Just In
- 38 min ago
ಗ್ಯಾಲಕ್ಸಿ ಎ51, ಗ್ಯಾಲಕ್ಸಿ ಎ71 ಸ್ಮಾರ್ಟ್ಫೋನ್ ಲಾಂಚ್ ಮಾಡಿದ ಸ್ಯಾಮ್ಸಂಗ್!
- 1 hr ago
BSNLನ ಈ ಪ್ಲ್ಯಾನಿನಲ್ಲಿ ಸಿಗುತ್ತೆ 2GB ಡಾಟಾ ಮತ್ತು 54 ದಿನ ವ್ಯಾಲಿಡಿಟಿ!
- 3 hrs ago
ಡಿಸ್ಕೌಂಟ್ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಖರೀದಿಸಲು ಒಳ್ಳೆಯ ಚಾನ್ಸ್!
- 5 hrs ago
ಭಾರತದ ಜನರು ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಾಡಿದ 10 ಸ್ಮಾರ್ಟ್ ಫೋನ್ ಗಳು
Don't Miss
- News
ಸಾಯೋವರೆಗೂ ನಾನೂ ಸಿದ್ದರಾಮಯ್ಯ ಸ್ನೇಹಿತರು: ಈಶ್ವರಪ್ಪ
- Automobiles
ಜೀಪ್ ಕಾಂಪಾಸ್ ಎಸ್ಯುವಿ ಮೇಲೆ ರೂ.2 ಲಕ್ಷದವರೆಗೆ ಭರ್ಜರಿ ಆಫರ್
- Travel
ವನ್ಯಜೀವಿ ಫೋಟೋಗ್ರಫಿ ಗೆ ಮಹಾರಾಷ್ಟ್ರದಲ್ಲಿರುವ ಈ ಪಕ್ಷಿಧಾಮಗಳೇ ಬೆಸ್ಟ್
- Lifestyle
ಮಾನವ ದೇಹದ ಬಗ್ಗೆ ಇನ್ನೂ ರಹಸ್ಯವಾಗಿಯೇ ಉಳಿದಿರುವ ಒಂಭತ್ತು ಅಚ್ಚರಿಯ ಸಂಗತಿಗಳು
- Movies
'ಸೂಜಿದಾರ' ಬಳಿಕ ನಟಿ ಹರಿಪ್ರಿಯಾ ಮತ್ತೊಂದು ಕಿರಿಕ್
- Finance
ಜಿಎಸ್ಟಿ ಪರಿಹಾರ ನೀಡುತ್ತೇವೆ: ನಿರ್ಮಲಾ ಸೀತಾರಾಮನ್
- Sports
ಪಂದ್ಯದ ಮಧ್ಯೆ ಮಗಳ ಗಮನಸೆಳೆಯಲು ಯತ್ನಿಸಿದ ರೋಹಿತ್; ವೀಡಿಯೋ ವೈರಲ್
- Education
ಯುಪಿಎಸ್ಸಿ ಎನ್ಡಿಎ ಮತ್ತು ಎನ್ಎ II ಪರೀಕ್ಷಾ ಫಲಿತಾಂಶ ಪ್ರಕಟ
ಪ್ರಖ್ಯಾತ ಇ-ಕಾಮರ್ಸ್ ಅಲಿಬಾಬ ಸೃಷ್ಟಿಕರ್ತ "ಜಾಕ್ ಮಾ" ಜೀವನ ಮೊದಲು ಹೇಗಿತ್ತು ಗೊತ್ತಾ?..ರೋಚಕ ಕಥೆ.!!
90ನೇ ದಶಕದಲ್ಲಿ ಚೀನಾ ದೇಶಕ್ಕೆ ಅಂತರಾಷ್ಟ್ರೀಯ ಸಂಸ್ಥೆ ಕೆಎಫ್ಸಿ ಕಾಲಿಟ್ಟು ಉದ್ಯೋಗಿಗಳಿಗಾಗಿ ಕೆಲಸಕ್ಕೆ ಆಹ್ವಾನವನ್ನು ನೀಡಿತ್ತು. ಉದ್ಯೋಗಕ್ಕಾಗಿ ಒಟ್ಟು 24 ಜನರು ಅರ್ಜಿ ಸಲ್ಲಿಸಿದ್ದರು. ಆ 24 ಜನರಲ್ಲಿ 23 ಜನರಿಗೆ ಕೆಲಸ ಸಿಕ್ಕಿತ್ತು. ಆದರೆ, ಅಂದು ಉದ್ಯೋಗ ಪಡೆಯಲು ಸಾಧ್ಯವಾಗದ ಒರ್ವ ವ್ಯಕ್ತಿ ಇಂದು ಕೆಎಫ್ಸಿ ಕಂಪೆನಿಗಿಂತಲೂ ಬೆಳೆದುನಿಂತಿದ್ದಾನೆ!!
ಹೌದು, ಇದು ಒಂದು ಸಿನಿಮಾ ಕಥೆ ಎಂದು ನಿಮಗನಿಸಬಹುದು. ಆದರೆ, ಕೆಎಫ್ಸಿಯಲ್ಲಿ ಕೆಲಸ ಗಿಟ್ಟಿಸಲು ಸಾಧ್ಯವಾಗದ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಹುಟ್ಟಿದ ಬಡಕುಟುಂಬದಲ್ಲಿ ಹುಟ್ಟಿದ ಮಾ ಯುನ್ ( ಜಾಕ್ ಮಾ) ಇಂದು ಪ್ರಪಂಚದ ನಂಬರ್ 20 ಶ್ರೀಮಂತರಲ್ಲಿ ಒಬ್ಬ ಎಂದರೆ ನೀವು ನಂಬಲೇಬೇಕು.!!
ತನ್ನ ಇಂಗ್ಲೀಷ್ ಭಾಷಾಜ್ಞಾನ ಮತ್ತು ಉದ್ದಿಮೆಯ ಗುಣಗಳಿಂದಲೇ ಚೀನಾದ ನಂಬರ್ ಒನ್ ಶ್ರೀಮಂತನಾಗಿ ಬೆಳೆದುನಿಂತ.! ವಿಶ್ವದ ಟಾಪ್ ಇ-ಕಾಮರ್ಸ್ ಕಂಪೆನಿಯೊಂದನ್ನು ಕಟ್ಟಿ ಬೆಳೆಸಿದ ಜಾಕ್ ಮಾ ಬಗ್ಗೆ ಹೇಳುತ್ತಾ ಹೋದರೆ ಅವನ ಜೀವನವೇ ಒಂದು ರೋಚಕ ಕಥೆ.! ಆತ್ಮವಿಶ್ವಸವೊಂದಿದ್ದರೆ ಒಬ್ಬ ವ್ಯಕ್ತಿ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಇವನೇ ಉದಾಹರಣೆ.!!

