'ರಿಯಲ್‌ ಮಿ 3 ಪ್ರೊ' ಸ್ಮಾರ್ಟ್‌ಫೋನ್ ಖರೀದಿಸಲು ಇನ್ನು ಕಾಯಬೇಕಿಲ್ಲ!

|

ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಇತ್ತೀಚಿನ ಜನಪ್ರಿಯ ಸ್ಮಾರ್ಟ್‌ಫೋನ್ 'ರಿಯಲ್‌ ಮಿ 3 ಪ್ರೊ' ಇದೀಗ ದೇಶದಾಧ್ಯಂತ 8000 ರಿಟೇಲ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ ಎಂದು ರಿಯಲ್‌ಮಿ ತಿಳಿಸಿದೆ. ಒಟ್ಟು ಮೂರು ಮೂರು ಆವೃತ್ತಿಗಳಲ್ಲಿ ಬಿಡುಗಡೆಯಾಗಿರುವ ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಫೋನನ್ನು ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್‌ ರಿಯಲ್‌ಮಿ ಸ್ಟೋರ್‌ಗಳ ಜೊತೆಗೆ ಸಾಮಾನ್ಯ ಅಂಗಡಿಗಳಲ್ಲೂ ಸಹ ನೇರವಾಗಿ ಖರೀದಿಸಬಹುದು ಎಂದು ಕಂಪೆನಿ ಹೇಳಿದೆ.

ಹೌದು, 4ಜಿಬಿ ರ್ಯಾಮ್‌ 64 ಜಿಬಿ ಆಂತರಿಕ ಸಂಗ್ರಹ (ದರ 13,999 ರೂ.), 6 ಜಿಬಿ ರ್ಯಾಮ್‌ ಮತ್ತು 64 ಜಿಬಿ ಆಂತರಿಕ ಸಂಗ್ರಹ (ದರ 15,999 ರೂ.) ಮತ್ತು 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ (ದರ 16,999 ರೂ.) ಮಾದರಿಗಳಲ್ಲೂ ಆಫ್‌ಲೈನಿನಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಆಫ್‌ಲೈನಿನಲ್ಲೂ ಸಹ ಶೇ.95 ಕ್ಕಿಂತ ಹೆಚ್ಚು ಹಣವನ್ನು ಎಕ್ಸ್‌ಚೇಂಜ್ ಆಫರ್‌ನಲ್ಲಿ ಪಡೆಯಬಹುದು ಎಂದು ಕಂಪೆನಿ ಹೇಳಿದೆ. ಇನ್ನು ಆಕ್ಸಿಸ್ ಬ್ಯಾಂಕ್ ಬಳಕೆದಾರರು ಶೇ.5 ರಷ್ಟು ಡಿಸ್ಕೌಂಟ್ಸ್ ಪಡೆಯಲಿದ್ದಾರೆ.

'ರಿಯಲ್‌ ಮಿ 3 ಪ್ರೊ' ಸ್ಮಾರ್ಟ್‌ಫೋನ್ ಖರೀದಿಸಲು ಇನ್ನು ಕಾಯಬೇಕಿಲ್ಲ!

ಶಿಯೋಮಿಗೆ ಪೈಪೋಟಿ ನೀಡಲು ಮಾರುಕಟ್ಟೆಗೆ ಕಾಲಿಟ್ಟಿರುವ ರಿಯಲ್‌ ಮಿ 3 ಪ್ರೊ ಫೋನ್ ಹೆಚ್ಚು ಕಡಿಮೆ ರೆಡ್‌ಮಿ ನೋಟ್ 7 ಪ್ರೊ ಫೋನಿನ ತಾಂತ್ರಿಕ ಅಂಶಗಳನ್ನೇ ಹೊಂದಿದೆ. ಹಾಗಾಗಿ, ರೆಡ್‌ ಮಿ ನೋಟ್ 7 ಪ್ರೊ ಮತ್ತು ರಿಯಲ್‌ ಮಿ 3 ಪ್ರೊ ಫೋನ್‌ಗಳ ನಡುವೆ ಒಂದು ರೀತಿಯಲ್ಲಿ ಬಿಗ್ ಫೈಟ್ ನಡೆಯುತ್ತಿದೆ ಎಂದು ಹೇಳಬಹುದು. ಹಾಗಾದರೆ, ರೆಡ್‌ಮಿ ನೋಟ್ 7 ಪ್ರೊ ಅನ್ನೇ ಗುರಿಯಾಗಿಟ್ಟುಕೊಂಡು ಬಂದಿರುವ ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಪೋನ್ ಹೇಗಿದೆ?, ಯಾವ ಫೋನ್ ಖರೀದಿಗೆ ಬೆಸ್ಟ್ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಪ್ರೊಸೆಸರ್

