ಮಾನ್ಸ್ಟರ್ ನಿಂದ ಬರುತ್ತಿದೆ ಟ್ರಾನ್ ಲೈಟ್ ಡಿಸ್ಕ್ ಡಕ್

Posted By: Staff

ಮಾನ್ಸ್ಟರ್ ನಿಂದ ಬರುತ್ತಿದೆ ಟ್ರಾನ್ ಲೈಟ್ ಡಿಸ್ಕ್ ಡಕ್
ಸಂಗೀತ ಪ್ರಪಂಚಕ್ಕೆ ತನ್ನ ಸಾಧನಗಳಿಂದ ಹೊಸ ಆಯಾಮ ನೀಡಿರುವ ಮಾನೆಸ್ಟರ್ ಕೇಬಲ್ ಇದೀಗ ಮಾನ್ಸ್ಟರ್ TRON ಲೈಟ್ ಡಿಸ್ಕ್ ಬಿಡುಗಡೆಗೊಳಿಸಲಿದ್ದು, ಸಂಗೀತ ಮತ್ತು ಗೇಮ್ ಪ್ರಿಯರ ಹೃದಯ ಕದಿಯಲಿದೆ.

ಅನೇಕ ವಿಶೇಷತೆ ಹೊಂದಿರುವ ಈ ಮಾನ್ಸ್ಟರ್ ಟ್ರಾನ್ ಲೈಟ್ ಡಿಸ್ಕ್ ನಲ್ಲಿ ಗುಣಮಟ್ಟದ ಸಂಗೀತ ನೀಡಲು ನಾಲ್ಕು 1.5 ಇಂಚಿನ ಡ್ರೈವರ್ ಮತ್ತು ಒಂದು 3.5 ಇಂಚಿನ ವೂಫರ್ ಅಳವಡಿಸಲಾಗಿದೆ.

ಬಳಕೆದಾರರಿಗೆ ಅನುಕೂಲವಾಗುವಂತೆ ಇದರ ಸ್ಪೀಕರ್ ವಿನ್ಯಾಸಗೊಳಿಸಲಾಗಿದೆ. ಸಂಗೀತದ ಅನುಭವದೊಂದಿಗೆ ವೀಕ್ಷಣೆಯನ್ನೂ ಪಡೆಯಲು ಮಾನ್ಸ್ಟರ್ ವಿಶ್ಯುಲೈಸೇಶನ್ ಮತ್ತು ಸಂಗೀತದ ಜೊತೆ ಎಲ್ ಇಡಿ ವಿಶ್ಯುಲೈಸರ್ ಪಡೆಯಲು ಅಲಾರ್ಮ್ ಕ್ಲಾಕ್ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. (ಐಡೆಂಟಿಟಿ ಡಿಸ್ಕ್ ರಿಂಗ್ಸ್).

ಈ ಉತ್ಪನ್ನ ವೈರ್ ಲೆಸ್ ರಿಮೋಟ್ ನಲ್ಲೂ ಲಭ್ಯವಿದೆ. ಇದನ್ನು ಐಪಾಡ್, ಐಪ್ಯಾಡ್ ನೊಂದಿಗೂ ಬಳಸಬಹುದು. ಈ ಸಾಧನವನ್ನು ಪ್ರತಿಷ್ಠಿತ ಡಿಸ್ನಿ ಕಂಪನಿ ವಿನ್ಯಾಸಗೊಳಿಸಿದೆ.

2.1 ಚಾನೆಲ್ ಸ್ಪೀಕರ್ ಸಿಸ್ಟಮ್ ಬಳಸಿಕೊಳ್ಳುವ ಮಾನ್ಸ್ಟರ್ ಟ್ರಾನ್ ಲೈಟ್ ಡಿಸ್ಕ್ ಡಕ್ ನಲ್ಲಿ ಸಂಗೀತಕ್ಕೆ ಅನುಗುಣವಾಗುವಂತೆ ಬೆಳಕನ್ನೂ ಒದಗಿಸಲು 80 ಕಂಟ್ರೋಲ್ಡ್ ಎನರ್ಜಿ ಎಲ್ ಇಡಿ ನೀಡಲಾಗಿದೆ. ಈ ಸಂಗೀತ ಸಾಧನದ ಬೆಲೆ 11, 250 ರು ಎಂದು ಕಂಪನಿ ತಿಳಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot