'ಹಾನರ್ 20' ಮತ್ತು 'ಹಾನರ್ 20ಐ' ಖರೀದಿಗೆ ಸ್ಪೆಷಲ್ ಆಫರ್ ಘೊಷಿಸಿತು ಹಾನರ್!

|

ಇದೇ ಜುಲೈ 15 ರಿಂದ ಜುಲೈ 18 ರವರೆಗೆ ನಡೆಯುವ ಫ್ಲಿಪ್‌ಕಾರ್ಟ್ 'ಬಿಗ್ ಶಾಪಿಂಗ್ ದಿನ'ಗಳಲ್ಲಿ, ಹೊಸದಾಗಿ ಬಿಡುಗಡೆಯಾದ ಹಾನರ್ 20 ಮತ್ತು ಹಾನರ್ 20 ಐ ಸ್ಮಾರ್ಟ್‌ಫೋನ್‌ಗನ್ನು ಖರೀದಿಸಲು ತಯಾರಾಗಿ.! ಏಕೆಂದರೆ, 'ಹಾನರ್ 20i' ಖರೀದಿಗಾಗಿ ಪ್ರತಿ ಪ್ರಿಪೇಯ್ಡ್ ವಹಿವಾಟಿನಲ್ಲೂ ಗ್ರಾಹಕರಿಗೆ 1,000 ರೂ ತ್ವರಿತ ರಿಯಾಯಿತಿ ಪಡೆಯಲು ಹಾನರ್ ಅವಕಾಶ ಮಾಡಿಕೊಟ್ಟಿದ್ದರೆ, ಗ್ರಾಹಕರೂ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಶೇಕಡಾ 10 ರಷ್ಟು ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು.!

 'ಹಾನರ್ 20' ಮತ್ತು 'ಹಾನರ್ 20ಐ' ಖರೀದಿಗೆ ಸ್ಪೆಷಲ್ ಆಫರ್ ಘೊಷಿಸಿತು ಹಾನರ್!

ಹೌದು, ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಹಾನರ್ 20 ಮತ್ತು ಹಾನರ್ 20 ಐ ಸ್ಮಾರ್ಟ್‌ಫೋನ್‌ಗಳು ಭರ್ಜರಿ ಸದ್ದು ಮಾಡುತ್ತಿವೆ. ಇದರ ಜೊತೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಶೇಕಡಾ 10 ರಷ್ಟು ರಿಯಾಯಿತಿ, ಪ್ರತಿ ಪ್ರಿಪೇಯ್ಡ್ ವಹಿವಾಟಿನಲ್ಲೂ ಗ್ರಾಹಕರಿಗೆ 1,000 ರೂ ತ್ವರಿತ ರಿಯಾಯಿತಿ ಹಾಗೂ ಹಾನರ್ 20 ಖರೀದಿಗೆ ಹೆಚ್ಚುವರಿ ರೂ .3 ಸಾವಿರ ವಿನಿಮಯ ರಿಯಾಯಿತಿಯನ್ನು ನೀಡುವ ಮೂಲಕ ಹಾನರ್ ಭರ್ಜರಿ ಆಫರ್ ನೀಡಿದೆ. ಈ ಆಫರ್ ಕೇವಲ ಸೀಮಿತ ಅವದಿಯಲ್ಲಿ ಮಾತ್ರ ಲಭ್ಯವಿದೆ.

ಜುಲೈ 15 ರಂದು ಬೆಳಿಗ್ಗೆ 8 ಗಂಟೆಗೆ ಮಾರಾಟ ಪ್ರಾರಂಭವಾಗುವ ಫ್ಲಿಪ್‌ಕಾರ್ಟ್ ಮಾರಾಟ ಮೇಳದಲ್ಲಿ 'ಫ್ಲಿಪ್‌ಕಾರ್ಟ್ ಪ್ಲಸ್' ಗ್ರಾಹಕರಿಗೆ ಈ ಆರಂಭಿಕ ಅನುಕೂಲವಿದೆ ಮತ್ತು ಉಳಿದ ಗ್ರಾಹಕರಿಗೆ ಮಧ್ಯಾಹ್ನ 12 ಗಂಟೆಯಿಂದ ಈ ಆಫರ್ ಲಭ್ಯವಾಗಲಿದೆ. ಹಾಗಾದರೆ, ತಡ ಏಕೆ?. ಭರ್ಜರಿ ಆಫರ್‌ಗಳಲ್ಲಿ ಹಾನರ್ 20 ಮತ್ತು ಹಾನರ್ 20ಐ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಲು ಈಗಲೇ ತಯಾರಾಗಿ. ಮತ್ತು ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಬಜೆಟ್ ಸ್ಮಾರ್ಟ್‌ಫೋನ್ 'ಹಾನರ್ 20 ಐ' ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ಹಾನರ್ 20ಐ' ಡಿಸೈನ್

