"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

By Suneel
|

ನಾಸಾ ಕೇವಲ ಹೊಸ ಹೊಸ ಬಾಹ್ಯಾಕಾಶ ಸಂಶೋಧನೆಗಳನ್ನು ಕೈಗೊಳ್ಳುವ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು ಕಲ್ಪನೆ ಆಗುತ್ತದೆ. ಯಾಕಂದ್ರೆ ನಾಸಾ ಜನರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುವ ಕೆಲವು ಅಧ್ಯಯನ ಮಾಡುತ್ತದೆ. ಅದಕ್ಕೆ ಸಾಕ್ಷಿಯಾಗಿ ಈಗ ನಾಸಾ ಗಾಳಿಯಲ್ಲಿನ ವಿಷಕಾರಿ ಕಣಗಳನ್ನು ಫಿಲ್ಟರ್‌ ಮಾಡುವ ಸಸ್ಯಗಳ ಬಗ್ಗೆ ಹೊಸ ಮಾಹಿತಿ ನೀಡಿದೆ.

ಅಂದಹಾಗೆ ನಾಸಾ ಹೇಳಿರುವ ವಾಯುಮಾಲಿನ್ಯವನ್ನು ಮತ್ತು ಗಾಳಿಯಲ್ಲಿ ಇರುವ ವಿಷಕಾರಿ ವಸ್ತುಗಳನ್ನು ಫಿಲ್ಟರ್ ಮಾಡುವ ಸಸ್ಯಗಳು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಡೆಕೋರೇಷನ್‌ಗಾಗಿ ಬಳಸುವ ಸಸ್ಯಗಳು. ಡೆಕೋರೇಷನ್‌ಗಾಗಿ ಯಾರಾದ್ರು ಇನ್ನೂ ಸಹ ಸಸ್ಯಗಳನ್ನು ಬಳಸದಿದ್ದಲ್ಲಿ ನಾಸಾ ಹೇಳಿರುವ ಟಾಪ್‌ 18 ಸಸ್ಯಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಅವುಗಳಿಂದ ಹೆಚ್ಚಾಗಿ ನಗರ ಪ್ರದೇಶದ ಜನತೆಗೆ ಅನುಕೂಲವಾಗುತ್ತದೆ. ಗಾಳಿಯಲ್ಲಿನ ವಾಯುಮಾಲಿನ್ಯ ಮತ್ತು ವಿಷಕಾರಿ ವಸ್ತುಗಳನ್ನು ಫಿಲ್ಟರ್‌ ಮಾಡಿ ನಿಮಗೆ ಉತ್ತಮ ಗಾಳಿಯನ್ನು ನೀಡುತ್ತದೆ. ಅಲ್ಲದೇ ಆರೋಗ್ಯವಂತ ಜೀವನಕ್ಕೆ ಸಹಾಯ ಮಾಡುತ್ತವಂತೆ. ನಾಸಾ 1989 ರಲ್ಲಿ ಲಾಂಚ್‌ ಮಾಡಲಾಗಿದ್ದ ಸ್ವಚ್ಛ ಗಾಳಿ ಅಧ್ಯಯನದ ಪ್ರಕಾರ ಈ ಮಾಹಿತಿ ನೀಡಿದೆ. ಗಾಳಿಯಲ್ಲಿನ ವಾಯುಮಾಲಿನ್ಯ ಅಂಶಗಳು ಮತ್ತು ವಿಷಕಾರಿ ವಸ್ತುಗಳನ್ನು ಫಿಲ್ಟರ್ ಮಾಡುವ ಮನೆಯ ಮುಂದಿನ ಡೆಕೋರೇಷನ್‌ ಸಸ್ಯಗಳು ಯಾವುವು ಎಂದು ಲೇಖನದಲ್ಲಿ ತಿಳಿಯಿರಿ.

