ಭಾರತದಲ್ಲಿ ಹಿಟ್ ಆಯ್ತು ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8!! ಎಷ್ಟು ಬುಕ್ಕಿಂಗ್ ಆಗಿದೆ ಗೊತ್ತಾ?

ಗ್ಯಾಲೆಕ್ಸಿ ಎಸ್ 7 ನಿಂದ ಉಂಟಾದ ತೊಂದರೆ, ಗ್ಯಾಲೆಕ್ಸಿ S8 ಸ್ಮಾರ್ಟ್‌ಫೋನ್ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಮಾತು ಸುಳ್ಳಾಗಿದೆ.

|

ಬ್ಯಾಟರಿ ಸ್ಪೋಟದ ತೊಂದರೆಗೆ ಬಳಲಿದ್ದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್ 7 ನಂತರ ಬಿಡುಗಡೆಯಾಗಿರುವ ನೂತನ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು S8+ ಸ್ಮಾರ್ಟ್‌ಫೋನ್‌ಗಳು ಹಿಟ್ ಆಗಿವೆ.!! ಗ್ಯಾಲೆಕ್ಸಿ ಎಸ್ 7 ನಿಂದ ಉಂಟಾದ ತೊಂದರೆ, ಗ್ಯಾಲೆಕ್ಸಿ S8 ಸ್ಮಾರ್ಟ್‌ಫೋನ್ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಮಾತು ಸುಳ್ಳಾಗಿದ್ದು, ಭಾರತದಲ್ಲಿ ಈಗಾಗಲೇ 80,000 ಯುನಿಟ್ ಸ್ಮಾರ್ಟ್‌ಫೋನ್‌ಗಳು ಬುಕ್ ಆಗಿವೆ.!!

ಹೌದು, 2016 ರಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್ 7 ಸ್ಮಾರ್ಟ್‌ಫೋನ್‌ನಿಂದಾಗಿ ಸ್ಯಾಮಸಂಗ್ ಸಾವಿರಾರು ಕೊಟಿ ರೂಪಾಯಿ ನಷ್ಟ ಅನುಭವಿಸಿತ್ತು. ಇದರ ಜೊತೆಗೆ ಗ್ಯಾಲೆಕ್ಸಿ ಎಸ್ 7ನಿಂದ ಕಂಪೆನಿಯ ಬ್ರಾಂಡ್‌ಗೆ ಎಫೆಕ್ಟ್ ಆಗಲಿದೆ ಎಂದು ಚಿಂತಿಸಲಾಗಿತ್ತು. ಆದರೆ, ಎಲ್ಲರ ಮಾತನ್ನು ಗ್ಯಾಲೆಕ್ಸಿ S8 ಸ್ಮಾರ್ಟ್‌ಫೋನ್‌ ಸುಳ್ಳಾಗಿಸಿದೆ.!!

ಭಾರತದಲ್ಲಿ ಹಿಟ್ ಆಯ್ತು ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8! ಎಷ್ಟು ಬುಕ್ಕಿಂಗ್ ಆಗಿದೆ?

ಭಾರತದಲ್ಲಿ ಗ್ಯಾಲೆಕ್ಸಿ S8 ಬಿಡುಗಡೆಯಾದ ಮೊಲನೇ ವಾರವೇ 80,000 ಯುನಿಟ್ ಗಳಷ್ಟು ಮುಂಗಡ ಬುಕಿಂಗ್ ಆಗಿದ್ದು, ಈ ತಿಂಗಳು 150,000 ಯುನಿಟ್ ಸ್ಮಾರ್ಟ್‌ಫೋನ್‌ಗಳು ಬುಕ್ ಆಗಲಿವೆ ಎಂದು ವಿಶ್ಲೇಷಿಸಲಾಗಿದೆ. ಹಾಗಾಗಿ, ಅತ್ಯಾಧುನಿಕ ಫೀಚರ್ಸ್‌ ಹೊಂದಿರುವ ಗ್ಯಾಲೆಕ್ಸಿ S8 ಏನೆಲ್ಲಾ ಫೀಚರ್‌ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

