ಸ್ಮಾರ್ಟ್‌ಫೋನ್ ಸ್ಕ್ರೀನ್‌ಟಚ್ ವರ್ಕ್‌ ಮಾಡುತ್ತಿಲ್ಲವೇ?..ಹೀಗೆ ಮಾಡಿ!

|

ಸ್ಮಾರ್ಟ್‌ಫೋನ್ ಎನ್ನುವುದು ಡಿವೈಸ್‌ ಅಷ್ಟೆ ಅಲ್ಲದೇ, ಇಂದಿನ ಪ್ರತಿಯೊಬ್ಬರ ಜೊತೆಗಾರ ಎನಿಸಿಕೊಂಡಿದೆ. ಸ್ಮಾರ್ಟ್‌ಫೋನಿನಲ್ಲಿ ಸಾಕಷ್ಟು ಅಪ್‌ಡೇಟ್‌ಗಳಾಗಿದ್ದು, ಟಚ್‌ಸ್ಕ್ರೀನ್‌ನಲ್ಲಿಯೂ ಸಹ ಹಿಸತನಗಳು ಸೇರಿಕೊಂಡಿವೆ. ಪ್ರಮುಖ ಪಾತ್ರವಹಿಸುವ ಡಿಸ್‌ಪ್ಲೇ ಒಂದು ವೇಳೆ ಆಕಸ್ಮಿಕವಾಗಿ ಕೈ ಕೊಟ್ಟರೇ, ಸ್ಮಾರ್ಟ್‌ಫೋನ್ ಸ್ಥಿತಿಗತಿ ಹೇಗೆ ಅಂತಿರಾ?..ಹಾಗೆನಾದ್ರೂ ಫೋನ್ ಸ್ಕ್ರೀನ್ ವರ್ಕ್ ಆಗದೇ ಇದ್ರೂ ಸಹ ಫೋನ್ ಆಪರೇಟ್ ಮಾಡಬಹುದು.

ರ್ಟ್‌ಫೋನ್‌ಗಳಲ್ಲಿ

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಕ್ರೀನ್ ಅತೀ ಮುಖ್ಯವಾಗಿದ್ದು, ಪ್ರತಿ ಆದೇಶವು ಸ್ಕ್ರೀನ್ ಟಚ್ ಮಾಡುವ ಮೂಲಕ ನೀಡಲಾಗುತ್ತದೆ. ಆದ್ರೆ ಸರಿಯಾಗಿ ಕೆಲಸ ಮಾಡುವ ಫೋನಿನ ಸ್ಕ್ರೀನ್ ಒಮ್ಮೊಮ್ಮೆ ವರ್ಕ್ ಆಗುವುದೇ ಇಲ್ಲ. ಆಗ ಫೋನ್ ಡಿಸ್‌ಪ್ಲೇ ಸ್ಟ್ರಕ್ ಆಯ್ತು ಅಂತಾ ಚಿಂತಿಸಿಬೇಡಿ. ಸ್ಕ್ರೀನ್ ಟಚ್ ಇಲ್ಲದೇಯೂ ನಿಮ್ಮ ಸ್ಮಾರ್ಟ್‌ಫೋನ್ ಆಪರೇಟ್ ಮಾಡಬಹುದಾಗಿದೆ. ಹಾಗಾದರೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಸ್ಕ್ರೀನ್ ಕೈಕೊಟ್ಟಾಗ ಫೋನ್ ಆಪರೇಟ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಫೋನ್‌ ರೀಬೂಟ್ ಮಾಡಿ

ಫೋನ್‌ ರೀಬೂಟ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯ ಸ್ಕ್ರೀನ್ ವರ್ಕ್ ಮಾಡುತ್ತಿಲ್ಲವಾದಾಗ ಮೊದಲು ಫಸ್ಟ್‌ ಏಡ್‌ ತರಹ, ಫೋನ್‌ ರೋಸ್ಟಾರ್ಟ್‌ ಮತ್ತು ರೀಬೂಟ್ ಮಾಡಿ ನೋಡಿ. ಒಮ್ಮೊಮ್ಮೆ ಹ್ಯಾಂಗ್ ಆಗಿಯೂ ಸ್ಕ್ರೀನ್ ವರ್ಕ್ ಮಾಡುವುದಿಲ್ಲ. ಹೀಗಾಗಿ ಪವರ್‌ ಬಟನ್‌ ಮತ್ತು ವ್ಯಾಲ್ಯೂಮ್ ಬಟನ್ ಒತ್ತಿ ರೀಬೂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ. ರೀಬೂಟ್ ಮಾಡಿದಾಗ ಸ್ಕ್ರೀನ್ ಹ್ಯಾಂಗ್ ಆಗಿದ್ದರೇ ಸರಿಯಾವ ಚಾನ್ಸ್ ಇರುತ್ತೆ.

