ಇನ್ಫಿನಿಕ್ಸ್‌ ಸ್ಮಾರ್ಟ್‌ 5A ಫಸ್ಟ್‌ ಲುಕ್‌: ಕಡಿಮೆ ಬೆಲೆಗೆ ಆಕರ್ಷಕ ಬ್ಯಾಟರಿ ಬ್ಯಾಕ್‌ಅಪ್‌ ಫೋನ್‌!

|

ಹಾಂಗ್ ಕಾಂಗ್ ಮೂಲದ ಇನ್ಫಿನಿಕ್ಸ್ ಕಂಪೆನಿಯು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ ಪರಿಚಯಿಸಿರುವ ಇನ್ಫಿನಿಕ್ಸ್‌, ಇದೀಗ ಇತ್ತೀಚಿಗಷ್ಟೆ ನೂತನವಾಗಿ 'ಇನ್ಫಿನಿಕ್ಸ್ ಸ್ಮಾರ್ಟ್ 5A' ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಫೋನ್ ಅಗ್ಗದ ಪ್ರೈಸ್‌ ಟ್ಯಾಗ್‌ ಮತ್ತು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೋ A20 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಡ್ಯುಯಲ್‌

ಹೌದು, ಇನ್ಫಿನಿಕ್ಸ್‌ ಕಂಪೆನಿ ಪರಿಚಯಿಸಿರುವ ಹೊಸ 'ಇನ್ಫಿನಿಕ್ಸ್‌ ಸ್ಮಾರ್ಟ್‌ 5A' ಎಂಟ್ರಿ ಲೆವೆಲ್‌ ಫೋನ್‌ ಆಗಿದ್ದು, ಕಡಿಮೆ ಬೆಲೆಯಲ್ಲಿ ಗುರುತಿಸಿಕೊಂಡಿದೆ. ಅದಾಗ್ಯೂ ಫೋನ್ ಟ್ರೆಂಡಿ ಲುಕ್ ಪಡೆದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗಾದರೇ ಹೊಸ ಇನ್ಫಿನಿಕ್ಸ್‌ ಸ್ಮಾರ್ಟ್‌ 5A ಸ್ಮಾರ್ಟ್‌ಫೋನ್ ಫಸ್ಟ್‌ ಲುಕ್ ಹೇಗಿದೆ?..ಈ ಫೋನಿನ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ಇನ್ಫಿನಿಕ್ಸ್‌ ಸ್ಮಾರ್ಟ್‌ 5A ಸ್ಮಾರ್ಟ್‌ಫೋನ್‌ 6.52 ಇಂಚಿನ ಹೆಚ್‌ಡಿ ಪ್ಲಸ್‌ IPS LCD ಡಿಸ್‌ಪ್ಲೇಯನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇಯು 1560×720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಫೋನಿನ ಡಿಸ್‌ಪ್ಲೇಯ ಅನುಪಾತವು 20:9 ರಷ್ಟಾಗಿದೆ. ಹಾಗೆಯೇ ಡಿಸ್‌ಪ್ಲೇಯು AGC AS2 ಗ್ಲಾಸ್‌ನಿಂದ ಸಂರಕ್ಷಿತವಾಗಿದೆ. ತನ್ನ ವರ್ಗದಲ್ಲಿಯೇ ಈ ಫೋನ್ ಡಿಸೈನ್‌ ಹಾಗೂ ಡಿಸ್‌ಪ್ಲೇ ಮೊದಲ ನೋಟ್‌ದಲ್ಲಿಯೇ ಗ್ರಾಹಕರನ್ನು ಆಕರ್ಷಿಸುವಂತಿದೆ.

