ಭಾರತದಲ್ಲಿ ಬಿಡುಗಡೆ ಆಗುವ ಮೊದಲೇ ಲೀಕ್ ಆಯ್ತ ನೋಕಿಯಾ ಪೋನ್

Written By:

ಭಾರತದಲ್ಲಿ ನೋಕಿಯಾ ಲಾಂಚ್ ಆಗಲಿದೆ ಎನ್ನುವ ಸುದ್ದಿಯನ್ನು ಕೇಳಿ ಖುಷಿ ಪಡುವ ಸಂದರ್ಭದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಹೇಗಿರಲಿದೆ ಎನ್ನುವ ಕುತೂಹಲಕ್ಕೆ ತೆರೆ ಬಿಳುವ ಘಟನೆಯೊಂದು ನಡೆದಿದ್ದು, ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಹೇಗಿರಲಿದೆ ಎನ್ನುವ ವಿಡಿಯೋವೊಂದು ಲೀಕ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ ಎನ್ನಲಾಗಿದೆ.

ಭಾರತದಲ್ಲಿ ಬಿಡುಗಡೆ ಆಗುವ ಮೊದಲೇ ಲೀಕ್ ಆಯ್ತ ನೋಕಿಯಾ ಪೋನ್

ನೋಕಿಯಾ ಸ್ಮಾರ್ಟ್‌ಫೋನ್‌ಗಳಲ್ಲಿ ನೋಕಿಯಾ 6 ಮಾತ್ರವೇ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಅದನ್ನು ಬಿಟ್ಟರೇ ಉಳಿದ ಫೋನ್‌ಗಳು ಇನ್ನು ವಿಶ್ವದ ಯಾವುದೇ ಮಾರುಕಟ್ಟೆಯಲ್ಲಿಯೂ ಬಿಡುಗಡೆಯಾಗಿಲ್ಲ. ಈ ಹಿನ್ನಲೆಯಲ್ಲಿ ಅಭಿಮಾನಿಗಳಲ್ಲಿ ನೋಕಿಯಾ ಫೋನ್‌ಗಳು ಯಾವ ವಿನ್ಯಾಸದಲ್ಲಿ ದೊರೆಯಲಿದೆ ಎನ್ನುವ ಕೂತುಹಲವು ಮನೆ ಮಾಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾದ ನಾಲ್ಕು ಸ್ಮಾರ್ಟ್‌ಫೋನ್‌:

ನೋಕಿಯಾದ ನಾಲ್ಕು ಸ್ಮಾರ್ಟ್‌ಫೋನ್‌:

ಸದ್ಯ ಬಿಡುಗಡೆಯಾಗಿರುವ ವಿಡಿಯೋದಲ್ಲಿ ನೋಕಿಯಾ ನಾಲ್ಕು ಸ್ಮಾರ್ಟ್‌ಫೋನ್‌ಗಳ ಮಾಹಿತಿಯೋ ಲೀಕ್ ಆಗಿದ್ದು, ಅವುಗಳನ ವಿನ್ಯಾಸ ಹೇಗಿದೆ, ಕ್ಯಾಮೆರಾ ಹೇಗೆದೆ, ಬಣ್ಣಗಳು ಯಾವುವು ಎಂಬುದನ್ನು ತೋರಿಸಲಾಗಿದೆ.

ನೋಕಿಯಾ 9ನಲ್ಲಿ ಡ್ಯುಯಲ್ ಕ್ಯಾಮೆರಾ:

ನೋಕಿಯಾ 9ನಲ್ಲಿ ಡ್ಯುಯಲ್ ಕ್ಯಾಮೆರಾ:

ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟುಹಾಕಿರುವ ಡ್ಯಯಲ್ ಕ್ಯಾಮೆರಾ ಸೆಟಪ್ ನೂತನ ನೋಕಿಯಾ ಸ್ಮಾರ್ಟ್‌ಫೋನ್‌ನಲ್ಲಿಯೂ ಕಾಣಬಹುದಾಗಿದೆ. ಇದು ನೋಕಿಯಾದ ಟಾಪ್ ಎಂಡ್ ಪೋನ್ ನೋಕಿಯಾ 9 ನಲ್ಲಿ ಕಾಣಸಿಗಲಿದೆ ಎನ್ನಲಾಗಿದೆ. ನೋಡಲು ಇದು ಬಲು ಸುಂದರವಾಗಿದೆ. ಇದು 22 MP ಕ್ಯಾಮೆರಾದ ಡ್ಯುಯಲ್ ಸೆಟಪ್ ಆಗಿದೆ.

ನೋಕಿಯಾ 8 ಸಹ ಕಾಣಿಸಿಕೊಂಡಿದೆ:

ನೋಕಿಯಾ 8 ಸಹ ಕಾಣಿಸಿಕೊಂಡಿದೆ:

ಇದೇ ಮಾದರಿಯಲ್ಲಿ ನೋಕಿಯಾ 8 ಸ್ಮಾರ್ಟ್‌ಫೋನ್‌ ಸಹ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಎಡ ಭಾಗದಿಂದ ಎರಡನೇ ಫೋನ್ ಇದಾಗಿದೆ. ಇದರಲ್ಲೂ 5.7 ಇಂಚಿನ ಪರದೆ ಇದ್ದು, ಮುಂಭಾಗದಲ್ಲಿ 12 MP ಸೆಲ್ಪಿ ಕ್ಯಾಮೆರಾ ಇದೆ ಎನ್ನಲಾಗಿದೆ. ಉತ್ತಮ ವಿನ್ಯಾಸ ಇದರದಾಗಿದೆ.

ನೀವೆ ವಿಡಿಯೋ ನೋಡಿ:

ಸದ್ಯ ಇಂಟರ್ನೆಟ್ ನಲ್ಲಿ ಲೀಕ್ ಆಗಿರುವ ನೋಕಿಯಾ ಸ್ಮಾರ್ಟ್ ಫೋನ್ ಹೇಗಿದೆ ಎಂಬುನ್ನು ನಾವಿಲ್ಲಿ ತೋರಿಸಲಿದ್ದು, ನಿಮ್ಮ ನೆಚ್ಚಿನ ನೋಕಿಯಾದ ಹೊಸ ರೂಪ ಹೇಗಿದೆ ಎಂಬುದನ್ನು ನೀವೆ ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
While Nokia 3310 (2017) was launched in India on Tuesday, it seems like some high-end hardware from the brand has accidentally been leaked on the Internet. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot