ಏನಿದು ಆಧಾರ್ ಲಾಕ್ ಮತ್ತು ಅನ್‌ಲಾಕ್‌?..ಆಧಾರ್‌ ಲಾಕ್‌ ಮಾಡುವುದು ಹೇಗೆ?

|

ಆಧಾರ್‌ ಕಾರ್ಡ್‌ ಪ್ರಮುಖ ಗುರುತಿನ ಚೀಟಿಗಳಲ್ಲಿ ಒಂದಾಗಿದೆ. ಅಲ್ಲದೇ ಸರ್ಕಾರದ ಸೌಲಭ್ಯಗಳಿಗೆ ಹಾಗೂ ಅನೇಕ ಮಹತ್ವದ ಕೆಲಸಗಳಿಗೆ ಫುರಾವೆಯ ಮೂಲ ಪ್ರತಿಯಾಗಿಯು ಬಳಕೆ ಆಗುತ್ತದೆ. ಈ ನಿಟ್ಟಿನಲ್ಲಿ ಆಧಾರ್ ಕಾರ್ಡ್‌ ಪ್ರತಿಯೊಬ್ಬರಿಗೂ ಮಹತ್ವದ ದಾಖಲೆಯಾಗಿದೆ. ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ವೈಯುಕ್ತಿಕ ಮಾಹಿತಿ ಇರುವುದರಿಂದ ಇದನ್ನು ಸುರಕ್ಷಿತವಾಗಿರಿಸುವುದು ಅತ್ಯವಶ್ಯಕ. ಅದಕ್ಕಾಗಿ ಬಳಕೆದಾರರು ಆಧಾರ್ ಲಾಕ್ ಸೌಲಭ್ಯ ಬಳಕೆ ಮಾಡಬಹುದು.

ಇದಕ್ಕಾಗಿ

ಹೌದು, ಆಧಾರ್‌ ಕಾರ್ಡ್‌ ಅಗತ್ಯ ಆಗಿದ್ದು, ಅದನ್ನು ಸುರಕ್ಷಿತವಾಗಿ ಇಡುವುದು ಮುಖ್ಯ ಎನಿಸಿದೆ. ಕೆಲವೊಮ್ಮೆ ಬಳಕೆದಾರರ ವೈಯಕ್ತಿಕ ಮಾಹಿತಿ ದುರುಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಇದಕ್ಕಾಗಿ ನಿಮ್ಮ ಆಧಾರ್‌ ಕಾರ್ಡ್ ಬಯೋಮೆಟ್ರಿಕ್ಸ್‌ ಅನ್ನು ಲಾಕ್‌ ಮಾಡುವುದು, ನಿಮಗೆ ಅವಶ್ಯವಿದ್ದಾಗ ಅದನ್ನು ಅನ್‌ಲಾಕ್‌ ಮಾಡುವುದು ಸುರಕ್ಷತೆಯ ದೃಷ್ಠಿಯಿಂದ ಒಳ್ಳೆಯದು. ಹಾಗಾದರೇ ಆಧಾರ್‌ ಲಾಕ್ ಎಂದರೇನು?.. ಆಧಾರ್‌ ಲಾಕ್ ಹಾಗೂ ಅನ್‌ಲಾಕ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಯೋಮೆಟ್ರಿಕ್ಸ್‌

ಆಧಾರ್‌ ಕಾರ್ಡ್‌ ಮಾಹಿತಿಯನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ಬಯೋಮೆಟ್ರಿಕ್ಸ್‌ ಉಪಯುಕ್ತವಾಗಿದೆ. ನಿಮಗೆ ಅಗತ್ಯವೆನಿಸಿದಾಗ ನಿಮ್ಮ ಆಧಾರ್‌ ಅನ್ನು ಆನ್‌ಲೈನ್‌ನಲ್ಲಿ ತೆರೆಯುವುದು. ಅಗತ್ಯ ಎನಿಸಿದಾಗ ಬಯೋಮೆಟ್ರಿಕ್ಸ್‌ ಅನ್ನು ಅನ್‌ಲಾಕ್‌ ಮಾಡಬಹುದು. ಅದಕ್ಕಾಗಿ ಮೂರು ಮಾರ್ಗಗಳಿವೆ. ಮೊದಲನೆಯದು mAadhaar ಅಪ್ಲಿಕೇಶನ್, ಎರಡನೇಯದು mAadhaar ನಲ್ಲಿ ಟಾಗಲ್‌ ಬಟನ್‌ ಬಳಸುವುದು, ಮೂರನೇಯದು UIDAI ವೆಬ್‌ಸೈಟ್‌ ಮೂಲಕ ಬಯೋಮೆಟ್ರಿಕ್‌ ಲಾಕ್‌ ಅಥವಾ ಅನ್‌ಲಾಕ್‌ ವಿಭಾಗಕ್ಕೆ ಹೋಗುವುದು. ಈ ಬಗ್ಗೆ ಮುಂದೆ ತಿಳಿಯೋಣ

ಏನಿದು ಆಧಾರ್ ಕಾರ್ಡ್‌ ಲಾಕ್?

ಏನಿದು ಆಧಾರ್ ಕಾರ್ಡ್‌ ಲಾಕ್?