'ಹಾನರ್ 20ಐ' ಡಿಸೈನ್

ಬಜೆಟ್ ಫೋನ್‌ಗಳಲ್ಲೇ ಆಕರ್ಷಕ ಡಿಸೈನ್‌ ಹೊಂದಿದೆ ಎಂದು ಹೇಳಬಹುದಾದ ವಿನ್ಯಾಸದಲ್ಲಿ 'ಹಾನರ್ 20ಐ' ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಪಂಚ್‌ಹೋಲ್‌ ಸೆಲ್ಫೀ ಕ್ಯಾಮೆರಾ ನೋಚ್ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಗ್ಲಾಸ್ ಬಾಡಿಯನ್ನು ಹೊಂದಿದೆ. ಇನ್ನು ಹಿಂಬಾಗದಲ್ಲಿ ಮೂರು ರಿಯರ್ ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಗಳನ್ನು ನೋಡಬಹುದು.

'ಹಾನರ್ 20ಐ' ಡಿಸ್‌ಪ್ಲೇ

'ಹಾನರ್ 20ಐ' ಡಿಸ್‌ಪ್ಲೇ

1080 x 2340 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.21 ಇಂಚಿನ FHD+ ಡಿಸ್‌ಪ್ಲೇಯನ್ನು 'ಹಾನರ್ 20ಐ' ಹೊಂದಿದೆ. ಸ್ಮಾರ್ಟ್‌ಫೋನ್ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರ ಶೇ.82.91 % ರಷ್ಟಿದ್ದು, ಪಿಕ್ಸಲ್ ಸಾಂದ್ರತೆಯು 415ppi ಮತ್ತು ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. FHD+ ಡಿಸ್‌ಪ್ಲೇ ವೀಡಿಯೊಗೆ ಮತ್ತು ಗೇಮಿಂಗ್‌ಗೆ ಸರಿಯಾದ ರೆಸಲ್ಯೂಶನ್ ನೀಡಲಿದೆ.

'ಹಾನರ್ 20ಐ' ಪ್ರೊಸೆಸರ್

'ಹಾನರ್ 20ಐ' ಪ್ರೊಸೆಸರ್

'ಹಾನರ್ 20ಐ' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್ ಹಿಲಿಸಿಲಿಕಾನ್ ಕಿರಿನ್ 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್ EMUI 9 ಆಂಡ್ರಾಯ್ಡ್ 9 ಪೈ ಮೂಲಕ ರನ್ ಆಗಲಿದೆ. Mali-G51 MP4 ಸಾಮರ್ಥ್ಯದ ಗ್ರಾಫಿಕ್ ಸೌಲಭ್ಯ ಪಬ್‌ಜಿಯಂತಹ ಗೇಮ್ ಆಡಲು ಸಹಾಯಕ.

'ಹಾನರ್ 20ಐ' ಸೆಲ್ಫೀ ಕ್ಯಾಮೆರಾ

'ಹಾನರ್ 20ಐ' ಸೆಲ್ಫೀ ಕ್ಯಾಮೆರಾ

ಸೆಲ್ಫೀ ಪ್ರಿರಿಗೆ 'ಹಾನರ್ 20ಐ' ಸ್ಮಾರ್ಟ್‌ಫೋನ್ ಹೇಳಿಮಾಡಿಸಿದಂತಿದ್ದು, 32ಎಂಪಿ ಸಾಮರ್ಥ್ಯದ ಕೃತಕ ಬುದ್ದಿಮತ್ತೆ (ಎಐ) ಸೆಲ್ಫೀ ಕ್ಯಾಮೆರಾವನ್ನು ಫೋನಿನಲ್ಲಿ ಅಳವಡಿಲಾಗಿದೆ. ಬ್ಯೂಟಿ ಪ್ಲಸ್, ಆಟೊ ಫೋಕಸ್ ಸೇರಿದಂತೆ ಎಐಎಸ್ ಸೂಪರ್ ನೈಟ್ ಮೋಡ್‌ಗೆ ಬೆಂಬಲ ನೀಡುವಂತಹ ಹಲವು ಕೃತಕ ಬುದ್ದಿಮತ್ತೆ ಕ್ಯಾಮೆರಾ ತಂತ್ರಜ್ಞಾನಗಳು ಸೆಲ್ಫೀ ಪ್ರಿಯರನ್ನು ಸೆಳೆಯಲಿವೆ.

