳಸಿದ ನಂತರ ನಿಲ್ಲಿಸಿದರೂ ಈ ಮೊಬೈಲ್ ಯಥಾಸ್ಥಿತಿಗೆ ಬರಲು ಸ್ವಲ್ಪಹೊತ್ತು ಹಿಡಿಯುತ್ತದೆ. ಹಾಗಾಗಿ, 3GB RAM ಮೇಲ್ಪಟ್ಟ ಸ್ಮಾರ್ಟ್ಫೋನ್ಗಳಿಗೆ ಕ್ರೋಮ್ ಒಳ್ಳೆಯದು.!

ಆಯಂಟಿ ವೈರಸ್ಗಳ ಬಗ್ಗೆ ತಿಳಿದಿರಲಿ!!
ಪ್ರತಿ ಸ್ಮಾರ್ಟ್ಫೋನ್ನಲ್ಲೂ ಡಿಫಾಲ್ಟ್ ಆಗಿ ಯಾವುದಾದರೂ ಒಂದು ಆಯಂಟಿ ವೈರಸ್ ತಂತ್ರಾಂಶ ಇರುತ್ತದೆ. ಇದು ಮೊಬೈಲ್ನ RAMಗೆ ತಕ್ಕಂತೆ ಕೆಲಸ ಮಾಡುತ್ತದೆ. ಇದಲ್ಲದೆ ಮತ್ತೊಂದು ತಂತ್ರಾಂಶವನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಆದರೂ ಹೆಚ್ಚಿನ ಆಯಂಟಿ ವೈರಸ್ ಬಗ್ಗೆ ನಿಮಗೆ ತಿಳಿದಿರಲಿ.!

ಮೊಬೈಲ್ ವೇಗ ಹೆಚ್ಚಿಸುವ ಆಪ್ ಬೇಡ.!!
ಮೊಬೈಲ್ ವೇಗ ಹೆಚ್ಚಿಸಿಕೊಳ್ಳಲು ಈ ಆಪ್ ಉತ್ತಮ ಎಂಬ ಜಾಹೀರಾತುಗಳನ್ನು ನಂಬದಿರಿ. ನಿಮ್ಮ ಮೊಬೈಲ್ ವೇಗವನ್ನು ಒಂದೇ ಬಾರಿಗೆ ಹೆಚ್ಚಿಸುತ್ತವೆ ಎಂದು ತಿಳಿಯಬೇಡಿ. ಏಕೆಂದರೇ ಇವು ಕೂಡ ನಿಮ್ಮ ಸ್ಮಾರ್ಟ್ಫೋನ್ RAM ಬಳಸಿಕೊಂಡೆ ಕಾರ್ಯನಿರ್ವಹಣೆ ನೀಡುತ್ತವೆ.!
ತಂತ್ರಜ್ಞಾನ ಮಾಹಿತಿ ತಕ್ಷಣವೇ ಪಡೆಯಲು ಮರೆಯದೇ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ!!
ಆಧಾರ್- ಪ್ಯಾನ್ ಜೋಡಣೆ, ಪ್ಯಾನ್ಗೆ ಅರ್ಜಿ ಸಲ್ಲಿಸಲು ಒಂದೇ ಆಪ್!! ಯಾವುದು?
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090