ಗೃಹೋಪಯೋಗಿ ಸಸ್ಯಗಳು

ಗೃಹೋಪಯೋಗಿ ಸಸ್ಯಗಳು

ಮನೆಯ ಮುಂದೆ ಬೆಳೆಸುವ ಹಲವು ಸಸ್ಯಗಳು ಕೇವಲ ಡೆಕೋರೇಟ್‌ಗಾಗಿ ಬಳಕೆಯಾಗುತ್ತದೆ ಅಲ್ಲದೇ, ಗಾಳಿಯಲ್ಲಿನ ವಿಷಪೂರಿತ ವಸ್ತುಗಳನ್ನು ವಾಯುಮಾಲಿನ್ಯ ಕಣಗಳನ್ನು ಫಿಲ್ಟರ್‌ ಮಾಡುತ್ತವೆ ಎಂದು ನಾಸಾ ಹೇಳಿದೆ.

ನಗರದಲ್ಲಿನ ಜನತೆಗೆ ಅನುಕೂಲ

ನಗರದಲ್ಲಿನ ಜನತೆಗೆ ಅನುಕೂಲ

ಅಂದಹಾಗೆ ಕೆಲವರು ತಿಳಿಯದೇ ಈಗಾಗಲೇ ಹಲವು ಸಸ್ಯಗಳನ್ನು ಬಳಸುತ್ತಿರಬಹುದು. ಆದರೆ ನಗರದ ಜನತೆಗೆ ನಾಸಾ ಹೇಳಿರುವ ಟಾಪ್‌ 18 ಸಸ್ಯಗಳು ಹೆಚ್ಚು ಆರೋಗ್ಯಕಾರಿ ಗಾಳಿಯನ್ನು ನೀಡುವಲ್ಲಿ ಪಾತ್ರವಹಿಸುತ್ತವೆ. ಹಾಗಾದರೆ ಅಂತಹ ಸಸ್ಯಗಳು ಯಾವುವು ಎಂದು ಈಗಾಗಲೇ ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು ಅಲ್ವಾ... ಮುಂದಿನ ಸ್ಲೈಡ್‌ ಓದಿ.

ಸ್ವಚ್ಛ ಗಾಳಿ ಅಧ್ಯಯನ

ಸ್ವಚ್ಛ ಗಾಳಿ ಅಧ್ಯಯನ

ನಾಸಾ 1989 ರಲ್ಲಿ ಲಾಂಚ್ ಮಾಡಲಾದ " ಸ್ವಚ್ಛ ಗಾಳಿ ಅಧ್ಯಯನ" ಪ್ರಕಾರ ಮನೆ ಹತ್ತಿರ ಬೆಳೆಸುವ ಯಾವ ಯಾವ ಸಸ್ಯಗಳು ಗಾಳಿಯಲ್ಲಿನ ವಿಷಕಾರಿ ವಸ್ತುಗಳನ್ನು ಮತ್ತು ವಾಯುಮಾಲಿನ್ಯ ಕಣಗಳನ್ನು ಫಿಲ್ಟರ್‌ ಮಾಡುತ್ತವೆ ಎಂದು ಮಾಹಿತಿ ನೀಡಿದೆ. ಮುಂದೆ ಓದಿ ಆ ಸಸ್ಯಗಲ ಬಗ್ಗೆ ತಿಳಿಯಿರಿ.

ಡ್ವಾರ್ಪ್‌ ಖರ್ಜೂರದ ಮರ

ಡ್ವಾರ್ಪ್‌ ಖರ್ಜೂರದ ಮರ

ಇದು ಸಾಮಾನ್ಯವಾಗಿ ದೊಡ್ಡ ಮರದಂತೆ ಬೆಳೆಯುತ್ತದೆಯಾದರೂ ಸಹ ವಿಶಾಲ ಪ್ರದೇಶ ಹೊಂದಿರುವವರು ಈ ಸಸ್ಯ ಬೆಳೆಸಬಹುದಾಗಿದೆ.