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಪ್ರೊಸೆಸರ್

ರೆಡ್‌ಮಿ ನೋಟ್ 7 ಪ್ರೊದಲ್ಲಿರುವುದು ಸ್ನಾಪ್‌ಡ್ರಾಗನ್‌ 675 ಪ್ರೊಸೆಸರ್. ರಿಯಲ್‌ ಮಿ 3 ಪ್ರೊದಲ್ಲಿರುವುದು ಸ್ನಾಪ್‌ಡ್ರಾಗನ್‌ 710 ಪ್ರೊಸೆಸರ್. ಎರಡೂ ಪ್ರೊಸೆಸರ್‌ಗಳಿಗೆ ಅಂಥ ಹೇಳಿಕೊಳ್ಳುವಂಥ ವ್ಯತ್ಯಾಸಗಳೇನಿಲ್ಲವಾದರೂ, ರೆಡ್‌ಮಿ ನೋಟ್‌ 7 ಪ್ರೊ ಗಿಂತ ಉನ್ನತವಾದ ಪ್ರೊಸೆಸರ್‌ ಅನ್ನು ಇದು ಒಳಗೊಂಡಿದೆ ಎಂದು ಹೇಳಬಹುದು. ಗೇಮ್‌ ಹೊರತುಪಡಿಸಿದ ಮೊಬೈಲ್‌ ಬಳಕೆಗೆ ಈ ಎರಡೂ ಪ್ರೊಸೆಸರ್‌ ನಡುವೆ ಹೇಳಿಕೊಳ್ಳುವಂಥ ವ್ಯತ್ಯಾಸವಿಲ್ಲವಾದರೂ, ಗೇಮಿಂಗ್‌ನಲ್ಲಿ ಸ್ವಲ್ಪ ವ್ಯತ್ಯಾಸವನ್ನು ಗುರುತಿಸಬಹುದು.

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಗೇಮಿಂಗ್!

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಗೇಮಿಂಗ್!

ಗೇಮಿಂಗ್‌ ವಿಷಯಕ್ಕೆ ಬಂದಾಗ, ನೋಟ್ 7 ಪ್ರೊ ಸ್ನಾಪ್‌ಡ್ರಾಗನ್‌ 675 ಅಡ್ರೆನೋ 612 ಗ್ರಾಫಿಕ್‌ ಪ್ರೊಸೆಸಿಂಗ್ ಯೂನಿಟ್‌ ಹೊಂದಿದೆ. ಸ್ನಾಪ್‌ಡ್ರಾಗನ್‌ 710 ಅಡ್ರೆನೋ 616 ಜಿಪಿಯು ಹೊಂದಿದೆ. ಸ್ನಾಪ್‌ಡ್ರಾಗನ್‌ ಕಂಪೆನಿ ಹೇಳುವಂತೆ ಅಡ್ರೆನೋ 616 ಜಿಪಿಯು 612 ಗಿಂತ ಶೇ. 35ರಷ್ಟು ಹೆಚ್ಚು ಶಕ್ತಿಶಾಲಿ ಗ್ರಾಫಿಕ್‌ ರೆಂಡರಿಂಗ್‌ ಹೊಂದಿದೆ. ಹೀಗಾಗಿ ಹೆಚ್ಚು ಸಾಮರ್ಥ್ಯದ ಗೇಮ್‌ಗಳನ್ನಾಡಲು 710 ಪ್ರೊಸೆಸರ್ ಹೆಚ್ಚು ಸಮರ್ಥವಾಗಿದೆ. ಅಂದರೆ ಗೇಮಿಂಗ್‌ಗೆ ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಪೋನ್ ಬೆಸ್ಟ್ ಎಂದು ಹೇಳಬಹುದು.

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಡಿಸ್‌ಪ್ಲೇ

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಡಿಸ್‌ಪ್ಲೇ

ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಫೋನ್ ಇದರಲ್ಲಿ 6.3 ಇಂಚು ಫುಲ್ ಹೆಚ್‌ಡಿ ಪ್ಲಸ್‌ (2340 x 1080) ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯಲ್ಲಿ ನೀರಿನ ಬಿಂದುವಷ್ಟು ನೋಚ್ ಇರುವುದರಿಂದ ಇದನ್ನು ಡ್ನೂ ಡ್ರಾಪ್‌ ಡಿಸ್‌ಪ್ಲೇ ಎಂದು ಕರೆಯಲಾಗುತ್ತದೆ. ಡಿಸ್‌ಪ್ಲಕೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಇದೆ. ಹಾಗೆಯೇ, 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ FHD + ರೆಸಲ್ಯೂಶನ್ ಸಾಮರ್ಥ್ಯದ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಹಾಗಾಗಿ, ಇವುಗಳ ಡಿಸ್‌ಪ್ಲೇಯಲ್ಲಿ ಅಷ್ಟೇನು ವ್ಯತ್ಯಾಸವಿಲ್ಲ ಎಂದು ಹೇಳಬಹುದು.

