ವಾಟ್ಸಾಪ್‌ನಲ್ಲಿ ವಿಡಿಯೊ ಮ್ಯೂಟ್‌ ಫೀಚರ್ ಸೇರ್ಪಡೆ: ಬಳಕೆ ಮಾಡುವುದು ಹೇಗೆ?

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ತಾಣ ವಾಟ್ಸಾಪ್‌ ತನ್ನ ಬಹುನಿರೀಕ್ಷಿತ ಮ್ಯೂಟ್ ವಿಡಿಯೋ ಫೀಚರ್ ಅಂತಿಮವಾಗಿ ಬಳಕೆದಾರರಿಗೆ ತಲುಪುತ್ತಿದೆ. ಬೀಟಾ ಪರೀಕ್ಷೆಯಲ್ಲಿದ್ದ ವಾಟ್ಸಾಪ್ ಮ್ಯೂಟ್ ವಿಡಿಯೋ ಫೀಚರ್ ಅನ್ನು ಸಂಸ್ಥೆಯು ಇದೀಗ ಬಿಡುಗಡೆ ಮಾಡಿದೆ. ಈ ಹೊಸ ಮ್ಯೂಟ್ ವಿಡಿಯೋ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.

ಆಂಡ್ರಾಯ್ಡ್‌

ಹೌದು, ಮೆಸೆಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ನೂತನವಾಗಿ ಮ್ಯೂಟ್ ವಿಡಿಯೋ ಫೀಚರ್ ಅನಾವರಣ ಮಾಡಿದೆ. ಬಳಕೆದಾರರು ವಾಟ್ಸಾಪ್‌ನಲ್ಲಿ ವಿಡಿಯೊ ಕಳುಹಿಸುವಾಗ ವಿಡಿಯೊದ ಆಡಿಯೋವನ್ನು ಮ್ಯೂಟ್ ಮಾಡಲು ಈ ಫೀಚರ್ ನೆರವಾಗಲಿದೆ. ಈ ಆಯ್ಕೆಯು ಆಂಡ್ರಾಯ್ಡ್‌ ಲಭ್ಯ ಎಂದಿದೆ. ವಾಟ್ಸಾಪ್ ಬೀಟಾ ಆವೃತ್ತಿ v2.21.3.13 ಅಪ್‌ಡೇಟ್‌ನ ಮೂಲಕ ಈ ಫೀಚರ್ ಸ್ವೀಕರಿಸಿದ್ದಾರೆ ಎಂದು WABetaInfo ವೆಬ್‌ಸೈಟ್ ಉಲ್ಲೇಖಿಸಿದೆ.

ವಾಲ್ಯೂಮ್

ಇನ್ನು ಬಳಕೆದಾರರು ಈ ಹೊಸ ಮ್ಯೂಟ್ ವೀಡಿಯೊ ಫೀಚರ್‌ ಅನ್ನು ವೀಡಿಯೊ-ಎಡಿಟಿಂಗ್ ಸ್ಕ್ರೀನ್‌ನಲ್ಲಿ ಕಾಣಬಹುದು. ಕಳುಹಿಸುವ ವೀಡಿಯೊವನ್ನು ಮ್ಯೂಟ್ ಆಯ್ಕೆ ಕ್ಲಿಕ್ ಮಾಡುವ ಮೂಲಕ ವಾಲ್ಯೂಮ್ ಐಕಾನ್ ಈಗ ಸೀಕ್ ಬಾರ್ ನಲ್ಲಿ ಪಾಪ್‌ಅಪ್‌ ಆಗುತ್ತದೆ. ಹಾಗಾದರೇ ವಾಟ್ಸಾಪ್‌ನ ಮ್ಯೂಟ್ ವೀಡಿಯೊ ಫೀಚರ್‌ ಅನ್ನು ಬಳಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್ ಮ್ಯೂಟ್ ವಿಡಿಯೋ ಫೀಚರ್ ಬಳಸಲು ಈ ಕ್ರಮ ಫಾಲೋ ಮಾಡಿ:

