ವಾಟ್ಸ್‌ಆಪ್‌ನಲ್ಲಿ ನಿಮ್ಮೊಂದಿಗೆ ನೀವೇ ಚಾಟ್‌ ಮಾಡಿಕೊಳ್ಳಿ..! ಹೇಗೆ ಅಂತಿರಾ..? ಈ ಸ್ಟೋರಿ ನೋಡಿ

By Gizbot Bureau
|

ಭಾರತದ ಅತ್ಯಂತ ಜನಪ್ರಿಯ ಅಪ್ಲಿಕೇಷನ್‌ ಆಗಿರುವ ವಾಟ್ಸ್‌ಆಪ್‌ನಲ್ಲಿ ನಿಮಗೆ ಒಂದು ಉಪಯುಕ್ತ ಫೀಚರ್‌ ಇದೆ. ಆದರೆ, ಅದನ್ನು ಕಂಡುಹಿಡಿಯುವುದು ಸ್ವಲ್ಪ ಕಷ್ಟ. ಅದು ಯಾವುದೆಂದರೆ ನಿಮಗೆ ನೀವೇ ಚಾಟ್‌ ಮಾಡಿಕೊಳ್ಳುವುದು, ನೋಟ್ಸ್‌ ಮಾಡಿಕೊಳ್ಳುವುದು. ಸಿಗ್ನಲ್‌ನಂತಹ ಇತರ ಮೆಸೇಜಿಂಗ್ ಆಪ್‌ಗಳು ಈ ಫೀಚರ್‌ನೊಂದಿಗೆ ಬರುತ್ತವೆ. ಇಲ್ಲಿ ನೀವು ಲಿಸ್ಟ್‌, ಲಿಂಕ್‌ಗಳನ್ನು ಉಳಿಸಲು ಇದು ಸಹಕಾರಿಯಾಗುತ್ತದೆ.

ವಾಟ್ಸ್‌ಆಪ್‌ನಲ್ಲಿ ನಿಮ್ಮೊಂದಿಗೆ ನೀವೇ ಚಾಟ್‌ ಮಾಡಿಕೊಳ್ಳಿ..! ಹೇಗೆ ಅಂತಿರಾ..?

ವಾಟ್ಸ್‌ಆಪ್‌ ಅನ್ನು ಟೆಕ್ಸ್ಟ್‌ ಮೆಸೇಜ್‌ಗಳು, ಫೋಟೋಗಳು, ವಿಡಿಯೋಗಳು, ಫೈಲ್‌ಗಳು, ಡಾಕ್ಯುಮೆಂಟ್‌ಗಳು, ಸ್ಟಿಕ್ಕರ್‌ಗಳು ಮತ್ತು GIFಗಳನ್ನು ಹಂಚಿಕೊಳ್ಳಲು ಬಳಸಲಾಗುತ್ತದೆ. ವಾಟ್ಸ್‌ಆಪ್‌ ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಚಾಟ್‌ಗಳನ್ನು ಅರ್ಕೈವ್‌, ಗ್ರೂಫ್‌ ಮ್ಯೂಟ್‌ ಹಾಗೂ ಪ್ರಮುಖ ಮೆಸೇಜ್‌ಗಳನ್ನು ಸ್ಟಾರ್‌ ಆಗಿ ಗುರುತಿಸುವ ವೈಶಿಷ್ಟ್ಯಗಳನ್ನು ನೀಡುತ್ತಾ ಬಂದಿದೆ. ಸ್ವಯಂ ನೋಟ್‌ಗಳನ್ನು ಬರೆಯಲು ಸಾಧ್ಯವಾಗುವುದರಿಂದ ಆಪ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬಳಕೆದಾರರಿಗೆ ಇನ್ನಷ್ಟು ಉಪಯುಕ್ತವಾಗಿಸುತ್ತದೆ.

ಈ ಫೀಚರ್‌ನ್ನು ಬಳಸುವುದು ತುಂಬಾ ಸುಲಭ. ಆದರೆ, ಇದು ಬಹಳಷ್ಟು ವಾಟ್ಸ್‌ಆಪ್‌ ಬಳಕೆದಾರರಿಗೆ ಹೆಚ್ಚು ತಿಳಿದಿಲ್ಲ. ಹಾಗಾದರೆ, ನಿಮ್ಮ ವಾಟ್ಸ್‌ಆಪ್‌ನಲ್ಲಿ ನಿಮ್ಮೊಂದಿಗೆ ಹೇಗೆ ಚಾಟ್ ಮಾಡುವುದು ಎಂಬುದರ ಮಾರ್ಗದರ್ಶಿ ತಿಳಿದುಕೊಳ್ಳಿ.

