ಫೇಸ್‌ಬುಕ್‌ ಬಳಕೆ ಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ

By Ashwath
|

ಫೇಸ್‌ಬುಕ್‌ ಬಳಕೆಗೆ ಪೋಷಕರು ಅನುಮತಿ ನೀಡದ ಹಿನ್ನೆಲೆಯಲ್ಲಿ 17 ವರ್ಷದ ಯುವತಿಯೊಬ್ಬಳು ಮಹಾರಾಷ್ಟ್ರದಲ್ಲಿ ನೇಣಿಗೆ ಶರಣಾಗಿದ್ದಾಳೆ.ಪೋಷಕರು ಫೇಸ್‌‌ಬುಕ್‌ ಬಳಕೆಗೆ ಅನುಮತಿ ನೀಡದ ಕಾರಣ ತಾನು ಆತ್ಮಹತ್ಯೆ ಮಾಡುತ್ತಿರುವುದಾಗಿ ಯುವತಿ ತನ್ನ ಮರಣ ಪತ್ರದಲ್ಲಿ ತಿಳಿಸಿದ್ದಾಳೆ.

ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ಯುವತಿ ಆತ್ಮಹತ್ಯೆ ಮಾಡಿದ್ದು,ಗುರುವಾರ ಮಧ್ಯಾಹ್ನದ ನಂತರ ಪೋಷಕರು ಫೇಸ್‌ಬುಕ್‌ ಬಳಸುವುದು ಬೇಡ ಎಂದು ಮಗಳಿಗೆ ಹೇಳಿದ್ದರಂತೆ.ಪೋಷಕರ ಈ ನೀತಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗಿ ಆಕೆ ಮರಣ ಪತ್ರದಲ್ಲಿ ಬರೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಫೇಸ್‌ಬುಕ್‌ ಬಳಕೆ ಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ

ಸಾಮಾಜಿಕ ತಾಣಗಳ ಅತಿ ಬಳಕೆ ಮಾಡುವವರಿಗೆ ಒಂಟಿತನ, ವ್ಯಾಕುಲತೆ, ಗೊಂದಲಕ್ಕೊಳಗಾಗುವುದು ಅತಿಯಾಗಿ ಕಾಣಿಸುತ್ತಿದೆ. ಸಾಮಾಜಿಕ ಜಾಲತಾಣದ ಬಳಕೆಯೊಂದಿಗೆ ಆಪ್ತರೊಂದಿಗೆ ವಿಪರೀತ ಚಾಟಿಂಗ್‌, ವೀಡಿಯೋ ಕಾಲಿಂಗ್‌ ಮಾಡುವುದು ಹೆಚ್ಚಾಗುತ್ತಿರುವುದು ಬಹಳ ಅಪಾಯಕಾರಿ ಎಂದು ಈ ಹಿಂದೆ ಸಮೀಕ್ಷೆಯೊಂದು ತಿಳಿಸಿತ್ತು.

ಸೋಶಿಯಲ್‌ ಮೀಡಿಯಾ ಕಾರಣದಿಂದಾಗಿ ಪೋಷಕರ ಮತ್ತು ಮಕ್ಕಳ ಸುದ್ದಿ ಬರುವುದು ಇದು ಹೊಸದೇನಲ್ಲ. ಈ ಹಿಂದೆ ಅಮೆರಿಕದಲ್ಲಿ ಒಬ್ಬರು ಪೋಷಕರು ಮಗಳ ಫೇಸ್‌ಬುಕ್‌ ಚಟ ಬಿಡಿಸಲು ಇನ್ನೂರು ಡಾಲರ್‌ ನೀಡಿದ್ದರು.ನೀಡಿದ್ದು ಮಾತ್ರವಲ್ಲದೇ ಅಪ್ಪ ಮಗಳು ಒಪ್ಪಂದ ಪತ್ರದಲ್ಲಿ ಸಹಿ ಹಾಕಿಹಾಕಿದ್ದರು.

ಇದನ್ನೂ ಓದಿ: ಮಕ್ಕಳು ಇಂಟರ್‌ನೆಟ್‌ ಬಳಸುವಾಗ ಗಮನಿಸಬೇಕಾದ ಅಂಶಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X