Just In
- 8 min ago
ಜಿಯೋ ಗ್ರಾಹಕರೇ?..ಅಧಿಕ ಇಂಟರ್ನೆಟ್ ಅಗತ್ಯವೇ?..ಹಾಗಿದ್ರೆ ಈ ಪ್ಲ್ಯಾನ್ ಬೆಸ್ಟ್!
- 1 hr ago
ನಿಮ್ಮ ಹತ್ತಿರದ COVID-19 ವ್ಯಾಕ್ಸಿನೇಷನ್ ಸೆಂಟರ್ ಅನ್ನು ಟ್ರ್ಯಾಕ್ ಮಾಡುವುದು ಹೇಗೆ?
- 2 hrs ago
ಫೇಸ್ಬುಕ್ ಬಳಕೆದಾರರೇ, ಈ ರೀತಿಯ ಸ್ಕ್ಯಾಮ್ಗಳ ಬಗ್ಗೆ ಎಚ್ಚರದಿಂದಿರಿ!
- 3 hrs ago
ಐಒಎಸ್ ಆವೃತ್ತಿಯಲ್ಲಿ ಎರಡು ಹೊಸ ಫೀಚರ್ಸ್ ಪರಿಚಯಿಸಿದ ವಾಟ್ಸಾಪ್!
Don't Miss
- News
ಕುಮಾರಸ್ವಾಮಿಗೆ ಹಾಸಿಗೆ ಇಲ್ಲ ಎಂದ ಆಸ್ಪತ್ರೆ; ಆರೋಗ್ಯ ಸಚಿವರ ಸ್ಪಷ್ಟನೆ
- Education
ICSE Class 10, ISC Class 12 Exams Postponed : ಐಸಿಎಸ್ಇ 10ನೇ ತರಗತಿ ಐಎಸ್ಸಿ 12ನೇ ತರಗತಿ ವಾರ್ಷಿಕ ಪರೀಕ್ಷೆ ಮುಂದೂಡಿಕೆ
- Movies
ನಟ ವಿವೇಕ್ ನಿಧನ: ಕನ್ನಡ ಸಿನಿ ತಾರೆಯರು ಸಂತಾಪ ಸೂಚಿಸಿದ್ದು ಹೀಗೆ
- Automobiles
ಇವಿ ಸ್ಕೂಟರ್ ಬೇಡಿಕೆ ಹೆಚ್ಚಳ- ಮತ್ತೆರಡು ಹೊಸ ನಗರಗಳಲ್ಲಿ ಚೇತಕ್ ಇವಿ ಪರಿಚಯಿಸಲಿದೆ ಬಜಾಜ್
- Sports
ಫುಟ್ಬಾಲ್ ಐಕಾನ್ ಹುಸೇನ್ ಕೊರೊನಾಗೆ ಬಲಿ
- Lifestyle
ನಿಮ್ಮ ಸೈನಸ್ ನೋವನ್ನು ತೊಡೆದುಹಾಕಲು ಇಲ್ಲಿದೆ ಸುಲಭ ಪರಿಹಾರಗಳು
- Finance
LIC ಉದ್ಯೋಗಿಗಳಿಗೆ ಗುಡ್ನ್ಯೂಸ್: ವೇತನ ಹೆಚ್ಚಳ, ವಾರಕ್ಕೆ 5 ದಿನ ಕೆಲಸ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಕೊ x2 ಮತ್ತು ಪೊಕೊ F1: ವ್ಯತ್ಯಾಸಗಳೆನು?..ಯಾವುದು ಯೋಗ್ಯ?
ಶಿಯೋಮಿಯ ಸಬ್ಬ್ರ್ಯಾಂಡ್ ಪೊಕೊ ಇತ್ತೀಚಿಗಷ್ಟೆ ಸ್ವತಂತ್ರ ಸಂಸ್ಥೆಯಾಗಿದೆ. ಪೊಕೊ ಸಂಸ್ಥೆಯು ಇದೀಗ ಹೊಸದಾಗಿ ಪೊಕೊ X2 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಹೈ ಎಂಡ್ ಫೀಚರ್ಸ್ಗಳಿಂದ ಗುರುತಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸುವ ಲಕ್ಷಣ ಹೊರಹಾಕಿದೆ. ಪೊಕೊ ಎಕ್ಸ್2 ಫೋನ್, ಜನಪ್ರಿಯ ಪೊಕೊ ಎಫ್ 1 ಸ್ಮಾರ್ಟ್ಫೋನ್ನೊಂದಿಗೆ ಹೋಲಿಸಿದಾಗ ಹಲವು ಭಿನ್ನತೆಗಳು ಕಾಣಿಸುತ್ತವೆ.