ವಾಟ್ಸ್‌ಆಪ್‌ನಲ್ಲಿ ನಿಮ್ಮೊಂದಿಗೆ ಹೇಗೆ ಚಾಟ್ ಮಾಡುವುದು..?

ವಾಟ್ಸ್‌ಆಪ್‌ನಲ್ಲಿ ನಿಮ್ಮೊಂದಿಗೆ ನೀವೇ ಚಾಟ್ ಮಾಡಿಕೊಳ್ಳುವುದು ಅನೇಕ ಕಾರಣಗಳಿಗೆ ಉಪಯುಕ್ತವಾಗಿದೆ. ಅಡುಗೆ ಮಾಡುವ ಲಿಂಕ್‌ಗಳು ಮತ್ತು ವಿಡಿಯೋಗಳನ್ನು ಉಳಿಸಲು ಇದು ನಿಮಗೆ ಅನುವು ಮಾಡಿಕೊಡುತ್ತದೆ. ನಂತರ ನೀವು ಏನೇನು ಮಾಡಲು ಬಯಸುತ್ತೀರಿ ಅದನ್ನೆಲ್ಲಾ ಇಲ್ಲಿ ನೀವು ಬರೆಯಬಹುದು. ವಾಟ್ಸ್‌ಆಪ್‌ನಲ್ಲಿ ನಿಮ್ಮೊಂದಿಗೆ ಚಾಟ್‌ ಮಾಡಲು ಈ ಹಂತಗಳನ್ನು ಅನುಸರಿಸಿ.

1.ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಪಿಸಿಯಲ್ಲಿ ಯಾವುದೇ ಬ್ರೌಸರ್ (ಗೂಗಲ್ ಕ್ರೋಮ್, ಫೈರ್‌ಫಾಕ್ಸ್) ಒಪನ್‌ ಮಾಡಿರಿ.

2. ಅಲ್ಲಿನ ಅಡ್ರೆಸ್‌ ಬಾರ್‌ನಲ್ಲಿ wa.me// ಎಂದು ಟೈಪ್ ಮಾಡಿ, ಅದರ ಬಳಿಕ ನಂತರ ನಿಮ್ಮ ದೇಶದ ಕೋಡ್‌ನೊಂದಿಗೆ ಮೊಬೈಲ್‌ ಸಂಖ್ಯೆ ನಮೂದಿಸಿ.

3.ಆಗ ನಿಮಗೆ ವಿಂಡೋ ಪ್ರಾಂಪ್ಟ್ ವಾಟ್ಸ್‌ಆಪ್ ತೆರೆಯಲು ನಿಮ್ಮನ್ನು ಕೇಳುತ್ತದೆ. ಆಗ ನಿಮ್ಮ ಫೋನ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರದ ಜೊತೆಗೆ ಫೋನ್ ಸಂಖ್ಯೆಯೊಂದಿಗೆ ವಾಟ್ಸ್‌ಆಪ್ ಒಪನ್‌ ಆಗುತ್ತದೆ. ನಂತರ, ನೀವು ನಿಮ್ಮೊಂದಿಗೆ ಚಾಟ್ ಮಾಡಲು ಪ್ರಾರಂಭಿಸಬಹುದು.

4.ನೀವು PC ಯಲ್ಲಿದ್ದರೆ, “ಚಾಟ್‌ಗೆ ಮುಂದುವರಿಸಿ” ಎಂದು ಬರೆಯುವ ಬಟನ್‌ನೊಂದಿಗೆ ಹೊಸ ವಿಂಡೋ ತೆರೆಯುತ್ತದೆ.

5.ಆ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ವಾಟ್ಸ್‌ಆಪ್ ವೆಬ್ ಅಥವಾ ವಾಟ್ಸ್‌ಆಪ್ ಡೆಸ್ಕ್‌ಟಾಪ್‌ ಆಪ್‌ ನಿಮ್ಮ ಸ್ವಂತ್‌ ಚಾಟ್‌ನೊಂದಿಗೆ ತೆರೆಯುತ್ತದೆ. ನಂತರ ನೀವು ನಿಮ್ಮೊಂದಿಗೆ ಚಾಟ್ ಮಾಡಲು ಪ್ರಾರಂಭಿಸಬಹುದು.

Most Read Articles
Best Mobiles in India

Read more about:
English summary
You Can Chat With Yourself On WhatsApp: Here’s How

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X