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ದೇಹ ರಚನೆ!

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ದೇಹ ರಚನೆ!

ಎಲ್ಲದರಲ್ಲಿಯೂ ಜಾಣ,ಆದರೆ ತುಸು ಕೋಣ ಎಂಬಂತೆ, ರಿಯಲ್‌ ಮಿ ಈ ಮೊಬೈಲ್‌ನ ದೇಹ ರಚನೆಯಲ್ಲಿ ಕಾಂಪ್ರೊಮೈಸ್ ಮಾಡಿಕೊಂಡಿದೆ ಎಂದು ಹೇಳಬಹುದು. ಅಂದರೆ ರಿಯಲ್‌ ಮಿ 3 ಪ್ರೊ ಫೋನಿನಲ್ಲಿ ಲೋಹ ಅಥವಾ ಗಾಜಿನ ದೇಹ ಇಲ್ಲ. ರಿಯಲ್‌ ಮಿಯ ಈ ಫೋನ್ ಎಂದಿನಂತೆ ಪ್ಲಾಸ್ಟಿಕ್‌ ಕವಚ ಹೊಂದಿದೆ. ರೆಡ್‌ ಮಿ ನೋಟ 7 ಪ್ರೊ ಲೋಹದ ದೇಹ ಮತ್ತು ಪ್ಲಾಸ್ಟಿಕ್‌ ಫ್ರೆಮ್ ಹೊಂದಿದೆ. ಇದೊಂದು ವಿಷಯದಲ್ಲಿ ರಿಯಲ್‌ ಮಿ 3 ಪ್ರೊ ಫೋನಿಗಿಂತ ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್ ಹೆಚ್ಚು ಮುಂದಿದೆ ಎಂದು ಹೇಳಬಹುದು.

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಕ್ಯಾಮರಾ

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಕ್ಯಾಮರಾ

ರಿಯಲ್‌ ಮಿ 3 ಪ್ರೊ 16 ಮತ್ತು 5 ಮೆಗಾಪಿಕ್ಸಲ್‌ ಹಿಂಬದಿ ಕ್ಯಾಮರಾವನ್ನು ಹೊಂದಿದ್ದು, 16 ಮೆ.ಪಿ. ಕ್ಯಾಮರಾ ಸೋನಿ ಐಎಂಎಕ್ಸ್ 519 ಸೆನ್ಸರ್‌ ಹೊಂದಿದೆ. ಇದರಲ್ಲಿ 4ಕೆ ರೆಸ್ಯೂಲೇಷನ್‌ವಿಡಿಯೋ ತೆಗೆಯಬಹುದಾಗಿದೆ. ಮತ್ತು 960 ಎಫ್ಪಿಎಸ್ ಸ್ಲೋ ಮೋಷನ್ ವಿಡಿಯೋಗಳನ್ನು ಚಿತ್ರೀಕರಿಸಬಹುದು, ಸೆಲ್ಫೀ ಕ್ಯಾಮರಾ 25 ಮೆಗಾಪಿಕ್ಸಲ್ ಇದೆ. ಹಾಗೆಯೇ ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತದೆ. ಈ ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವಿರುವುದರಿಂದ, ಸೆಲ್ಫೀ ಪ್ರಿಯರಿಗೆ ಮಾತ್ರ ರಿಯಲ್‌ ಮಿ 3 ಪ್ರೊ ಮೊದಲ ಆಯ್ಕೆಯಾಗಬಹುದು.

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಬ್ಯಾಟರಿ

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಬ್ಯಾಟರಿ

ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ.ಇನ್ನು ಬ್ಯಾಟರಿ ಜಾಸ್ತಿ ಬೇಕು ಎನ್ನುವವರಿಗೆ ರಿಯಲ್‌ ಮಿ 3 ಪ್ರೊ ಉತ್ತಮ ಅಂಶ ನೀಡಿದೆ. ಇದರಲ್ಲಿ 4045 ಎಂಎಎಚ್ ಬ್ಯಾಟರಿ ಇದೆ. ಹಾಂ, ಇಷ್ಟೇ ಅಲ್ಲ ವೇಗದ 5 ವಿ, 4 ಎ ಚಾರ್ಚರ್ ಕೂಡ ನೀಡಲಾಗಿದೆ. ಇದರಲ್ಲಿ 10 ನಿಮಿಷ ಚಾರ್ಜ್‌ ಮಾಡಿದರೆ 71 ನಿಮಿಷಗಳ ಕಾಲ ಪಬ್‌ಜಿ ಗೇಮ್‌ ಆಡಬಹುದಂತೆ.!

