ಶಿಯೋಮಿ 11i ಹೈಪರ್‌ಚಾರ್ಜ್ ಫೋನ್‌ ಖರೀದಿಸುವ ಮುನ್ನ ಒಮ್ಮೆ ಈ ಅಂಶ ಗಮನಿಸಿ!

|

ಶಿಯೋಮಿ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಶಿಯೋಮಿ 11i ಹೈಪರ್‌ಚಾರ್ಜ್ ಫೋನ್ ಆಕರ್ಷಕ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ. ಇನ್ನು ಈ ಫೋನ್ ಈಗ ಖರೀದಿಗೆ ಸಹ ಲಭ್ಯವಾಗಿದೆ. ಶಿಯೋಮಿ 11i ಹೈಪರ್‌ಚಾರ್ಜ್ ಫೋನ್ ವೇಗದ ಚಾರ್ಜಿಂಗ್ ಆಯ್ಕೆಯಿಂದ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಸ್ಮಾರ್ಟ್‌ಫೋನ್ ಸುಮಾರು 15 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. ಶಿಯೋಮಿ 11i ಹೈಪರ್‌ಚಾರ್ಜ್ ಫೋನ್ ಅನ್ನು ಖರೀದಿಸಲು ಇಚ್ಛಿಸಿದರೇ, ಅದಕ್ಕೂ ಮುನ್ನ ಶಿಯೋಮಿ 11i ಹೈಪರ್‌ಚಾರ್ಜ್ ಫೋನ್‌ ಬಗ್ಗೆ ಕೆಲವು ಅಂಶಗಳನ್ನು ನೀವು ತಿಳಿಯಬೇಕು.

ಶಿಯೋಮಿ 11i ಹೈಪರ್‌ಚಾರ್ಜ್ ಫೋನಿನ ಬೆಲೆ

ಶಿಯೋಮಿ 11i ಹೈಪರ್‌ಚಾರ್ಜ್ ಫೋನಿನ ಬೆಲೆ

ಭಾರತದಲ್ಲಿ ಶಿಯೋಮಿ 11i ಹೈಪರ್‌ಚಾರ್ಜ್ 5G ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 6GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ 26,999.ರೂ ಬೆಲೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 8GB + 128GB ರೂಪಾಂತರ ಆಯ್ಕೆಗೆ 28,999.ರೂ ಬೆಲೆ ಹೊಂದಿದೆ. ಇನ್ನು ಶಿಯೋಮಿ 11i 5G ಸ್ಮಾರ್ಟ್‌ಫೋನ್‌ 6GB + 128GB ಮಾದರಿ ಆಯ್ಕೆಗೆ 24,999ರೂ ಬೆಲೆ ಹೊಂದಿದೆ. ಅಲ್ಲದೆ 8GB + 128GB ಆಯ್ಕೆಗೆ 26,999.ರೂ ಬೆಲೆ ಪಡೆದುಕೊಂಡಿದೆ.

ಶಿಯೋಮಿ 11i ಹೈಪರ್‌ಚಾರ್ಜ್ ಫೋನ್‌ ಯಾವ ಕಲರ್‌ನಲ್ಲಿ ಲಭ್ಯ

ಶಿಯೋಮಿ 11i ಹೈಪರ್‌ಚಾರ್ಜ್ ಫೋನ್‌ ಯಾವ ಕಲರ್‌ನಲ್ಲಿ ಲಭ್ಯ

ಶಿಯೋಮಿ 11i ಹೈಪರ್‌ಚಾರ್ಜ್ ಫೋನ್ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಸ್ಟೆಲ್ತ್ ಬ್ಲಾಕ್, ಪೆಸಿಫಿಕ್ ಪರ್ಲ್, ಕ್ಯಾಮೊ ಗ್ರೀನ್ ಮತ್ತು ಪರ್ಪಲ್ ಮಿಸ್ಟ್ ಬರುತ್ತದೆ. ಇವೆಲ್ಲವೂ ಮ್ಯಾಟ್ ಫಿನಿಶ್ ಹೊಂದಿವೆ. ಪೆಸಿಫಿಕ್ ಪರ್ಲ್ ಉತ್ತಮವಾಗಿ ಕಾಣುತ್ತದೆ. ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP53 ರೇಟ್ ಆಗಿದೆ.

