Just In
Don't Miss
- Lifestyle
ಭಾನುವಾರದ ದಿನ ಭವಿಷ್ಯ 08-12-2019
- News
ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ: ರಾಹುಲ್ ಗಾಂಧಿ
- Automobiles
390 ಅಡ್ವೆಂಚರ್ ಜೊತೆಗೆ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಪ್ರದರ್ಶನಗೊಳಿಸಿದ ಕೆಟಿಎಂ
- Movies
ಮುಂದಿನ ವರ್ಷವೇ ಮದುವೆ ಎನ್ನುತ್ತಾರೆ ಮನುರಂಜನ್..!
- Finance
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ : ಡಿಸೆಂಬರ್ 16ರಿಂದ NEFT 24x7 ಸೌಲಭ್ಯ
- Sports
ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಪಾಕ್ ತಂಡಕ್ಕೆ ಮರಳಿದ ಫವಾದ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಆಂಡ್ರಾಯ್ಡ್ ಫೋನಿಗೆ ಲ್ಯಾಪ್ ಟಾಪ್ ನಿಂದ ಫೈಲ್ ಟ್ರಾನ್ಫರ್ ಮಾಡುವುದು ಹೇಗೆ?
ಹೆಚ್ಚಿನವರಿಗೆ ಫೋನ್ ಒಂದು ತಮ್ಮ ವ್ಯವಹಾರಿಕ ಡಿವೈಸ್ ಆಗಿ ಪರಿವರ್ತನೆಯಾಗಿದೆ. ಆದರೂ ಕೂಡ ಕೆಲವರು ಲ್ಯಾಪ್ ಟಾಪ್ ಬಳಕೆ ಮಾಡಿಯೇ ಮಾಡುತ್ತಾರೆ. ಅಂದರೆ ನಾವು ಆಗಾಗ ಒಮ್ಮೊಮ್ಮೆಯಾದರೂ ಕೂಡ ಪಿಸಿಯಿಂದ ನಮ್ಮ ಆಂಡ್ರಾಯ್ಡ್ ಡಿವೈಸ್ ಗೆ ಡಾಟಾ ಟ್ರಾನ್ಫರ್ ಮಾಡುವ ಸಂದರ್ಬ ಬರುತ್ತದೆ.
ಆದರೆ ಯಾವ ಮಾರ್ಗವು ಡಾಟಾ ಟ್ರಾನ್ಫರ್ ಗೆ ಬೆಸ್ಟ್ ವಿಧಾನವಾಗಿದೆ? ಯಾವುದು ಹಲವು ಫೈಲ್ಸ್ ಗಳನ್ನು ಕಳುಹಿಸಲು ಅನುಕೂಲಕರವಾಗಿರುತ್ತದೆ, ಸಣ್ಣ ಫೈಲ್ಸ್ ಗಳನ್ನು ಕಳುಹಿಸುವುದಕ್ಕೆ ಯಾವ ವಿಧಾನ ಬೆಸ್ಟ್ ಆಗಿರುತ್ತದೆ ಎಂಬ ವಿವರ ಇಲ್ಲಿದೆ.

ಯುಎಸ್ ಬಿ ಕೇಬಲ್ ಬಳಸಿ
ಅತೀ ಹಳೆಯ ಸಾಮಾನ್ಯ ವಿಧಾನ ಪಿಸಿಯಿಂದ ಫೋನಿಗೆ ಡಾಟಾ ಟ್ರಾನ್ಸ್ ಫರ್ ಮಾಡುವುದಕ್ಕೆ ಇರುವ ವಿಧಾನವೆಂದರೆ ಯುಎಸ್ ಬಿ ಬಳಕೆ.ಇದು ಈಗಲೂ ವೇಗವಾಗಿರುವ ಮತ್ತು ಸುಲಭವಾಗಿರುವ ವಿಧಾನವಾಗಿದೆ. ಎಲ್ಲಿಯವರೆಗೆ ನಿಮಗೆ ಸುಲಭದಲ್ಲಿ ಕೊಂಡೊಯ್ಯಬಲ್ಲ ಕೇಬಲ್ ಇರುತ್ತದೋ ಅಲ್ಲಿಯವರೆಗೂ ಕೂಡ ಇದು ಉತ್ತಮ ಮಾರ್ಗವಾಗಿರುತ್ತದೆ.