ಬೋಸ್ಟನ್‌‌ ಫರ್ನ್‌(Boston Fern)

ಬೋಸ್ಟನ್‌‌ ಫರ್ನ್‌(Boston Fern)

ಬೋಸ್ಟನ್‌ ಫರ್ನ್‌ ಮನೆಯ ಮುಂದೆ ಶೋಗಾಗಿ ಬಳಸುತ್ತಾರೆ ಆದರೂ ಸಹ ಅದು ಒಂದು ಗಾಳಿಯಲ್ಲಿನ ಮಾಲಿನ್ಯ ವಿಷಕಾರಿ ವಸ್ತುಗಳನ್ನು ಫಿಲ್ಟರ್‌ ಮಾಡುತ್ತದೆ. ಇದರ ವೈಜ್ಞಾನಿಕ ಹೆಸರು ನೆಫ್ರಾಲೆಪಿಸ್‌ ಎಕ್ಸಾಲ್ಟಟ.

ಕಿಂಬರ್ಲಿ ಕ್ವೀನ್‌ ಫರ್ನ್‌ (Kimberly queen fern)

ಕಿಂಬರ್ಲಿ ಕ್ವೀನ್‌ ಫರ್ನ್‌ (Kimberly queen fern)

ಇದು ಸಹ ಬೋಸ್ಟನ್‌ ಫರ್ನ್‌ ನಂತೆಯೇ ಸರಳ ಹೋಲಿಕೆ ಇದ್ದರೂ ಸಹ ಆದರೆ ಸ್ವಲ್ಪ ಭಿನ್ನವಾಗಿದೆ. ಪ್ರಪಂಚದಾದ್ಯಂತ ಮನೆಯ ಒಳಾಂಗಣ ಸಸ್ಯವಾಗಿ ಇದನ್ನು ಬೆಳೆಸಬಹುದಾಗಿದೆ.

 ಸ್ಪೈಡರ್‌ ಪ್ಲಾಂಟ್‌ (Spider plant)

ಸ್ಪೈಡರ್‌ ಪ್ಲಾಂಟ್‌ (Spider plant)

ಸ್ಪೈಡರ್‌ ಪ್ಲಾಂಟ್‌ ವೈಜ್ಞಾನಿಕ ಹೆಸರು ಕ್ಲೋರೋಫಿಟಮ್‌ ಕೊಮೊಸಂ. ಇದನ್ನು ಸಾಮಾನ್ಯವಾಗಿ ಎಲ್ಲಾ ಕಡೆ ಮಾಹಿತಿ ತಿಳಿಯದೆಯೇ ಮನೆಯ ಶೋಗಿಡಗಳಾಗಿ ಬಹುಸಂಖ್ಯಾತರು ಬಳಸುತ್ತಿದ್ದಾರೆ.

ಚೈನೀಸ್‌ ಎವರ್‌ಗ್ರೀನ್ (Chinese evergreen)

ಚೈನೀಸ್‌ ಎವರ್‌ಗ್ರೀನ್ (Chinese evergreen)

ಅಂದಹಾಗೆ ಚೈನೀಸ್‌ ಎವರ್‌ಗ್ರೀನ್ ವೈಜ್ಞಾನಿಕ ಹೆಸರು ಅಗ್ಲಾಓನೆಮ. ಇದನ್ನು ಸಾಮಾನ್ಯವಾಗಿ ಮನೆಯ ಮುಂದಿನ ಶೋಗಾಗಿ ಮನೆ ಮುಂದೆ ಇಡದೆ ಮನೆಯ ಒಳಗಡೆಯೇ ಇಡಲಾಗುತ್ತಿದೆ. ಅಲ್ಲದೇ ಚೈನೀಸ್‌ ಎವರ್‌ಗ್ರೀನ್‌ ಎಲೆ ಹಲವು ಬಣ್ಣಗಳಲ್ಲಿ ಕಾಣುತ್ತದೆ.