ಪ್ರೊಸೆಸರ್‌ ಪವರ್ ಯಾವುದು

ಪ್ರೊಸೆಸರ್‌ ಪವರ್ ಯಾವುದು

ಇನ್ಫಿನಿಕ್ಸ್‌ ಸ್ಮಾರ್ಟ್‌ 5A ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹೆಲಿಯೊ A20 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಗೋ ಓಎಸ್‌ ಸಪೋರ್ಟ್‌ ನೀಡಲಾಗಿದೆ. ಹಾಗೆಯೇ ಈ ಫೋನ್ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಕಡಿಮೆ ಬೆಲೆಯ ಫೋನ್‌ ಆಗಿದ್ದರೂ ಹೆಚ್ಚುವರಿ ಸ್ಟೋರೇಜ್‌ಗೆ ಪೂರಕ ಅವಕಾಶ ನೀಡಲಾಗಿದೆ. ಗ್ರಾಹಕರು ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಪಡೆದಿದೆ. ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ ವರ್ಗದಲ್ಲಿಯೇ ಉತ್ತಮ ಎಂದು ಹೇಳಬಹುದು.

ಡ್ಯುಯಲ್ ಕ್ಯಾಮೆರಾ ಸೆನ್ಸಾರ್

ಡ್ಯುಯಲ್ ಕ್ಯಾಮೆರಾ ಸೆನ್ಸಾರ್

ಇನ್ಫಿನಿಕ್ಸ್‌ ಸ್ಮಾರ್ಟ್‌ 5A ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಹೊಂದಿದೆ. ಅವುಗಳಲ್ಲಿ ಮುಖ್ಯ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ದ್ವಿತೀಯ ಕ್ಯಾಮೆರಾವು ಡೆಪ್ತ್ ಸೆನ್ಸಾರ್ ಸಪೋರ್ಟ್‌ ಪಡೆದಿದೆ. ಹಾಗೆಯೇ 8 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ ಹಿಂಬದಿ ಮತ್ತು ಸೆಲ್ಫಿಗಾಗಿ ಎಲ್‌ಡಿಇ ಫ್ಲ್ಯಾಶ್‌ ಸಹ ಇದೆ. ಫೋಟೊ ಫೀಲ್ಟರ್ ಹಾಗೂ ಎಡಿಟಿಂಗ್ ಆಯ್ಕೆಗಳು ಇವೆ. ತನ್ನ ವರ್ಗದಲ್ಲಿಯೇ ಆಕರ್ಷಕ ಕ್ಯಾಮೆರಾ ಫೀಚರ್‌ ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು?..ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು?..ಮತ್ತು ಇತರೆ ಸೌಲಭ್ಯಗಳು

ಇನ್ಫಿನಿಕ್ಸ್‌ ಸ್ಮಾರ್ಟ್‌ 5A ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್‌ ಬ್ಯಾಟರಿಯು 35 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ತಲುಪಿಸುತ್ತದೆ ಎಂದು ಹೇಳಲಾಗಿದೆ. ಅಗ್ಗದ ದರದಲ್ಲಿ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಸ್ಮಾರ್ಟ್‌ಫೋನ್ ಬಯಸುವ ಗ್ರಾಹಕರ ಗಮನ ಸೆಳೆಯಲಿದೆ. 4G ಟಾಕ್‌ಟೈಮ್‌ನ 33 ಗಂಟೆಗಳವರೆಗೆ ಫೋನ್ ಇರುತ್ತದೆ ಎಂದು ಇನ್ಫಿನಿಕ್ಸ್ ಹೇಳುತ್ತದೆ. ಹಾಗೆಯೇ 13 ಗಂಟೆಗಳ ಗೇಮಿಂಗ್ ಸಮಯ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE , ವೈ-ಫೈ ಮತ್ತು ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ ಸ್ಮಾರ್ಟ್‌ 5A ಸ್ಮಾರ್ಟ್‌ಫೋನ್‌ ಭಾರತದಲ್ಲಿ 2 GB RAM + 32GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 6,999ರೂ,ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್‌ ಆನ್‌ಲೈನ್‌ ತಾಣಗಳ ಮೂಲಕ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನ್ ಮಿಡ್ನೈಟ್ ಬ್ಲಾಕ್, ಓಷನ್ ವೇವ್ ಮತ್ತು ಕ್ವೆಟ್ಜಾಲ್ ಸಯಾನ್ ಬಣ್ಣಗಳ ಆಯ್ಕೆ ಪಡೆದಿದೆ.

Most Read Articles
Best Mobiles in India

English summary
Infinix Smart 5A First Look: Long Lasting Battery Phone At Low Price Tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X