ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್ 3 ನಿಯೋ ಬಿಡುಗಡೆ

By Ashwath
|

ನೋಟ್‌ 3 ಸರಣಿಯಲ್ಲಿ ಕಡಿಮೆ ಬೆಲೆಯ ಹೊಸ ಫ್ಯಾಬ್ಲೆಟ್‌ನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಸ್ಯಾಮ್‌ಸಂಗ್‌ ಗುಡ್‌ನ್ಯೂಸ್‌ ನೀಡಿದೆ. ಸ್ಯಾಮ್‌ಸಂಗ್‌ 5.5 ಇಂಚಿನ ಸ್ಮ್ರೀನ್‌ ಹೊಂದಿರುವ ಹೊಸ ಫ್ಯಾಬ್ಲೆಟ್‌ ಗೆಲಾಕ್ಸಿ ನೋಟ್‌ 3 ಯನ್ನು ಪೋಲೆಂಡ್‌ನಲ್ಲಿ ಬಿಡುಗಡೆ ಮಾಡಿದೆ.

ಫ್ಯಾಬ್ಲೆಟ್‌ಗೆ ನೋಟ್‌ 3 ಇರುವಂತೆ ಸ್ಪೈಲಸ್‌ ಪೆನ್‌ನ್ನು ಹೊಂದಿದೆ.148.4 x 77.4 x 8.6 ಮಿ.ಮೀ ಗಾತ್ರ,62.5 ಗ್ರಾಂ ತೂಕದ ಫ್ಯಾಬ್ಲೆಟ್‌ ಎಕ್ಸಲರೋ ಮೀಟರ್‌,ಗೈರೋ ಸೆನ್ಸರ್‌, ಪ್ರಾಕ್ಸಿಮಿಟಿ ಸೆನ್ಸರ್‌,ಹಾಲ್‌ ಎಫೆಕ್ಟ್‌‌,ಲೈಟಿಂಗ್‌‌,ಕಂಪಾಸ್‌ ಸೆನ್ಸರ್‌ಗಳನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದರೂ ಬೆಲೆಯನ್ನು ಸ್ಯಾಮ್‌ಸಂಗ್‌ ಪ್ರಕಟಿಸಿಲ್ಲ.

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3 ನಿಯೋ
ವಿಶೇಷತೆ:
5.5 ಇಂಚಿನ ಎಚ್‌ಡಿ ಸುಪರ್‌ ಅಮೊಲೆಡ್‌ ಸ್ಕ್ರೀನ್‌(1280x720)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್‌
1.6 GHz ಕ್ವಾಡ್‌ ಕೋರ್‍ ಪ್ರೊಸೆಸರ್‌
16 ಜಿಬಿ ಆಂತರಿಕ ಮೆಮೊರಿ
2GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,3ಜಿ,ಜಿಪಿಎಸ್‌‌,ಗ್ಲೋನಾಸ್‌,ಬ್ಲೂಟೂತ್‌,ಎನ್‌ಎಫ್‌ಸಿ
3100 mAh ಬ್ಯಾಟರಿ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

1

1


ಈ ಹಿಂದೆ ಬಿಡುಗಡೆಯಾಗಿದ್ದ ನೋಟ್‌ 3 ಫ್ಯಾಬ್ಲೆಟ್‌ 1080 x 1920 ಪಿಕ್ಸೆಲ್‌ ರೆಸೂಲೂಶನ್‌,386 ಪಿಪಿಐ ಹೊಂದಿರುವ 5.7 ಇಂಚಿನ ಸ್ಕ್ರೀನ್‌ ಹೊಂದಿತ್ತು.ಆದರೆ ಈ ಫ್ಯಾಬ್ಲೆಟ್‌ 1280x720 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 5.5 ಇಂಚಿನ ಸುಪರ್‌ ಅಮೊಲೆಡ್‌ ಸ್ಕ್ರೀನ್‌ ಹೊಂದಿದೆ.

2

2


ನೋಟ್‌3 ಅಕ್ಟಾ ಕೋರ್‍ ಪ್ರೊಸೆಸರ್‌,ಹಿಂದುಗಡೆ 13 ಎಂಪಿ ಕ್ಯಾಮೆರಾವನ್ನು ಹೊಂದಿತ್ತು. ಆದರೆ ಈ ಫ್ಯಾಬ್ಲೆಟ್‌ 1.6 GHz ಕ್ವಾಡ್‌ ಕೋರ್‍ ಪ್ರೊಸೆಸರ್‌,8 ಎಂಪಿ ಹಿಂದುಗಡೆ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.ಮುಂದುಗಡೆ ನೋಟ್‌ 3ಯಲ್ಲಿ ಇದ್ದಂತೆ 2 ಎಂಪಿ ಕ್ಯಾಮೆರಾವನ್ನು ಹೊಂದಿದೆ.

3

3


ನೋಟ್‌ 3 ಮೂರು ಆಂತರಿಕ ಮೆಮೊರಿ(16/32/64 GB),3 GB RAMನೊಂದಿಗೆ ಮಾರುಕಟ್ಟೆಗೆ ಬಂದಿದ್ದರೆ ಈ ಫ್ಯಾಬ್ಲೆಟ್‌ 16 ಜಿಬಿ ಆಂತರಿಕ ಮೆಮೊರಿ,2GB RAM ನೊಂದಿಗೆ ಬಿಡುಗಡೆಯಾಗಿದೆ.

4

4


ನೋಟ್‌ 3 3200 mAh ಬ್ಯಾಟರಿ ನೀಡಿದ್ದರೆ, ಈ ಫ್ಯಾಬ್ಲೆಟ್‌ಗೆ 3100 mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ.

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X