 ಬಂಬೂ ಪಾಂ (Bamboo palm)

ಬಂಬೂ ಪಾಂ (Bamboo palm)

ಕಾಡಲ್ಲಿ ಕಂಡುಬರುವ ಬಿದಿರು ಬಂಬೂ ಸಸ್ಯ ಹೋಲಿಕೆಯ ಎಲೆಗಳನ್ನು ಹೊಂದಿದ್ದು, ಆದರೆ ಅದಕ್ಕಿಂತ ವಿಭಿನ್ನವಾಗಿರುವ ಬಂಬೂ ಪಾಂ ಗಾಳಿಯ ಶುದ್ಧೀಕರಣದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತದೆ.

ವೀಪಿಂಗ್ ಫಿಗ್‌(Weeping fig)

ವೀಪಿಂಗ್ ಫಿಗ್‌(Weeping fig)

ವೀಪಿಂಗ್ ಫಿಗ್‌ ವೈಜ್ಞಾನಿಕ ಹೆಸರು "ಫಿಕಸ್‌ ಬೆಂಜಮಿನ". ಇದು ಮನೆಯ ಸಹ ಗಾಳಿಯಲ್ಲಿನ ವಿಷಕಾರಿ ವಸ್ತುಗಳನ್ನು ಫಿಲ್ಟರ್‌ ಮಾಡುವ ಮತ್ತು ಅತಿ ಸುಂದರವಾಗಿ ಕಾಣುವ ಶೋ ಗಿಡವಾಗಿದೆ. ಸಣ್ಣ ಮರದಂತೆ ಅದ್ಭುತವಾಗಿ ಕಾಣುತ್ತದೆ.

 ಡೆವಿಲ್ಸ್‌ ಇವಿ (Devil's ivy)

ಡೆವಿಲ್ಸ್‌ ಇವಿ (Devil's ivy)

ಗುಣದಲ್ಲಿ ಡೆವಿಲ್ಸ್‌ ಇವಿ ಅಂಬುವಿನ ರೀತಿಯಲ್ಲಿ ಹಬ್ಬುತ್ತದೆ. ಚಿತ್ರ ನೋಡಿದರೆ ಬಹುಶಃ ನಿಮಗೆ ಇ ಸಸ್ಯ ಪರಿಚಯವಿದೆ ಎನಿಸುತ್ತದೆ. ಇದರ ವೈಜ್ಞಾನಿಕ ಹೆಸರು ಎಪಿಪ್ರೆಂನಂ ಆರಿಯಂ.

ಫ್ಲೆಮಿಂಗೋ ಲಿಲಿ (Flamingo lily)

ಫ್ಲೆಮಿಂಗೋ ಲಿಲಿ (Flamingo lily)

ಸಾಮಾನ್ಯವಾಗಿ ಇದು ಹೆಚ್ಚು ನೀರಿರುವ ಸ್ಥಳದಲ್ಲಿ ಬಹುಬೇಗ ಬೆಳೆಯುತ್ತದೆ. ಸುಂದರ ಹೂಗಳನ್ನು ಹೊಂದಿರುವ ಈ ಸಸ್ಯ ಹೂತೋಟಕ್ಕೂ ಮತ್ತು ಶೋಗಿಡ ಹಾಗೂ ಗಾಳಿಯಲ್ಲಿನ ವಿಷಕಾರಿ ಕಣಗಳನ್ನು ಫಿಲ್ಟರ್‌ ಮಾಡಲು ಸಹಾಯವಾಗುತ್ತದೆ.

ಲಿಲಿ ಟರ್ಫ್‌(Lilyturf )

ಲಿಲಿ ಟರ್ಫ್‌(Lilyturf )

ನೋಡಲು ಸ್ಪೈಡರ್‌ ಪ್ಲಾಂಟ್‌ ರೀತಿಯ ಎಲೆಗಳನ್ನು ಹೊಂದಿದೆ. ಆದರೆ ಇದು ಹೂಗಳನ್ನು ಹೊಂದಿರುವ ಶೋಗಿಡದ ಸಸ್ಯ ಜಾತಿಯಾಗಿದೆ. ಇದರ ವೈಜ್ಞಾನಿಕ ಹೆಸರು "ಲಿರಿಯೋಪೆ ಮಸ್ಕೆರಿ".

