Just In
Don't Miss
- News
LIVE: ಜಾರ್ಖಂಡ್ 3ನೇ ಹಂತದ ಮತದಾನ ಸಂಪೂರ್ಣ ಅಪ್ಡೇಟ್ಸ್
- Sports
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್ಮ್ಯಾನ್ ರೋಹಿತ್!
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Lifestyle
ದಂಪತಿ ನಡುವಿದ್ದ ಭಿನ್ನಾಭಿಪ್ರಾಯ ಮತ್ತೆ ಸೆಕ್ಸ್ ಲೈಫ್ ಉತ್ತಮವಾಗಲು ಟಿಪ್ಸ್
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಜಿಯೋದ ಈ ಐದು ಆಪ್ಸ್ಗಳನ್ನು ನೀವು ಬಳಸಿದ್ದಿರಾ?
2016ರಲ್ಲಿ ಟೆಲಿಕಾಂ ವಲಯಕ್ಕೆ ಪ್ರವೇಶ ಮಾಡಿದ ರಿಲಾಯನ್ಸ್ 'ಜಿಯೋ' ಸಂಸ್ಥೆಯು ಭಾರತೀಯ ಟೆಲಿಕಾಂ ಕ್ಷೇತ್ರದ ಚಹರೆಯನ್ನೆ ಬದಲಾಯಿಸಿ ಬಿಟ್ಟಿತು. ಅಗ್ಗದ ಬೆಲೆಯಲ್ಲಿ ಕರೆಗಳು, ಎಸ್ಎಮ್ಎಸ್ ಮತ್ತು ಡೇಟಾ ಪ್ಲ್ಯಾನ್ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಮಿಂಚುತ್ತ ಮುಂದೆ ನಡೆದಿದೆ. ಹಾಗೆಯೇ ಜಿಯೋದ ಮನರಂಜನೆಯ ಸೇವೆಗಳು ಗ್ರಾಹಕರಿಗೆ ಅತ್ಯುತ್ತಮ ಎನಿಸಿದ್ದು, ಜಿಯೋದ ಬೇಡಿಕೆಯನ್ನು ಹೆಚ್ಚಿಸಿದೆ.
ಜಿಯೋ ಕಂಪನಿಯು ಗ್ರಾಹಕ ಸ್ನೇಹಿ ಡೇಟಾ ರೀಚಾರ್ಜ್ ಪ್ಲ್ಯಾನ್ಗಳನ್ನು ನೀಡುತ್ತಿದ್ದು, ಅದರೊಂದಿಗೆ ವಿಡಿಯೊ ಸ್ಟ್ರಿಮಿಂಗ್ ಮತ್ತು ಮ್ಯೂಸಿಕ್ ಆಪ್ಗಳ ಚಂದಾದಾರಿಕೆಯಲ್ಲಿಯೂ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಂಪನಿಯ ಜಿಯೋ ಸಾವನ್, ಜಿಯೋ ಲೈವ್ ಟಿವಿ, ಜಿಯೋ ಸಿನಿಮಾ, ಜಿಯೊ ಮನಿ ಪೇಮೆಂಟ್ ಮತ್ತು ಜಿಯೋ ಆಪ್ಗಳು ಗ್ರಾಹಕರನ್ನು ಸೆಳೆದಿವೆ. ಹಾಗಾದರೇ ಈ ಐದು ಅಪ್ಲಿಕೇಶನ್ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.
ಓದಿರಿ : ಶಿಯೋಮಿಯ 'ನೆಕ್ಬ್ಯಾಂಡ್ ಇಯರ್ಫೋನ್' ಲಾಂಚ್!.ಇದೇ ಜುಲೈ 23 ಸೇಲ್!

ಮೈ ಜಿಯೋ ಆಪ್
ಕಂಪನಿಯ 'ಜಿಯೋ ಆಪ್' ಗ್ರಾಹಕ ಸೆಲ್ಫ ಸರ್ವಿಸ್ ಕೇರ್ ಇದ್ದಂತೆ. ಯಾವುದೇ ಟೈಮ್ನಲ್ಲಿ ಬೇಕಾದರೂ ಈ ಆಪ್ನಲ್ಲಿ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ರೀಚಾರ್ಜ್ಗಾಗಿ ಹಲವಾರು ಪೇಮೆಂಟ್ ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ರೀಚಾರ್ಜ್ ಪ್ಲ್ಯಾನ್ಗಳ ಕಂಪ್ಲಿಟ್ ಮಾಹಿತಿ ಸಹ ಸೀಗಲಿದ್ದು, ರೀಚಾರ್ಜ್ ನಂತರ ಕ್ಯಾಶ್ಬ್ಯಾಕ್ ಸಹ ದೊರೆಯುವ ಸಾಧ್ಯತೆಗಳಿವೆ.