ಶಿಯೋಮಿ 11i ಹೈಪರ್‌ಚಾರ್ಜ್ ಬ್ಯಾಟರಿ ಹೇಗೆ

ಶಿಯೋಮಿ 11i ಹೈಪರ್‌ಚಾರ್ಜ್ ಬ್ಯಾಟರಿ ಹೇಗೆ

ಶಿಯೋಮಿ 11i ಹೈಪರ್‌ಚಾರ್ಜ್ ಮತ್ತು ಶಿಯೋಮಿ 11i ಫೋನ್‌ಗಳು ಭಿನ್ನ ಬ್ಯಾಟರಿ ಬ್ಯಾಕ್‌ಅಪ್ ಪಡೆದಿವೆ. ಶಿಯೋಮಿ 11i ಫೋನ್‌ 5160mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಹಾಗೆಯೇ ಶಿಯೋಮಿ 11i ಹೈಪರ್‌ಚಾರ್ಜ್ 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಹಾಗೆಯೇ ಬೆಲೆಯಲ್ಲಿಯೂ ಈ ಫೋನ್‌ಗಳ ಮಧ್ಯ ಭಿನ್ನತೆ ಇದೆ. ಶಿಯೋಮಿ 11i ಹೈಪರ್‌ಚಾರ್ಜ್ ಫೋನ್, ಶಿಯೋಮಿ 11i ಫೋನ್‌ಗಿಂತ ಸ್ವಲ್ಪ ಹೆಚ್ಚಿನ ದರ ಹೊಂದಿದೆ.

ಶಿಯೋಮಿ 11i ಹೈಪರ್‌ಚಾರ್ಜ್ ತ್ವರಿತ ಚಾರ್ಜಿಂಗ್

ಶಿಯೋಮಿ 11i ಹೈಪರ್‌ಚಾರ್ಜ್ ತ್ವರಿತ ಚಾರ್ಜಿಂಗ್

ಶಿಯೋಮಿ 11i ಹೈಪರ್‌ಚಾರ್ಜ್ ಫೋನ್ ಬರೀ 15 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ. ಹಾಗೆಯೇ ಈ ಫೋನ್ 7 ನಿಮಿಷಗಳಲ್ಲಿ ಸುಮಾರು 50 ಪ್ರತಿಶತ, 11 ನಿಮಿಷಗಳಲ್ಲಿ 75 ಪ್ರತಿಶತ ಮತ್ತು ಸುಮಾರು 14 ರಿಂದ 15 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. ಚಾರ್ಜಿಂಗ್ ಪ್ರಕ್ರಿಯೆಯ ವೇಳೆ ಫೋನ್ ಸ್ವಲ್ಪ ಬಿಸಿ ಆಗುವ ಸಾಧ್ಯತೆಗಳು ಇವೆ. ಅದನ್ನು ತಪ್ಪಿಸಲು, ನೀವು ವೇಗದ ಚಾರ್ಜಿಂಗ್ ಮೋಡ್ ಅನ್ನು ಆಫ್ ಮಾಡಬಹುದು.

ಶಿಯೋಮಿ 11i ಹೈಪರ್‌ಚಾರ್ಜ್ ಡಿಸ್‌ಪ್ಲೇ ಹೇಗೆ

ಶಿಯೋಮಿ 11i ಹೈಪರ್‌ಚಾರ್ಜ್ ಡಿಸ್‌ಪ್ಲೇ ಹೇಗೆ

ಶಿಯೋಮಿ 11i ಹೈಪರ್‌ಚಾರ್ಜ್ ಫೋನ್ 6.67 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದ್ದು, AMOLED ಮಾದರಿಯಲ್ಲಿದೆ. ಜೊತೆಗೆ 120Hz ರೀಫ್ರೇಶ್ ರೇಟ್ ಒಳಗೊಂಡಿದ್ದು, 360 Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1200 nits ಪೀಕ್ ಬ್ರೈಟ್‌ನೆಸ್ (700 nits ವಿಶಿಷ್ಟ ಹೊಳಪು) ಹೊಂದಿದೆ. ಪರದೆಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.

ಶಿಯೋಮಿ 11i ಹೈಪರ್‌ಚಾರ್ಜ್ ಕ್ಯಾಮೆರಾ ಕಮಾಲ್

ಶಿಯೋಮಿ 11i ಹೈಪರ್‌ಚಾರ್ಜ್ ಕ್ಯಾಮೆರಾ ಕಮಾಲ್

ಶಿಯೋಮಿ 11i ಹೈಪರ್‌ಚಾರ್ಜ್ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

Most Read Articles
Best Mobiles in India

English summary
Before Buying The Xiaomi 11i HyperCharge Phone Know These Points.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X