ವಿಂಡೋಸ್ ಅಥವಾ ಕ್ರೋಮ್ ನಲ್ಲಿ ಸರಳವಾಗಿ ಹೀಗೆ ಮಾಡಬಹುದು
1. ಚಾರ್ಜಿಂಗ್ ದಿಸ್ ಡಿವೈಸ್ ವಯಾ ಯುಎಸ್ ಬಿ ಎಂದು ಆಂಡ್ರಾಯ್ಡ್ ನಲ್ಲಿ ಬರುವ ಲೇಬಲ್ ಆಗಿರುವ ನೋಟಿಫಿಕಷನ್ ನ್ನು ಟ್ಯಾಪ್ ಮಾಡಿ.
2. ಯುಎಸ್ ಬಿ ಫಾರ್ ಎಂದಿರುವಲ್ಲಿ ಫೈಲ್ ಟ್ರಾನ್ಫರ್ ನ್ನು ಸೆಲೆಕ್ಟ್ ಮಾಡಿ.
ನಿಮ್ಮ ಕಂಪ್ಯೂಟರ್ ನಲ್ಲೂ ಫೈಲ್ ಟ್ರಾನ್ಫರ್ ವಿಂಡೋ ತೆರೆದುಕೊಳ್ಳುತ್ತದೆ. ನಂತರ ನೀವು ನಿಮ್ಮ ಫೈಲ್ಸ್ ನ್ನು ಕಾಪಿ ಮಾಡಿಕೊಳ್ಳಬಹುದು.
ಮ್ಯಾಕ್ ನಲ್ಲೂ ಕೂಡ ಇದೇ ರೀತಿಯಾಗಿ ಮಾಡಬೇಕಾಗುತ್ತದೆ. ಆದರೆ ಆಂಡ್ರಾಯ್ಡ್ ಫೈಲ್ ಟ್ರಾನ್ಫರ್ ಸಾಫ್ಟ್ ವೇರ್ ನ್ನು ಮೊದಲು ಇನ್ಸ್ಟಾಲ್ ಮಾಡಬೇಕಾಗುತ್ತದೆ.
ದೊಡ್ಡ ಮೊತ್ತದ ಡಾಟಾವನ್ನು ಕಾಪಿ ಮಾಡುವುದಕ್ಕೆ ಈ ವಿಧಾನವು ಬೆಸ್ಟ್ ಆಗಿರುತ್ತದೆ. ಮೂವಿಗಳು ಅಥವಾ ಸಂಪೂರ್ಣ ಮ್ಯೂಸಿಕ್ ಕಲೆಕ್ಷನ್ ನ್ನು ಕಾಪಿ ಮಾಡುವಾಗ ನೀವು ಈ ವಿಧಾನವನ್ನು ಅನುಸರಿಸಬಹುದು.

ನಿಮ್ಮ ಕ್ಲೌಡ್ ಅಕೌಂಟ್ ಬಳಸಿ
ಗೂಗಲ್ ಅಕೌಂಟ್ ನ್ನು ನಿಮ್ಮ ಫೋನಿನಲ್ಲಿ ಸೆಟ್ ಮಾಡಿಕೊಂಡಿದ್ದರೆ 15ಜಿಬಿ ವರಗೆ ಕ್ಲೌಡ್ ಸ್ಟೋರೇಜ್ ವ್ಯವಸ್ಥೆ ಇರುತ್ತದೆ. ಗೂಗಲ್ ಡ್ರೈವ್ ನಲ್ಲಿ ಡಾಟಾ ಸೇವ್ ಮಾಡಿಕೊಳ್ಳಬಹುದು.ಲ್ಯಾಪ್ ಟಾಪ್ ಮತ್ತು ಫೋನಿಗೆ ಡಾಟಾ ಟ್ರಾನ್ಫರ್ ಮಾಡಿಕೊಳ್ಳುವುದಕ್ಕೆ ಇದು ಬಹಳ ಅನುಕೂಲಕರವಾಗಿರುತ್ತದೆ.
