ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರಿಗೆ ಇಂಗ್ಲೀಷ್ ಬೇಕೆ..? ಗೂಗಲ್ ಹೇಳಿದ್ದೇನು..?

Written By:

ಇನ್ನು ಮುಂದೆ ಭಾರತದಲ್ಲಿ ಲಭ್ಯವಿರುವ ವೆಬ್‌ಸೈಟ್‌ಗಳು, ಆಪ್‌ಗಳು ಹಾಗೂ ಮೊಬೈಲ್‌ಗಳು ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಸಪೋರ್ಟ್ ಮಾಡುವುದಲ್ಲದೇ ಅದರಲ್ಲೇ ಕಾರ್ಯನಿರ್ವಹಿಸಲಿವೆ. ಇದಕ್ಕೆ ಕಾರಣ ಎಂದರೆ ಗೂಗಲ್. ಇನ್ನು ಮುಂದೆ ಗೂಗಲ್ ಇಂಗ್ಲಿಷ್ ಪ್ರಾಮುಖ್ಯತೆಯನ್ನು ಬಿಟ್ಟು ಭಾರತೀಯ ಭಾಷೆಗಳನ್ನು ಪ್ರಮೋಟ್ ಮಾಡಲಿದೆ ಅದಕ್ಕೆ ಕಾರಣ ಈ ವರದಿ.

ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರಿಗೆ ಇಂಗ್ಲೀಷ್ ಬೇಕೆ..?

ಓದಿರಿ: ಜಿಯೋ ಗ್ರಾಂಡ್ ಆಫರ್: 12ರಿಂದ 14 ತಿಂಗಳು ಸಂಪೂರ್ಣ ಉಚಿತ ಸೇವೆ..??

ಗೂಗಲ್ ಕೆಲವು ದಿನಗಳಿಂದ ಭಾರತದಲ್ಲಿ ನಡೆದ ಒಂದು ಸರ್ವೆಯ ಪ್ರಕಾರ, ಅಂತರ್ಜಾಲ ಬಳಕೆದಾರರಲ್ಲಿ ಶೇ.90 ರಷ್ಟು ಭಾರತೀಯ ಪ್ರಾದೇಶಿಕ ಭಾಷೆಯವರಾಗಿದ್ದು, ಅವರು ಇಂಗ್ಲಿಷ್ ಬಿಟ್ಟು ತಮ್ಮ ಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಅಲ್ಲದೇ ಅಂತರ್ಜಾಲ ಬಳಕೆದಾರರಲ್ಲಿ ಆಂಗ್ಲ ಭಾಷೆ ಬಳಕೆದಾರರ ಸಂಖ್ಯೆಯಲ್ಲಿ ಯಾವುದೇ ಬದಾಲವಣೆ ಕಂಡಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್ನೆಟ್

ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್ನೆಟ್

ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್ನೆಟ್ ಬಳಕೆ ಮಾಡುವವರ ಬೆಳವಣಿಗೆಯ ದರ ಶೇ.90ರಷ್ಟಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ತನ್ನ ಮಾರುಕಟ್ಟೆ ಮತ್ತು ಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ಗೂಗಲ್ ತನ್ನ ಸರ್ಚ್ ಇಂಜಿನ್ ಮತ್ತು ಆಂಡ್ರಾಯ್ಡ್ ನಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ

ಇಂಗ್ಲಿಷ್ ಬಳಕೆಯೂ ಕಡಿಮೆಯಾಗಲಿದೆ

ಇಂಗ್ಲಿಷ್ ಬಳಕೆಯೂ ಕಡಿಮೆಯಾಗಲಿದೆ

ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಇಂಗ್ಲಿಷ್ ಬಳಕೆಯೂ ಕಡಿಮೆಯಾಗಲಿದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಕಾರಣ ಗೂಗಲ್, ಫೇಸ್‌ಬುಕ್‌ನಂತಹ ದೈತ್ಯ ಕಂಪನಿಗಳು ಭಾರತೀಯಾ ಭಾಷೆಗಳಲ್ಲಿ ಸೇವೆಯನ್ನು ನೀಡಲು ಹೆಚ್ಚು ಉತ್ಸುಕವಾಗಿದ್ದು, ಅಲ್ಲದೇ ಭಾರತೀಯ ಪ್ರಾದೇಶಿಕ ಭಾಷೆ ಬಳಕೆದಾರು ತಮ್ಮ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇದಕ್ಕೆ ಕಾರಣ ಎಂದರೆ ತಪ್ಪಾಗುವುದಿಲ್ಲ.

ಪ್ರಾದೇಶಿಕ ಭಾಷೆ ಬಳಕೆಯೇ ಸೂಕ್ತ

ಪ್ರಾದೇಶಿಕ ಭಾಷೆ ಬಳಕೆಯೇ ಸೂಕ್ತ

ಸದ್ಯ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರಲ್ಲಿ 10ರಲ್ಲಿ 9 ಮಂದಿ ಭಾರತೀಯ ಪ್ರಾದೇಶಿಕ ಭಾಷೆಯ ಬಳಕೆದಾರರಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಂಗ್ಲಿಷ್‌ಗಿಂತ ಹೆಚ್ಚಾಗಿ ಭಾರತೀಯ ಪ್ರಾದೇಶಿಕ ಭಾಷೆ ಬಳಕೆಯೇ ಸೂಕ್ತ ಎಂಬುದು ದೈತ್ಯ ಕಂಪನಿಗಳ ವಾದವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
There is a secret reason why Google is rigorously pushing for Non-English apps, tools and features on their platform – both search and Android. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot