ಹುವಾಯಿಯ ನೋವಾ ಮತ್ತು ನೋವಾ ಪ್ಲಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಹತ್ತು ಸಂಗತಿಗಳು.

|

ಈ ವರ್ಷದ ಅತ್ಯುತ್ತಮ ಫೋನುಗಳು ಎನ್ನಬಹುದಾದ ಮೇಟ್ 8 ಹಾಗೂ ಪಿ9 ಅನ್ನು ಬಿಡುಗಡೆಗೊಳಿಸಿದ ನಂತರ, ಹುವಾಯಿ ಕಂಪನಿಯು ಕೈಗೆಟುಕುವ ದರದ ಫೋನುಗಳನ್ನು ಬಿಡುಗಡೆಗೊಳಿಸಿದೆ.

ಹುವಾಯಿಯ ನೋವಾ ಮತ್ತು ನೋವಾ ಪ್ಲಸ್ ಬಗ್ಗೆ ನಿಮಗೆ ತಿಳಿದಿರಬೇಕಾದ ಹತ್ತು ಸಂಗತಿಗಳು.

ಓದಿರಿ: ಬಿಎಸ್‌ಎನ್‌ಎಲ್‌ನಿಂದ ರೂ.1 ಕ್ಕಿಂತ ಕಡಿಮೆಗೆ 1GB ಇಂಟರ್ನೆಟ್ ಆಫರ್ ಶೀಘ್ರದಲ್ಲಿ!

ಬರ್ಲಿನ್ನಿನಲ್ಲಿ ನಡೆಯುತ್ತಿರುವ ಐ.ಎಫ್.ಎಯಲ್ಲಿ ಹುವಾಯಿ ನೋವಾ ಸರಣಿಯ ಸ್ಮಾರ್ಟ್ ಫೋನುಗಳನ್ನು ಘೋಷಿಸಿದೆ. ಈ ಸರಣಿಯಲ್ಲಿ - ನೋವಾ ಮತ್ತು ನೋವಾ ಪ್ಲಸ್ ಎಂಬ ಎರಡು ಫೋನುಗಳಿವೆ. ಎರಡೂ ಫೋನುಗಳು ಟೈಟಾನಿಯಂ ಗ್ರೇ, ಮಿಸ್ಟಿಕ್ ಸಿಲ್ವರ್, ಪ್ರೆಸ್ಟೀಜ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅಕ್ಟೋಬರ್ ತಿಂಗಳಿನಿಂದ ಮಾರಾಟವಾಗಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುವಾಯಿ ನೋವಾ - ನೆಕ್ಸಸ್ 6ಪಿಯ ಕುಬ್ಜ ಆವೃತ್ತಿ!

ಹುವಾಯಿ ನೋವಾ - ನೆಕ್ಸಸ್ 6ಪಿಯ ಕುಬ್ಜ ಆವೃತ್ತಿ!

ವಿಮಾನದಲ್ಲಿ ಉಪಯೋಗಿಸುವ ಅಲ್ಯುಮಿನಿಂ ಗುಣಮಟ್ಟವನ್ನು ಉಪಯೋಗಿಸಿಕೊಂಡು ಹುವಾಯಿ ನೋವಾ ಫೋನನ್ನು ತಯಾರಿಸಿದೆ. 6ಪಿ ಫೋನಿನ ರೀತಿಯಲ್ಲಿಯೇ ಇದರಲ್ಲೂ ಸ್ಯಾಂಡ್ ಬ್ಲಾಸ್ಟೆಡ್ ಶೆಲ್ ಹಾಗೂ ರೌಂಡ್ ಎಡ್ಜ್ ಇರಲಿದೆ.

443ಪಿಪಿಐನ 5 ಇಂಚಿನ ಪರದೆ.

443ಪಿಪಿಐನ 5 ಇಂಚಿನ ಪರದೆ.

