ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ ಫೋಲ್ಡಬಲ್ ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್!

|

ದಕ್ಷಿಣ ಕೊರಿಯಾದ ಟೆಕ್ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೊನ್‌ಗಳ ಶ್ರೇಣಿಯಿಂದ ಗ್ರಾಹಕರನ್ನು ಸೆಳೆದಿದೆ. ಅವುಗಳಲ್ಲಿ ವಿಶೇಷ ಅನಿಸಿಕೊಂಡಿದ್ದು ಇತ್ತೀಚಿನ ಗ್ಯಾಲಕ್ಸಿ Z ಫ್ಲಿಪ್ ಫೋಲ್ಟೆಬಲ್ ಸ್ಮಾರ್ಟ್‌ಫೋನ್. ಈ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್ ಪ್ರೈಸ್‌ಟ್ಯಾಗ್ ಹೊಂದಿದ್ದು, ಹಾಗೆಯೇ ಹೈ ಎಂಡ್‌ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ. ಆದರೆ ಇದೀಗ ಭಾರಿ ಡಿಸ್ಕೌಂಟ್‌ನಲ್ಲಿ ಗ್ರಾಹಕರು ಈ ಫೋನ್ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ಯಾಲಕ್ಸಿ ಅವರ್ಸ್‌ ಫ್ಲ್ಯಾಶ್‌ ಸೇಲ್ ಆಯೋಜಿಸಿದೆ. ಈ ಸೇಲ್‌ನಲ್ಲಿ ಗ್ಯಾಲಕ್ಸಿ Z ಫ್ಲಿಪ್‌ ಫೋಲ್ಡೆಬಲ್ ಫೋನ್ ಮೇಲೆ ಶೇ.50% ವರೆಗೂ ಕಾಶ್‌ಬ್ಯಾಕ್‌ ರಿಯಾಯಿತಿ ದೊರೆಯಲಿದೆ ಎಂದು ಕಂಪನಿಯು ಹೇಳಿದೆ. ಅಂದಹಾಗೇ ಈ ಸೇಲ್ ಮೇಳವು ಪ್ರತಿ ಗುರುವಾರ ಮಾತ್ರ ಇರಲಿದೆ ಎಂದು ಸ್ಯಾಮ್‌ಸಂಗ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎಚ್‌ಡಿಎಫ್‌ಸಿ

ಈ ಕೊಡುಗೆಗಳಲ್ಲಿ ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಐಎನ್‌ಆರ್ 6000 ಕ್ಯಾಶ್‌ಬ್ಯಾಕ್ ಆಯ್ಕೆಗಳು ಸೇರಿವೆ. ಹಾಗೆಯೇ ಸಿಟಿಬ್ಯಾಂಕ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ವ್ಯವಹಾರಗಳು ಮತ್ತು ಎಕ್ಸ್‌ಚೇಂಜ್ ಮೇಲೆ 8000 ರೂಪಾಯಿಗಳ ಹೆಚ್ಚುವರಿ ವಿನಿಮಯ ಮೌಲ್ಯ ಸಿಗಲಿದೆ. ಒಂದು ವರ್ಷದ ಅವಧಿವರೆಗೂ ಆಕ್ಸಿಡೆಂಟ್‌ಲ್ ಸರ್ವೀಸ್ ಸಹ ದೊರೆಯುತ್ತದೆ. ಈ ಕೊಡುಗೆಯು ಜುಲೈ 9 ರಂದು ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ ನಿಗದಿಯಾಗಿದೆ. ಈ ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋಲ್ಡಬಲ್ ಸ್ಮಾರ್ಟ್‌ಫೋನ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋಲ್ಡಬಲ್ ಸ್ಮಾರ್ಟ್‌ಫೋನ್‌ 6.7-ಇಂಚಿನ ಫುಲ್‌ ಹೆಚ್‌ಡಿ+ ಫೋಲ್ಡಬಲ್ ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ಪ್ರಾಥಮಿಕ ಸ್ಕ್ರೀನ್‌ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೀವು ಸ್ಮಾರ್ಟ್‌ಫೋನ್ ಅನ್ನು ಬಿಚ್ಚಿದಾಗ ಲಭ್ಯವಾಗುತ್ತದೆ. ಮಡಿಸಿದಾಗ, 300 x 112 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 1.1-ಇಂಚಿನ ಸಣ್ಣ ದ್ವಿತೀಯ ಡಿಸ್‌ಪ್ಲೇಯನ್ನು ಸಹ ಹೊಂದಿದೆ. ಇದರಲ್ಲಿ ನೊಟಿಫೀಕೇಶನ್‌ಗಳನ್ನ ನೋಡುವುದಕ್ಕೆ ಸುಲಭವಾಗಲಿದೆ. ಜೊತೆಗೆ ಇದು ವ್ಯೂಫೈಂಡರ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ.

ಸ್ಮಾರ್ಟ್‌ಫೋನ್

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 855+ SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 8GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಎರಡು ಕ್ಯಾಮೆರಾಗಳು ಕೂಡ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿವೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್

ಇದಲ್ಲದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್‌ 3,300mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಮತ್ತು ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ಹಾಟ್‌ಸ್ಪಾಟ್‌, ವೈಫೈ, ಅನ್ನು ಬೆಂಬಲಿಸಲಿದೆ.

Most Read Articles
Best Mobiles in India

English summary
Galaxy Hours is Samsung India’s weekly flash sales event on Samsung.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X