ಗೂಗಲ್ ಡ್ರೈವ್ ಆಪ್ ನ್ನು ನಿಮ್ಮ ಲ್ಯಾಪ್ ಟಾಪ್ ನಲ್ಲಿ ನೀವು ಇನ್ಸ್ಟಾಲ್ ಮಾಡಿರಬೇಕಾಗುತ್ತದೆ. ಡ್ರಾಪ್ ಬಾಕ್ಸ್ ಅಥವಾ ಮೈಕ್ರೋಸಾಫ್ಟ್ ಒನ್ ಡ್ರೈವ್ ನ್ನು ಕೂಡ ಬಳಸಬಹುದು. ಇವೆಲ್ಲವೂ ಕೂಡ ಒಂದೇ ರೀತಿಯ ಕೆಲಸವನ್ನು ನಿರ್ವಹಿಸುತ್ತವೆ.
ಗೂಗಲ್ ಡ್ರೈವ್ ನ್ನು ನೀವು ಸೆಟ್ ಅಪ್ ಮಾಡಿದಾಗ ನೀವು ಮೊದಲು ಸೈನ್ ಇನ್ ಆಗಬೇಕು ಮತ್ತು Back up all file types ನ್ನು ಸೆಲೆಕ್ಟ್ ಮಾಡಬೇಕು ಮತ್ತು ನೆಕ್ಸ್ಟ್ ನ್ನು ಕ್ಲಿಕಿಸಿ.
ಮುಂದಿನ ಸ್ಕ್ರೀನಿನಲ್ಲಿ Advanced Settings ನ್ನು ಕೆಳಭಾಗದಲ್ಲಿ ಸೆಲೆಕ್ಟ್ ಮಾಡಿ. ನಂತರ Sync My Drive to this computer ನ್ನು ಆಯ್ಕೆ ಮಾಡಿ ಓಕೆ ಕ್ಲಿಕ್ಕಿಸಿ .
ಇದು ಗೂಗಲ್ ಡ್ರೈವ್ ಫೋಲ್ಡರ್ ನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಸೃಷ್ಟಿಸುತ್ತದೆ. ನಿಮ್ಮ ಡ್ರೈವ್ ಅಕೌಂಟ್ ನ್ನು ನೀವು ಎಲ್ಲೇ ಆಕ್ಸಿಸ್ ಮಾಡಿದರೂ ಕೂಡ ಎಲ್ಲಾ ಫೈಲ್ ಗಳು ಕೂಡ ಲಭ್ಯವಾಗುತ್ತದೆ.ಡ್ರೈವ್ ಫೋಲ್ಡರ್ ನಿಂದ ನಿಮಗೆ ಬೇಕಾದ ಜಾಗಕ್ಕೆ ಅದನ್ನು ಕಾಪಿ ಮಾಡಿಕೊಳ್ಳಬಹುದು. ಆದರೆ ಸಿನ್ಕ್ರನೈಜ್ ಆಗಿರಬೇಕು ಎಂಬುದು ನೆನಪಿರಲಿ. ಆದರೆ ದೊಡ್ಡ ದೊಡ್ಡ ಫೈಲ್ ಗಳು ಅಂದರೆ ಗಿಗಾಫೈಲ್ ಗಳು ನಿಮ್ ಮಾಸಿಕ ಡಾಟಾ ಪ್ಯಾಕ್ ನಲ್ಲಿ ಹೆಚ್ಚು ಡಾಟಾವನ್ನು ಪಡೆದುಕೊಳ್ಳುತ್ತವೆ ಎಂಬುದು ಮಾತ್ರ ನೆನಪಿರಲಿ.

