ಆಂಡ್ರಾಯ್ಡ್ 10 ನಲ್ಲಿ ರನ್ ಆಗುವ ಬೆಸ್ಟ್ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು

By Gizbot Bureau
|

ಭಾರತೀಯ ಮಾರುಕಟ್ಟೆ ಬೆಲೆಗೆ ಭಾರೀ ಮಹತ್ವ ನೀಡುತ್ತದೆ. ಮತ್ತು ಬಜೆಟ್,ಎಂಟ್ರಿ ಲೆವೆಲ್ ನ ಸ್ಮಾರ್ಟ್ ಫೋನ್ ಗಳು ಈ ದೇಶದಲ್ಲಿ ಹೆಚ್ಚು ಮಾರಾಟ ಕಾಣುತ್ತದೆ. ಹಾಗಂತ ದುಬಾರಿ ಮೊಬೈಲ್ ಗಳನ್ನು ಖರೀದಿಸುವವರೇ ಇಲ್ಲ ಎಂದಲ್ಲ. ದುಬಾರಿ ಫೋನ್ ಗಳ ಖರೀದಿಯ ಬಳಗವೇ ಇನ್ನೊಂದಿದೆ. ವಿಶೇಷ ಫೀಚರ್ ಗಳಿಂದ ಕೂಡಿರುವ ವಿಭಿನ್ನ ಬ್ರ್ಯಾಂಡಿನ ದುಬಾರಿ ಫೋನ್ ಗಳ ಖರೀದಿಯ ಉತ್ಸುಕತೆ ಇರುವ ಕೆಲವು ಗ್ರಾಹಕರು ಕೂಡ ಭಾರತದಲ್ಲಿದ್ದಾರೆ.

ಒನ್ ಪ್ಲಸ್

ಒನ್ ಪ್ಲಸ್ ಭಾರತದಲ್ಲಿರುವ ಬೆಸ್ಟ್ ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಆಗಿದೆ. ಕೈಗೆಟುಕುವ ಬೆಲೆಗಾಗಿ ಹೆಚ್ಚಿನವರು ಇದನ್ನು ಎಂಜಾಯ್ ಮಾಡುತ್ತಾರೆ. ಮುಂದಿನ ಜನರೇಷನ್ನಿನ ಮಾಡೆಲ್ ಗಳನ್ನು ನಿರೀಕ್ಷಿಸುವಂತೆ ಮಾಡಿರುವ ಬ್ರ್ಯಾಂಡ್ ಗಳಲ್ಲಿ ಒನ್ ಪ್ಲಸ್ ಕೂಡ ಒಂದೆನಿಸಿದೆ. ಮುಂದಿನ ಜನರೇಷನ್ನಿನ ಮಾಡೆಲ್ ಗಳಾಗಿರುವ ಒನ್ ಪ್ಲಸ್ 8 ಸರಣಿಗಳನ್ನು ಎಪ್ರಿಲ್ 14 ರಂದು ಬಿಡುಗಡೆಗೊಳಿಸುವ ನಿರೀಕ್ಷೆ ಮಾಡಲಾಗುತ್ತಿದೆ.

ಇದರ ಜೊತೆಗೆ ಒನ್ ಪ್ಲಸ್ ನ ಹೈ ಎಂಡ್ ಮತ್ತು ಪ್ರೀಮಿಯಂ ಫೋನ್ ಗಳಿಗೆ ಸ್ಪರ್ಧೆಯೊಡ್ಡಲು ಸ್ಯಾಮ್ ಸಂಗ್, ಆಪಲ್, ಎಲ್ ಜಿ ಸಂಸ್ಥೆಗಳು ಕೂಡ ಸಿದ್ಧವಾಗಿದೆ.