ಹೌದು, ಪೊಕೊ ಎಕ್ಸ್2 ಸ್ಮಾರ್ಟ್ಫೋನ್ ಒಂದು ರೀತಿಯಲ್ಲಿ ಪೊಕೊ ಎಫ್ 1 ಸ್ಮಾರ್ಟ್ಫೋನಿನ ಮುಂದುವರಿಗ ಭಾಗವಾಗಿದೆ ಎಂದು ಹೇಳಬಹುದು. ಡಿಸ್ಪ್ಲೇ, ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ ಫೀಚರ್ಸ್ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಅಪ್ಡೇಟ್ಗಳನ್ನು ಈ ಸ್ಮಾರ್ಟ್ಫೋನ್ ಕಂಡಿದೆ. ಆದರೆ ಸ್ಮಾರ್ಟ್ಫೋನ್ ಪ್ರಿಯರ ಲಿಸ್ಟಿನಲ್ಲಿ ಪೊಕೊ ಎಫ್1 ಈಗಲೂ ಸ್ಥಾನ ಪಡೆದಿದೆ. ಪೊಕೊ ಎಕ್ಸ್2 ಮತ್ತು ಪೊಕೊ ಎಫ್1 ಸ್ಮಾರ್ಟ್ಫೋನ್ಗಳ ಫೀಚರ್ಸ್ಗಳ ಹೇಗಿವೆ, ವ್ಯತ್ಯಾಸಗಳೆನು ಎನ್ನುವ ಹೋಲಿಕೆಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಮುಂದೆ ಓದಿರಿ.

ಡಿಸ್ಪ್ಲೇ ಡಿಸೈನ್ ಹೇಗಿವೆ
ಪೊಕೊ X2 ಸ್ಮಾರ್ಟ್ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯ ಅನುಪಾತವು 20:9 ಆಗಿದ್ದು, ಸ್ಕ್ರೀನ್ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.84.8% ಆಗಿದೆ. ಇನ್ನು ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 395ppi ಆಗಿದ್ದು, ಡಿಸ್ಪ್ಲೇಯು 120Hz ರೀಫ್ರೇಶಿಂಗ್ ರೇಟ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್ 5 ಸಹ ಪಡೆದಿದೆ. ಅದೇ ರೀತಿ ಶಿಯೋಮಿಯ 'ಪೊಕೊ ಎಫ್1' ಸ್ಮಾರ್ಟ್ಫೋನ್ 6.18 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದ್ದು, ಡಿಸ್ಪ್ಲೇಯು 1080x2246 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಫೋನಿನ ಡಿಸ್ಪ್ಲೇಯ ಅನುಪಾತವು 18.7:9 ರಷ್ಟಿದ್ದು, ಫೋನಿನ ಸ್ಕ್ರೀನ್ ರಕ್ಷಣೆಗಾಗಿ ಉತ್ತಮ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ. ಪೊಕೊ ಎಕ್ಸ್2 ಫೋನಿನ ಡಿಸ್ಪ್ಲೇಯಲ್ಲಿ ಸಾಕಷ್ಟು ಅಪ್ಡೇಟ್ ಕಾಣಬಹುದಾಗಿದೆ.

ಪ್ರೊಸೆಸರ್ ಸಾಮರ್ಥ್ಯವೆನು
ಪೊಕೊ X2 ಸ್ಮಾರ್ಟ್ಫೋನ್ ಸ್ನ್ಯಾಪ್ಡ್ರಾಗನ್ 730G ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದುಕೊಂಡಿದೆ. ಅಡದರೆನೊ 618 ಗ್ರಾಫಿಕ್ಸ್ ಪಡೆದಿದೆ. ಇದರೊಂದಿಗೆ 6GB RAM + 64GB, 6GB RAM + 128GB ಮತ್ತು 8GB RAM + 256GB ಸಾಮರ್ಥ್ಯ ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಎಸ್ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ. ಇನ್ನು ಪೊಕೊ ಎಫ್ 1 ಫೋನ್ 2.8GHz ಆಕ್ಟಾಕೋರ್, ಕ್ವಾಲ್ಕಂ ಸ್ನ್ಯಾಪ್ಡ್ರಾಗನ್ 845 ಪ್ರೊಸೆಸರ್ ಶಕ್ತಿಯನ್ನು ಒಳಗೊಂಡಿರುವ ಪೊಕೊ ಎಫ್ 1' ಸ್ಮಾರ್ಟ್ಫೋನ್, ಮಲ್ಟಿಟಾಸ್ಕ್ ಕೆಲಸಗಳನ್ನು ಸಲಿಸಾಗಿ ನಿಭಾಯಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್ 9 ಅಪರೇಟಿಂಗ್ ಸಿಸ್ಟಮ್ ಸಹ ಈ ಸ್ಮಾರ್ಟ್ಫೋನಿನಲ್ಲಿ ಕಾಣಬಹುದು. ಈ ಸ್ಮಾರ್ಟ್ಫೋನ್ 6GB RAM ಮತ್ತು 128GB, 6GB RAM ಮತ್ತು 64GB ಮತ್ತು 8GB RAM ಮತ್ತು 256GB ಟಾಪ್ಎಂಡ್ ವೇರಿಯಂಟ್ ಮಾದರಿಗಳಲ್ಲಿಯೂ ದೊರೆಯಲಿದೆ.