ಇಮೇಲ್ ಮತ್ತು ಮೆಸೇಜಿಂಗ್ ಆಪ್ ಬಳಸಿ
ಫೈಲ್ ಗಳನ್ನು ಇಮೇಲ್ ಮಾಡುವುದು ಬಹಳ ಪ್ರಯೋಜನಕಾರಿ ಮತ್ತು ಹೆಚ್ಚು ಮಂದಿ ಬಳಕೆ ಮಾಡುವ ವಿಧಾನವಾಗಿದೆ.ಬಹುಶ್ಯಃ ಈ ವಿಧಾನವನ್ನು ನಾವು ಹೆಚ್ಚಿನವರು ಬಳಕೆ ಮಾಡಿರುತ್ತೇವೆ. ಯಾವುದೇ ಇತರೆ ಮೆಥೆಡ್ ಗಳನ್ನು ಬಳಕೆ ಮಾಡಲು ಅವಕಾಶವಿಲ್ಲದೇ ಇದ್ದಾಗ ಇದು ಬಹಳ ಪ್ರಯೋಜನಕಾರಿಯಾಗಿರುತ್ತದೆ. ಆದರೆ ಒಂದು ಜಿಮೇಲ್ ನಲ್ಲಿ 25ಎಂಬಿಯಷ್ಟು ಅಟ್ಯಾಚ್ ಮೆಂಟ್ ನ್ನು ಕಳುಹಿಸುವುದಕ್ಕೆ ಮಾತ್ರವೇ ಅವಕಾಶವಿರುತ್ತದೆ. ಒಂದು ವೇಳೆ ನೀವು ದೊಡ್ಡ ಫೈಲ್ ಕಳುಹಿಸಬೇಕು ಎಂದಾದಲ್ಲಿ ವಿಟ್ರಾನ್ಸ್ಫರ್ ನ್ನು ಚೆಕ್ ಮಾಡಿ. ಇದು ನಿಮಗೆ 2ಜಿಬಿವರೆಗಿನ ಫೈಲ್ ನ್ನು ಟ್ರಾನ್ಫರ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.
ವಿಟ್ರಾನ್ಪ್ಸರ್. ಕಾಮ್ ಗೆ ತೆರಳಿ ಮತ್ತು ನಿಮ್ಮ ಇಮೇಲ್ ಅಡ್ರೆಸ್ ನ್ನು ಎಂಟರ್ ಮಾಡಿ. ನಂತರ ಬ್ರೌಸರ್ ವಿಂಡೋದಲ್ಲಿ ನಿಮ್ಮ ಫೈಲ್ ನ್ನು ಡ್ರ್ಯಾಗ್ ಮಾಡಿ ಮತ್ತು ಸೆಂಡ್ ಮಾಡಿ. ನಿಮ್ಮ ಫೋನ್ ನಲ್ಲೂ ನೀವು ಇಮೇಲ್ ನ್ನು ರಿಸೀವ್ ಮಾಡುತ್ತೀರಿ ಅಲ್ಲಿ ನೀವು ಫೈಲ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಫೈಲ್ಸ್ ಗಳು ಎನ್ಕ್ರಿಪ್ ಮಾಡಬಹುದು ಮತ್ತು ಏಳು ದಿನಗಳ ನಂತರ ಡಿಲೀಟ್ ಆಗುವಂತೆಯೂ ಮಾಡಬಹುದು. ಒಂದು ವೇಳೆ ನಿಮ್ಮ ಫೈಲ್ ನ್ನು ಅದಕ್ಕೂ ಮುನ್ನವೇ ಡಿಲೀಟ್ ಆಗುವಂತೆ ಮಾಡಲು ಅಥವಾ ಅತೀ ಹೆಚ್ಚು ದಿನ ಉಳಿಯುವಂತೆ ಮಾಡುವುದಕ್ಕಾಗಿ ಪ್ರೊ ಅಕೌಂಟ್ ನ ಅಗತ್ಯವಿರುತ್ತದೆ. ಒಂದು ವೇಳೆ ಯಾವುದೇ ನಿರ್ಧಿಷ್ಟ ಕಾರಣಕ್ಕಾಗಿ ನೀವು ವಿಟ್ರಾನ್ಸ್ಫರ್ ನ್ನು ಬಯಸದೇ ಇದ್ದಲ್ಲಿ ಇತರೆ ಮಾರ್ಗಗಳು ಕೂಡ ಲಭ್ಯವಿದೆ.