ಜಿಯೋ ಸಾವನ್
ಜಿಯೋ ಸಾವನ್ ಒಂದು ಮ್ಯೂಸಿಕ್ ಸ್ಟ್ರಿಮಿಂಗ್ ಅಪ್ಲಿಕೇಶನ್ ಆಗಿದ್ದು, ಬಳಕೆದಾರರು ಅವರಿಗಿಷ್ಟವಾದ ಹಾಡುಗಳನ್ನು ಕೇಳಬಹುದಾಗಿದೆ. ಕನ್ನಡ ಸೇರಿದಂತೆ ಮಲ್ಟಿಪಲ್ ಲಾಗ್ವೇಜ್ ಆಯ್ಕೆಗಳಲ್ಲಿ ಲಭ್ಯ ಇರುವ ಈ ಆಪ್ನಲ್ಲಿ ಹಾಡುಗಳು, ಲಿರಿಕ್ಸ್, ಪ್ಲೇಲಿಸ್ಟ್ ಮತ್ತು ಆರ್ಟಿಸ್ಟ್ ಕ್ಯಾಟಗರಿ ಆಯ್ಕೆಗಳು ಇವೆ. ಜಾಹಿರಾತು ಮುಕ್ತವಾದ ಮತ್ತು ಆಫ್ಲೈನ್ ಮೋಡ್ನಲ್ಲಿಯೂ ಸಹ ಆಪ್ ಬಳಸಬಹುದಾಗಿದೆ.
ಓದಿರಿ : ವಾಟ್ಸಪ್ನ ಈ ಹೊಸ ಫೀಚರ್ ಐಫೋನ್ ಬಳಕೆದಾರರಿಗೆ ಮಾತ್ರ!

ಜಿಯೋ ಟಿವಿ
ಜಿಯೋ ಕಂಪನಿಯು ತನ್ನ ಬಳಕೆದಾರರಿಗಾಗಿ ಜಿಯೋ ಟಿವಿ ಆಪ್ ಆಯ್ಕೆಯನ್ನು ನೀಡಿದ್ದು, ಸ್ಮಾರ್ಟ್ಫೋನ್ನಲ್ಲಿ ಜನಪ್ರಿಯ ಟಿವಿ ಶೋಗಳನ್ನು, ಸ್ಪೋರ್ಟ್ಸ್, ನ್ಯೂಸ್ಗಳನ್ನು ಮತ್ತು ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಬಹುದಾದಿದೆ. ಪ್ರಾದೇಶಿಕ ಭಾಷೆಗಳ ಆಯ್ಕೆಗಳು ಸಹ ಲಭ್ಯವಿದ್ದು, ಹಾಗೆಯೇ ಜನಪ್ರಿಯ ಚಾನಲ್ಗಳು ಸಹ ಬಳಕೆದಾರರಿಗೆ ದೊರೆಯಲಿವೆ.

ಜಿಯೋ ಸಿನಿಮಾ
ಬಳಕೆದಾರರು ಹಲವಾರು ಟಿವಿ ಶೋಗಳನ್ನು ಮತ್ತು ಸಿನಿಮಾಗಳನ್ನು ವೀಕ್ಷಿಸಲು ಅನುಕೂವಿದ್ದು, ಬೇಡಿಕೆ ಆಧಾರದ ಮೇಲೆ ಸಿನಿಮಾ ವೀಕ್ಷಿಸುವ ಸೌಲಭ್ಯವು ಸಹ ಇದೆ. ವಾಚ್ಲಿಸ್ಟ್, ಡಾಕ್ ಪ್ಲೇಯರ್, ವಾಯಿಸ್ ಸರ್ಚ್, ಬಿಟ್ರೆಟ್ ಸೆಲೆಕ್ಷನ್ ಮತ್ತು ಇನ್ನಿತರೆ ಫೀಚರ್ಸ್ಗಳನ್ನು ಸಹ ಕಾಣಬಹುದಾಗಿದೆ. ಜಿಯೋ ಟಿವಿಯೊಂದಿಗೆ ಈ ಸೌಲಭ್ಯಗಳನ್ನು ಬಳಕೆದಾರರಿಗೆ ದೊರಕಿಸಿವೆ.
ಓದಿರಿ : 'ನೆಟ್ಫ್ಲೆಕ್ಸ್' ತಿಂಗಳ ಚಂದಾಶುಲ್ಕ ಈಗ ತುಂಬಾ ಕಡಿಮೆ!

ಜಿಯೋ ಮನಿ
ಜಿಯೋ ಮನಿ ಸೇವೆಯು ಬಳಕೆದಾರರಿಗೆ ಆನ್ಲೈನ್ ಮೂಲಕ ಸುಲಭವಾಗಿ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಒದಗಿಸಲಿದೆ. ಈ ಸೇವೆಯಲ್ಲಿ ಬಳಕೆದಾರರು ಬಿಲ್ ಪೇಮೆಂಟ್, ಹಣ ಸ್ವೀಕರಿಸುವುದು ಮತ್ತು ಕಳುಹಿಸುವುದು, ರೀಚಾರ್ಜ್, ರೀಟೈಲ್ ಶಾಪ್ಗಳ ಪೇಮೆಂಟ್ ಹಲವು ಆನ್ಲೈನ್ ಪೇಮೆಂಟ್ ಆಯ್ಕೆಗಳು ಇವೆ. ಕೆಲವೊಮ್ಮೆ ಕೋಪನ್ ಸಹ ಲಭ್ಯವಾಗಲಿವೆ.
ಓದಿರಿ : ಒಪ್ಪೊ A9 ಸ್ಮಾರ್ಟ್ಫೋನ್ ಬಿಡುಗಡೆ : 128GB ಸ್ಟೋರೇಜ್ ಹೈಲೈಟ್!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090