ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

By Ashwath
|

ಆಪಲ್‌ ಕಂಪೆನಿ ತನ್ನ ಭವಿಷ್ಯದ ಗೆಶ್ಚರ್‌ ಟಿವಿಗಾಗಿ 3ಡಿ ಗೆಶ್ಚರ್ ಕಂಪೆನಿ ಪ್ರೈಮ್‌ಸೆನ್ಸ್‌ನ್ನು 350 ದಶಲಕ್ಷ ಡಾಲರ್‌ ನೀಡಿ ಖರೀದಿಸಿದರೆ,ಇತ್ತ ಗೂಗಲ್‌ ತನ್ನ ಭವಿಷ್ಯದ ಉದ್ಯಮಕ್ಕಾಗಿ ರೊಬೊಟ್‌ ತಯಾರಿಸುವ ಕಂಪೆನಿಯನ್ನು ಖರೀದಿಸಲು ಮುಂದಾಗಿದೆ.

ಅಮೆರಿಕದ ಪ್ರಖ್ಯಾತ ರೊಬೊಟ್‌‌ ತಯಾರಕ ಕಂಪೆನಿ ಬೋಸ್ಟನ್‌ ಡೈನಾಮಿಕ್ಸ್‌ ಖರೀದಿಸಲು ಗೂಗಲ್‌ ಆಸಕ್ತಿ ತೋರಿಸಿದ್ದು ಟೆಕ್‌ ಕಂಪೆನಿಗಳ ಕಣ್ಣು ಈಗ ಗೂಗಲ್‌ ಮೇಲೆ ಬಿದ್ದಿದೆ.ಹೀಗಾಗಿ ಇಲ್ಲಿ ಗೂಗಲ್‌ ಈ ಕಂಪೆನಿಯನ್ನು ಖರೀದಿಸಿದ ಉದ್ದೇಶವೇನು? ಈ ಕಂಪೆನಿ ಈ ಹಿಂದೆ ಅಭಿವೃದ್ಧಿ ಪಡಿಸಿದ ರೊಬೊಟ್‌ಗಳ ವಿವರ. ಅದು ಹೇಗೆ ಕೆಲಸ ಮಾಡುತ್ತದೆ ಎಂದು ತೋರಿಸುವ ವಿಡಿಯೋಇತ್ಯಾದಿ ಮಾಹಿತಿಗಳು ಇಲ್ಲಿವೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ರಿಮೋಟ್‌ ಗನ್‌- ದೂರದಿಂದಲೇ ಶತ್ರುಗಳನ್ನು ಹೊಡೆಯುವ ಹೊಸ ಗನ್‌!

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು! ಎಂದು ಗೂಗಲ್‌ನ್ನು ಕೇಳಿ

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಆನ್‌ಲೈನ್‌ ವಹಿವಾಟು ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಗೂಗಲ್‌ ಎಲ್ಲಾ ದೇಶಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಉದ್ಯಮ ವಹಿವಾಟು ಆರಂಭಿಸುವ ಯೋಜನೆ ರೂಪಿಸಿದೆ. ಆರಂಭಿಕ ಹಂತವಾಗಿ ಅಮೆರಿಕದ ಸ್ಯಾನ್‌‌ಫ್ರಾನ್ಸಿಸ್ಕೋದಲ್ಲಿ ಈ ಸೇವೆ ಈಗಾಗಲೇ ಆರಂಭಗೊಂಡಿದ್ದು ಮನೆ ಮನೆಗೆ ಉತ್ಪನ್ನಗಳನ್ನು ವಿತರಿಸುತ್ತಿದೆ.

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಎಲ್ಲಾ ದೇಶಗಳಲ್ಲಿ ಗೂಗಲ್‌‌ ಮನೆ ಮನೆಗೆ ವಸ್ತುಗಳನ್ನು ತಲುಪಿಸುವ ಶಾಪಿಂಗ್‌ ಸೇವೆಯನ್ನು ಆರಂಭಿಸಿಲ್ಲ.ಭಾರತದಲ್ಲಿ ಗೂಗಲ್‌ ಕೆಲವು ಕೊರಿಯರ್‌ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು,ಈ ಕಂಪೆನಿಗಳ ಮೂಲಕ ಗೂಗಲ್‌ ಪ್ಲೇ ಸ್ಟೋರ್‌‌ನಲ್ಲಿ ಖರೀದಿಸಿದ ಉತ್ಪನ್ನಗಳನ್ನು ಗ್ರಾಹಕರಿಗೆ ವಿತರಿಸುತ್ತಿದೆ.

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್ ಇದುವರೆಗೂ ರೊಬೊಟ್‌‌ ಎಲ್ಲಿ ಬಳಸಲಾಗುತ್ತದೆ ಎನ್ನುವುದರ ಬಗ್ಗೆ ಎಲ್ಲಿಯೂ ಯಾರಿಗೂ ತಿಳಿಸಿಲ್ಲ. ಆದರೆ ಕೆಲವೊಂದು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ
ರಿಟೇಲ್‌ ಕ್ಷೇತ್ರದ ಪ್ಯಾಕೇಜಿಂಗ್‌ ವಿಭಾಗಕ್ಕೆ ರೊಬೊಟ್‌‌ ಬಳಸಲು ಗೂಗಲ್‌ ಮುಂದಾಗಲಿದೆಯಂತೆ.

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ರೊಬೊಟ್‌ಗಳ ದೇಹದಲ್ಲಿರುವ ಚಿಪ್‌ನಲ್ಲಿ ಡೇಟಾ ಮಾಹಿತಿಯನ್ನು ಅಳವಡಿಸಿ,ಅದನ್ನು ರಿಮೋಟ್‌ ಮೂಲಕ ನಿಯಂತ್ರಿಸುವ ಯೋಜನೆಯನ್ನು ಗೂಗಲ್‌ ಹಾಕಿಕೊಂಡಿದೆ.ಗೂಗಲ್‌ ಕಳೆದ ಆರು ತಿಂಗಳಿನಲ್ಲಿ ಎಂಟು ರೊಬೊಟ್‌‌ ಕಂಪೆನಿಗಳನ್ನು ಖರೀದಿಸಿದೆ.

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಈಗಾಗಲೇ ಗೂಗಲ್‌ ಚಾಲಕನಿಲ್ಲದ ಕಾರು, ಗೂಗಲ್‌ ಗ್ಲಾಸ್‌‌‌ನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.ಈ ಯಶಸ್ಸಿನ ಹಿನ್ನೆಲೆಯಲ್ಲಿ ಗೂಗಲ್ ಕಣ್ಣು,ಕಿವಿ, ಮೂಗು, ಬಾಯಿ,ಕೈ-ಕಾಲು ಇರುವ ಹ್ಯುಮನಾಯ್ಡ್ ರೊಬೊಟ್‌‌ಗಳನ್ನು ತನ್ನ ಉದ್ಯಮಕ್ಕೆ ಬಳಸಲು ಮುಂದಾಗುತ್ತಿದೆ.

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಬೋಸ್ಟನ್‌ ಡೈನಾಮಿಕ್ಸ್‌ ಕಂಪೆನಿ ಎಂಜಿನಿಯರಿಂಗ್‌ ಮತ್ತು ರೊಬೊಟ್‌ಗಳನ್ನು ತಯಾರಿಸುವ ಕಂಪೆನಿಯಾಗಿದ್ದು ಅಮೆರಿಕದ ಸೇನೆಗೆ ರೊಬೊಟ್‌ಗಳನ್ನು ಅಭಿವೃದ್ಧಿ ಪಡಿಸಿದೆ. ವಿಶ್ವದಲ್ಲೇ ಅತ್ಯಂತ ವೇಗದ ಓಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಉಸೇನ್‌ ಬೋಲ್ಟ್‌‌‌ಗಿಂತಲೂ ವೇಗವಾಗಿ ಓಡಬಲ್ಲ ಚೀತಾ ರೊಬೊಟ್‌ನ್ನು‌‌‌‌‌ ಬೋಸ್ಟನ್‌ ಡೈನಾಮಿಕ್ಸ್‌ ಅಭಿವೃದ್ಧಿ ಪಡಿಸಿದೆ.

 ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಅಷ್ಟೇ ಅಲ್ಲದೇ ಬೋಸ್ಟನ್‌ ಡೈನಾಮಿಕ್ಸ್‌ ಮರಗಳನ್ನು ಹತ್ತುವ ರೊಬೊಟ್‌‌,ದೇಹದ ಮೇಲೆ ವಸ್ತುಗಳನ್ನು ಇರಿಸಿದರೂ ಬೆಟ್ಟ ಹತ್ತುವ ರೊಬೊಟ್‌,ಜೊತೆಗೆ ಗಂಟೆಗೆ 25 ಕಿ.ಮೀ ವೇಗದಲ್ಲಿ ಓಡುವ ರೊಬೊಟ್‌ ಬೆಕ್ಕನ್ನು ತಯಾರಿಸಿದೆ.

 ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಗೂಗಲ್‌ ಪ್ರತಿಸ್ಪರ್ಧಿ ಕಂಪೆನಿ ಆಪಲ್‌ ಸಹ ರೊಬೊಟ್‌‌ಗಳನ್ನುಬಳಸಲು ಮುಂದಾಗುತ್ತಿದೆ. ಅಮೆಜಾನ್‌ ಮತ್ತು ಗೂಗಲ್‌ನಂತೆ ರಿಟೇಲ್‌ ಕ್ಷೇತ್ರಕ್ಕೆ ರೊಬೊಟ್‌‌ ಬಳಸದೇ ರೊಬೊಟ್‌‌ಗಳ ಐಫೋನ್‌ ಕ್ಯಾಮೆರಾದ ಲ್ಯಾಬ್‌ ಪರೀಕ್ಷೆ ಮಾಡಲು ಮುಂದಾಗುತ್ತಿದೆ ಎನ್ನುವ ಸುದ್ದಿಯು ಹರಿದಾಡುತ್ತಿದೆ.

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಕಾಡುಬೆಕ್ಕು ರೊಬೊಟ್‌

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ರೊಬೊಟ್‌ ನಾಯಿ

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಹ್ಯುಮನಾಯ್ಡ್ ರೊಬೊಟ್‌

ಗೂಗಲ್‌ ರೊಬೊಟ್‌ ಕಂಪೆನಿಯನ್ನು ಖರೀದಿಸುತ್ತಿರುವುದು ಯಾಕೆ?

ಮರಹತ್ತುವ ರೊಬೊಟ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X