ಬ್ರಾಡ್‌ಲೀಫ್‌ ಲೇಡಿ ಪಾಮ್‌ (Broadleaf lady palm)

ಬ್ರಾಡ್‌ಲೀಫ್‌ ಲೇಡಿ ಪಾಮ್‌ (Broadleaf lady palm)

ಹೆಸರೇ ಹೇಳುವಂತೆ ವಿಶಾಲ ಎಲೆಗಳನ್ನು ಹೊಂದಿದೆ. ಸಾಮಾನ್ಯವಾಗಿ ಇದು ಮನೆಯ ಮುಂದೆ ಶೋಗೆ ಬೆಳೆಸುವ ಗಿಡವಾದರೂ ಬೃಹದಾಕಾರವಾಗಿ ಬೆಳೆಯುತ್ತದೆ. ಅಲ್ಲದೇ ನೆರಳಿಗೂ ಸಹ ಅನುಕೂಲ ಮತ್ತು ವಾಯುಮಾಲಿನ್ಯದಿಂದ ಮುಕ್ತಿಕೊಡುತ್ತದೆ.

ಬಾರ್ಬರ್‌ಟನ್‌ ಡೈಸಿ (Barberton daisy)

ಬಾರ್ಬರ್‌ಟನ್‌ ಡೈಸಿ (Barberton daisy)

ಅಂದಹಾಗೆ ಇಂದು ಪ್ರತಿಯೊಂದು ನಗರದಲ್ಲಿ ಶುಭಕಾರ್ಯ ಹಾಗೂ ಮದುವೆ ಮನೆಯ ಅಲಂಕಾರಕ್ಕಾಗಿ ಬಳಸುವ ಹೂವಿನ ಗಿಡ. ಆದರೆ ಪ್ರಾಥಮಿಕವಾಗಿ ಶೋ ಗಿಡವಾದರೂ ಸಹ ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚು ಅಲಂಕಾರಕ್ಕಾಗಿ ಹೂವನ್ನು ಬಳಸಿಕೊಳ್ಳಲಾಗುತ್ತಿದೆ.

 ಗಾಳಿಯನ್ನು ಫಿಲ್ಟರ್‌ ಮಾಡುವ ಇತರೆ 6 ಸಸ್ಯಗಳು

ಗಾಳಿಯನ್ನು ಫಿಲ್ಟರ್‌ ಮಾಡುವ ಇತರೆ 6 ಸಸ್ಯಗಳು

* ಕಾರ್ನ್‌ಸ್ಟಾಕ್‌ ಡ್ರಾಕೆನಾ (Cornstalk Dracaena)

* ಇಂಗ್ಲೀಷ್‌ ಇವಿ (English Ivy)

* ವರಿಗೇಟೆಡ್‌ ಸ್ನೇಕ್‌ ಪ್ಲಾಂಟ್‌( Varigated Snake Plant)

* ರೆಡ್‌-ಎಡ್ಜ್‌ಡ್‌ ಡ್ರಕೆನಾ (Red-Edged Dracaena)

* ಪೀಸ್‌ ಲಿಲಿ (Peace Lily)

* ಫ್ಲೊರಿಸ್ಟ್‌ ಕ್ರೆಸನ್‌ಥೆಮಂ (Florist's Chrysanthemum)

ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!

ಕರ್ನಾಟಕದ 40,000 ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ ಜಪಾನ್‌

ಸ್ವದೇಶಿ ಜಿಪಿಎಸ್'ನಿಂದ ಅಮೇರಿಕಕ್ಕೆ ಪೈಪೋಟಿ ನೀಡಿದ ಭಾರತ!!

Most Read Articles
Best Mobiles in India

English summary
18 Plants That Are Best At Filtering Air In Your Home According To NASA. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more