ಬ್ಲೂಟೂತ್
ಒಂದು ವೇಳೆ ಕೆಲವು ಸಣ್ಣ ಫೈಲ್ ಗಳಿದ್ದು ಅದನ್ನು ನೀವು ಫೋನಿಗೆ ಟ್ರಾನ್ಫರ್ ಮಾಡಲು ಬಯಸಿದ್ದಲ್ಲಿ ಬ್ಲೂಟೂತ್ ಕೂಡ ಒಂದು ಉತ್ತಮ ಮಾರ್ಗವಾಗಿರುತ್ತದೆ. ಒಮ್ಮೆ ಇದನ್ನು ಸೆಟ್ ಮಾಡಿದರೆ ಇದು ಬಹಳ ಸುಲಭ ಮಾರ್ಗವಾಗಿದೆ. ವಿಂಡೋಸ್ 10 ಲ್ಯಾಪ್ ಟಾಪ್ ನಿಂದ ನಿಮ್ಮ ಫೋನಿಗೆ ಬ್ಲೂಟೂತ್ ಮೂಲಕ ನೀವು ಫೈಲ್ ಟ್ರಾನ್ಫರ್ ಮಾಡುವುದಾದರೆ ಮೊದಲಿಗೆ ಎರಡು ಡಿವೈಸ್ ಗಳು ಪೇರ್ ಆಗಬೇಕು. ಅದಕ್ಕಾಗಿ ಸೆಟ್ಟಿಂಗ್ಸ್ > ಡಿವೈಸ್ ಗೆ ತೆರಳಿ ಮತ್ತು ಬ್ಲೂಟೂತ್ ಆನ್ ಮಾಡಲು ಬಟನ್ ನ್ನು ಹಿಟ್ ಮಾಡಿ ಟಾಗಲ್ ಮಾಡಿ. ನಿಮ್ಮ ಪೋನಿನಲ್ಲೂ ಇದು ಅನೇಬಲ್ ಆಗಿದೆಯಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
ಇದೀಗ ಆಡ್ ಬ್ಲೂಟೂತ್ ಅಥವಾ ಇತರೆ ಡಿವೈಸ್ >ಬ್ಲೂಟೂತ್ ಆಯ್ಕೆಗೆ ತೆರೆಳಿ ಮತ್ತು ಸ್ಕ್ಯಾನಿಂಗ್ ನ್ನು ಆರಂಭಿಸಿ. ಸ್ವಲ್ಪ ಸಮಯದ ನಂತರ ನಿಮ್ಮ ಫೋನಿನಲ್ಲಿ ಇದು ಕಾಣಿಸುತ್ತದೆ. ಸೆಲೆಕ್ಟ್ ಮಾಡಿ ನಿಮ್ಮ ಪಿಸಿಯನ್ನು ಕನೆಕ್ಟ್ ಮಾಡಿ. ಪ್ರೊಸೆಸ್ ಸಂಪೂರ್ಣಗೊಳಿಸುವುದಕ್ಕಾಗಿ ಎರಡೂ ಡಿವೈಸ್ ಗಳನ್ನು ಪೇರ್ ಮಾಡಿ.
ಸೆಟ್ಟಿಂಗ್ಸ್>ಡಿವೈಸ್> ಸೆಂಡ್ ಆರ್ ರಿಸೀವ್ ಫೈಲ್ಸ್ ವಯಾ ಬ್ಲೂಟೂತ್> ಸೆಂಡ್ ಫೈಲ್ಸ್ ಗೆ ತೆರಳಿ. ನೀವು ಶೇರ್ ಮಾಡಲು ಇಚ್ಛಿಸುವ ಫೈಲ್ ನ್ನು ಸೆಲೆಕ್ಟ್ ಮಾಡಿ ಮತ್ತು ಶೇರ್ ಮಾಡಿ. ಇತರೆ ಕೆಲವು ಮೆಥೆಡ್ ಗಳಿಂದ ಬ್ಲೂಟೂತ್ ಆಯ್ಕೆಯು ಬಹಳ ನಿಧಾನಗತಿಯಲ್ಲಿ ಫೈಲ್ ಟ್ರಾನ್ಫರ್ ನ್ನು ಮಾಡುತ್ತದೆ. ಬ್ಲೂಟೂತ್ ಫೈಲ್ ಟ್ರಾನ್ಫರ್ ಗಾಗಿ ಎರಡೂ ಡಿವೈಸ್ ಗಳಲ್ಲಿನ ಬ್ಲೂಟೂತ್ ಹೆಸರು ಪ್ರಮುಖ ಪಾತ್ರ ವಹಿಸುತ್ತದೆ.

ವೈಫೈ ಬಳಸಿ
ದೊಡ್ಡ ಮೊತ್ತದ ಡಾಟಾವನ್ನು ಫೋನಿಗೆ ಟ್ರಾನ್ಫರ್ ನ್ನು ಆಗಾಗ ಮಾಡುತ್ತಲೇ ಇರಬೇಕಾದ ಅನಿವಾರ್ಯತೆ ನಿಮಗಿದ್ದಲ್ಲಿ ವೈಫೈಗಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ.ವೈಫೈ ಬಳಸಿ ನೀವು ವೇಗವಾಗಿ ಮತ್ತು ಸೆಕ್ಯೂರ್ ಆಗಿ ಫೈಲ್ ಟ್ರಾನ್ಫರ್ ನ್ನು ಪಿಸಿಯಿಂದ ಮೊಬೈಲಿಗೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ವೈಫೈಯಿಂದ ಫೋನಿಗೆ ಫೈಲ್ ಕಾಪಿ ಮಾಡುವುದಕ್ಕೆ ಫೋನಿನಲ್ಲಿ ಸ್ಪೆಷಲ್ ಆಪ್ ಬೇಕಾಗುತ್ತದೆ ಆದರೆ ಲ್ಯಾಪ್ ಟಾಪ್ ನಲ್ಲಿ ಹೆಚ್ಚುವರಿಯಾಗಿ ಏನೂ ಕೂಡ ಬೇಕಾಗುವುದಿಲ್ಲ. ನಾವು Portal by Pushbullet ನ್ನು ಬಳಸಲು ಸಲಹೆ ನೀಡುತ್ತೇವೆ.ಇದು ಉಚಿತವಾಗಿರುವ ಮತ್ತು ಯಾವುದ ಸೈನ್ ಅಪ್ ನ್ನು ಕೇಳಧ ಆಪ್ ಆಗಿದೆ.ಇದು ವಿಂಡೋಸ್, ಮ್ಯಾಕ್, ಲಿನಕ್ಸ್ ಅಥವಾ ಕ್ರೋಮ್ ಓಎಶ್ ಎಲ್ಲದರಲ್ಲೂ ಕೂಡ ಕೆಲಸ ಮಾಡುತ್ತದೆ. ಇದನ್ನು ಪ್ರಾರಂಭಿಸುವುದಕ್ಕಾಗಿ ಆಂಡ್ರಾಯ್ಡ್ ಡಿವೈಸ್ ನಲ್ಲಿ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.ನ
ವೆಬ್ ಬ್ರೌಸರ್ ನ್ನು ನಿಮ್ಮ ಲ್ಯಾಪ್ ಟಾಪ್ ನಲ್ಲಿ ಅಥವಾ ಡೆಸ್ಕ್ ಟಾಪ್ ನಲ್ಲಿ ತೆರೆಯಿರಿ ಮತ್ portal.pushbullet.com ತೆರಳಿ. ಯೂನಿಕ್ ಕ್ಯೂಆರ್ ಕೋಡ್ ನ್ನು ನೀವಿಲ್ಲಿ ಗಮನಿಸುತ್ತೀರಿ. ಫೋನಿನಲ್ಲಿ ಪೋರ್ಟಲ್ ನ್ನು ತೆರೆಯಿರಿ ಮತ್ತು ಸ್ಕ್ಯಾನ್ ನ್ನು ಟ್ಯಾಪ್ ಮಾಡಿ.