ಕ್ಯಾಮೆರಾ ವಿಶೇಷತೆ ಏನಿದೆ
ಪೊಕೊ X2 ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು ಸೋನಿಯ IMX686 ಸೆನ್ಸಾರ್ ಒಳಗೊಂಡ 64ಎಂಪಿ ಕ್ಯಾಮೆರಾ ಆಗಿದೆ. ಸೆಕೆಂಡರಿ ಕ್ಯಾಮೆರಾವು ಅಲ್ಟ್ರಾ ವೈಲ್ಡ್ ಆಂಗಲ್ನ 8ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಇನ್ನು ಮುಂಬದಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಅವುಗಳು 20ಎಂಪಿ ಮತ್ತು 2ಎಂಪಿ ಸೆನ್ಸಾರ್ ಹೊಂದಿವೆ. ಹಾಗೆಯೇ ಪೊಕೊ ಎಫ್1 ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾಗಳನ್ನು ಒದಗಿಸಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಸಾಮರ್ಥ್ಯದ ಉತ್ತಮ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಹಲವು ವಿಶೇಷ ಆಯ್ಕೆಗಳು ಸಹ ಇವೆ. ಪೊಕೊ ಎಕ್ಸ್2 ಫೋನಿನಲ್ಲಿ 64ಎಂಪಿ ಕ್ಯಾಮೆರಾ ಹೈಲೈಟ್ ಆಗಿದೆ.

ಬ್ಯಾಟರಿ ಬಲ
ಪೊಕೊ X2 ಸ್ಮಾರ್ಟ್ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಇದರೊಂದಿಗೆ 27W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೆ ಫಿಂಗರ್ಪ್ರಿಂಟ್ ಸೆನ್ಸಾರ್, ವೈಫೈ 802.11ac, ಎನ್ಎಫ್ಸಿ, ಜಿಪಿಎಸ್, ಯುಎಸ್ಬಿ, ಬ್ಲೂಟೂತ್, ಆಯ್ಕೆಗಳು ಇರಲಿವೆ. ಬ್ಲೂ, ರೆಡ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದೇ ರೀತಿ ಪೊಕೊ ಎಫ್ 1 ಸ್ಮಾರ್ಟ್ಫೋನ್ 4000mAh ಸಾಮರ್ಥ್ಯದ ಬಲವಾದ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘ ಕಾಲದವರೆಗೂ ಬಾಳಕೆ ಒದಗಿಸುವ ಶಕ್ತಿಯನ್ನು ಪಡೆದಿದೆ. ಇದರೊಂದಿಗೆ 3.0 ತಂತ್ರಜ್ಞಾನದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ನೀಡಲಾಗಿದ್ದು, ಇದರ ನೆರವಿನಿಂದ ಸ್ಮಾರ್ಟ್ಫೋನ್ ಬೇಗನೇ ಚಾರ್ಜ್ ಪಡೆದುಕೊಳ್ಳುವ ಸಾಮರ್ಥ್ಯ ಪಡೆದಿದೆ.

ಬೆಲೆ ಎಷ್ಟು
ಪೊಕೊ ಎಕ್ಸ್2 ಸ್ಮಾರ್ಟ್ಫೋನ್ ಒಟ್ಟು ಮೂರು ವೇರಿಯಂಟ್ ಮಾದರಿಗಳಲ್ಲಿ ಲಾಂಚ್ ಆಗಿದ್ದು, 6GB RAM + 64GB ಬೇಸಿಕ್ ವೇರಿಯಂಟ್ ಬೆಲೆಯು 15,999ರೂ ಆಗಿದೆ. ಇನ್ನು 6GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 16,999ರೂ ಆಗಿದ್ದು, 8GB RAM + 256GB ಸಾಮರ್ಥ್ಯದ ಹೈಎಂಡ್ ವೇರಿಯಂಟ್ ಬೆಲೆಯು 19,999ರೂ.ಗಳಾಗಿದೆ. ಇನ್ನು ಪೊಕೊ ಎಕ್ಸ್2 ಫೋನ್ ಸೇಲ್ ಇದೇ ಫೆಬ್ರುವರಿ 11ರಿಂದ ಶುರುವಾಗಲಿದೆ. ಇನ್ನು ಪೊಕೊ ಎಫ್1 ಸ್ಮಾರ್ಟ್ಫೋನ್ 6GB RAM + 128GB ವೇರಿಯಂಟ್ 14,999ರೂ. ಪ್ರೈಸ್ಟ್ಯಾಗ್ ಹೊಂದಿದೆ. ಹಾಗೆಯೇ 8GB RAM + 256GB ವೇರಿಯಂಟ್ 18,999ರೂ. ಬೆಲೆಯನ್ನು ಹೊಂದಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999