ಪಯೋನೀರ್ ಮೈಕ್ರೋ ಸ್ಪೀಕರ್ ಹೀಗಿದೆ ನೋಡಿ!

By Super
|

{image-14-pinoneer's-micro-stereo.jpg.jpg kannada.oneindia.com}ಪಯೋನೀರ್ ಮೈಕ್ರೋ ಸ್ಟಿರಿಯೋ ಸಿಸ್ಟಮ್ ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು-ಸುದ್ದಿ ಮಾಡಿದೆ. ಸದ್ಯದಲ್ಲಿಯೇ ಹೊಸ ಸಾಧನಗಳು ಬರಲಿವೆ. ಅವು X-HM10, X-HM20DAB, X-HM70DAB and XC-HM70DAB ಮತ್ತು X-HM50. ಇವೆಲ್ಲ ಒಂದೇ ಕಂಪೆನಿಯವಾದರೂ ಭಿನ್ನತೆಗಳು ಸಾಕಷ್ಟಿವೆ.

ಈ ಕಂಪೆನಿಯ ಸಂಗೀತ ಸಾಧನಗಳು USB ಸ್ಟೋರೇಜ್ ಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಈಗಿನ ಎಲ್ಲಾ ಮೊಬೈಲ್ ಗಳಲ್ಲಿ MP3 ಫಾರ್ಮೆಟ್ ಲಭ್ಯವಿರುತ್ತವೆ. X-HM10 ಹೊರತಾಗಿ ಉಳಿದೆಲ್ಲ ಮಾದರಿಗಳು ಐಪೋನ್ ಮತ್ತು ಐಪ್ಯಾಡ್ ಗಳಿಗೆ ಯೋಗ್ಯವಾದ ಡಾಕ್ಸ್ ಗಳನ್ನು ಹೊಂದಿರುತ್ತವೆ. ಈ ಎಲ್ಲಾ ಮೈಕ್ರೋ ಸ್ಟಿರಿಯೋ ಸಿಸ್ಟಮ್ ಗಳು ಹೆಚ್ಚು-ಕಡಿಮೆ ಒಂದೇ ಸೈಜಿನಲ್ಲವೆ.

ಇವುಗಳ ಆಕಾರ ಸುಮಾರು 21.5 ಸೆಂ.ಮೀ ಇದೆ. ಪ್ರೀಮಿಯಮ್ ಆಫರ್ಸ್ ಗಳು 11.1 ಸೆಂ.ಮೀ ಮತ್ತು 9 ಸೆಂ.ಮೀ ಇದೆ. ಎಂಟ್ರಿ ಲೆವೆಲ್ ಮಾದರಿ X-HM10, ಅತ್ಯಂತ ಸುಂದರ ವಿನ್ಯಾಸ ಹಾಗೂ 15 W ಸಾಮರ್ಥ್ಯದ 2 ಸ್ಪೀಕರ್ ಔಟ್ ಪುಟ್ ಹೊಂದಿದೆ. 5 ಸೆಂ.ಮೀ ಟ್ವಿಟರ್ ಮತ್ತು 10 ಸೆಂ, ಮೀ ಆಕರ್ಷಕ ವೂಫರ್ ಇದರಲ್ಲಿದೆ. DAB ರೇಡಿಯೋ, ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲೇಬ್ಯಾಕ್, ಈ XC-HM70DAB ಮಾದರಿಯಲ್ಲಿ ಸ್ಪೀಕರ್ ಇಲ್ಲ.

ಇನ್ನು ಇವುಗಳ ಬೆಲೆ, ಪಯೋನೀರ್ X-HM10 ಸ್ಟಿರಿಯೋ ಸಿಸ್ಟಮ್ ಬೆಲೆ ಭಾರತದಲ್ಲಿ ಸುಮಾರು ರು. 9,800/- ಮತ್ತು X-HM20DAB & X-HM70DAB ಬೆಲೆ ಕ್ರಮವಾಗಿ ಸುಮಾರು ರು. 15,000/- ಹಾಗೂ ರು. 30,000/-. ಇನ್ನು ಸ್ಪೀಕರ್ XC-HM70DAB ಬೆಲೆ ಸುಮಾರು ರು. 24,000/-.

ಈ ಎಲ್ಲಾ ವಿಶೇಷತೆಗಳು ಹಾಗು ದರಗಳು ನಿಮಗೀಗ ತಿಳಿದಿವೆ. ಇನ್ನು ನಿಮಗ್ಯಾವುದು ಬೇಕೆಂಬ ಆಯ್ಕೆ ನಿಮಗೆ ಸೇರಿದ್ದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X