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಇತರೆ ವ್ಯತ್ಯಾಸ!

ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಇತರೆ ವ್ಯತ್ಯಾಸ!

ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಪೋನ್ 710 ಪ್ರೊಸೆಸರ್ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಬೆಂಬಲಿಸಿದರೆ, 710 4ಕೆ ಡಿಸ್‌ಪ್ಲೇ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ. ಈ ಮೊಬೈಲ್‌ನಲ್ಲಿ ಅಂಡ್ರಾಯ್ಡ 9 ಪೈ, ಕಲರ್‌ ಓಎಸ್‌ 6.0 ಕಾರ್ಯಾಚರಣಾ ವ್ಯವಸ್ಥೆ ಇದೆ ಎರಡು ಸಿಮ್ ಹಾಕಿಕೊಂಡು ಜೊತೆಗೆ ಒಂದು ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಸೌಲಭ್ಯ ಇದರಲ್ಲಿದೆ. ಎರಡೂ ಸಿಮ್‌ ಸ್ಲಾಟ್‌ಗೂ 4 ಜಿ ವೋಲ್ಟ್ ಸಿಮ್‌ ಹಾಕಿಕೊಳ್ಳಬಹುದು. ಅಂಟುಂಟು ಬೆಂಚ್‌ಮಾರ್ಕ್ನಲ್ಲಿ 180,808 ರಷ್ಟು ಸ್ಕೋರ್ ಮಾಡಿರುವ 'ರೆಡ್‌ಮಿ ನೋಟ್ 7 ಪ್ರೊ' ಡ್ಯುಯಲ್ ವೋಲ್ಟ್ ಸಿಮ್ ಸಪೋರ್ಟ್ ಮಾಡಲಿದೆ. ಯುನಿಕ್ ಎಫೆಕ್ಟ್ ಕ್ಯಾಮೆರಾ ತಂತ್ರಜ್ಞಾನಗಳು ಮತ್ತು 4k ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಸಹ'ರೆಡ್‌ಮಿ ನೋಟ್ 7 ಪ್ರೊ' ಹೊಂದಿದೆ. ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ:

ಒಟ್ಟಾರೆ ಯಾವುದು ಬೆಸ್ಟ್?

ಒಟ್ಟಾರೆ ಯಾವುದು ಬೆಸ್ಟ್?

ರೆಡ್‌ ಮಿ ನೋಟ್ 7 ಪ್ರೊ ಮತ್ತು ರಿಯಲ್‌ ಮಿ 3 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್‌ಗಳಾಗಿ ಮೊಬೈಲ್ ಮಾರುಕಟ್ಟೆಯನ್ನು ಸೆಳೆಯುತ್ತಿವೆ. ಸೆಲ್ಪೀ ಕ್ಯಾಮೆರಾ, ಪ್ರೊಸೆಸರ್, ಗೇಮಿಂಗ್ ಮತ್ತು ಬ್ಯಾಟರಿ ಸಾಮರ್ಥ್ಯದಲ್ಲಿ ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಫೋನ್ ಮುಂದಿದ್ದರೆ, ವಿನ್ಯಾಸ ಮತ್ತು ರಿಯರ್ ಕ್ಯಾಮೆರಾ ಮತ್ತು 2.D ಕರ್ವಡ್ ಗ್ಲಾಸ್ ಡಿಸೈನ್ ವಿಷಯಗಳಲ್ಲಿ ರೆಡ್‌ ಮಿ ನೋಟ್ 7 ಪ್ರೊ ಚೆನ್ನಾಗಿದೆ. ಎರಡೂ 8 ಕೋರ್‌ ಪ್ರೊಸೆಸರ್‌ಗಳನ್ನು ಹೊಂದಿರುವುದರಿಂದ ಎರಡೂ ಸಾಧನಗಳು ಕೂಡ ವೇಗವಾಗಿ ಕೆಲಸ ಮಾಡುತ್ತವೆ. ಇನ್ನು ಬೆಲೆ ವಿಷಯದಲ್ಲೂ ಎರಡೂ ಪೈಪೋಟಿಗೆ ಬಿದ್ದಿರುವುದರಿಂದ ರೆಡ್‌ ಮಿ ನೋಟ್ 7 ಪ್ರೊ VS ರಿಯಲ್‌ ಮಿ 3 ಪ್ರೊ ಎರಡೂ ಉತ್ತಮ ಸ್ಮಾರ್ಟ್‌ಫೋನ್‌ಗಳು ಎಂದು ಹೇಳಬಹುದು.

Most Read Articles
Best Mobiles in India

English summary
Realme 3 Pro price in India starts at Rs. 13,999 for the base variant with 4GB of RAM and 64GB of onboard storage. The phone's 6GB + 64GB and 6GB + 128GB retail at Rs. 15,999 and Rs. 16,999, respectively. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more