ಸ್ಮಾರ್ಟ್‌ಫೋನ್‌ ಗ್ರಾಹಕರ ಜೇಬಿಗೆ ಕತ್ತರಿ..! ಶಿಯೋಮಿಯ 2 ರೆಡ್‌ಮಿ ಫೋನ್‌ಗಳ ಬೆಲೆ ಭಾರೀ ಹೆಚ್ಚಳ..!

By Gizbot Bureau
|

ಇತ್ತಿಚೆಗಷ್ಟೇ ಅನೇಕ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳು ತಮ್ಮ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಹೆಚ್ಚಿಸಿವೆ. 2021ರಲ್ಲಿ ಶೇ.12ರಷ್ಟು ಸ್ಮಾರ್ಟ್‌ಫೋನ್‌ ಉದ್ಯಮ ಬೆಳವಣಿಗೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೂ, ವಿವಿಧ ಅಂಶಗಳು ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಪ್ರಮುಖ ಸ್ಮಾರ್ಟ್‌ಫೋನ್‌ ಶಿಯೋಮಿ ತನ್ನ ರೆಡ್‌ಮಿ ನೋಟ್‌ 10 ಸರಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಏಕೆ ಬೆಲೆ ಹೆಚ್ಚಳವಾಗಿದೆ ಎಂಬುದನ್ನು ಶಿಯೋಮಿ ಸ್ಪಷ್ಟಪಡಿಸಿಲ್ಲ. ರೆಡ್‌ಮಿ ನೋಟ್‌ 10 ಹಾಗೂ ರೆಡ್‌ಮಿ ನೋಟ್‌ 10T 5G ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಳವಾಗಿದೆ.

ರೆಡ್‌ಮಿ ನೋಟ್‌ 10 ಬೆಲೆ 1500 ರೂ. ಹೆಚ್ಚಳ

ರೆಡ್‌ಮಿ ನೋಟ್‌ 10 ಬೆಲೆ 1500 ರೂ. ಹೆಚ್ಚಳ

ಈ ವರ್ಷದ ಮಾರ್ಚ್‌ನಲ್ಲಿ ರೆಡ್‌ಮಿ ನೋಟ್‌ 10 ಸ್ಮಾರ್ಟ್‌ಫೋನ್‌ ಅನ್ನು ಶಿಯೋಮಿ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 4GB + 64GB ಹಾಗೂ 6GB + 128GB ಸ್ಟೋರೆಜ್‌ ಸಾಮರ್ಥ್ಯದ ಎರಡು ಆವೃತ್ತಿಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಆದರೆ, ಈಗ ಮೂರನೇ ಬಾರಿಗೆ ಕಂಪನಿ ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಹೆಚ್ಚಿಸಿದೆ.

ಬಿಡುಗಡೆ

ಬಿಡುಗಡೆ ವೇಳೆ ರೆಡ್‌ಮಿ ನೋಟ್‌ 10 4GB + 64GB ಆವೃತ್ತಿಯ ಬೆಲೆ 11,999 ರೂ. ಇತ್ತು. ಆದರೆ, ಈಗ 13,499 ರೂ. ಆಗಿದ್ದು, ಬರೋಬ್ಬರಿ 1,500 ರೂ. ಬೆಲೆ ಹೆಚ್ಚಳವಾಗಿದೆ. ಇನ್ನು 6GB+128GB ಆವೃತ್ತಿಯ ಬೆಲೆ 13,999 ರೂ. ಇದ್ದಿದ್ದು, 15,499 ರೂ.ಗೆ ಏರಿಕೆಯಾಗಿದೆ.

ರೆಡ್‌ಮಿ ನೋಟ್‌ 10 ಫೀಚರ್‌ಗಳು..!

ರೆಡ್‌ಮಿ ನೋಟ್‌ 10 ಫೀಚರ್‌ಗಳು..!

