ಜಿಯೋ, ಏರ್‌ಟೆಲ್‌, ವೊಡಾಫೋನ್ ವಾರ್ಷಿಕ ಪ್ಲ್ಯಾನ್‌: ಅಧಿಕ ಡೇಟಾಗೆ ಯಾವುದು ಬೆಸ್ಟ್‌?

|

ದೇಶದಲ್ಲಿ ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಈ ನಡುವೆ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿಯೂ ಅನುಕೂಲಕರ ಕೊಡುಗೆಗಳನ್ನು ಘೋಷಿಸಿವೆ. ಹಾಗೆಯೇ ಭಿನ್ನ ಬೆಲೆಯಲ್ಲಿ ಹಲವು ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಬಹುತೇಕರು ವಾರ್ಷಿಕ ಪ್ಲ್ಯಾನ್‌ಗಳತ್ತ ಹೆಚ್ಚು ಗಮನ ನೀಡುತ್ತಾರೆ.

ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್-ಐಡಿಯಾ

ಹೌದು, ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್-ಐಡಿಯಾ ಸಂಸ್ಥೆಗಳು ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್‌ಗಳ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನ್‌ಗಳು ಕ್ರಮವಾಗಿ ಜಿಯೋ(2121 ಮತ್ತು 2399) 2.398ರೂ.(ಏರ್‌ಟೆಲ್‌) ಮತ್ತ 2,399ರೂ.(ವೊಡಾಫೋನ್) ಗಳಾಗಿವೆ. ಹಾಗಾದರೇ ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್‌ಗಳ ವಾರ್ಷಿಕ ಪ್ಲ್ಯಾನ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 2121ರೂ.ಪ್ಲ್ಯಾನ್

ಜಿಯೋ 2121ರೂ.ಪ್ಲ್ಯಾನ್

ಜಿಯೋ 2121ರೂ.ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಅನಿಯಮಿತ ಜಿಯೋ ಟು ಜಿಯೋ ವಾಯಿಸ್‌ ಕರೆಗಳು ಲಭ್ಯವಾಗಲಿದ್ದು, ಜಿಯೋದಿಂದ ಇತರೆ ಟೆಲಿಕಾಂ ನೆಟವರ್ಕ್‌ಗಳಿಗೆ ಒಟ್ಟು 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ದೊರೆಯುತ್ತದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನವನ್ನು ಒಳಗೊಂಡಿದ್ದು, ಜಿಯೋ ಟಿವಿ, ಜಿಯೋ ಸಿನಿಮಾ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಸೇವೆಯು ದೊರೆಯುತ್ತದೆ. ಇನ್ನು ಈ ಪ್ಲ್ಯಾನ್‌ 336 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

ಜಿಯೋ 2,399ರ ಪ್ಲಾನ್‌

ಜಿಯೋ 2,399ರ ಪ್ಲಾನ್‌

ಜಿಯೋದ ಹೊಸದಾಗಿ ಪರಿಚಯಿಸಿರುವ 2,399ರೂ. ವಾರ್ಷಿಕ ಪ್ಲಾನ್‌, ಹಿಂದಿನ 2121ರೂ. ಪ್ಲ್ಯಾನ್‌ಗಿಂತ ಹೆಚ್ಚಿನ ಪ್ರಯೋಜನ ಪಡೆದಿದೆ. ಈ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಅನಿಯಮಿತ ಎಸ್‌ಎಮ್‌ಎಸ್‌, ವಾಯಿಸ್‌ ಕರೆಗಳು ಸೇರಿದಂತೆ ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇತರೆ ಟೆಲಿಕಾಂಗಳಿಗೂ ಹೋಲಿಸಿದರೂ ಇದು ಉತ್ತಮ ವಾರ್ಷಿಕ ಯೋಜನೆ ಅನಿಸಲಿದೆ.

ಏರ್‌ಟೆಲ್ 2398ರೂ. ಪ್ಲ್ಯಾನ್

ಏರ್‌ಟೆಲ್ 2398ರೂ. ಪ್ಲ್ಯಾನ್

ಏರ್‌ಟೆಲ್‌ನ 2398ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗುತ್ತದೆ.

ವೊಡಾಫೋನ್ 2399ರೂ.ಪ್ಲ್ಯಾನ್

ವೊಡಾಫೋನ್ 2399ರೂ.ಪ್ಲ್ಯಾನ್

ವೊಡಾಫೋನಿನ 2399ರೂ.ಪ್ಲ್ಯಾನ್ ಒಂದು ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಹಾಗೂ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ.

ಯಾವುದು ಬೆಸ್ಟ್‌

ಯಾವುದು ಬೆಸ್ಟ್‌

ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್ ಟೆಲಿಕಾಂ ಸಂಸ್ಥೆಯುಗಳು ಸಹ ವಾರ್ಷಿಕ ಯೋಜನೆಗಳನ್ನು ಪಡೆದುಕೊಂಡಿವೆ. ಮೂರು ಟೆಲಿಕಾಂಗಳ ವಾರ್ಷಿಕ ಪ್ಲ್ಯಾನ್‌ಗಳ ಪೈಕಿ ಜಿಯೋ ಭಿನ್ನವಾದ ಪ್ರಯೋಜನಗಳನ್ನು ಹೊಂದಿದ್ದು, ಗ್ರಾಹಕರಿಗೆ ಆಕರ್ಷಕ ಅನಿಸಲಿದೆ. ಆದರೆ ನೆಟವರ್ಕ್ ಲಭ್ಯತೆಯ ಆಧಾರದ ಮೇಲೆ ಗ್ರಾಹಕರು ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೆಯೇ ಕೆಲವರು ಅಧಿಕ ಡೇಟಾ ಬಳಸಿದರೇ ಇನ್ನು ಕೆಲವರು ವಾಯಿಸ್‌ ಕರೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಅಂಶಗಳು ಪ್ರಭಾವ ಬೀರುತ್ತವೆ.

Most Read Articles
Best Mobiles in India

English summary
Jio, Airtel And Vodafone Annual Plans offers data and validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more