ಹುವಾಯಿ ನೋವಾ ಫೋನಿನಲ್ಲಿ 1920x1080ಪಿಕ್ಸೆಲ್ಸ್, 443 ಪಿಪಿಐ ಹೊಂದಿರುವ 5 ಇಂಚಿನ ಐಪಿಎಸ್ ಫುಲ್ ಹೆಚ್.ಡಿ ಪರದೆಯಿದೆ. ಆದರೆ ಮನುಷ್ಯನ ಕಣ್ಣುಗಳು 300ಪಿಪಿಐಗಿಂತ ಹೆಚ್ಚಿನ ವಿವರಗಳನ್ನು ಗುರುತಿಸುವುದಿಲ್ಲ ಎಂದು ಗಮನಿಸಲಾಗಿದೆ..

ಎದ್ದು ಕಾಣುವ ಲಕ್ಷಣಗಳ್ಯಾವೂ ಇಲ್ಲ.

ಎದ್ದು ಕಾಣುವ ಲಕ್ಷಣಗಳ್ಯಾವೂ ಇಲ್ಲ.

ಫೋನಿನಲ್ಲಿ 2GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 625 ಚಿಪ್ ಇದೆ, ಇದು ಸ್ನಾಪ್ ಡ್ರಾಗನ್ 615ನ ಮುಂದುವರಿದ ಆವೃತ್ತಿ. ಈ ಫೋನಿನಲ್ಲಿರುವ 3020 ಎಂ.ಎ.ಹೆಚ್ ಬ್ಯಾಟರಿಯು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನ ಬರುತ್ತದೆ ಎಂದು ಕಂಪನಿ ಹೇಳುತ್ತದೆ. ಇದರಲ್ಲಿ ದಕ್ಷ 14 ಎನ್.ಎಂ ಚಿಪ್ ಸೆಟ್ ಇರುವುದರಿಂದ ಬ್ಯಾಟರಿ ಉಳಿಕೆ ಮತ್ತು ಕಾರ್ಯನಿರ್ವಹಣೆಯ ನಡುವೆ ಸಮತೋಲನವಿರುತ್ತದೆ.

128ಜಿಬಿವರೆಗೆ ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳಬಹುದು.

128ಜಿಬಿವರೆಗೆ ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳಬಹುದು.

ಹುವಾಯಿ ನೋವಾದಲ್ಲಿ 3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. 32 ಜಿಬಿಯಲ್ಲಿ 22 ಜಿಬಿ ಬಳಕೆದಾರರಿಗೆ ಸಿಗಲಿದೆ. ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು ಸಂಗ್ರಹ ಸಾಮರ್ಥ್ಯವನ್ನು 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.

ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಎಮೋಷನ್ ಯು.ಐ 4.1 ಹಾಗೂ ಯು.ಎಸ್.ಬಿ ಟೈಪ್ ಸಿ ಚಾರ್ಜಿಂಗ್ ಲಭ್ಯವಿದೆ.

ನೋವಾದಲ್ಲಿ ಪಿ9ನ ಹಲವು ಲಕ್ಷಣಗಳಿವೆ.

ನೋವಾದಲ್ಲಿ ಪಿ9ನ ಹಲವು ಲಕ್ಷಣಗಳಿವೆ.

ಕ್ಯಾಮೆರಾದ ವಿಷಯಕ್ಕೆ ಬಂದರೆ ನೋವಾದಲ್ಲಿ ಆಟೋ ಫೋಕಸ್ ಹೊಂದಿರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಹಾಗೂ ಫಿಕ್ಸೆಡ್ ಫೋಕಸ್ ಹೊಂದಿರುವ 8ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇದೆ. ವೇಗವಾಗಿ ಫೋಕಸ್ ಮಾಡಲು ಈ ಸ್ಮಾರ್ಟ್ ಫೋನಿನಲ್ಲಿ ಪಿ.ಡಿ.ಎ.ಎಫ್ (ಫೇಸ್ ಫೋಕಸಿಂಗ್) ಹಾಗೂ ಸಿ.ಎ.ಎಫ್ (ಕಾಂಟ್ರ್ಯಾಸ್ಟ್ ಫೋಕಸಿಂಗ್) ಸೌಲಭ್ಯಗಳಿವೆ. ಲೈಟ್ ಪೇಯಿಂಟಿಂಗ್, ಟೈಮ್ ಲ್ಯಾಪ್ಸ್ ಮತ್ತು ಸ್ಲೋ ಮೋಷನ್ ಆಯ್ಕೆಗಳಿವೆ.