ಮಾ ಯುನ್ ಬದಲಾಗಿ ಜಾಕ್ ಮಾ!!
ಅವನ ಮೊದಲ ಹೆಸರು ಮಾ ಯುನ್ ಎಂದು. ಆದರೆ, ಅವನು ಇಂಗ್ಲೀಷ್ ಕಲಿಯಲು ಪ್ರವಾಸಿಗರ ಬಳಿ ತೆರಳುತ್ತಿದ್ದಾಗ ಹಲವರು ಮಾ ಯುನ್ ಎಂಬ ಹೆಸರನ್ನು ಉಚ್ಚರಿಸಲು ಕಷ್ಟವಾಗಿ ಜಾಕ್ ಎಂದು ಕರೆಯಲು ಪ್ರಾರಂಭಿಸಿದರು. ನಂತರ ಜಾಕ್ ಮಾ ಎಂಬ ಹೆಸರೇ ಅವನಿಗೆ ಫೈನಲ್ ಆಯಿತು!

ಜಾಕ್ ಮಾ ಬಾಲ್ಯ ಹೀಗಿತ್ತು.!!
ಬಡಕುಟುಂಬದಲ್ಲಿ ಹುಟ್ಟಿ ಹನ್ನೆರಡರ ಪೋರ ಮಾ ಯುನ್ಗೆ ಇಂಗ್ಲಿಷ್ ಕಲಿಯುವ ಆಸೆ ಹೆಚ್ಚಿತ್ತು. ಹಾಗಾಗಿ, ತನ್ನೂರಿನ ಹತ್ತಿರದ ನಗರವೊಂದಕ್ಕೆ ಆತ ನಲವತ್ತು ನಿಮಿಷಗಳ ಕಾಲ ಸೈಕಲ್ ತುಳಿದುಕೊಂಡು ಬರುತ್ತಿದ್ದ. ಅಲ್ಲಿಗೆ ಬರುತ್ತಿದ್ದ ವಿದೇಶಿ ಯಾತ್ರಿಗಳಿಗೆ ಹಣಪಡೆಯದೇ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ. ಇದೇ ಅವನನ್ನು ಇಷ್ಟು ಎತ್ತರಕ್ಕೆ ತಂದುನಿಲ್ಲಿಸಿತು.!!