'ಹಾನರ್ 20ಐ' ರಿಯರ್ ಕ್ಯಾಮೆರಾ

'ಹಾನರ್ 20ಐ' ರಿಯರ್ ಕ್ಯಾಮೆರಾ

'ಹಾನರ್ 20ಐ' ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು l f/1.8 ಅಪಾರ್ಚರ್‌ನಲ್ಲಿ 24ಎಂಪಿ ಸಾಮರ್ಥ್ಯದಾಗಿದ್ದರೆ, 8ಎಂಪಿ ವೈಡ್ ಆಂಗಲ್ ಮತ್ತು 2ಎಂಪಿ ಡೆಪ್ತ್ ಕ್ಯಾಮೆರಾಗಳು ರಿಯರ್ ಕ್ಯಾಮೆರಾ ಸಾಮರ್ಥ್ಯ ಎಂದು ಹೇಳಬಹುದು. ಇನ್ನು ರಿಯರ್ ಕ್ಯಾಮೆರಾವು ಸಂಪೂರ್ಣ 'ಎಐ' ಎಂಬುದನ್ನು ಕ್ಯಾಮೆರಾದ ಮೇಲೆಯೇ ಬರೆಯಲಾಗಿದೆ.

'ಹಾನರ್ 20ಐ' ಬ್ಯಾಟರಿ ಸಾಮರ್ಥ್ಯ

'ಹಾನರ್ 20ಐ' ಬ್ಯಾಟರಿ ಸಾಮರ್ಥ್ಯ

'ಹಾನರ್ 20ಐ' ಸ್ಮಾರ್ಟ್‌ಫೋನ್‌ 3,400mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುವ ಬಲವನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ, ಈ ಫೋನ್ ಯಾವುದೇ ವೇಗವಾದ ಚಾರ್ಜಿಂಗ್ ಅನ್ನು ಬೆಂಬಲಿಸುವಂತೆ ಕಾಣಿಸುತ್ತಿಲ್ಲ. ಏಕೆಂದರೆ, ಮೊಬೈಲ್ ಬಾಕ್ಸ್ 10W ಚಾರ್ಜರ್ ಅನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.

'ಹಾನರ್ 20ಐ' ವಿಶೇಷತೆಗಳು

'ಹಾನರ್ 20ಐ' ವಿಶೇಷತೆಗಳು

14,999 ರೂ.ಗಳಲ್ಲಿ ತ್ರಿವಳಿ ಕ್ಯಾಮರಾ ವ್ಯವಸ್ಥೆ ಹಾಗೂ 32 ಎಂಪಿ ಎಐ ಸೆಲ್ಫಿ ಕ್ಯಾಮರಾ ಹೊಂದಿರುವ ಫೋನ್‌ಗಳಲ್ಲಿ 'ಹಾನರ್ 20ಐ' ಮೊದಲ ಸ್ಥಾನದಲ್ಲಿದೆ ಎಂದು ಹೇಳಬಹುದು. ಇನ್ನು ಪ್ರೊಸೆಸರ್ ಕೂಡ ಬೆಲೆಗೆ ತಕ್ಕಂತಂಹ ಶಕ್ತಿಯುತವಾಗಿದೆ. FHD+ ಡಿಸ್‌ಪ್ಲೇ ಮೂಲಕ ಗಮನಸೆಳೆಯುವ ಈ ಫೋನ್ ಖರೀದಿಗೆ ಅತ್ಯುತ್ತಮವಾದ ಒಂದು ಬಜೆಟ್ ಫೋನ್ ಎಂದೆನ್ನಬಹುದು.

Most Read Articles
Best Mobiles in India

English summary
Honor has announced some deals on the newly launched Honor 20 and the Honor 20i smartphones during the upcoming Flipkart Big Shopping Days. to know more visit to know more visit to kannada.gizbot.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more