Just In
Don't Miss
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Movies
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಕೀ ಪ್ಯಾಡ್ ಫೋನ್ ಬಳಸುವವರಿಗೆ ಆರ್ಬಿಐನಿಂದ ಬಂತು ಗುಡ್ನ್ಯೂಸ್!
ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಆಧಾರಿತ ಪೇಮೆಂಟ್ ಸೇವೆ ಸಾಕಷ್ಟು ಜನಪ್ರಿಯತೆ ಪಡೆದಿದೆ. ಭಾರತದಲ್ಲಿಯೂ ಕೂಡ ಹೆಚ್ಚಿನ ಜನರು ಯುಪಿಐ ಆಧಾರಿತ ಆಪ್ಲಿಕೇಶನ್ಗಳನ್ನು ಬಳಸುತ್ತಿದ್ದಾರೆ. ಆದರೆ ಈ ಮಾದರಿಯ ಅಪ್ಲಿಕೇಶನ್ಗಳನ್ನು ಸಾಮಾನ್ಯ ಫೀಚರ್ ಫೋನ್ಗಳಲ್ಲಿ ಬಳಸಲು ಸಾಧ್ಯವಿಲ್ಲ. ಆದರೆ ಇದೀಗ ಫೀಚರ್ ಫೋನ್ ಬಳಕೆದಾರರು ಕೂಡ ಡಿಜಿಟಲ್ ಪಾವತಿ ಮಾಡುವುದಕ್ಕೆ ಅವಕಾಶ ನೀಡುವ ಹೊಸ ಸೇವೆಯನ್ನು ಆರ್ಬಿಐ ಪರಿಚಯಿಸಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಹೊಸ ಸೇವೆಯನ್ನು ಲಾಂಚ್ ಮಾಡಿದ್ದಾರೆ.

ಹೌದು, ಆರ್ಬಿಐ ಭಾರತದಲ್ಲಿ ಫೀಚರ್ ಫೋನ್ ಬಳಕೆದಾರರು ಕೂಡ ಡಿಜಿಟಲ್ ಪಾವತಿ ಮಾಡುವುದಕ್ಕೆ ಅವಕಾಶ ನೀಡುವ ಸೇವೆಯನ್ನು ಪ್ರಾರಂಭಿಸಿದೆ. ಇದು 40 ಕೋಟಿಗೂ ಹೆಚ್ಚು ಫೀಚರ್ ಫೋನ್ ಬಳಕೆದಾರರಿಗೆ ಸುರಕ್ಷಿತ ರೀತಿಯಲ್ಲಿ ಡಿಜಿಟಲ್ ಪಾವತಿಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಈ ಸೇವೆಗೆ '123PAY' ಎಂದು ಹೆಸರಿಸಲಾಗಿದೆ. ಇದನ್ನು ಪ್ರಾರಂಭಿಸಲು ಮತ್ತು ಕಾರ್ಯಗತಗೊಳಿಸಲು ಮೂರು-ಹಂತದ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಆರ್ಬಿಐ ಪರಿಚಯಿಸಿರುವ ಹೊಸ ಡಿಜಿಟಲ್ ಪಾವತಿ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ಮುಂದೆ ಸಾಮಾನ್ಯ ಕಿ ಪ್ಯಾಡ್ ಫೋನ್ ಬಳಸುವವರು ಕೂಡ ಡಿಜಿಟಲ್ ಪೇಮೆಂಟ್ ಮಾಡಬಹುದು. ಇದಕ್ಕಾಗಿ ಆರ್ಬಿಐ '123PAY' ಸೇವೆ ಪರಿಚಯಿಸಿದೆ. ಈ ಸೇವೆ ಇಂಟರ್ನೆಟ್ ಸಂಪರ್ಕವನ್ನು ಹೊಂದಿರದ ಸಾಮಾನ್ಯ ಫೀಚರ್ ಫೋನ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸೇವೆಯನ್ನು ಪ್ರಾರಂಭಿಸಲು ಮತ್ತು ಕಾರ್ಯಗತಗೊಳಿಸಲು ಮೂರು-ಹಂತದ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಉಪಯುಕ್ತವಾಗಲಿದೆ ಎನ್ನಲಾಗಿದೆ.