ಇಂಗ್ಲೀಷ್ ಪದವಿ ಗಳಿಸಿದ.!!
ಜಾಕ್ ಮಾಗೆ ಇಂಗ್ಲೀಷ್ ಕಲಿಯುವ ಕನಸಿತ್ತು. ಅದರಂತೆಯೇ ಜಾಕ್ ಮಾ ಇಂಗ್ಲಿಷ್ನಲ್ಲಿ ಪದವಿ ಪಡೆದ. ಇಂಗ್ಲಿಷ್ನಲ್ಲಿ ಪದವಿ ಪಡೆದ ನಂತರ ಕಾಲೇಜೊಂದರಲ್ಲಿ ಕೆಲಸ ಸಿಕ್ಕಿತು. ರಾತ್ರಿ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದ ಜಾಕ್ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುಕೊಡುವ ಕೆಲಸ ಮಾಡುತ್ತಿದ್ದ.!!

ರೋಡಿನಲ್ಲಿ ಹೂ ಮಾರುತ್ತಿದ್ದ!!
ಜಾಕ್ ಮಾಗೆ ಇಂಗ್ಲೀಷ್ ಪಾಠ ಹೇಳಿಕೊಡುವುದು ಶಾಶ್ವತವಾದ ಕೆಲಸವೇನು ಆಗಿರಲಿಲ್ಲ. ಮತ್ತು ಆದಾಯವಿಲ್ಲದ ಬಳಲಿದ್ದ. ನಂತರ ಜೀವನ ನಿರ್ವಹಣೆಗಾಗಿ ಜಾಕ್ ರಸ್ತೆಯ ಮೇಲೆ ಪುಸ್ತಕ, ಹೂವು, ಬಟ್ಟೆ ಎಲ್ಲವನ್ನೂ ಮಾರಾಟ ಮಾಡಿದ್ದನೆಂದರೆ ಅಂದು ಜಾಕ್ ಮಾ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಬಹುದು.!!

ಅಮೆರಿಕಾಕ್ಕೆ ತೆರಳುವ ಆಫರ್!!
ಮೊದಲೇ ಹೇಳಿದಂತೆ ಜಾಕ್ಮಾನ ಇಂಗ್ಲೀಷ್ ಕಲಿಕೆಯೇ ಅವನನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿತು ಎನ್ನಬಹುದು. 1995ರಲ್ಲಿ ಅಮೆರಿಕದ ಹೂಡಿಕೆದಾರನೊಬ್ಬನಿಗೆ ಭಾಷಾಂತರಕಾರನಾಗಿ ಜಾಕ್ ಅಮೆರಿಕಕ್ಕೆ ಕಳುಹಿಸಲ್ಪಟ್ಟ. ಜಾಕ್ ಇಂಗ್ಲಿಷ್ನಲ್ಲಿ ಪರಿಣಿತನೇ ಹೊರತು ಕಂಪ್ಯೂಟರ್ನಲ್ಲ. ಹಾಗಾಗಿ, ಅವನು ಅಲ್ಲಿ ಕಂಪ್ಯೂಟರ್ ಭವಿಷ್ಯವನ್ನು ತಿಳಿದುಕೊಂಡನು.!!

ಇಂಟರ್ನೆಟ್ ತಲೆಕೆಡಿಸಿತು!!
ಇಂಟರ್ನೆಟ್ನಲ್ಲಿ ಶಬ್ದವೊಂದನ್ನು ಹುಡುಕುವಾಗ ಚೀನಾಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದಿರುವುದು ಆತನ ಗಮನಕ್ಕೆ ಬಂತು. ಜಾಕ್ಗೆ ಆ ಕ್ಷಣವೇ ತನ್ನ ಮುಂದಿನ ಹಾದಿ ಗೋಚರಿಸಿತು!ಅಂತರ್ಜಾಲದ ಅಪಾರ ಸಾಮರ್ಥ್ಯದ ಬಗ್ಗೆ ನಂಬಿಕೆ ಮೂಡಿದ್ದರಿಂದ ಇಂಟರ್ನೆಟ್ ಅವನ ತಲೆಕೆಡಿಸಿತು.!!

ಇ-ಕಾಮರ್ಸ್ ಸಂಸ್ಥೆ ಶುರು!!
‘ನಾವೊಂದು ಐತಿಹಾಸಿಕ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಲಿದ್ದೇವೆ. ಆ ಇ-ಕಾಮರ್ಸ್ ಸಂಸ್ಥೆ ಕನಿಷ್ಠ 100 ವರ್ಷಗಳ ಕಾಲ ಅದು ಬಾಳಬೇಕು. ವಿಶ್ವದ ಅಂತರ್ಜಾಲ ಸೈಟ್ಗಳಲ್ಲಿ ಮೊದಲ ಹತ್ತರೊಳಗಿರಬೇಕು ಎಂದು ಹೇಳಿದ. ಅದೇ ರೀತಿ ವಿಶ್ವದ ಟಾಪ್ 10 ಅಂತರ್ಜಾಲ ಸೈಟ್ಗಳಲ್ಲಿ ಒಂದಾದ ಅಲಿಬಾಬ.ಕಾಮ್ ಅನ್ನು ಜಾಕ್ ಮಾ ರೂಪಿಸಿದ.!!