ನೀವು ಒಂದು ವೇಳೆ ಪ್ರೀಮಯಂ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವುದಕ್ಕೆ ಪ್ಲಾನ್ ಮಾಡುತ್ತಿದ್ದರೆ ಆಂಡ್ರಾಯ್ಡ್ 10 ನಲ್ಲಿ ರನ್ ಆಗುವ ಕೆಲವು ನೂತನ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ವಿವೋ iQOO 3

ವಿವೋ iQOO 3

ವಿವೋ iQOO 3 ಫೆಬ್ರವರಿಯಲ್ಲಿ ಬಿಡುಗಡೆಕಂಡಿದ್ದು 6.44-ಇಂಚಿನ ಬೇಝಲ್ ಲೆಸ್ ಡಿಸ್ಪ್ಲೇ ಜೊತೆಗೆ 2400 x 1080 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ.ಸ್ನ್ಯಾಪ್ ಡ್ರ್ಯಾಗನ್ 865 SoC, 4400mAh ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ. 256GB ಸ್ಪೋರೇಜ್ ಜಾಗ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಇದು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಲೈಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಲೈಟ್

ಸ್ಯಾಮ್ ಸಂಗ್ ಗ್ಯಾಲಕ್ಸ ಎಸ್10 ಲೈಟ್ 6.7-ಇಂಚಿನ FHD+ ಇನ್ಫಿನಿಟಿ-ಓ ಸೂಪರ್ AMOLED ಡಿಸ್ಪೇ,ಸ್ನ್ಯಾಪ್ ಡ್ರ್ಯಾಗನ್ 855 SoC, ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿರಲಿದೆ ಮತ್ತು 4500mah ಬ್ಯಾಟರಿ ಜೊತೆಗೆ 25W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿರಲಿದೆ.

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ 6.55-ಇಂಚಿನ ಫ್ಲೂಯಿಡ್ AMOLED FHD+ ಡಿಸ್ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ SoC, 256GB ಸ್ಟೋರೇಜ್ ಜಾಗ, ಟ್ರಿಪಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಜೊತೆಗೆ 48MP ಪ್ರೈಮರಿ ಸೆನ್ಸರ್, ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು 3800mAh ಬ್ಯಾಟರಿ ಜೊತೆಗೆ ವ್ರ್ಯಾಪ್ ಚಾರ್ಜ್ 30T ಗೆ ಇದು ಬೆಂಬಲ ನೀಡುತ್ತದೆ..

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಆಗಿದೆ ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ SoCನ್ನು ಇದು ಹೊಂದಿದೆ. 8GB RAM, ಆಂಡ್ರಾಯ್ಡ್ 10, ಮತ್ತು 3300mAh ಬ್ಯಾಟರಿ ಜೊತೆಗೆ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲವನ್ನು ಇದು ನೀಡುತ್ತದೆ.

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ 6.67-ಇಂಚಿನ ಫ್ಲೂಯಿಡ್ AMOLED ಡಿಸ್ಪ್ಲೇ ಜೊತೆಗೆ QHD+ ರೆಸಲ್ಯೂಷನ್,ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ SoC, 256GB ಸ್ಟೋರೇಜ್ ಜಾಗ, ಟ್ರಿಪಲ್ ಕ್ಯಾಮರಾವನ್ನು ಹಿಂಭಾಗದಲ್ಲಿ ಹೊಂದಿದೆ ಮತ್ತು 4080mAh ಬ್ಯಾಟರಿ ಜೊತೆಗೆ ವ್ರ್ಯಾಪ್ ಚಾರ್ಜ್ 30Tಯನ್ನು ಇದು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ Exynos 990 SoC ನ್ನು ಹೊಂದಿದೆ ಜೊತೆಗೆ 12GB RAM,ಟ್ರಿಪಲ್ ಕ್ಯಮರಾವನ್ನು ಹಿಂಭಾಗದಲ್ಲಿ ಹೊಂದಿದೆ. ಪ್ರೈಮರಿ ಸೆನ್ಸರ್ 108MP ಆಗಿದೆ ಮತ್ತು 5000mAh ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ.

Most Read Articles
Best Mobiles in India

English summary
Having said that, if you want to get your hands on a premium smartphone right now, there we list some of them running Android 10, which is the latest iteration of the OS. Do keep in mind that the Android 10 will be topped with the company's respective custom skin.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more