ಯಮಹಾ ಹೊಮ್ಮಿಸಲಿದೆ ಸಂಗೀತದ ಸುಗ್ಗಿ

ಯಮಹಾ ತಯಾರಿಕೆಯ ಹೆಡ್ ಫೋನ್ ವಿಭಾಗದಲ್ಲಿ ಪ್ರಸ್ತುತ 5 ಮಾದರಿಯ ಹೆಡ್ ಫೋನ್ ಗಳನ್ನು ಯಮಹಾ ಅಭಿವೃದ್ಧಿಪಡಿಸಿದೆ. ಇಯರ್ ಫೋನ್ ನ ನಾಲ್ಕು ಮಾದರಿಯ ಇಯರ್ ಬಡ್ಸ್ ಗಳನ್ನು ಯಮಹಾ ಪರಿಚಯಿಸಿದ್ದು, ಇವುಗಳ ಬೆಲೆ 1,450 ರಿಂದ 7, 500 ರುವರೆಗೆ ಇದೆ.
ಗದ್ದಲ ನಿಯಂತ್ರಿಸಿ ಒಳ್ಳೆ ಗುಣಮಟ್ಟದ ಸಂಗೀತ ನೀಡುವ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್, ಮಲ್ಟಿಪಲ್ ಟಿಪ್ ಆಯ್ಕೆಗಳಿರುವ ಓವರ್ ಇಯರ್ ಹೆಡ್ ಫೋನ್ ಗಳನ್ನೂ ಬಿಡುಗಡೆಗೊಳಿಸಿದ್ದು, ಅವುಗಳ ಬೆಲೆ ಸುಮಾರು $ 149 ಎನ್ನಲಾಗಿದೆ.
ಡಿಜಿಟಲ್ ಸೌಂಡ್ ಪ್ರೊಜೆಕ್ಟರ್ ಸೌಂಡ್ ಬಾರ್ ವಿಭಾಗದಲ್ಲಿ, 50,000 ದಿಂದ 1,10,000 ರುವೆರೆಗೂ ಬೆಲೆ ಹೊಂದಿರುವ 3 ಮಾದರಿಯನ್ನು ಪರಿಚಯಿಸುತ್ತಿದೆ. ಈ ಸೌಂಡ್ ಬಾರ್ ಡೈರೆಕ್ಟ್ ಮತ್ತು ವಾಲ್ ರಿಫ್ಲೆಕ್ಟಡ್ ಸಂಗೀತ ಅಲೆಗಳನ್ನು ಉಪಯೋಗಿಸಿಕೊಂಡು ಜೆನ್ಯೂನ್ 7.1 ಚಾನೆಲ್ ಸೌಂಡ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಸರೌಂಡ್-ಸೌಂಡ್ ಡಿಕೋಡರ್ ಕೂಡ ಇದರಲ್ಲಿದೆ.
2012 ರ ಹೊತ್ತಿಗೆ ಯಮಹಾ ಎಲೆಕ್ಟ್ರಾನಿಕ್ಸ್ ಕಡಿಮೆ ಬೆಲೆಗೆ ಸೌಂಡ್ ಬಾರ್ ಗಳನ್ನು ಪರಿಚಯಿಸಲು ಮುಂದಾಗಿದ್ದು, 15,000 ನಿಂದ 30000 ರೂ ವರೆಗಿನ 2 ಮಾದರಿಗಳು ಲಭ್ಯವಿದೆ. ಇದು ಏರ್ ಸರೌಂಡ್ ಎಕ್ಸ್ ಟ್ರೀಮ್ ವಿಶೇಷತೆ ಹೊಂದಿದೆ.
ಈಗಾಗಲೆ ಐಪಾಡ್ ಮತ್ತು ಐ ಫೋನ್ ಗಳಿಗೆ ಅನೇಕ ಟೇಬಲ್ ಟಾಪ್ ಡಕ್ ಸಿಸ್ಟಮ್ ಪರಿಚಯಿಸಿರುವ ಯಮಹಾ, ಡಕ್ ಮ್ಯುಸಿಕ್ ಸಿಸ್ಟಮ್ ಗಳಲ್ಲಿ, ಪ್ರತ್ಯೇಕ ಸ್ಟಿರಿಯೋ ಸಿಸ್ಟಮ್ ಗಳನ್ನು ಹೊಂದಿರುವ ಆರು ಡಕ್ ಮಿನಿ ಸಿಸ್ಟಮ್ ಗಳನ್ನು 14,000 ದಿಂದ 75000 ರು ಬೆಲೆಯಲ್ಲಿ, 7 ಡೆಸ್ಕ್ ಟಾಪ್ ಸಿಂಗಲ್ ಚಾಸಿಸ್ ಡಕ್ ಸ್ಪೀಕರ್ ಸಿಸ್ಟಮ್ ಅನ್ನು 7,300 ರಿಂದ 22,000 ರೂ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದೆ.
ಮೊದಲ AC/DC ಸ್ಪೀಕರ್ ಎನಿಸಿದ ವಿನೂತನ PDX-11 ಮೊನೊ ಸ್ಪೀಕರ್ ಬಿಡುಗಡೆಗೊಳಿಸಲಿದ್ದು, ಹೊರಗೂ ಕೂಡ ಬಳಸಬಹುದಾದ ಈ ಸ್ಪೀಕರ್ ವಾಟರ್ ರೆಸಿಸ್ಟಂಟ್ ಆಗಿದೆ.
ಏರ್ ಪ್ಲೇ ಮ್ಯುಸಿಕ್ ಸ್ಟ್ರೀಮಿಂಗ್ ಮತ್ತು ಬ್ಲೂಟೂಥ್ ಟೇಬಲ್ ಟಾಪ್ ಸ್ಪೀಕರ್ ಗಳನ್ನೂ 2012 ಕ್ಕೆ ಪರಿಚಯಿಸಲು ಚಿಂತನೆ ನಡೆಸುತ್ತಿರುವ ಯಮಹಾ, ಎಲೆಕ್ಟ್ರಾನಿಕ್ ಸಾಧನಗಳ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಥಾನ ಪಡೆಯಲಿದೆ.


Click it and Unblock the Notifications








