ಮೊಟ್ಟಮೊದಲ ಮೊಬೈಲ್ ಕರೆ ಮಾಡಿ ಇಂದಿಗೆ ಎಷ್ಟು ವರ್ಷ ಗೊತ್ತಾ?..ಇತಿಹಾಸಕ್ಕೊಮ್ಮೆ ಹೋಗೋಣವೆ?!

|

ನೀವು ಬಳಸುತ್ತಿರುವ ಮೊಬೈಲ್ ಎಂಬ ಮಂತ್ರದಂಡ ಹುಟ್ಟಿದ್ದು ಯಾವಾಗ ಎಂದು ಕೇಳಿದರೆ ಆ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಡುತ್ತಾರೆ. ಇತ್ತೀಚಿನ ಮಕ್ಕಳನ್ನು ಕೇಳಿದರೆ ಮೊಬೈಲ್ ಭಾರೀ ಹಳೆಯದು ಎಂದರೆ, 80ರಿಂದ 90ನೇ ದಶಕದಲ್ಲಿ ಜನಿಸಿದವರು ಮೊಬೈಲ್ ಎಂಬುದು ನಮ್ಮ ಕಾಲದಲ್ಲಿ ಹುಟ್ಟಿದ್ದು ಎಂದು ಹೇಳುತ್ತಾರೆ.!

ಆದರೆ, ನಿಮಗೆ ಗೊತ್ತಾ? ಜಾಗತಿಕ ಮಟ್ಟದಲ್ಲಿ ಮೊಬೈಲ್ ಫೋನಿಗೆ ಇನ್ನಷ್ಟು ದೀರ್ಘವಾದ ಇತಿಹಾಸವಿದೆ. ನಿಖರವಾಗಿ ಹೇಳುವುದಾದರೆ ಪ್ರಪಂಚದ ಮೊತ್ತಮೊದಲ ದೂರವಾಣಿ ಕರೆ ಮಾಡಿ ಈಗಾಗಲೇ ನಲವತ್ತೈದು ವರ್ಷಗಳು ಕಳೆದಿವೆ.! ಫೋನುತಂತಿಗಳ ನೆರವಿಲ್ಲದೆ ಸೃಷ್ಟಿಯಾದ ಮೊಬೈಲ್ ಫೋನ್ ಇಂದು ಪ್ರತಿಯೊಬ್ಬರ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ.!

ಮೊಟ್ಟಮೊದಲ ಮೊಬೈಲ್ ಕರೆ ಮಾಡಿ ಇಂದಿಗೆ ಎಷ್ಟು ವರ್ಷ ಗೊತ್ತಾ?

ದೂರವಾಣಿಯನ್ನು ಒಂದು ಮನೆಗೆ, ಕಚೇರಿಗೆ ಸೀಮಿತವಾಗಿದೆಯಲ್ಲ. ಅದರ ಬದಲು ದೂರವಾಣಿಗಿರುವ ಭೌಗೋಳಿಕ ಮಿತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಒಬ್ಬ ವ್ಯಕ್ತಿಗೆ ಒಂದು ಮೊಬೈಲ್ ಫೋನ್ ಬೇಕು ಎಂಬ ಆಲೋಚನೆ ಮಾಡಿದ ಮೊಬೈಲ್ ಪಿತಾಮಹ ಮಾರ್ಟಿನ್ ಕೂಪರ್ ಅವರ ನೆನಪು ಸಹ ಎಲ್ಲರಿಂದ ಮಾಸಿಹೋಗಿದೆ.! ಹಾಗಾಗಿ, ಮೊಬೈಲ್ ಬಗೆಗೆ ಇರುವ ಕುತೋಹಲಕಾರಿ ಅಂಶಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

1) ಜಗತ್ತಿನ ಮೊದಲ ಮೊಬೈಲ್ ಫೋನ್.!!

1) ಜಗತ್ತಿನ ಮೊದಲ ಮೊಬೈಲ್ ಫೋನ್.!!

ಜಗತ್ತಿನ ಮೊತ್ತಮೊದಲ ಬಾರಿಗೆ ವಾಣಿಜ್ಯಾತ್ಮಕವಾಗಿ ಮೊಬೈಲ್ ಫೋನುಗಳು ಮಾರಾಟವಾಗಿದ್ದು 1983ರಲ್ಲಿ. ಮೊಟೊರೊಲಾ DynaTAC 8000X ಅನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಯಿತು. ಅಂದು ಬಿಡುಗಡೆಯಾದ ಫೋನ್ ಬೆಲೆ $3,955 . ಆದರೆ ಇಂದು ಸ್ಮಾರ್ಟ್ಫೋನ್ಗಳು 250 ರೂಪಾಯಿಗಳಿಗೂ ಸಿಗುತ್ತವೆ.!!