ಯಾವಾಗ ಅದು ಕ್ಯಾಮರಾವನ್ನು ಲಾಂಚ್ ಮಾಡುತ್ತದೆಯೋ ಆಗ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿ. ಇದು ನಿಮಗೆ ನೇರವಾಗಿ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ನಿಂದ ಫೋನಿಗೆ ನೇರವಾಗಿ ವಯರ್ ಲೆಸ್ ಕನೆಕ್ಷನ್ ನ್ನು ಸಿಗುವಂತೆ ಮಾಡುತ್ತದೆ. ಇದು ಟೆಂಪರರಿಯಾಗಿರುತ್ತದೆ ಮುಂದಿನ ಬಾರಿ ನೀವು ಆಪ್ ರನ್ ಮಾಡುವಾಗ ಪುನಃ ಸ್ಕ್ಯಾನ್ ಮಾಡಬೇಕಾಗುತ್ತದೆ. ಅಂತಿಮವಾಗಿ ನಿಮ್ಮ ಫೈಲ್ಸ್ ನ್ನ ಬ್ರೌಸರ್ ವಿಂಡೋಗೆ ಡ್ರ್ಯಾಗ್ ಮಾಡಿ. ಅದು ನಿಮ್ಮ ಫೋನಿಗೆ ಅಪ್ ಲೋಡ್ ಆಗುವುದಕ್ಕೆ ಪ್ರಾರಂಭವಾಗುತ್ತದೆ.
ಇತರೆ ಕೆಲವು ಡಾಟಾ ಟ್ರಾನ್ಫರ್ ವಿಧಾನಗಳು :
ಪಿಸಿ ಡಿವೈಸ್ ನಿಂದ ಸ್ಮಾರ್ಟ್ ಫೋನಿಗೆ ಡಾಟಾ ಟ್ರಾನ್ಫರ್ ಮಾಡುವುದಕ್ಕೆ ಇನ್ನೂ ಕೆಲವು ವಿಧಾನಗಳಿವೆ. ನೀವು ಎಸ್ ಡಿ ಕಾರ್ಡ್ ಅಥವಾ ಯುಎಸ್ ಬಿ ಫ್ಲ್ಯಾಶ್ ಡ್ರೈವ್ ನ್ನು ಬಳಕೆ ಮಾಡಬಹುದು. ಎಫ್ ಟಿಪಿ ಜೊತೆಗೆ ವೈಫೈ ಎಫ್ ಟಿಪಿ ಸರ್ವರ್ ಆಪ್ ಬಳಸಲೂ ಬಹುದು. ನೆಟ್ ವರ್ಕ್ ಅಟ್ಯಾಚ್ಡ್ ವೈಫೈ ಯನ್ನು ಬಳಸಬಹುದು.ಒಂದೇ ಹಾರ್ಡ್ ಡ್ರೈವ್ ನ್ನು ಎಲ್ಲಾ ಡಿವೈಸ್ ಗಳಿಗೆ ಸಿಂಗಲ್ ನೆಟ್ ವರ್ಕ್ ನಲ್ಲಿ ಕನೆಕ್ಟ್ ಮಾಡಿಯೂ ಕೂಡ ಶೇರ್ ಮಾಡಬಹುದು ಆದರೆ ಹೆಚ್ಚಿನ ಮಂದಿ ಮೇಲೆ ತಿಳಿಸಲಾಗಿರುವ ಪ್ರಮುಖ 5 ವಿಧಾನಗಳನ್ನೇ ಬಳಸುತ್ತಾರೆ. ಹೆಚ್ಚು ಡಿವೈಸ್ ಗಳಿದ್ದಾಗ ಹೆಚ್ಚು ಶೇರಿಂಗ್ ಕೆಲಸಗಳನ್ನು ಮಾಡುವ ಪ್ರಸಂಗಗಳು ಎದುರಾಗುತ್ತವೆ. ನಿಮಗೆ ಯಾವುದು ಸೂಕ್ತ ಅನ್ನಿಸುತ್ತದೆಯೋ ಅದನ್ನು ಬಳಕೆ ಮಾಡಬಹುದು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090