13,999 ಸಾವಿರದ ಈ ನೋಕಿಯಾ ಫೋನಿನಲ್ಲಿದೆ ನೋಚ್ ಡಿಸ್‌ಪ್ಲೇ!!

|

ಮೊಬೈಲ್ ಕಂಪೆನಿಗಳಿಗೆ ನಡುಕಹುಟ್ಟಿಸಿದ್ದ ನೋಕಿಯಾದ ಹೊಸ ಮೂರು ಬಜೆಟ್ ಸ್ಮಾರ್ಟ್‌ಫೋನ್‌ಗಳ ಸುದ್ದಿ ಇದೀಗ ಮತ್ತೆ ವೈರಲ್ ಆಗಿದೆ. ನೋಕಿಯಾ ಕಂಪೆನಿಯ ಅತ್ಯಂತ ಕಡಿಮೆ ಬೆಲೆಯಲ್ಲಿ ನೋಕಿಯಾ 5.1, ನೋಕಿಯಾ 3.1, ಮತ್ತು ನೋಕಿಯಾ 2.1 ಹೆಸರಿನ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಮತ್ತಷ್ಟು ಬದಲಾವಣೆಯನ್ನು ತರುವುದು ಮೊಬೈಲ್ ಲೋಕದಲ್ಲಿ ಸ್ಪಷ್ಟವಾಗಿದೆ.

ವಿಶ್ವ ಟೆಕ್ ಲೋಕದಲ್ಲಿ ಇದೀಗ ಲೀಕ್ ಆಗಿರುವ ಮಾಹಿತಿಯಂತೆ, ನೋಕಿಯಾ 5.1 ಸ್ಮಾರ್ಟ್‌ಫೋನ್ ಹಲವು ಹೊಸ ಫೀಚರ್ಸ್‌ಗಳ ಜೊತೆಗೆ ಐಫೋನ್ ಎಕ್ಸ್ ಮಾದರಿ ವಿನ್ಯಾಸದ ನೋಟ್ ಡಿಸ್‌ಪ್ಲೇಯನ್ನು ಹೊಂದಿದೆ ಎನ್ನಲಾದ ಚಿತ್ರ ಲೀಕ್ ಆಗಿದೆ. ಇದರಿಂದ ಮೊದಲೇ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಲಿರುವ ನೋಕಿಯಾ 5.1 ಫೋನಿನ ಮೇಲೆ ಕುತೋಹಲ ಮತ್ತೆ ಹೆಚ್ಚಾಗಿದೆ.

13,999 ಸಾವಿರದ ಈ ನೋಕಿಯಾ ಫೋನಿನಲ್ಲಿದೆ ನೋಚ್ ಡಿಸ್‌ಪ್ಲೇ!!

ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗಿಂತ ಅತ್ಯಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ನೋಕಿಯಾ ತನ್ನ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ ಹೊಸದಾಗಿ ನೋಕಿಯಾ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಸೇರಿಸಿಕೊಳ್ಳುತ್ತಿದ್ದು, ಹಾಗಾದರೆ. ನೋಕಿಯಾ 5.1, ನೋಕಿಯಾ 3.1, ಮತ್ತು ನೋಕಿಯಾ 2.1 ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಮತ್ತು ಬೆಲೆಯ ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ನೋಕಿಯಾ ನಂಬರ್ ಗೇಮ್!!

ನೋಕಿಯಾ ನಂಬರ್ ಗೇಮ್!!

ನೋಕಿಯಾ 5, ನೋಕಿಯಾ 3, ಮತ್ತು ನೋಕಿಯಾ 2 ಯಶಸ್ಸನ್ನು ಹೆಚ್ಚು ಮಾಡಿಕೊಳ್ಳಲು ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ಇದೀಗ ನೋಕಿಯಾ 5.1, ನೋಕಿಯಾ 3.1, ಮತ್ತು ನೋಕಿಯಾ 2.1 ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಮೊದಲಿನ ಸ್ಮಾರ್ಟ್‌ಫೋನ್‌ಗಳಿಗಿಂತ ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಇರುವುದನ್ನು ಹೆಚ್‌ಎಮ್‌ಡಿ ಸ್ಪಷ್ಟಪಡಿಸಿದೆ.

ಫೋನ್‌ಗಳ ಬಿಡುಗಡೆ ಯಾವಾಗ?

ಫೋನ್‌ಗಳ ಬಿಡುಗಡೆ ಯಾವಾಗ?

ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ಹೊಸದಾಗಿ ಬಿಡುಗಡೆ ಮಾಡುತ್ತಿರುವ ನೋಕಿಯಾ 5.1, ನೋಕಿಯಾ 3.1, ಮತ್ತು ನೋಕಿಯಾ 2.1 ಮೂರು ಸ್ಮಾರ್ಟ್‌ಫೋನ್‌ಗಳು ಇದೇ ಜುಲೈ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ಜುಲೈ ತಿಂಗಳಿನಲ್ಲಿ ಈ ಮೂರು ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದೆ.

