ಟೈಪ್ ಮಾಡದೆ ವಾಟ್ಸಾಪ್‌ನಲ್ಲಿ ಮೆಸೆಜ್ ಸೆಂಡ್ ಮಾಡುವುದು ಹೇಗೆ?

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇತ್ತೀಚಿಗಷ್ಟೆ ಮೆಸೆಜ್ ಮತ್ತು ಫೋಟೊ ಡಿಸ್‌ಅಪಿಯರ್‌ ಆಯ್ಕೆಗಳನ್ನು ಪರಿಚಯಿಸಿದೆ. ಹಾಗೆಯೇ ಬಳಕೆದಾರರಿಗೆ ಕೆಲವು ಆಯ್ಕೆಗಳನ್ನು ನೀಡಿದೆ. ಆ ಪೈಕಿ ಮೆಸೆಜ್‌ ಅನ್ನು ಟೈಪ್ ಮಾಡದೇ ವಾಟ್ಸಾಪ್‌ ನಿಂದ ಮೆಸೆಜ್‌ ಅನ್ನು ಸೆಂಡ್ ಮಾಡಬಹುದಾಗಿದೆ.

ಟೈಪ್ ಮಾಡದೆ ವಾಟ್ಸಾಪ್‌ನಲ್ಲಿ ಮೆಸೆಜ್ ಸೆಂಡ್ ಮಾಡುವುದು ಹೇಗೆ?

ಹೌದು, ವಾಟ್ಸಾಪ್ ಬಳಕೆದಾರರು ಮೆಸೆಜ್‌ಗಳನ್ನು ಕಳುಹಿಸಲು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಅಸಿಸ್ಟೆಂಟ್ ಅನ್ನು ಬಳಸಬಹುದಾಗಿದೆ. ಐಒಎಸ್ ಬಳಕೆದಾರರು ಸಿರಿ ವಾಯಿಸ್‌ ಅಸಿಸ್ಟಂಟ್ ಅನ್ನು ಬಳಸಿ ವಾಟ್ಸಾಪ್ ಮೆಸೆಜ್‌ಗಳನ್ನು ಕಳುಹಿಸಬಹುದು. ಮೆಸೆಜ್‌ ಅನ್ನು ಟೈಪ್ ಮಾಡುವ ಸ್ಥಿತಿಯಲ್ಲಿ ನೀವು ಕಾರ್ಯನಿರತವಾಗಿರುವಾಗ ಅಥವಾ ಇಲ್ಲದಿರುವಾಗ ಮೆಸೆಜ್‌ಗಳನ್ನು ಕಳುಹಿಸಲು ಇದು ಅನುಕೂಲಕರ ಒಂದು ಉತ್ತಮ ಮಾರ್ಗವಾಗಿದೆ. ನೀವು ವಾಟ್ಸಾಪ್‌ನಲ್ಲಿ ಟೈಪ್ ಮಾಡದೇ ಮೆಸೆಜ್‌ಗಳನ್ನು ಕಳುಹಿಸಲು ಬಯಸಿದರೆ, ಗೂಗಲ್ ಅಸಿಸ್ಟೆಂಟ್ ಸಹಾಯದಿಂದ ನೀವು ಹೇಗೆ ಮೆಸೆಜ್‌ಗಳನ್ನು ಕಳುಹಿಸಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿರಿ.

ಟೈಪ್ ಮಾಡದೆ ವಾಟ್ಸಾಪ್‌ನಲ್ಲಿ ಮೆಸೆಜ್ ಸೆಂಡ್ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಟೈಪ್ ಮಾಡದೆ ಮೆಸೆಜ್‌ಗಳನ್ನು ಕಳುಹಿಸುವುದು ಹೇಗೆ?
ಹಂತ 1: ಮೊದಲು, ನೀವು "ಹೇ ಗೂಗಲ್" ಅಥವಾ "ಓಕೆ ಗೂಗಲ್" ಎಂದು ಹೇಳುವ ಮೂಲಕ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಅಸಿಸ್ಟೆಂಟ್ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು. ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ, ಗೂಗಲ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಲು ನೀವು ಹೋಮ್ ಬಟನ್ ಅನ್ನು ಸ್ಪರ್ಶಿಸಬಹುದು ಮತ್ತು ಹಿಡಿದುಕೊಳ್ಳಬಹುದು.

ಹಂತ 2: ನೀವು ಇದನ್ನು ಇನ್‌ಸ್ಟಾಲ್‌ ನಂತರ, "ಓಪನ್" ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು "ಹೇ ಗೂಗಲ್" ಎಂದು ಹೇಳಿ.

ಟೈಪ್ ಮಾಡದೆ ವಾಟ್ಸಾಪ್‌ನಲ್ಲಿ ಮೆಸೆಜ್ ಸೆಂಡ್ ಮಾಡುವುದು ಹೇಗೆ?

ಹಂತ 3: ಅದರ ನಂತರ, ಡಿಜಿಟಲ್ ಸಹಾಯಕ ನಿಮಗೆ ಪ್ರತಿಕ್ರಿಯಿಸುತ್ತಾರೆ. ನಂತರ ನೀವು "XXXX (ಹೆಸರು) ಗೆ WhatsApp ಮೆಸೆಜ್‌ ಅನ್ನು ಕಳುಹಿಸಿ" ಎಂದು ಹೇಳಬಹುದು. ನೀವು ಸಂದೇಶ ಕಳುಹಿಸಲು ಬಯಸುವ ಸಂಪರ್ಕದ ಹೆಸರನ್ನು ನೀವು ನಮೂದಿಸಬೇಕಾಗುತ್ತದೆ.

ಹಂತ 4: ಮೆಸೆಜ್‌ನಲ್ಲಿ ಏನು ಉಲ್ಲೇಖಿಸಬೇಕು ಎಂಬುದರ ಕುರಿತು ಗೂಗಲ್ ಅಸಿಸ್ಟೆಂಟ್ ನಿಮ್ಮನ್ನು ಕೇಳುತ್ತದೆ.

ಹಂತ 5: ವರ್ಚುವಲ್ ಅಸಿಸ್ಟೆಂಟ್ ನಂತರ ಸಂದೇಶವನ್ನು ಟೈಪ್ ಮಾಡಿ ತೋರಿಸುತ್ತದೆ. ಸಂದೇಶ ಕಳುಹಿಸಲು ಸಿದ್ಧವಾಗಿದೆ ಎಂದು ಸಹಾಯಕ ಹೇಳುತ್ತಾನೆ. ಅದರ ನಂತರ, ನೀವು "ಸರಿ, ಕಳುಹಿಸಿ" ಎಂದು ಹೇಳಬೇಕು. ನಂತರ ನಿಮ್ಮ ಸಂದೇಶವನ್ನು ತಲುಪಿಸಲಾಗುತ್ತದೆ. ಎರಡನೇ ಬಾರಿಗೆ, ಸಹಾಯಕ ನೇರವಾಗಿ ಸಂದೇಶವನ್ನು ಕಳುಹಿಸಬಹುದು.

Most Read Articles
Best Mobiles in India

English summary
WhatsApp Tips: How To Send Messages Without Typing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X