ನಿಮ್ಮ ಗೌಪ್ಯತೆ ಮತ್ತು ಭದ್ರತೆಯನ್ನು ಇನ್ನಷ್ಟು ಬಲಪಡಿಸಲು, UIDAI ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಲು ಒಂದು ವೈಶಿಷ್ಟ್ಯವನ್ನು ಪರಿಚಯಿಸಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮಾಡಿದ ನಂತರ, ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ದೃಢೀಕರಣವನ್ನು ಮಾಡಲಾಗುವುದಿಲ್ಲ. ಆ ಸಂದರ್ಭದಲ್ಲಿ ದೃಢೀಕರಣವನ್ನು ನಿರ್ವಹಿಸಲು ನಿಮ್ಮ ವರ್ಚುವಲ್ ಐಡಿಯನ್ನು ನೀವು ಬಳಸಬಹುದು.

mAadhaar ಆಪ್‌ ಮೂಲಕ ಆಧಾರ್‌ ಲಾಕ್ ಮಾಡಲು ಹೀಗೆ ಮಾಡಿ:

mAadhaar ಆಪ್‌ ಮೂಲಕ ಆಧಾರ್‌ ಲಾಕ್ ಮಾಡಲು ಹೀಗೆ ಮಾಡಿ:

ಹಂತ 1. ಮೊದಲು mAadhaar ಅಪ್ಲಿಕೇಶನ್ ಕೆಳಭಾಗದಲ್ಲಿರುವ ಬಯೋಮೆಟ್ರಿಕ್ಸ್ ಅನ್ಲಾಕ್ಡ್ ಅಧಿಸೂಚನೆಯನ್ನು ಕ್ಲಿಕ್ ಮಾಡುವುದು.

ಹಂತ 2. ನಿಮ್ಮನ್ನು mAadhaar ಪಾಸ್‌ವರ್ಡ್ ಕೇಳಲಾಗುತ್ತದೆ.

ಹಂತ 3. ಒಮ್ಮೆ ದೃಡೀಕರಿಸಿದ ನಂತರ, ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ. ನಿಮಗೆ ಈಗ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ.

ಕ್ಲಿಕ್

ಬಯೋಮೆಟ್ರಿಕ್ ದೃಡೀಕರಣವನ್ನು ಬಳಸಿಕೊಂಡು ನೀವು ವಹಿವಾಟು ನಡೆಸಬೇಕಾದಾಗ, ನೀವು ಅದೇ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ನೀವು mAadhaar ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬೇಕು ಮತ್ತು ಬಯೋಮೆಟ್ರಿಕ್ಸ್ ಲಾಕ್ - ಅನ್ಲಾಕ್ ಬಯೋಮೆಟ್ರಿಕ್ಸ್ ಅಧಿಸೂಚನೆಯನ್ನು ಕ್ಲಿಕ್ ಮಾಡಬೇಕು. ನಿಮ್ಮ ಪಾಸ್‌ವರ್ಡ್ ಅನ್ನು ಒಮ್ಮೆ ನಮೂದಿಸಿದ ನಂತರ ಬಯೋಮೆಟ್ರಿಕ್ಸ್ ಅನ್‌ಲಾಕ್ ಆಗುತ್ತದೆ.

UIDAI ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್‌ ಲಾಕ್ ಮಾಡಲು ಹೀಗೆ ಮಾಡಿ:

UIDAI ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್‌ ಲಾಕ್ ಮಾಡಲು ಹೀಗೆ ಮಾಡಿ:

* ನಿಮ್ಮ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ಒಮ್ಮೆ ನೀಡಿದ ನಂತರ, ನಿಮಗೆ ಒಟಿಪಿ ಕಳುಹಿಸಲಾಗುತ್ತದೆ.
* OTP ಅಥವಾ TOTP ಅನ್ನು ನಮೂದಿಸಿ.
* ನಿಮ್ಮ ಆಧಾರ್ ಲಾಕ್ ಆಗಿದೆಯೇ ಅಥವಾ ಅನ್ಲಾಕ್ ಆಗಿದೆಯೇ ಎಂದು ತೋರಿಸುವ ಪೇಜ್‌ಗೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.

ಸ್ವಯಂಚಾಲಿತವಾಗಿ

* ಈ ಪುಟದಿಂದ ನೀವು ಅನ್ಲಾಕ್ ಮಾಡಲು (ಲಾಕ್ ಆಗಿದ್ದರೆ) ಅಥವಾ ಲಾಕ್ ಮಾಡಲು (ಅನ್ಲಾಕ್ ಆಗಿದ್ದರೆ) ನಿಮಗೆ ಸಾಧ್ಯವಾಗುತ್ತದೆ.
* ಒಮ್ಮೆ ನೀವು ಆಧಾರ್ ಅನ್ನು ಅನ್ಲಾಕ್ ಮಾಡಿದರೆ, ಅದನ್ನು ಹತ್ತು ನಿಮಿಷಗಳ ಕಾಲ ಅನ್ಲಾಕ್ ಮಾಡಲಾಗುತ್ತದೆ.
* ಇದು 10 ನಿಮಿಷಗಳ ನಂತರ ಸ್ವಯಂಚಾಲಿತವಾಗಿ ಲಾಕ್ ಆಗುತ್ತದೆ.

Most Read Articles
Best Mobiles in India

English summary
What is Aadhaar Lock And Unlock? How To Do It.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X