ನೋಕಿಯಾ 5.1!

ನೋಕಿಯಾ 5.1!

ನೋಕಿಯಾ 5.1 ಸ್ಮಾರ್ಟ್‌ಫೋನಿನಲ್ಲಿ ನೋಚ್ ವಿನ್ಯಾಸದಲ್ಲಿರುವ 18: 9 ಆಕಾರ ಅನುಪಾತ ಫುಲ್‌ ಹೆಚ್‌ಡಿ + (1,080 x 2,160 ಪಿಕ್ಸೆಲ್) ಡಿಸ್‌ಪ್ಲೇನ್ನು ನೀಡಲಾಗಿದೆ. 2.5 ಡಿ ಗೊರಿಲ್ಲಾ ಗ್ಲಾಸ್, ಡ್ಯುಯಲ್ ರಿಯರ್ ಹಾಗೂ 8 MP ಸೆಲ್ಫಿ ಕ್ಯಾಮರಾ, 2,970 mAh ಬ್ಯಾಟರಿ, 3 ಜಿಬಿ RAM / 32 ಜಿಬಿ ಮೆಮೊರಿಯನ್ನು ಹೊಂದಿರುವ ನೋಕಿಯಾ 5.1 ಸ್ಮಾರ್ಟ್‌ಫೋನ್ 13,999 ಸಾವಿರ ರೂ. ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ನೋಕಿಯಾ 3.1

ನೋಕಿಯಾ 3.1

ನೋಕಿಯಾದ ಅತ್ಯಂತ ಯಶಸ್ವಿ ಸ್ಮಾರ್ಟ್‌ಫೋನ್ ನೋಕಿಯಾ 3 ಮಾದರಿಯು ಹಲವಾರು ಸುಧಾರಣೆಗಳೊಂದಿಗೆ ನೋಕಿಯಾ 3.1 ಸ್ಮಾರ್ಟ್‌ಫೋನ್ ಪ್ರವೇಶಿಸುತ್ತಿವೆ. 18: 9 ಅನುಪಾತದಲ್ಲಿ 5.2 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ, ಒಕ್ಟಾ ಕೋರ್ ಚಿಪ್‌ಸೆಟ್, 2 ಜಿಬಿ / 3 ಜಿಬಿ RAM, 16 ಜಿಬಿ / 32 ಜಿಬಿ ಮೆಮೊರಿ, 13 ಎಂಪಿ ರಿಯರ್ ಕ್ಯಾಮೆರಾ, ನೋಕಿಯಾ 3 (2018) , ಆಂಡ್ರಾಯ್ಡ್ 8.1 ಓರಿಯೊ ಮತ್ತು 2,990mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ನೋಕಿಯಾ 3.1 ಸ್ಮಾರ್ಟ್‌ಫೋನ್ 9,000 ರೂಪಾಯಿ ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದೆ.

How to Send Message to Multiple Contacts on WhatsApp - GIZBOT KANNADA
ನೋಕಿಯಾ 2.1!

ನೋಕಿಯಾ 2.1!

ನೋಕಿಯಾ 5.1, ನೋಕಿಯಾ 3.1 ಸ್ಮಾರ್ಟ್‌ಫೋನ್‌ಗಳ ಜೊತೆಯಲ್ಲಿ ಆಂಡ್ರಾಯ್ಡ್ ಓರಿಯೊ ಗೋ ಆವೃತ್ತಿಯ ನೋಕಿಯಾ 2.1 ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಯಾಗುತ್ತಿದೆ. 5.5 ಇಂಚಿನ ಹೆಚ್‌ ಡಿಸ್‌ಪ್ಲೇ, ಸ್ನಾಪ್ಡ್ರಾಗನ್ 425 ಚಿಪ್‌ಸೆಟ್, 1 ಜಿಬಿ RAM, 8 ಜಿಬಿ ಶೇಖರಣಾ (4.7 ಜಿಬಿ ಲಭ್ಯವಿದೆ), ಮೈಕ್ರೊ ಎಸ್‌ಡಿ ಸ್ಲಾಟ್ ಮತ್ತು 4,000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗುತ್ತಿರುವ ನೋಕಿಯಾ 2.1 ಬೆಲೆ 7,೦೦೦ ಸಾವಿರ ರೂಪಾಯಿಗಳಾಗಿರಲಿದೆ ಎನ್ನಲಾಗಿದೆ.

Best Mobiles in India

English summary
Nokia 5.1 Plus renders, 360-degree leaked video reveals notched display, dual rear cameras. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X