5.8 ಇಂಚಿನ QHD ಡಿಸ್‌ಪ್ಲೇ:

5.8 ಇಂಚಿನ QHD ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಸ್ಮಾರ್ಟ್‌ಫೋನಿನಲ್ಲಿ 5.8 ಇಂಚಿನ QHD ರೆಸಲ್ಯೂಷನ್ ಹೊಂದಿರುವ ಸೂಪರ್ ಆಮೋಲೈಡ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 6.2 ಇಂಚಿನ QHD ರೆಸಲ್ಯೂಷನ್ ಹೊಂದಿರುವ ಸುಪರ್ ಆಮೋಲೈಡ್ ಡಿಸ್‌ಪ್ಲೇ ಕಾಣಬಹುದಾಗಿದೆ. ಎರಡು ಪೋನಿನ ಡಿಸ್‌ಪ್ಲೇ ರಕ್ಷಣೆಗಾಗಿ ಗೂರಿಲ್ಲ ಗ್ಲಾಸ್ 5 ಅನ್ನು ನೀಡಲಾಗಿದೆ.

ಕ್ವಾಲ್ಕಮ್ 835 ಪ್ರೋಸೆಸರ್:

ಕ್ವಾಲ್ಕಮ್ 835 ಪ್ರೋಸೆಸರ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಮತ್ತು ಗ್ಯಾಲೆಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನುಗಳಲ್ಲಿ ವೇಗದ ಕಾರ್ಯನಿರ್ವಹಣೆಗಾಗಿ ಸದ್ಯದ ಟಾಪ್‌ ಎಂಡ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಆಂಡ್ರಾಯ್ಡ್‌ ನ್ಯೂಗಾ:

ಆಂಡ್ರಾಯ್ಡ್‌ ನ್ಯೂಗಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಸ್ಮಾರ್ಟ್‌ಫೋನುಗಳು ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿವೆ, ಅಲ್ಲದೇ ಗ್ಯಾಲೆಕ್ಸಿ ಎಸ್‌8 ನಲ್ಲಿ 3,000mAh ಬ್ಯಾಟರಿ ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್‌ ನಲ್ಲಿ 3,500mAh ಯನ್ನು ಅಳವಡಿಸಲಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಉತ್ತಮ ಪೋಟೋಗ್ರಫಿಗಾಗಿಯೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಫೋನಿನಲ್ಲಿ ಗುಣಮಟ್ಟದ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ ಸೆಲ್ಫಿ ತೆಗೆಯುವ ಸಲುವಾಗಿ ಆಟೋ ಪೋಕಸ್ ಹೊಂದಿರುವ 8 MP ಕ್ಯಾಮೆರಾವನ್ನು ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಒಳ್ಳೆಯ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ.

ವಾಟರ್‌ಪ್ರೂಫ್-ಡಸ್ಟ್ ಫ್ರೂಪ್:

ವಾಟರ್‌ಪ್ರೂಫ್-ಡಸ್ಟ್ ಫ್ರೂಪ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಫೋನುಗಳು IP68 ವಾಟರ್‌ಪ್ರೂಫ್ ಮತ್ತು ಡಸ್ಟ್ ಫ್ರೂಪ್ ಆಗಿದ್ದು, ನೀರಿನಲ್ಲಿ ಬಿದ್ದರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಧೂಳಿನಲ್ಲಿ ಓಡಾಡಿದರು ಫೋನು ಏನು ಆಗುವುದಿಲ್ಲ. ಈ ಪೋನುಗಳು ಮಿಡ್‌ನೈಟ್ ಬ್ಲಾಕ್, ಆರ್ಕಿಡ್ ಗ್ರೇ, ಆರ್ಕ್ಟಿಕ್ ಸಿಲ್ವರ್, ಕೋರಲ್ ನೀಲಿ ಮತ್ತು ಮ್ಯಾಪಲ್ ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ

Best Mobiles in India

English summary
Pre-bookings for Galaxy S8, Galaxy S8+ have reached 80,000 in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X