Just In
Don't Miss
- News
ಸಿದ್ದರಾಮಯ್ಯ ಮತ್ತು ಗುಂಡುರಾವ್ ರಾಜೀನಾಮೆ ನೀಡಲು ಇವರೇ ಕಾರಣ
- Finance
ಜಿಯೋ ಮತ್ತೊಮ್ಮೆ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ: 98, 149 ರುಪಾಯಿ ರೀಚಾರ್ಜ್
- Education
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನೇಮಕಾತಿ 2019: 75 ಯುವ ವೃತ್ತಿಪರರಿಗೆ ಹುದ್ದೆಗಳಿವೆ
- Automobiles
ಮತ್ತಷ್ಟು ದುಬಾರಿಯಾಗಲಿದೆ ಟಿವಿಎಸ್ ಅಪಾಚೆ ಬೈಕ್
- Travel
ಉತ್ತರ ಭಾರತಕ್ಕೆ ಪ್ರವಾಸ ಹೋದ್ರೆ ಈ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲು ಮರೀಬೇಡಿ
- Movies
ಹೀರೋ ಆದ ಬಿಗ್ ಬಾಸ್-6 ವಿನ್ನರ್ 'ಮಾಡರ್ನ್ ರೈತ' ಶಶಿ ಕುಮಾರ್
- Lifestyle
ಪಾಪ! ಈ ಬೆಕ್ಕಿಗೆ ತನಗೆ ಕಿವಿಯಿದೆ ಎಂದು ಕನ್ನಡಿ ನೋಡಿದ ಮೇಲೆ ಗೊತ್ತಾಯಿತು
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
ಇಂದು ಬಿಡುಗಡೆಗೆ ಸಜ್ಜಾಗಿದೆ ಬಹುನಿರೀಕ್ಷಿತ 'ರಿಯಲ್ ಮಿ 3 ಪ್ರೋ'!
'ರಿಯಲ್ ಮಿ' ಕಂಪನಿಯ ಬಹುನಿರೀಕ್ಷಿತ 'ರಿಯಲ್ ಮಿ 3 ಪ್ರೋ' ಸ್ಮಾರ್ಟ್ಫೋನಿನ ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಾಗೇ ಇತ್ತೀಚಿಗೆ ಪ್ರೀ ಬುಕ್ಕಿಂಗ್ ಆಯ್ಕೆಯನ್ನು ಗ್ರಾಹಕರಿಗೆ ನೀಡಿ ಮತ್ತಷ್ಟು ಕುತೂಹಲ ಮೂಡಿಸಿದೆ. ಇದೀಗ ಗ್ರಾಹಕರ ನಿರೀಕ್ಷೆಗಳಿಗೆ ತೆರೆಬಿಳಲಿದ್ದು, ರಿಯಲ್ ಮಿ 3 ಪ್ರೋ ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ 12:30 ಗಂಟೆಗೆ ಲಾಂಚ್ ಆಗಲಿದೆ.
ಹೌದು, ಕಂಪನಿಯು 'ರಿಯಲ್ ಮಿ 3 ಪ್ರೋ' ಸ್ಮಾರ್ಟ್ಫೋನ್ ರಿಲೀಸ್ಗೆ ದೆಹಲಿಯಲ್ಲಿ ಬಿಡುಗಡೆಯ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಸ್ಥೆಯ ಸಾಮಾಜಿಕ ತಾಣಗಳ ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಕಂಪನಿಯ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಆಗಿದ್ದು, ಹೈ ಎಂಡ್ ಮಾದರಿಯ ಫೀಚರ್ಸ್ಗಳು ಇರಲಿವೆ ಎಂದು ನಿರೀಕ್ಷಿಸಲಾಗುತ್ತಿದೆ. ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಿರುವ ಈ ಸ್ಮಾರ್ಟ್ಫೋನಿನ ಪ್ರಮುಖ ಆಕರ್ಷಣೆಯೆಂದರೆ ಕ್ಯಾಮೆರಾ ಮತ್ತು ಬ್ಯಾಟರಿ ಆಗಿದ್ದು, 48ಎಂಪಿ ರೇರ್ ಕ್ಯಾಮೆರಾ ಇರಲಿದ್ದು, ಇದರೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದೆ. ಹಾಗಾದರೇ 'ರಿಯಲ್ ಮಿ 3 ಪ್ರೋ' ಸ್ಮಾರ್ಟ್ಫೋನ್ ಇತರೆ ಏನೆಲ್ಲಾ ಫೀಚರ್ಸ್ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ. 1,080 x 2,340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.3 ಇಂಚಿನ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಡಿಸ್ಪ್ಲೇಯಿಂದ ಬಾಡಿಯ ರಚನೆಯ ನಡುವಿನ ಅನುಪಾತವು 19.5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್ಪ್ಲೇಯ ಅನುಭವ ನೀಡಲಿದೆ ಎನ್ನಲಾಗಿದೆ. ಕ್ಚಾಲ್ಕಮ್ ಚಿಪ್ ಸೆಟ್ನೊಂದಿಗೆ, ಸ್ನ್ಯಾಪ್ಡ್ರಾಗನ್ 710 SoC ಪ್ರೊಸೆಸರ್ ರಿಯಲ್ ಮಿ 3 ಪ್ರೋ ಸ್ಮಾರ್ಟ್ಫೋನ್ ಹೊಂದಿರಲಿದೆ. ಆಂಡ್ರಾಯ್ಡ್ 9.0 ಪೈ ಓಎಸ್ ಇದರಲ್ಲಿ ಕಾರ್ಯನಿರ್ವಹಿಸಲಿದೆ. 4GB + 32GB, 4GB + 64GB ಮತ್ತು 6GB + 64GB ಮೂರು ವೇರಿಯಂಟ್ಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗುತ್ತದೆ. ರಿಯಲ್ ಮಿ 3 ಪ್ರೋ ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ ಮತ್ತು ಸೋನಿಯ IMX519 ಸೆನ್ಸಾರ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ. ಸುಮಾರು 4500mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗುವುದು ಎನ್ನುತ್ತಿವೆ ಲೀಕ್ ಮಾಹಿತಿಗಳು. ಇದರೊಂದಿಗೆ ಸ್ಮಾರ್ಟ್ಫೋನ್ ವೇಗದ ಚಾರ್ಜಿಂಗ್ಗಾಗಿ VOOC 3.0, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ. ರಿಯಲ್ ಮಿ 3 ಪ್ರೋ ಸ್ಮಾರ್ಟ್ಫೋನ್ ಮೂರು ವೇರಿಯಂಟ್ಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿದ್ದು, ಹೀಗಾಗಿ ಭಿನ್ನ ಬೆಲೆಯ ಶ್ರೇಣಿಯನ್ನು ಹೊಂದಿರಲಿವೆ. ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣಗಳ ಆಯ್ಕೆಗಳು ಇರಲಿವೆ. ಆದರೆ 6 GB RAM / 64 GB ವೇರಿಯಂಟ್ ಬೆಲೆಯು 18990ರೂ.ಗಳು ಇರಲಿದೆ ಎಂದು ಅಂದಾಜಿಸಲಾಗಿದೆ.
ಡಿಸ್ಪ್ಲೇ
ಪ್ರೊಸೆಸರ್
ಕ್ಯಾಮೆರಾ
ಬ್ಯಾಟರಿ
ಬೆಲೆ
-
22,990
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090