ಮುಂಬದಿಯಲ್ಲಿ 8 ಮೆಗಾಪಿಕ್ಸೆಲ್ಲಿನ ಕ್ಯಾಮೆರಾ ಇದೆ , ಸ್ವಂತೀ ತೆಗೆದುಕೊಳ್ಳಲು. ಹಿಂದಿರುವ ಬೆರಳಚ್ಚು ಸಂವೇದಕವನ್ನುಪಯೋಗಿಸಿಯೂ ಬಳಕೆದಾರರು ಸ್ವಂತೀ ಫೋಟೋ ತೆಗೆದುಕೊಳ್ಳಬಹುದು. ಬ್ಯುಟಿ ಸ್ಕಿನ್ 3.0 ಹಾಗೂ ಬ್ಯುಟಿ ಮೇಕ್-ಅಪ್ 2.0 ಇದೆ. ಹುವಾಯಿಯಲ್ಲಿರುವ ಸ್ಕಿನ್ ಸಾಫ್ಟ್ ವೇರನ್ನು ಫೋಟೋ ಮತ್ತು ವೀಡಿಯೋಗಳೆರಡರಲ್ಲೂ ಉಪಯೋಗಿಸಬಹುದು.

ಹುವಾಯಿ ನೋವಾ ಪ್ಲಸ್ - ಕುಬ್ಜ ಮೇಟ್ 8.

ಹುವಾಯಿ ನೋವಾ ಪ್ಲಸ್ - ಕುಬ್ಜ ಮೇಟ್ 8.

ನೋವಾ ಪ್ಲಸ್ ನಲ್ಲಿ ಕೂಡ ವಿಮಾನದಲ್ಲಿ ಉಪಯೋಗಿಸುವ ಅಲ್ಯುಮಿನಿಯಂ ಗುಣಮಟ್ಟವನ್ನು ಉಪಯೋಗಿಸಲಾಗಿದೆ. 151.8 x 75.7 x 7.3 ಎಂ.ಎಂ ಗಾತ್ರವಿರುವ ಫೋನಿನ ತೂಕ 160 ಗ್ರಾಮುಗಳು.

ದೊಡ್ಡ ಪರದೆ, ಸ್ನಾಪ್ ಡ್ರಾಗನ್ 625.

ದೊಡ್ಡ ಪರದೆ, ಸ್ನಾಪ್ ಡ್ರಾಗನ್ 625.

ಈ ದೊಡ್ಡ ಫೋನಿನಲ್ಲಿ 2.5ಡಿ ಕರ್ವ್ಡ್ ಗ್ಲಾಸ್, 1920 x 1080 ಪಿಕ್ಸೆಲ್ಸ್, 401 ಪಿಪಿಐ ಹೊಂದಿರುವ 5.5 ಇಂಚಿನ ಪರದೆಯಿದೆ. ನೋವಾ ಫೋನಿನಂತೆಯೇ ಇದರಲ್ಲೂ ಸ್ನಾಪ್ ಡ್ರಾಗನ್ 625 ಅಡ್ರಿನೋ 506 ಜಿಪಿಯು ಇದೆ.

ಮಲ್ಟಿ ಯೂಸರ್ ಹಾಗೂ ನಕ್ಕಲ್ ಟ್ಯಾಪ್.

ಮಲ್ಟಿ ಯೂಸರ್ ಹಾಗೂ ನಕ್ಕಲ್ ಟ್ಯಾಪ್.