ವಾಟ್ಸಾಪ್ ಮ್ಯೂಟ್ ವಿಡಿಯೋ ಫೀಚರ್ ಬಳಸಲು ಈ ಕ್ರಮ ಫಾಲೋ ಮಾಡಿ:

* ಮೊದಲಿಗೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ ಮತ್ತು ಅಪ್‌ಡೇಟ್ ಆಯ್ಕೆಯನ್ನು ಕ್ಲಿಕ್ ಮಾಡಿ (ಸ್ವಯಂಚಾಲಿತ ಡೌನ್‌ಲೋಡ್ ಆಯ್ಕೆಯನ್ನು ಆನ್ ಮಾಡಿದರೆ ಅಪ್ಲಿಕೇಶನ್ ಈಗಾಗಲೇ ನವೀಕರಣವನ್ನು ಸ್ವೀಕರಿಸಬೇಕು)

* ವಾಟ್ಸಾಪ್‌ ಅಪ್‌ಡೇಟ್ ಆದ ನಂತರ ವಿಡಿಯೊ ಮ್ಯೂಟ್‌ ಆಯ್ಕೆ ಲಭ್ಯವಾಗುತ್ತದೆ.

* ಹೊಸ ಮ್ಯೂಟ್ ವೀಡಿಯೊ ಫೀಚರ್‌ ಅನ್ನು ಬಳಸಲು, ವೀಡಿಯೊವನ್ನು ರೆಕಾರ್ಡ್ ಮಾಡಿ.

* ನೀವು ರೆಕಾರ್ಡಿಂಗ್ ಮಾಡಿದ ನಂತರ, ಎಡಭಾಗದಲ್ಲಿ ನೀವು ವಾಲ್ಯೂಮ್ ಐಕಾನ್ ಅನ್ನು ಕಾಣುತ್ತಿರಿ. ವೀಡಿಯೊವನ್ನು ಮ್ಯೂಟ್ ಮಾಡಲು ಅದರ ಮೇಲೆ ಟ್ಯಾಪ್ ಮಾಡಿ.

* ಆ ನಂತರ ವಾಯಿಸ್‌/ರ್ಧವನಿ ರಹಿತ ವಿಡಿಯೊ ಕಳುಹಿಸಲು ಸಿದ್ಧವಾಗುತ್ತದೆ.

ವಾಟ್ಸಾಪ್

ಯಾವುದೇ ಆಡಿಯೊ ಇಲ್ಲದೇ ತಮ್ಮ ವೀಡಿಯೊಗಳನ್ನು ಶೇರ್ ಮಾಡ ಬಯಸುವ ಬಳಕೆದಾರರಿಗೆ ಈ ಫೀಚರ್ ಸಹಾಯ ಉಪಯುಕ್ತ. ಫೇಸ್‌ಬುಕ್‌ನ ಕಂಪನಿಯ ಇನ್‌ಸ್ಟಾಗ್ರಾಮ್ ಆಪ್‌ನಲ್ಲಿ ಈಗಾಗಲೇ ಮುಖ್ಯ ಪೋಸ್ಟ್‌ಗಳು ಮತ್ತು ಕಥೆಗಳಿಗಾಗಿ ಮ್ಯೂಟ್ ವೀಡಿಯೊ ಆಯ್ಕೆ ಲಭ್ಯ ಇದೆ. ಆದ್ರೆ ಈಗ ವಾಟ್ಸಾಪ್ ಸೇರಿಕೊಂಡಿದೆ. ಈ ಹೊಸ ಫೀಚರ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ, ಐಒಎಸ್ ಅಪ್‌ಡೇಟ್ ಬಿಡುಗಡೆಗಾಗಿ ಸಂಸ್ಥೆಯು ಇನ್ನೂ ಟೈಮ್‌ಲೈನ್ ಹಂಚಿಕೊಂಡಿಲ್ಲ.

Most Read Articles
Best Mobiles in India

English summary
WhatsApp has recently released the new Mute Video feature that was under beta testing, the feature can be found on the video-editing screen.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X