ಫೀಚರ್‌ಗಳ ಕಡೆ ಗಮನಹರಿಸಿದರೆ ರೆಡ್‌ಮಿ ನೋಟ್‌ 10 ಸ್ಮಾರ್ಟ್‌ಫೋನ್‌ 6.43 ಇಂಚಿನ ಸಂಪೂರ್ಣ ಎಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಒಕ್ಟಾ-ಕೋರ್‌ ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರಾಗನ್‌ 678 ಪ್ರೊಸೆಸರ್‌ ಇದೆ. ಇನ್ನು, ಕ್ವಾಡ್‌ ರಿಯರ್‌ ಕ್ಯಾಮೆರಾ ವ್ಯವಸ್ಥೆ ಇದ್ದು, 48MP ಪ್ರಮುಖ ಸೆನ್ಸಾರ್‌, 8MP ಅಲ್ಟ್ರಾವೈಡ್‌ ಆಂಗಲ್‌ ಲೆನ್ಸ್‌, 2MP ಮ್ಯಾಕ್ರೋ ಸೆನ್ಸಾರ್‌ ಮತ್ತು 2MP ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಇನ್ನು, 13MP ಸೆಲ್ಫಿ ಶೂಟರ್‌ ಫ್ರಾಂಟ್‌ ಕ್ಯಾಮೆರಾ ಇದೆ. 5000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ 33W ವೇಗದ ಚಾರ್ಜಿಂಗ್‌ ಬೆಂಬಲ ಹೊಂದಿದೆ. ಡ್ಯುಯಲ್‌ ಸಿಮ್‌ ಹೊಂದಿರುವ ರೆಡ್‌ಮಿ ನೋಟ್‌ 10 ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಮ್‌ನೊಂದಿಗೆ ಮಾರುಕಟ್ಟೆಗೆ ಬಂದಿದೆ.

ರೆಡ್‌ಮಿ ನೋಟ್‌ 10T 5G ಬೆಲೆ 500 ರೂ. ಹೆಚ್ಚಳ..!

ರೆಡ್‌ಮಿ ನೋಟ್‌ 10T 5G ಬೆಲೆ 500 ರೂ. ಹೆಚ್ಚಳ..!

5G ಬೆಂಬಲಿತ ರೆಡ್‌ಮಿ 10 ಸರಣಿ ಸ್ಮಾರ್ಟ್‌ಫೋನ್‌ ರೆಡ್‌ಮಿ ನೋಟ್‌ 10T 5G ಬೆಲೆಯನ್ನು ಕೂಡ ಶಿಯೋಮಿ ಹೆಚ್ಚಿಸಿದೆ. ಕಳೆದ ತಿಂಗಳು ಲಾಂಚ್‌ ಆಗಿದ್ದ ಈ ಫೋನ್‌ನ 4GB RAM ಆವೃತ್ತಿಯ ಬೆಲೆ 13,999 ರೂ. ಇದ್ದರೆ, 6GB RAM ಆವೃತ್ತಿಯ ಬೆಲೆ 15,999 ರೂ. ಇತ್ತು. ಅದೀಗ ಕ್ರಮವಾಗಿ 14,499 ರೂ. ಹಾಗೂ 16,499 ರೂ.ಗೆ ಹೆಚ್ಚಳವಾಗಿದೆ.

ರೆಡ್‌ಮಿ ನೋಟ್‌ 10T 5G ಫೀಚರ್ಸ್‌..!

ರೆಡ್‌ಮಿ ನೋಟ್‌ 10T 5G ಫೀಚರ್ಸ್‌..!

ರೆಡ್‌ಮಿ ನೋಟ್‌ 10T 5G ಮಿಡಿಯಾಟೆಕ್‌ ಡೈಮೆನ್ಸಿಟಿ 700 ಒಕ್ಟಾ-ಕೋ ಪ್ರೊಸೆಸರ್‌ ಬೆಂಬಲದೊಂದಿಗೆ ಬಿಡುಗಡೆಯಾಗಿದ್ದು, 90Hz ಅನ್ವಯಿತ ರಿಫ್ರೆಶ್‌ ರೇಟ್‌ ಹೊಂದಿರುವ 6.5 ಇಂಚ್‌ ಡಾಟ್‌ ಡಿಸ್‌ಪ್ಲೇ ಹೊಂದಿದೆ. ಇನ್ನು, ಆಂಡ್ರಾಯ್ಡ್‌ 11 ಆಪರೇಟಿಂಗ್‌ ಸಿಸ್ಟಮ್‌ ಹಾಗೂ 22.5W ವೇಗದ ಚಾರ್ಚಿಂಗ್‌ ಬೆಂಬಲದೊಂದಿಗೆ 5000mAh ಬ್ಯಾಟರಿ ಅಳವಡಿಸಲಾಗಿದೆ. 48MP ಪ್ರಾಥಮಿಕ ಕ್ಯಾಮೆರಾ 2MP ಮ್ಯಾಕ್ರೋ ಕ್ಯಾಮೆರಾ ಹಾಗೂ 2MP ಡೆಪ್ತ್‌ ಸೆನ್ಸಾರ್‌ ಇದ್ದರೆ, ಮುಂದೆ 8MP ಸೆಲ್ಫಿ ಕ್ಯಾಮೆರಾ ಇದೆ.

Amazon Mobile Offers

1.Redmi Note 10 Pro Max

2.Realme 8 Pro

3.Mi 10i 5G

4.Samsung Galaxy M51

5.Samsung Galaxy A22 5G

Most Read Articles
Best Mobiles in India

Read more about:
English summary
Redmi Note 10, Note 10 T 5G Price Hiked; Check New Price, Offers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X