ಚೀನಾದಲ್ಲಿ ಅಲಿಬಾಬ!!
ಈವರೆಗೂ ಹಲವರಿಗೆ ಪ್ರರ್ಶನೆಯಾಗಿಯೇ ಉಳಿದಿರುವುದು ಚೀನಾದಲ್ಲಿ ಅಲಿಬಾಬ ಎಂಬ ಹೆಸರು ಬಂದಿದ್ದೇಗೆ ಎಂಬುದು. ಆದರೆ, ನಿಮಗೆ ಗೊತ್ತಾ? ಜಾಕ್ ಈ ಹೆಸರನ್ನು ಕಂಪನಿಗೆ ಇಟ್ಟ ಉದ್ದೇಶವೆಂದರೆ ಅರೇಬಿಯನ್ ನೈಟ್ಸ್ನಲ್ಲಿ ಬರುವ ಅಲಿಬಾಬನ ಹೆಸರು ಜಗತ್ತಿನ ಜನರೆಲ್ಲರಿಗೂ ತೀರಾ ಪರಿಚಿತ ಎನ್ನುವುದು! ವಿವಿಧ ದೇಶಗಳ 30 ಜನರನ್ನು ನಿಮಗೆ ಅಲಿಬಾಬಾ ಗೊತ್ತೇ ಎಂದು ಕೇಳಿದಾಗ ಎಲ್ಲರೂ ಗೊತ್ತಿದೆ ಎಂದೇ ಹೇಳಿದ್ದರಂತೆ.!!

ಅಲಿಬಾಬ.ಕಾಮ್!
18 ಜನರ ಟೀಮ್ ತಮ್ಮ ಉಳಿತಾಯದ 60,000 ಡಾಲರ್ಗಳನ್ನು ಕೂಡಿಸಿದ ನಂತರ ಜಾಕ್ ಮಾ ನೇತೃತ್ವದಲ್ಲಿ 1999ರಲ್ಲಿ ಅಲಿಬಾಬ.ಕಾಮ್ ಶುರುವಾಯಿತು. ಅಲಿಬಾಬಾ.ಕಾಮ್ನಲ್ಲಿ ಮಾರಾಟಗಾರನೊಬ್ಬ ಆನ್ಲೈನ್ ಮೂಲಕ ಎಕೆ 47 ಅನ್ನು ಮಾರಾಟ ಮಾಡಲು ಹೊರಟಿದ್ದು ನೆಗೆಟಿವ್ ಪ್ರಚಾರವಾದರೂ ಕಂಪೆನಿ ಹೆಸರು ನಿಧಾನಕ್ಕೆ ಬೆಳೆಯುತ್ತಾ ಹೋಯಿತು.!!

ಹಿಂದಿರುಗಿ ನೋಡಲೇ ಇಲ್ಲ!!
2000ದ ಹೊತ್ತಿಗೆ ಅಲಿಬಾಬಾದಲ್ಲಿ 25 ಮಿಲಿಯನ್ಗಿಂತ ಹೆಚ್ಚು ಹೂಡಿಕೆಯಾಗಿತ್ತು. ಅಲ್ಲಿಂದ ಮುಂದೆ ಜಾಕ್ ಮತ್ತು ಸ್ನೇಹಿತರು ಹಿಂದಿರುಗಿ ನೋಡಲೇ ಇಲ್ಲ. ಇಂದು ಅಲಿಬಾಬಾ, ವಾಲ್ವಾರ್ಟ್ ಅನ್ನೂ ಹಿಂದಿಕ್ಕಿ 200ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುವ ಜಗತ್ತಿನ ಅತೀ ದೊಡ್ಡ ರೀಟೇಲರ್ ಕಂಪನಿಯಾಗಿದೆ 2017ರಲ್ಲಿ ಅಲಿಬಾಬಾದ ಮಾರುಕಟ್ಟೆ ಮೌಲ್ಯ 360 ಬಿಲಿಯನ್ ಅಮೆರಿಕನ್ ಡಾಲರ್ಗಳು ಎಂದರೆ ನೀವು ನಂಬಲೇಬೇಕು!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790