ಸ್ಕ್ರೀನ್‌ಗಾರ್ಡ್ ತೆಗೆಯಿರಿ

ಸ್ಕ್ರೀನ್‌ಗಾರ್ಡ್ ತೆಗೆಯಿರಿ

ಸ್ಮಾರ್ಟ್‌ಫೋನ್ ಸ್ಕ್ರೀನ್ ಹಾಳಾಗಬಾರದು ಅಂತಾ ಬಹುತೇಕರು ಸ್ಕ್ರೀನ್‌ಗಾರ್ಡ್‌ ಹಾಕಿಸಿರುತ್ತಾರೆ. ಕೆಲವೊಮ್ಮೆ ಈ ಸ್ಕ್ರೀನ್‌ಗಾರ್ಡ್‌ ಹಾಳಾಗಿರುತ್ತವೆ ಅವಾಗ ಫೋನ್ ಸ್ಕ್ರೀನ್ ಸರಿಯಾಗಿ ವರ್ಕ್ ಮಾಡುವುದಿಲ್ಲ. ಅದಕ್ಕಾಗಿ ಸ್ಕ್ರೀನ್‌ಗಾರ್ಡ್‌ ತೆಗೆದು ಸ್ಕ್ರೀನ್ ಟಚ್ ಸರಿಯಾಗಿ ವರ್ಕ್ ಮಾಡುತ್ತಿದೆಯಾ ಚೆಕ್ ಮಾಡಿಕೊಳ್ಳಿರಿ. ಸ್ಕ್ರೀನ್‌ಗಾರ್ಡ್‌ ತೆಗೆದ ಮೇಲೆ ಸ್ಕ್ರೀನ್ ಸರಿಯಾಗಿ ವರ್ಕ್ ಸಾಧ್ಯತೆ ಹೆಚ್ಚಿವೆ.

ಓದಿರಿ : ಟಿಕ್‌ಟಾಕ್‌ಗೆ ನೀವು ಹೊಸಬರೇ!..ಹಾಗಿದ್ರೆ ಈ ಟಿಪ್ಸ್‌ ಗಮನಿಸಿ!

ವಾಯಿಸ್‌ ಅಸಿಸ್ಟಂಟ್ ಬಳಸಿ

ವಾಯಿಸ್‌ ಅಸಿಸ್ಟಂಟ್ ಬಳಸಿ

ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಟಚ್‌ ವರ್ಕ್ ಮಾಡದೇ ಇದ್ದಾಗ ಇನ್ನೊಂದು ದಾರಿಯೆಂದರೇ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಬಳಸಬಹುದು. ಆಂಡ್ರಾಯ್ಡ್‌ ಓಎಸ್‌ ಫೋನ್‌ಗಳಲ್ಲಿ ಗೂಗಲ್ ಅಸಿಸ್ಟಂಟ್ ವಾಯಿಸ್‌ ಸೌಲಭ್ಯವು ಬೆಂಬಲ ನೀಡಲಿದೆ. ಸರಿಯಾಗಿ ವಾಯಿಸ್‌ ಕಮಾಂಡ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಆಪರೇಟ್ ಮಾಡಬಹುದಾಗಿದೆ. screen down, go back ಪದಗಳನ್ನು ಬಳಸಬಹುದು.

ಕೀಬೋರ್ಡ್‌ ಮತ್ತು ಮೌಸ್ ಬಳಸಬಹುದು

ಕೀಬೋರ್ಡ್‌ ಮತ್ತು ಮೌಸ್ ಬಳಸಬಹುದು

ಸ್ಮಾರ್ಟ್‌ಫೋನ್‌ ಟಚ್‌ ಸ್ಕ್ರೀನ್ ಕೈ ಕೊಟ್ಟಾಗ, ನೀವು ಕೀಬೋರ್ಡ್‌ ಮತ್ತು ಮೌಸ್‌ ಬಳಸಿಯೂ ಸಹ ಫೋನ್ ಆಪರೇಟಿಂಗ್ ಮಾಡಬಹುದಾಗಿದೆ. ಆದರೆ ಎಲ್ಲ ಫೋನ್‌ಗಳು ಕೀಬೋರ್ಡ್‌ ಮತ್ತು ಮೌಸ್‌ ಆಯ್ಕೆಯನ್ನು ಹೊಂದಿರುವುದಿಲ್ಲ. ಹಾಗೇನಾದರೂ ನಿಮ್ಮ ಸ್ಮಾರ್ಟ್‌ಫೋನ್ ಕೀಬೋರ್ಡ್‌ ಮತ್ತು ಮೌಸ್‌ ಆಯ್ಕೆ ಬೆಂಬಲ ಪಡೆದಿದ್ದರೇ, ನೀವು ಪ್ರಯತ್ನಿಸಬಹುದು. ಆದರೆ ಅಗತ್ಯ ಕನೆಕ್ಟರ್‌ಗಳು ಸಿಗುವುದು ವಿರಳ.

ಸರ್ವೀಸ್‌ ಸೆಂಟರ್

ಸರ್ವೀಸ್‌ ಸೆಂಟರ್

ಸ್ಮಾರ್ಟ್‌ಫೋನ್ ಸ್ಕ್ರೀನ್‌ ಟಚ್‌ ಸರಿಮಾಡಲು ಕೇಲವು ಬೇಸಿಕ್ ಪ್ರಯತ್ನಗಳನ್ನು ಮಾಡಿದ ಮೇಲೂ ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ವರ್ಕ್ ಮಾಡದಿದ್ದರೇ ನೀವು ಸರ್ವೀಸ್‌ ಸೆಂಟರ್‌ಗೆ ಭೇಟಿ ನೀಡುವುದು ಉತ್ತಮ. ಚಿಕ್ಕ ಪುಟ್ಟ್ ಸಮಸ್ಯೆಗಳಾಗಿದ್ದರೇ ಈ ಹಂತಗಳಲ್ಲಿಯೇ ಫೋನ್ ಸ್ಕ್ರೀನ್ ಸರಿಯಾಗಿ ಬಿಡುತ್ತದೆ. ಸರಿ ಆಗಿಲ್ಲವೆಂದರೇ ಸರ್ವೀಸ್‌ ಮಾಡಿಸುವುದು ಯೋಗ್ಯ.

ಓದಿರಿ : ಬೆಲೆ ಇಳಿಕೆ ಕಂಡ 'ನೋಕಿಯಾ 8.1' ಸ್ಮಾರ್ಟ್‌ಫೋನ್!

Most Read Articles
Best Mobiles in India

English summary
These few fixes to try if your Android phone’s touchscreen is not working. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X