ನೋವಾ ಪ್ಲಸ್ ಫೋನಿನಲ್ಲಿ, ಬಳಕೆದಾರರು ಹಲವು ಪ್ರೊಫೈಲುಗಳನ್ನು ತೆರೆಯಬಹುದು, ಇದರಿಂದ ಉತ್ತಮ ಭದ್ರತೆ ಸಿಗುತ್ತದೆ.

ಜೊತೆಗೆ, ಇದರಲ್ಲಿ ನಕ್ಕಲ್ ಟ್ಯಾಪ್ ಶಾರ್ಟ್ ಕಟ್ಟುಗಳನ್ನು ಉಪಯೋಗಿಸಿಕೊಂಡು ಸ್ಕ್ರೀನ್ ಶಾಟುಗಳನ್ನು ತೆಗೆಯಬಹದು, ವೀಡಿಯೋ ರೆಕಾರ್ಡ್ ಮಾಡಬಹುದು, ಸ್ಪ್ಲಿಟ್ ಸ್ಕ್ರೀನ್ ಆ್ಯಪ್ ಮೋಡನ್ನು ಆಯ್ಕೆ ಮಾಡಬಹುದು.

ಟ್ರೈ ಆ್ಯಕ್ಷಿಯಲ್ ಒ.ಐ.ಎಸ್ ತಂತ್ರಜ್ಞಾನ.

ಟ್ರೈ ಆ್ಯಕ್ಷಿಯಲ್ ಒ.ಐ.ಎಸ್ ತಂತ್ರಜ್ಞಾನ.

ಈ ಸ್ಮಾರ್ಟ್ ಫೋನಿನಲ್ಲಿ ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಪಿ.ಡಿ.ಎ.ಎಫ್, ಒ.ಐ.ಎಸ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಇದೆ ಹಾಗೂ ಎಫ್/2.0 ಅಪರ್ಚರ್ ಹೊಂದಿರುವ 8ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇದೆ.

ಐ.ಎಸ್.ಒ ಮತ್ತು ಶಟರ್ ವೇಗವನ್ನು ನಿಯಂತ್ರಿಸಲು ಪ್ರೊ ಮೋಡ್ ಇದೆ. ಕಲಾತ್ಮಕ ಚಿತ್ರಗಳನ್ನು ತೆಗೆಯಲು ಲೈಟ್ ಪೇಯಿಂಟಿಂಗ್ ತಂತ್ರಾಂಶವಿದೆ. ಸ್ವಂತೀ ಗೀಳಿನವರಿಗೆ, ರಿಯಲ್ ಟೈಮ್ ಪ್ರಿವ್ಯೀವ್ ಹಾಗೂ ಎಂಟು ಟೆಂಪ್ಲೇಟ್ ಗಳು ಲಭ್ಯವಿದೆ.

ದೊಡ್ಡ ಬ್ಯಾಟರಿ.

ದೊಡ್ಡ ಬ್ಯಾಟರಿ.

ನೋವಾ ಪ್ಲಸ್ ನಲ್ಲಿ 3,340ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ. ಒಮ್ಮೆ ಚಾರ್ಜ್ ಮಾಡಿದರೆ 2.2 ದಿನ ಬರುತ್ತದೆ. 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಫೋನಿನಲ್ಲಿ ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 128 ಜಿಬಿವರೆಗೆ ಸಂಗ್ರಹವನ್ನು ವಿಸ್ತರಿಸಿಕೊಳ್ಳುವ ಸೌಲಭ್ಯವಿದೆ.

Most Read Articles
Best Mobiles in India

Read more about:
English summary
After the launch of the best possible smartphone this year -- Mate 8 and P9, the company has returned to the slightly more affordable segment. Huawei has officially announced the launch of its Nova series of the smartphones at IFA 2016, Berlin. This Nova lineup has -- Nova and Nova Plus. Both the smartphones will come in Titanium Grey, Mystic

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more