2) ಮೊದಲ ಮೊಬೈಲ್ ಕರೆ ಮಾಡಿದ್ದು

2) ಮೊದಲ ಮೊಬೈಲ್ ಕರೆ ಮಾಡಿದ್ದು

ಮೊದಲ ಮೊಬೈಲ್ ಕರೆ ಮಾಡಿದ್ದು ಮೋಟೊರೋಲಾ ಸಂಸ್ಥಾಪಕ ಮಾರ್ಟಿನ್ ಕೂಪರ್. ಮಾರ್ಟಿನ್ ಕೂಪರ್'ರವರು ನ್ಯೂಯಾರ್ಕ್ ಸಿಟಿಯ 53 ಮತ್ತು 54ನೇ ಬೀದಿ ನಡುವೆ 6 ಮುಖ್ಯ ವಿಶಾಲ ಬೀದಿಯಲ್ಲಿ 900MHz ಮುಖ್ಯ ಕೇಂದ್ರ ಹೊಂದಿದ್ದರು. ಏಪ್ರಿಲ್ 3, 1973 ರಲ್ಲಿ ಮೊಟೊರೊಲಾ ಮೊಬೈಲ್‌ನಿಂದ ಮೊದಲ ಕರೆಯನ್ನು ನ್ಯೂಜರ್ಸಿಯ ಬೆಲ್ ಲ್ಯಾಬ್‌ಗೆ ಕರೆ ಮಾಡಲಾಗಿತ್ತು.

3) 1.1 ಕೆಜಿ ತೂಕವಿತ್ತು

3) 1.1 ಕೆಜಿ ತೂಕವಿತ್ತು

ಮೊಟ್ಟ ಮೊದಲ 'ಮೊಟೊರೊಲಾ DynaTAC' ಫೋನ್ 23cm ಉದ್ದವಿತ್ತು. ಅತ್ಯಂತ ಅಚ್ಚರಿ ವಿಷಯ ಅಂದ್ರೆಮೊಬೈಲ್ 1.1 ಕೆಜಿ ತೂಕವಿತ್ತು.!! 1kg ತೂಕ ಹೊಂದಿದ್ದ ಈ ಮೊಬೈಲ್ ಸಂಪೂರ್ಣ ಚಾರ್ಜ್ ಹೊಂದಲು 10 ಗಂಟೆಗಳ ಸಮಯ ಬೇಕಿತ್ತು. ಆದರೆ ಬಳಕೆ ಆಗುತ್ತಿದ್ದದ್ದು ಮಾತ್ರ ಕೇವಲ 35 ನಿಮಿಷಗಳು.!!

4) ಭಾರತಕ್ಕೆ ಮೊಬೈಲ್

4) ಭಾರತಕ್ಕೆ ಮೊಬೈಲ್

ಕೇವಲ 25 ವರ್ಷಗಳ ಹಿಂದಷ್ಟೆ ( 1995) ಭಾರತಕ್ಕೆ ಕಾಲಿಟ್ಟ ಮೊಬೈಲ್ ಫೋನ್ ಇಂದು 100 ಕ್ಕೆ 80 ಜನರ ಬಳಿ ಬಳಕೆಯಾಗುತ್ತಿದೆ.! ಹತ್ತಿಪ್ಪತ್ತು ವರ್ಷದ ಹಿಂದಷ್ಟೆ ಗಗನ ಕುಸುಮವಾಗಿದ್ದ ಮೊಬೈಲ್ ಇಂದು ಎಲ್ಲರ ಕೈ ಸೇರಿ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ನಿದ್ದೆಗೆ ಜಾರುವವರೆಗೆ ಪ್ರತಿ ಕ್ಷಣವೂ ನಮ್ಮೊಡನೆಯೇ ಇರುವಂತಾಗಿದೆ.

5)ನೊಕಿಯಾ ವಿಶ್ವ ಸಾಮ್ರಾಟ್

5)ನೊಕಿಯಾ ವಿಶ್ವ ಸಾಮ್ರಾಟ್

ಸ್ಮಾರ್ಟ್‌ಫೋನ್ ಬರುವುದಕ್ಕೂ ಮುಂಚೆ ನೊಕಿಯಾ ಸಂಸ್ಥೆ ವಿಶ್ವದ ಮೊಬೈಲ್ ಸಾಮ್ರಾಟನಾಗಿತ್ತು. ನೊಕಿಯಾದ ಜನಪ್ರಿಯ 1100 ಮಾಡೆಲ್'ನ ಹ್ಯಾಂಡ್'ಸೆಟ್'ಗಳು ಬರೋಬ್ಬರಿ 25 ಕೋಟಿ ಸಂಖ್ಯೆಯಲ್ಲಿ ಮಾರಾಟ ಕಂಡಿವೆ. ಇದು ವಿಶ್ವದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಎಲೆಕ್ಟ್ರಾನಿಕ್ ಸಾಧನವೆನಿಸಿದೆ.!!

6)ನೋಮೋಫೋಬಿಯಾ

6)ನೋಮೋಫೋಬಿಯಾ

ಮೊಬೈಲ್ ಫೋನ್ ಅನ್ನು ಬಿಟ್ಟಿರಲಾರದಷ್ಟು ಮಟ್ಟಿಗೆ ಅದರ ಮೇಲೆ ಜನರು ಅವಲಂಬಿತವಾಗುತ್ತಿದ್ದಾರೆ. ಈ ಮೊಬೈಲ್ ಆತಂಕವನ್ನು ವಿಜ್ಞಾನಿಗಳು ನೋಮೋಫೋಬಿಯಾ ಎಂದು ಕರೆಯುತ್ತಾರೆ. ನಮ್ಮಲ್ಲಿ ಈ ಫೋಬಿಯಾ ಇದೆಯಾ ಎಂದು ಪತ್ತೆಹಚ್ಚಲೆಂದೇ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳು ಸಹ ಇವೆ.!!

Most Read Articles
Best Mobiles in India

English summary
Martin Cooper changed the world when he made the first cell phone call 45 years ago. to know more visit to kannada.gizbot,com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more