ಆರ್ಬಿಐ ನೀಡಿರುವ ಮಾಹಿತಿಯಂದ ಭಾರತದಲ್ಲಿ ಅಂದಾಜು 40 ಕೋಟಿಯಷ್ಟು ಫೀಚರ್ ಮೊಬೈಲ್ ಫೋನ್ ಬಳಕೆದಾರರಿದ್ದಾರೆ. ಇಂತಹ ಫೋನ್ಗಳಲ್ಲಿ ಯುಎಸ್ಎಸ್ಡಿ ಆಧಾರಿತ ಸೇವೆಗಳ ಮೂಲಕ ಹಣ ವರ್ಗಾವಣೆ ಮಾಡುವುದಕ್ಕೆ ಅವಕಾಶವಿದೆ. ಆದರೆ ಈ ಸೇವೆಯನ್ನು ಬಳಸುವುದಕ್ಕೆ ಎಲ್ಲಾ ಮೊಬೈಲ್ ಆಪರೇಟರ್ಗಳು ಅನುಮತಿಸುವುದಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಇದೀಗ '123PAY' ಸೇವೆ ಪರಿಚಯಿಸಲಾಗಿದೆ. ಇದನ್ನು ಫೀಚರ್ ಫೋನ್ ಬಳಕೆದಾರರು ನಾಲ್ಕು ತಂತ್ರಜ್ಞಾನ ಪರ್ಯಾಯಗಳ ಆಧಾರದ ಮೇಲೆ ಹಲವಾರು ವಹಿವಾಟುಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಇದರಲ್ಲಿ ಐವಿಆರ್ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಸಂಖ್ಯೆ, ಫೀಚರ್ ಫೋನ್ಗಳಲ್ಲಿನ ಅಪ್ಲಿಕೇಶನ್ ಕಾರ್ಯನಿರ್ವಹಣೆ, ಮಿಸ್ಡ್ ಕಾಲ್-ಆಧಾರಿತ ವಿಧಾನ ಮತ್ತು ಸಾಮೀಪ್ಯ ಧ್ವನಿ ಆಧಾರಿತ ಪಾವತಿಗಳನ್ನು ಒಳಗೊಂಡಿವೆ ಎಂದು ಆರ್ಬಿಐ ಹೇಳಿದೆ. ಅಂತಹ ಬಳಕೆದಾರರು ಸ್ನೇಹಿತರು ಮತ್ತು ಕುಟುಂಬಕ್ಕೆ ಪಾವತಿಗಳನ್ನು ಪ್ರಾರಂಭಿಸಬಹುದು, ಯುಟಿಲಿಟಿ ಬಿಲ್ಗಳನ್ನು ಪಾವತಿಸಬಹುದು, ತಮ್ಮ ವಾಹನಗಳ ಫಾಸ್ಟ್ ಟ್ಯಾಗ್ಗಳನ್ನು ರೀಚಾರ್ಜ್ ಮಾಡಬಹುದು, ಮೊಬೈಲ್ ಬಿಲ್ಗಳನ್ನು ಪಾವತಿಸಬಹುದು ಮತ್ತು ಖಾತೆಯ ಬ್ಯಾಲೆನ್ಸ್ಗಳನ್ನು ಪರಿಶೀಲಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಡಬಹುದು ಎಂದು ಆರ್ಬಿಐ ಹೇಳಿಕೊಂಡಿದೆ.

ಇದಲ್ಲದೆ ಈ ಸೇವೆಯಲ್ಲಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲು, ಸೆಟ್ ಅಥವಾ ಮಾಡಲು ಸಾಧ್ಯವಾಗುತ್ತದೆ. UPI ಪಿನ್ಗಳನ್ನು ಬದಲಾಯಿಸುವುದಕ್ಕೂ ಕೂಡ ಅವಕಾಶ ನೀಡಲಾಗಿದೆ. ಇನ್ನು ಡಿಜಿಟಲ್ ಪಾವತಿಗಾಗಿ 24x7 ಸಹಾಯವಾಣಿಯನ್ನು ಕೂಡ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪ್ರಾರಂಭಿಸಿದ್ದಾರೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಸಹ ಸ್ಥಾಪಿಸಿದೆ. 'ಡಿಜಿಸಾಥಿ' ಎಂಬ ಈ ಹೆಲ್ಪ್ಲೈನ್ಗೆ ಕರೆ ಮಾಡುವವರಿಗೆ/ಬಳಕೆದಾರರಿಗೆ ವೆಬ್ಸೈಟ್ ಮತ್ತು ಚಾಟ್ಬಾಟ್ ಮೂಲಕ ಡಿಜಿಟಲ್ ಪಾವತಿಗಳ ಎಲ್ಲಾ ಪ್ರಶ್ನೆಗಳಿಗೆ ಸಹಾಯ ಮಾಡುತ್ತದೆ. ಇದಲ್ಲದೆ ಬಳಕೆದಾರರು www.digisaathi.info ಗೆ ಭೇಟಿ ನೀಡಬಹುದು ಅಥವಾ 14431 ಮತ್ತು 1800 891 3333 ಗೆ ತಮ್ಮ ಫೋನ್ಗಳಿಂದ ಡಿಜಿಟಲ್ ಪಾವತಿಗಳು ಮತ್ತು ಕುಂದುಕೊರತೆಗಳ ಕುರಿತು ತಮ್ಮ ಪ್ರಶ್ನೆಗಳಿಗೆ ಕರೆ ಮಾಡಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086