ವೈರಲ್ ಆಯ್ತು ಬಜೆಟ್ ಐಫೋನ್ ಲೀಕ್ ವಿಡಿಯೋ: ಹೇಗಿದೆ ಐಫೋನ್ SE 2..?

|

ಆಪಲ್ ಶೀಘ್ರವೇ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿರುವ ಐಫೋನ್ SE 2 ಕುರಿತಂತೆ ಸಾಕಷ್ಟು ರೂಮರ್ ಗಳು ಕೇಳಿ ಬಂದಿದೆ. ಸದ್ಯ ಈ ಐಫೋನ್ ಕುರಿತ ವಿಡಿಯೋವೊಂದು ಲೀಕ್ ಆಗಿದ್ದು, ವೈರಲ್ ಆಗಿದೆ. ಇದೇ ಕೆಲವು ದಿನಗಳ ಹಿಂದೆ ಐಫೋನ್ SE 2 ವಿಶೇಷತೆಗಳ ಕುರಿತ ಮಾಹಿತಿ ಲೀಕ್ ಆಗಿತ್ತು, ಸದ್ಯ ವಿಡಿಯೋ ಲೀಕ್ ಆಗಿರುವುದು ಈ ಪೋನ್ ಕುರಿತ ಕುತೂಹಲವನ್ನು ಮತ್ತಷ್ಟು ಏರಿಸಿದೆ.

ವೈರಲ್ ಆಯ್ತು ಬಜೆಟ್ ಐಫೋನ್ ಲೀಕ್ ವಿಡಿಯೋ: ಹೇಗಿದೆ ಐಫೋನ್ SE 2..?

ನೋಡಲು ಈ ಹಿಂದಿನ ಐಫೋನ್ SE ಮಾದರಿಯಲ್ಲಿಯೇ ಕಾಣಿಸಿಕೊಂಡಿರುವ ಐಫೋನ್ SE 2 ಯಲ್ಲಿ ಇಯರ್ ಫೋನ್ ಜಾಕ್ ಅನ್ನು ಕಾಣಬಹುದಾಗಿದೆ. ಹಿಂಭಾಗದಲ್ಲಿ ಗ್ಲಾಸ್ ಫಿನಿಷಿಂಗ್ ನೀಡಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಐಫೋನ್ SE 2, ಈ ವಿಡಿಯೋದಿಂದ ಮತ್ತಷ್ಟು ಬೇಡಿಕೆಯನ್ನು ಬಿಡುಗಡೆಗೂ ಮುನ್ನವೇ ಹೆಚ್ಚಿಸಿಕೊಳ್ಳಲಿದೆ ಎನ್ನಲಾಗಿದೆ.

ಐಫೋನ್ SE X :

ಐಫೋನ್ SE X :

ಐಫೋನ್ SE X ಅಥವಾ ಐಫೋನ್ SE 2 ಎಂದು ಇದಕ್ಕೆ ನಾಮಕರಣವನ್ನು ಮಾಡುವ ಸಾಧ್ಯತೆ ಇದ್ದು, ಈ ಹೊಸ ಐಫೋನ್ ಭಾರತದಲ್ಲಿಯೇ ನಿರ್ಮಿಸಲಿದೆ ಎನ್ನುವ ಮಾಹಿತಿಯೂ ಇದೆ. ಈ ಹೊಸ ಐಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನು ಎಬ್ಬಿಸುವ ಸಾಧ್ಯತೆ ದಟ್ಟವಾಗಿದೆ.

ಡ್ಯುಯಲ್ ಸಿಮ್:

ಡ್ಯುಯಲ್ ಸಿಮ್:

ಆಪಲ್ ಡ್ಯುಯಲ್ ಸಿಮ್‌ ಹಾಕಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೆ ನೀಡುತ್ತಿವೆ, ಅಲ್ಲದೇ ಟಾಪ್ ಎಂಡ್ ಫೋನ್‌ ಗಳು ಇದೇ ಮಾದರಿಯ ಆಯ್ಕೆಯನ್ನು ಹೊಂದಿವೆ. ಇದೇ ಮಾದರಿಯಲ್ಲಿ ಆಪಲ್ ಸಹ ಮಾರುಕಟ್ಟೆಯ ಟ್ರೆಂಡ್ ಅನ್ನು ಫಾಲೋ ಮಾಡುವ ಸಲುವಾಗಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಐಫೋನ್ ಅನ್ನು ಲಾಂಚ್ ಮಾಡಲು ತಯಾರಿಯನ್ನು ನಡೆಸಿದೆ.

ವಿಶೇಷತೆ:

ವಿಶೇಷತೆ:

ಮಾರುಕಟ್ಟೆಯಲ್ಲಿ ಹೊಸ ಆಲೆಯನ್ನು ಹುಟ್ಟಿ ಹಾಕಲಿರುವ ಇದಲ್ಲದೇ ಐಫೋನ್ SE 2 ನಲ್ಲಿ ಆಪಲ್ 4.2 ಇಂಚಿನ ಪರದೆಯನ್ನು ಅಳವಡಿಸುವ ಸಾಧ್ಯತೆ ಇದೆ. ಫೇಸ್‌ ಐಡಿ ಆಯ್ಕೆಯನ್ನು ಆಪಲ್ ಐಫೋನ್ SE 2 ನಲ್ಲಿಯೂ ನೀಡಲಿದೆ ಎನ್ನಲಾಗಿದೆ.

ಎರಡು ಆವೃತ್ತಿ:

ಎರಡು ಆವೃತ್ತಿ:

ಒಟ್ಟು ಎರಡು ಆವೃತ್ತಿಯಲ್ಲಿ ಐಫೋನ್ SE 2 ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಐಫೋನ್ SE 2ನಲ್ಲಿ ಆಪಲ್ A10 ಪ್ರೋಸೆಸರ್ ಅನ್ನು ಅಳವಡಿಸುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ 2GB RAM ಮತ್ತು 32/128 GB ಇಂಟರ್ನಲ್ ಮೆಮೊರಿ ಸಹ ಇರಲಿದೆ.

How to read deleted WhatsApp messages - GIZBOT KANNADA
ಬೆಲೆಗಳು;

ಬೆಲೆಗಳು;

ಮೂಲಗಳ ಪ್ರಕಾರ ಐಫೋನ್ SE 2 ಬೆಲೆ ರೂ.2೦,000ರ ಆಸುಪಾಸಿನಲ್ಲಿರಲಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯನ್ನು ಸೆಳೆದುಕೊಳ್ಳಲು ಆಪಲ್‌ ಈ ಸ್ಪರ್ಧಾತ್ಮಕ ಬೆಲೆಯನ್ನು ನಿಗಧಿಪಡಿಸಲಿದೆ ಎನ್ನಲಾಗಿದೆ.

Best Mobiles in India

English summary
Apple iPhone SE 2 revealed in leaked video. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X